ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾಕ್‌ ವಿರುದ್ಧ ಆಸೀಸ್‌ ತಿಣುಕಾಡಿ ಗೆದ್ದ ಬಳಿಕ ಆರೊನ್‌ ಫಿಂಚ್‌ ಹೇಳಿದ್ದಿದು!

Aaron Finch relieved post Australias nervy win over Pakistan

ಟೌನ್ಟನ್‌, ಜೂನ್‌ 13: ಹಾಲಿ ವಿಶ್ವ ಚಾಂಪಿಯನ್ಸ್‌ ಆಸ್ಟ್ರೇಲಿಯಾ ತಂಡ ಈ ಬಾರಿಯ ಏಕದಿನ ಕ್ರಿಕೆಟ್‌ ವಿಶ್ವಕಪ್‌ನಲ್ಲಿ ಪ್ರಶಸ್ತಿ ಉಳಿಸಿಕೊಳ್ಳಲು ಹರಸಾಹಸ ನಡೆಸುತ್ತಿದ್ದು, ಬುಧವಾರ ನಡೆದ ಪಾಕಿಸ್ತಾನ ವಿರುದ್ಧದ ಲೀಗ್‌ ಪಂದ್ಯದಲ್ಲಿ ತಿಣುಕಾಡಿದರೂ 41 ರನ್‌ಗಳ ಜಯ ದಾಖಲಿಸಿದೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಇಲ್ಲಿನ ಕೌಂಟಿ ಕ್ರಿಕೆಟ್‌ ಗ್ರೌಂಡ್‌ನಲ್ಲಿ ಬುಧವಾರ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಆಸ್ಟ್ರೇಲಿಯಾ ತಂಡ 49 ಓವರ್‌ಗಳಲ್ಲಿ ಆಲ್‌ಔಟ್‌ ಆದರೂ 307 ರನ್‌ಗಳ ಬೃಹತ್‌ ಮೊತ್ತವನ್ನೇ ದಾಖಲಿಸಿತು. ಇದಕ್ಕೆ ಆಸೀಸ್‌ನ ಆರಂಭಿಕ ಬ್ಯಾಟ್ಸ್‌ಮನ್‌ ಡೇವಿಡ್‌ ವಾರ್ನರ್‌ ಅವರ ಅದ್ಭುತ ಶತಕವೇ (111 ಎಸೆತಗಳಲ್ಲಿ 107 ರನ್‌) ಕಾರಣ. ಒಂದು ವರ್ಷ ನಿಷೇಧ ಶಿಕ್ಷೆ ಎದುರಿಸಿ ಆಸ್ಟ್ರೇಲಿಯಾ ತಂಡಕ್ಕೆ ಮರಳಿದ ನಂತರ ವಾರ್ನರ್‌ ದಾಖಲಿಸಿದ ಮೊದಲ ಶತಕವಿದು.

ಇಂಡೊ-ಪಾಕ್‌ ಪಂದ್ಯದಲ್ಲಿ ಗೆಲ್ಲೊದ್ಯಾರಂತ ಭವಿಷ್ಯ ನುಡಿದ ಕಪಿಲ್‌ ದೇವ್‌!ಇಂಡೊ-ಪಾಕ್‌ ಪಂದ್ಯದಲ್ಲಿ ಗೆಲ್ಲೊದ್ಯಾರಂತ ಭವಿಷ್ಯ ನುಡಿದ ಕಪಿಲ್‌ ದೇವ್‌!

ಬಳಿಕ ಗುರಿ ಬೆನ್ನತ್ತಿದ ಪಾಕಿಸ್ತಾನ 160ಕ್ಕೆ 6 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆದರೆ, ಕೆಚ್ಚೆದೆಯ ಹೋರಾಟಕ್ಕೆ ಹೆಸರುವಾಸಿಯಾದ ಪಾಕ್‌ ಪಡೆ ಇಷ್ಟಕ್ಕೆ ಸುಮ್ಮನಾಗದೆ ಆಸೀಸ್‌ ಪಾಳಯದಲ್ಲಿ ಆತಂಕ ತಂದೊಡ್ಡಿತ್ತು. ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಹಸನ್‌ ಅಲಿ (15 ಎಸೆತಗಳಲ್ಲಿ 32 ರನ್‌) ಮತ್ತು ವಹಾಬ್‌ ರಿಯಾಝ್‌ (30 ಎಸೆತಗಳಲ್ಲಿ 45 ರನ್‌) ಬಿರುಸಿನ ಬ್ಯಾಟಿಂಗ್‌ ನಡೆಸಿದರೆ, ಮತ್ತೊಂದು ತುದಿಯಲ್ಲಿ ನಾಯಕ ಸರ್ಫರಾಝ್‌ ಖಾನ್‌ (48 ಎಸೆತಗಳಲ್ಲಿ ಔಟಾಗದೆ 40 ರನ್‌) ಕ್ರೀಸ್‌ ಕಾಯ್ದುಕೊಂಡು ಪಂದ್ಯವನ್ನು ರೋಚಕ ಘಟ್ಟದ ಕಡೆಗೆ ಕೊಂಡೊಯ್ದಿದ್ದರು.

