ವಿರಾಟ್ ಕೊಹ್ಲಿಯ ಈ 5 ದಾಖಲೆಗಳನ್ನು ಬಾಬರ್ ಅಜಂ ಮುರಿಯುವುದು ಸುಲಭದ ಮಾತಲ್ಲ!

ಕ್ರಿಕೆಟ್ ಆಟ ಜನಮನವನ್ನು ಗೆದ್ದಿರುವ ಹಲವಾರು ದಂತ ಕಥೆಗಳನ್ನು ಹುಟ್ಟು ಹಾಕಿದೆ. ವಿಶ್ವದಾದ್ಯಂತ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಸಚಿನ್ ತೆಂಡೂಲ್ಕರ್, ಡಾನ್ ಬ್ರಾಡ್ಮನ್, ಬ್ರಿಯಾನ್ ಲಾರಾ, ವಿವಿಯನ್ ರಿಚರ್ಡ್ಸ್ ಹಾಗೂ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಸುದ್ದಿಗೀಡಾಗಿರುವ ಭಾರತದ ವಿರಾಟ್ ಕೊಹ್ಲಿ ಮತ್ತು ಪಾಕಿಸ್ತಾನದ ಬಾಬರ್ ಅಜಮ್ ಅವರನ್ನು ಕ್ರಿಕೆಟ್ ಜಗತ್ತು ಹುಟ್ಟುಹಾಕಿದೆ.

ದ್ರಾವಿಡ್‌ರಿಂದ ಅಂತಾದ್ದನ್ನು ನಿರೀಕ್ಷಿಸಲು ಸಾಧ್ಯವಿಲ್ಲ: ರವಿ ಶಾಸ್ತ್ರಿ ಕೋಚ್ ಅವಧಿಯ ಬಗ್ಗೆ ಗಂಭೀರ್ ಮಾತುದ್ರಾವಿಡ್‌ರಿಂದ ಅಂತಾದ್ದನ್ನು ನಿರೀಕ್ಷಿಸಲು ಸಾಧ್ಯವಿಲ್ಲ: ರವಿ ಶಾಸ್ತ್ರಿ ಕೋಚ್ ಅವಧಿಯ ಬಗ್ಗೆ ಗಂಭೀರ್ ಮಾತು

ಸದ್ಯ ಕ್ರಿಕೆಟ್ ಜಗತ್ತಿನಲ್ಲಿ ಸಾಕಷ್ಟು ದೊಡ್ಡ ಮಟ್ಟದ ಹೆಸರು ಮಾಡಿರುವ ಟಾಪ್ 2 ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳೆಂದರೆ ಅದು ವಿರಾಟ್ ಕೊಹ್ಲಿ ಮತ್ತು ಬಾಬರ್ ಅಜಮ್. ಇಬ್ಬರೂ ಸಹ ತಮ್ಮದೇ ಆದ ವಿಭಿನ್ನ ಆಟದ ಮೂಲಕ ಯಶಸ್ಸನ್ನು ಗಳಿಸಿ ದೊಡ್ಡಮಟ್ಟದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಹೆಚ್ಚಾಗಿ ಕಳಪೆ ಪ್ರದರ್ಶನ ತೋರದೇ ಸತತವಾಗಿ ಫಾರ್ಮ್ ಕಾಪಾಡಿಕೊಳ್ಳುವಲ್ಲಿ ನಿಪುಣರಾಗಿರುವ ಈ ಇಬ್ಬರು ಆಟಗಾರರ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ದೊಡ್ಡ ಮಟ್ಟದ ಹೋಲಿಕೆಯ ಚರ್ಚೆಗಳು ನಡೆಯುತ್ತಿರುತ್ತವೆ.

ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿ: ಟೀಮ್ ಇಂಡಿಯಾ ಸ್ಕ್ವಾಡ್‌ಗೆ ಸೂರ್ಯಕುಮಾರ್ ಸೇರ್ಪಡೆ: ವರದಿನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿ: ಟೀಮ್ ಇಂಡಿಯಾ ಸ್ಕ್ವಾಡ್‌ಗೆ ಸೂರ್ಯಕುಮಾರ್ ಸೇರ್ಪಡೆ: ವರದಿ

ವಿರಾಟ್ ಕೊಹ್ಲಿ ಮತ್ತು ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳು ವಿರಾಟ್ ಕೊಹ್ಲಿ ನಂಬರ್ ಒನ್ ಎಂದು ವಾದ ಮಾಡಿದರೆ, ಬಾಬರ್ ಅಜಮ್ ಅಭಿಮಾನಿಗಳು ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡದ ಅಭಿಮಾನಿಗಳು ವಿರಾಟ್ ಕೊಹ್ಲಿಗಿಂತ ಬಾಬರ್ ಅಜಮ್ ಶ್ರೇಷ್ಠ ಎಂದು ವಾದ ಮಾಡಲು ಶುರುವಿಟ್ಟುಕೊಳ್ಳುತ್ತಿರುತ್ತಾರೆ. ವಿರಾಟ್ ಕೊಹ್ಲಿ ಈಗಾಗಲೇ ನಿರ್ಮಿಸಿರುವ ಕೆಲ ದಾಖಲೆಗಳನ್ನು ಬಾಬರ್ ಅಜಮ್ ಮುರಿದು ಹಾಕಿದಾಗಲೆಲ್ಲ ಇಬ್ಬರ ನಡುವಿನ ಹೋಲಿಕೆಯ ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟಕ್ಕೆ ಹರಿದಾಡುತ್ತಿರುತ್ತವೆ. ಆದರೆ ಈ ಇಬ್ಬರೂ ಅತ್ಯುತ್ತಮ ಆಟಗಾರರು ಸಹ ಒಂದೇ ಯುಗದಲ್ಲಿ ಆಡುತ್ತಿದ್ದು ಹಲವಾರು ದಾಖಲೆಗಳನ್ನು ಮುರಿಯುತ್ತಿರುವುದು ಸಂತಸದ ವಿಷಯ. ಬಾಬರ್ ಅಜಮ್ ವಿರಾಟ್ ಕೊಹ್ಲಿ ನಿರ್ಮಿಸಿರುವ ಹಲವಾರು ದಾಖಲೆಗಳನ್ನು ಈಗಾಗಲೇ ಮುರಿದಿರಬಹುದು ಆದರೆ ಈ ಕೆಳಕಂಡ 5 ದಾಖಲೆಗಳನ್ನು ಮಾತ್ರ ಮುರಿಯುವುದು ಅಷ್ಟು ಸುಲಭದ ಮಾತಲ್ಲ.

1. ಟೆಸ್ಟ್‌ನಲ್ಲಿ 7 ದ್ವಿಶತಕಗಳು

1. ಟೆಸ್ಟ್‌ನಲ್ಲಿ 7 ದ್ವಿಶತಕಗಳು

ಇದುವರೆಗೂ ಒಟ್ಟು 35 ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಪಂದ್ಯಗಳನ್ನಾಡಿರುವ ಬಾಬರ್ ಅಜಮ್ ಯಾವುದೇ ದ್ವಿ ಶತಕ ಬಾರಿಸುವಲ್ಲಿ ಯಶಸ್ವಿಯಾಗಿಲ್ಲ ಹಾಗೂ ಟೆಸ್ಟ್ ಕ್ರಿಕೆಟ್‍ನಲ್ಲಿ ಬಾಬರ್ ಅಜಮ್ ಗಳಿಸಿರುವ ಅತ್ಯಧಿಕ ರನ್ 143. ಹೀಗಾಗಿ ವಿರಾಟ್ ಕೊಹ್ಲಿ ನಿರ್ಮಿಸಿರುವ 7 ಟೆಸ್ಟ್ ದ್ವಿಶತಕದ ದಾಖಲೆಯನ್ನು ಬಾಬರ್ ಅಜಮ್ ಮುರಿಯುವುದು ಅಸಾಧ್ಯ ಎಂದು ಹಲವಾರು ಕ್ರಿಕೆಟ್ ಪಂಡಿತರು ಈಗಾಗಲೇ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

