ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದಕ್ಷಿಣ ಆಫ್ರಿಕಾ ತಂಡಕ್ಕೆ ನಾಯಕನಾಗುವ ಸುದ್ದಿಗೆ ಎಬಿ ಡಿವಿಲಿಯರ್ಸ್ ಸ್ಪಷ್ಟನೆ

Ab DE Villiers Denies Being Approached to Lead South Africa

ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡಕ್ಕೆ ನಿವೃತ್ತಿಯನ್ನು ಘೋಷಿಸಿರುವ ಎಬಿ ಡಿವಿಲಿಯರ್ಸ್ ಮತ್ತೆ ತಂಡಕ್ಕೆ ವಾಪಾಸಾಗುವ ಸಿದ್ಧತೆಗಳು ನಡೆದಿವೆ. ಮುಂದಿನ ಟಿ20 ವಿಶ್ವಕಪ್‌ನಲ್ಲಿ ಎಬಿ ಡಿವಿಲಿಯರ್ಸ್ ತಂಡಕ್ಕೆ ಮರಳಲು ವೇದಿಕೆ ಸಿದ್ಧವಾಗಿದೆ. ಆದರೆ ಈ ಮಧ್ಯೆ ಎಬಿ ಡಿವಿಲಿಯರ್ಸ್ ದ. ಆಫ್ರಿಕಾ ತಂಡಕ್ಕೆ ನಾಯಕನಾಗಲಿದ್ದಾರೆ ಎಂಬ ಸುದ್ಧಿ ಹರಿದಾಡಿತ್ತು.

ಸ್ಟಾರ್ ಸ್ಪೋರ್ಟ್ಸ್‌ನ 'ಕ್ರಿಕೆಟ್‌ ಕನೆಕ್ಟೆಡ್' ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಎಬಿ ಡಿ ವಿಲಿಯರ್ಸ್, ಆ ಕಾರ್ಯಕ್ರಮದಲ್ಲಿ "ಕ್ರಿಕೆಟ್ ಸೌತ್ ಆಫ್ರಿಕಾ ರಾಷ್ಟ್ರೀಯ ತಂಡದ ನಾಯಕನಾಗಲು ತನ್ನಲ್ಲಿ ಕೇಳಿಕೊಂಡಿದೆ ಎಂದು ಎಬಿ ಡಿ ಹೇಳಿದ್ದಾರೆ' ಎಂದು ಮಾಧ್ಯಮ ಪ್ರಕಟಣೆಯಲ್ಲಿ ಹೇಳಿತ್ತು. ಇದರ ಆಧಾರದ ಮೇಲೆ ವರದಿಗಳು ಬಿತ್ತರವಾಗಿತ್ತು.

'ಸೆಹ್ವಾಗ್‌ಗಿಂತ ಪ್ರತಿಭಾವಂತ ಆದರೆ ಆತನಷ್ಟು ಮೆದುಳಿಲ್ಲ': ಪಾಕ್ ಆಟಗಾರನ ಬಗ್ಗೆ ಅಖ್ತರ್ ಮಾತು'ಸೆಹ್ವಾಗ್‌ಗಿಂತ ಪ್ರತಿಭಾವಂತ ಆದರೆ ಆತನಷ್ಟು ಮೆದುಳಿಲ್ಲ': ಪಾಕ್ ಆಟಗಾರನ ಬಗ್ಗೆ ಅಖ್ತರ್ ಮಾತು

ಈ ಸುದ್ದಿಗೆ ಸ್ವತಃ ಎಬಿ ಡಿವಿಲಿಯರ್ಸ್ ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ. ಜೊತೆಗೆ ಇದು ನಿಜವಲ್ಲ ಎಂಬ ವಿಚಾರವನ್ನು ಎಬಿ ಡಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ. ಈ ಮೂಲಕ ದಕ್ಷಿಣ ಆಫ್ರಿಕಾ ತಂಡಕ್ಕೆ ಎಬಿ ಡಿ ನಾಯಕನಾಗಲಿದ್ದಾರೆ ಉತ್ಸಾಹದಲ್ಲಿದ್ದ ಎಬಿ ಡಿ ಅಭಿಮಾನಿಗಳಿಗೆ ನಿರಾಸೆಯನ್ನುಂಟು ಮಾಡಿದ್ದಾರೆ.

"ವರದಿಗಳು ಹೇಳುತ್ತಿರುವಂತೆ ದಕ್ಷಿಣ ಆಫ್ರಿಕಾ ತಂಡದ ನಾಯಕತ್ವವನ್ನು ವಹಿಸಿಕೊಳ್ಳಲು ಮಂಡಳಿ ಕೇಳಿಕೊಂಡಿದೆ ಎಂಬುದು ಸತ್ಯಕ್ಕೆ ದೂರವಾಗಿದೆ. ಈ ಸಂದರ್ಭದಲ್ಲಿ ಯಾವುದ್ನನು ನಂಬಬೇಕು ಎಂಬುದನ್ನು ತಿಳಿದುಕೊಳ್ಳುವುದು ಕಷ್ಟವಾಗುತ್ತದೆ" ಎಂದು ಎಬಿ ಡಿವಿಲಿಯರ್ಸ್ ಟ್ವೀಟ್ ಮಾಡಿ ಸ್ಪಷ್ಟನೆಯನ್ನು ನೀಡಿದ್ದಾರೆ.

ನಾನು ನೋಡಿದವರಲ್ಲಿ ಎಂಎಸ್ ಧೋನಿ ಅತ್ಯುತ್ತಮ ಫಿನಿಶರ್: ಮೈಕ್ ಹಸ್ಸಿನಾನು ನೋಡಿದವರಲ್ಲಿ ಎಂಎಸ್ ಧೋನಿ ಅತ್ಯುತ್ತಮ ಫಿನಿಶರ್: ಮೈಕ್ ಹಸ್ಸಿ

2018ರಲ್ಲಿ ದಕ್ಚಿಣ ಆಫ್ರಿಕಾದ ಸ್ಫೊಟಕ ಬ್ಯಾಟ್ಸ್‌ಮನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯವನ್ನು ಹೇಳಿದ್ದರು. ಆದರೆ ಬಳಿಕ ಕಳೆದ ವರ್ಷಾಂತ್ಯದಲ್ಲಿ ಆಫ್ರಿಕಾ ಕ್ರಿಕೆಟ್ ಮಂಡಳಿಯಲ್ಲಿ ನಡೆದ ಬೆಳವಣಿಗೆಯಲ್ಲಿ ತಂಡಕ್ಕೆ ವಾಪಾಸಾಗುವ ಮನಸು ಮಾಡಿದ್ದರು.

Story first published: Thursday, April 30, 2020, 10:40 [IST]
Other articles published on Apr 30, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X