ಧವನ್‌ ಬಗ್ಗೆ ಸಹಾಯಕ ಕೋಚ್‌ ಸಂಜಯ್‌ ಬಾಂಗರ್‌ ಹೇಳಿದ್ದಿದು!ಧವನ್‌ ಬಗ್ಗೆ ಸಹಾಯಕ ಕೋಚ್‌ ಸಂಜಯ್‌ ಬಾಂಗರ್‌ ಹೇಳಿದ್ದಿದು!

ಒಂದು ಹಂತದಲ್ಲಿ ಪಾಕಿಸ್ತಾನ ತಂಡಕ್ಕೆ 3 ವಿಕೆಟ್‌ಗಳಿಂದ 35 ಎಸೆತಗಳಲ್ಲಿ ಕೇವಲ 45 ರನ್‌ಗಳನ್ನು ಮಾತ್ರವೇ ಗಳಿಸ ಬೇಕಿತ್ತು. ಈ ಹಂತದಲ್ಲಿ ದಾಳಿಗಿಳಿದ ಮಿಚೆಲ್‌ ಸ್ಟಾರ್ಕ್‌ ಮತ್ತು ಕೇನ್‌ ರಿಚರ್ಡ್ಸನ್‌ ಆಸೀಸ್‌ಗೆ ಮರು ಜೀವ ನೀಡಿದರು. ಅಂತಿಮವಾಗಿ ಪಾಕಿಸ್ತಾನ 45.4 ಓವರ್‌ಗಳಲ್ಲಿ 266ಕ್ಕೆ ಆಲ್‌ಔಟ್‌ ಆಯಿತು.

"ಪಾಕ್‌ ತಂಡ ನಿಜಕ್ಕೂ ಆತಂಕ ಸೃಷ್ಠಿಸಿತ್ತು. ಹಸನ್‌ ಮತ್ತು ವಹಾಬ್‌ ಅವರಂತಹ ಆಟಗಾರರು ಕ್ರೀಸ್‌ಗೆ ಬಂದು ಬ್ಯಾಟ್‌ ಬೀಸುವಾಗ ನಿಜಕ್ಕೂ ಕಷ್ಟದ ಸ್ಥಿತಿ ನಿರ್ಮಾಣವಾಗುತ್ತದೆ. ಅವರು ಲಯ ಕಂಡುಕೊಂಡ ಬಳಿಕ ತಡೆದು ನಿಲ್ಲಿಸುವುದು ಕಷ್ಟದ ಕೆಲಸ. ಈ ಸಂದರ್ಭದಲ್ಲಿ ನಮ್ಮ ಅತ್ಯುತ್ತಮ ಬೌಲಿಂಗ್‌ ನಡೆಸುವ ಅಗತ್ಯವಿರುತ್ತದೆ. ಗುಡ್‌ ಲೆನ್ತ್‌ ಎಸೆತವಾಗಲಿ ಯಾರ್ಕರ್‌ ಆಗಲಿ ಪ್ರತಿಯೊಂದು ಎಸೆತದ ಹಿಂದೆಯೂ ಶೇ. 100 ರಷ್ಟು ಶ್ರಮವಿರಲೇ ಬೇಕು. ಇಂತಹ ಚಿಕ್ಕ ಕ್ರೀಡಾಂಗಣದಲ್ಲಿ ನಮ್ಮ ಬೌಲಿಂಗ್‌ನಲ್ಲಿ ಕೊಂಚ ತಪ್ಪಾದರೂ ಅದು ಸಿಕ್ಸರ್‌ ತಲುಪಿರುತ್ತದೆ,'' ಎಂದು ಪಂದ್ಯದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಫಿಂಚ್‌ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಆಮಿರ್‌ಗೆ ಸ್ಪಾಟ್‌ ಫಿಕ್ಸಿಂಗ್‌ ಒಪ್ಪಿಕೊಳ್ಳುವಂತೆ ಮಾಡಿದ್ದು ಯಾರು ಗೊತ್ತಾ?ಆಮಿರ್‌ಗೆ ಸ್ಪಾಟ್‌ ಫಿಕ್ಸಿಂಗ್‌ ಒಪ್ಪಿಕೊಳ್ಳುವಂತೆ ಮಾಡಿದ್ದು ಯಾರು ಗೊತ್ತಾ?