2. ವಿರಾಟ್ ಕೊಹ್ಲಿಯ ವೇಗದ 12,000 ಏಕದಿನ ರನ್

2. ವಿರಾಟ್ ಕೊಹ್ಲಿಯ ವೇಗದ 12,000 ಏಕದಿನ ರನ್

ಇತ್ತೀಚೆಗಷ್ಟೇ ವಿರಾಟ್ ಕೊಹ್ಲಿ 12,000 ಏಕದಿನ ರನ್ ದಾಟುವುದರ ಮೂಲಕ ದೊಡ್ಡ ದಾಖಲೆಯನ್ನು ನಿರ್ಮಿಸಿದರು. ಅತಿ ವೇಗವಾಗಿ 12,000 ಏಕದಿನ ರನ್ ಗಳಿಸಿದ ಕ್ರಿಕೆಟಿಗ ಎಂಬ ದಾಖಲೆಯನ್ನು ವಿರಾಟ್ ಕೊಹ್ಲಿ ನಿರ್ಮಿಸಿದರು. ಕೇವಲ 242 ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ 12,000 ಏಕದಿನ ರನ್ ಗಡಿ ದಾಟಿದರೆ, ಈ ಹಿಂದೆ ದಿಗ್ಗಜರುಗಳಾದ ಸಚಿನ್ ತೆಂಡೂಲ್ಕರ್ 300 ಮತ್ತು ರಿಕಿ ಪಾಂಟಿಂಗ್ 314 ಇನ್ನಿಂಗ್ಸ್‌ ತೆಗೆದುಕೊಂಡಿದ್ದರು. ಇತ್ತ ಬಾಬರ್ ಅಜಮ್ ಈಗಾಗಲೇ 83 ಇನಿಂಗ್ಸ್ ಆಡಿದ್ದು 3985 ರನ್ ಗಳಿಸಿದ್ದಾರೆ. ಹೀಗಾಗಿ ವಿರಾಟ್ ಕೊಹ್ಲಿಯ ಈ ದಾಖಲೆಯನ್ನು ಮುರಿದು ಹಾಕಬೇಕೆಂದರೆ ಬಾಬರ್ ಅಜಮ್ ಸದ್ಯಕ್ಕಿರುವ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ರನ್ ಗಳಿಸಬೇಕಿದೆ. ಬಾಬರ್ ಅಜಮ್ ಈಗ ಗಳಿಸಿರುವ ರನ್ ನೋಡಿದರೆ ವಿರಾಟ್ ಕೊಹ್ಲಿಯ ಈ ದಾಖಲೆಯನ್ನು ಮುರಿಯುವುದು ಕಷ್ಟಸಾಧ್ಯ ಎನ್ನಬಹುದು.

3. ಆವೃತ್ತಿಯೊಂದರಲ್ಲಿ ಫ್ರಾಂಚೈಸಿ ಪರ ಅತ್ಯಧಿಕ ರನ್

3. ಆವೃತ್ತಿಯೊಂದರಲ್ಲಿ ಫ್ರಾಂಚೈಸಿ ಪರ ಅತ್ಯಧಿಕ ರನ್

2016ರ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ವಿರಾಟ್ ಕೊಹ್ಲಿ ಗಳಿಸಿದ್ದು ಬರೋಬ್ಬರಿ 973 ರನ್! ಅತ್ತ ಬಾಬರ್ ಅಜಮ್ ಪಾಕಿಸ್ತಾನ್ ಸೂಪರ್ ಲೀಗ್ ಟೂರ್ನಿಯ 2020ರ ಆವೃತ್ತಿಯಲ್ಲಿ 473 ರನ್ ಬಾರಿಸಿದ್ದೇ ಅತ್ಯಧಿಕವಾಗಿದೆ. ಹೀಗಾಗಿ ವಿರಾಟ್ ಕೊಹ್ಲಿ ಆವೃತ್ತಿಯೊಂದರಲ್ಲಿ ಫ್ರಾಂಚೈಸಿ ತಂಡದ ಪರ ಬಾರಿಸಿರುವ ಅತ್ಯಧಿಕ ರನ್ ದಾಖಲೆಯನ್ನು ಬಾಬರ್ ಅಜಮ್ ಮುರಿದು ಹಾಕುವುದು ತೀರಾ ಕಷ್ಟದ ಕೆಲಸ. ಬಾಬರ್ ಅಜಮ್ ಮಾತ್ರವಲ್ಲದೆ ಇನ್ನುಳಿದ ಕ್ರಿಕೆಟಿಗರಿಗೂ ಕೂಡ ವಿರಾಟ್ ಕೊಹ್ಲಿಯ ಈ ದಾಖಲೆಯನ್ನು ಮುಟ್ಟುವುದು ಕಷ್ಟಸಾಧ್ಯ.