ಇದಕ್ಕೂ ಮುನ್ನ ಆಸೀಸ್‌ ಮೊದಲು ಬ್ಯಾಟ್‌ ಮಾಡಿ ಮೊದಲ ವಿಕೆಟ್‌ಗೆ 146 ರನ್‌ಗಳನ್ನು ಗಳಿಸಿದರೂ ಇನ್ನುಳಿದ 161 ರನ್‌ಗಳನ್ನು ಗಳಿಸಲು 9 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಪಾಕ್‌ನ ಎಡಗೈ ವೇಗಿ ಮೊಹಮ್ಮದ್‌ ಆಮಿರ್‌ ತಮ್ಮ ಶ್ರೇಷ್ಠ ಪ್ರದರ್ಶನ ಹೊರತಂದು 30ಕ್ಕೆ 5 ವಿಕೆಟ್‌ ಉರುಳಿಸಿ ಕಾಂಗರೂ ಪಡೆಯ ಬ್ಯಾಟ್ಸ್‌ಮನ್‌ಗಳನ್ನು ಬೇಟೆಯಾಡಿದ್ದರು.

"ನಾವು 50 ಓವರ್‌ಗಳ ವರೆಗೆ ಬ್ಯಾಟ್‌ ಮಾಡಲಿಲ್ಲ. ಇದು ನಿಜಕ್ಕೂ ಬೇಸರದ ಸಂಗತಿ. ತಂಡದಲ್ಲಿ ಹೆಚ್ಚುವರಿ ಬ್ಯಾಟ್ಸ್‌ಮನ್‌ ಇರುವಾಗ 50 ಓವರ್‌ಗಳನ್ನು ಪೂರೈಸಬೇಕು. ಈ ಒತ್ತಡದಲ್ಲಿ ನಮ್ಮ ತಂಡ ಕೊಂಚ ದಣಿದು ಹೆಚ್ಚುವರಿ 20-30 ರನ್‌ಗಳನ್ನು ಗಳಿಸುವಲ್ಲಿ ವಿಫಲಗೊಂಡಿತು,'' ಎಂದು ಫಿಂಚ್‌ ವಿವರಿಸಿದ್ದಾರೆ.

ಇದೇ ವೇಳೆ ಪಾಕಿಸ್ತಾನ ತಂಡದ ಬ್ಯಾಟ್ಸ್‌ಮನ್‌ ಸರ್ಫರಾಝ್‌ ಅಹ್ಮದ್‌ ಕೂಡ ಬೇಸರ ವ್ಯಕ್ತ ಪಡಿಸಿದ್ದು, ತಂಡದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ರನ್‌ ಗಳಿಸಬೇಕು ಎಂದಿದ್ದಾರೆ.

ವಿಶ್ವಕಪ್‌: ಶಿಖರ್‌ ಧವನ್‌ ಇಂಜುರಿ ಬಗ್ಗೆ ಬಿಸಿಸಿಐ ಹೇಳೋದೇನು?ವಿಶ್ವಕಪ್‌: ಶಿಖರ್‌ ಧವನ್‌ ಇಂಜುರಿ ಬಗ್ಗೆ ಬಿಸಿಸಿಐ ಹೇಳೋದೇನು?

"ಮೊದಲಿಗೆ ಆರಂಭಿಕ 20 ಓವರ್‌ಗಳಲ್ಲಿ ನಾವು ಹೆಚ್ಚು ರನ್‌ಗಳನ್ನು ಬಿಟ್ಟುಕೊಟ್ಟೆವು. ಆಮಿರ್‌ ಹೊರತಾಗಿ ಉಳಿದ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಲಿಲ್ಲ. ನಮ್ಮ ತಂಡ ಗೆಲ್ಲಬೇಕಾದರೆ ಅಗ್ರ ಕ್ರಮಾಂಕದಲ್ಲಿ ನಾಲ್ವರು ಬ್ಯಾಟ್ಸ್‌ಮನ್‌ಗಳು ಉತ್ತಮವಾಗಿ ಆಡಲೇ ಬೇಕು,'' ಎಂದಿದ್ದಾರೆ.

ಪಾಕಿಸ್ತಾನ ತಂಡ ಜೂನ್‌ 16ರಂದು ತನ್ನ ಮುಂದಿನ ಪಂದ್ಯವನ್ನಾಡಲಿದ್ದು, ಈ ಬಾರಿ ಪ್ರಶಸ್ತಿ ಗೆಲ್ಲುವ ಫೇವರಿಟ್‌ ಆಗಿರುವ ಟೀಮ್‌ ಇಂಡಿಯಾ ವಿರುದ್ಧ ಮ್ಯಾಂಚೆಸ್ಟರ್‌ನಲ್ಲಿ ಪೈಪೋಟಿ ನಡೆಸಲಿದೆ.

Story first published: Thursday, June 13, 2019, 16:09 [IST]
Other articles published on Jun 13, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X