4. ಚೇಸಿಂಗ್ ವೇಳೆ ಅತ್ಯಧಿಕ ಏಕದಿನ ಸೆಂಚುರಿ

4. ಚೇಸಿಂಗ್ ವೇಳೆ ಅತ್ಯಧಿಕ ಏಕದಿನ ಸೆಂಚುರಿ

ಏಕದಿನ ಪಂದ್ಯಗಳಲ್ಲಿ ಚೇಸಿಂಗ್ ಮಾಡುವ ವೇಳೆ ವಿರಾಟ್ ಕೊಹ್ಲಿ ಒಟ್ಟು 26 ಶತಕಗಳನ್ನು ಬಾರಿಸಿದ್ದಾರೆ. ಅತ್ತ ಬಾಬರ್ ಅಜಮ್ ಏಕದಿನ ಪಂದ್ಯಗಳಲ್ಲಿ ಚೇಸ್ ಮಾಡುವ ವೇಳೆ ಒಟ್ಟು 4 ಶತಕಗಳನ್ನು ಬಾರಿಸಿದ್ದಾರೆ. ಹೀಗೆ ಚೇಸಿಂಗ್ ಮಾಡುವ ವೇಳೆ ಅತಿ ಹೆಚ್ಚು ಶತಕ ಬಾರಿಸಿರುವ ದಾಖಲೆಯಲ್ಲಿ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಬೇಕೆಂದರೆ ಬಾಬರ್ ಅಜಮ್ ಇನ್ನೂ 22 ಶತಕಗಳನ್ನು ಬಾರಿಸಲೇಬೇಕಾದ ಅನಿವಾರ್ಯತೆ ಇದೆ.

Karnataka ತಂಡದ ವಿರುದ್ಧ ರೋಚಕವಾಗಿ ಗೆದ್ದು ಚಾಂಪಿಯನ್ ಆದ Tamil nadu | Oneindia Kannada
5. ಸುದೀರ್ಘ 3.5 ವರ್ಷಗಳವರೆಗೆ ಏಕದಿನ ಅತ್ಯುತ್ತಮ ಬ್ಯಾಟ್ಸ್‌ಮನ್‌ ಪಟ್ಟಿಯಲ್ಲಿ ಅಗ್ರಸ್ಥಾನ

5. ಸುದೀರ್ಘ 3.5 ವರ್ಷಗಳವರೆಗೆ ಏಕದಿನ ಅತ್ಯುತ್ತಮ ಬ್ಯಾಟ್ಸ್‌ಮನ್‌ ಪಟ್ಟಿಯಲ್ಲಿ ಅಗ್ರಸ್ಥಾನ

ವಿರಾಟ್ ಕೊಹ್ಲಿ ಏಕದಿನ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದ ನಂತರ ಸತತ 1258 ದಿನಗಳ ಕಾಲ ಕೆಳಗಿಳಿಯಲೇ ಇಲ್ಲ. ಹೀಗೆ ಇಷ್ಟು ದಿನಗಳ ಕಾಲ ಸುದೀರ್ಘವಾಗಿ ಏಕದಿನ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ವಿರಾಟ್ ಕೊಹ್ಲಿಯ ದಾಖಲೆಯನ್ನು ಬಾಬರ್ ಅಜಮ್ ಮುರಿಯುವುದು ಅಸಾಧ್ಯವೆಂದೇ ಹೇಳಬಹುದು. ಇತ್ತೀಚೆಗಷ್ಟೇ ಏಪ್ರಿಲ್ ತಿಂಗಳಿನಲ್ಲಿ ಈ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದ ಬಾಬರ್ ಅಜಮ್ ಇನ್ನೆಷ್ಟು ದಿನಗಳವರೆಗೆ ತಮ್ಮ ಸ್ಥಾನವನ್ನು ಬಿಟ್ಟು ಕೊಡದೇ ಕಾಯ್ದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ..

For Quick Alerts
ALLOW NOTIFICATIONS
For Daily Alerts
Story first published: Monday, November 22, 2021, 18:07 [IST]
Other articles published on Nov 22, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X