ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ ಎಬಿ ಡಿ ವಿಲಿಯರ್ಸ್!

AB Devilliers wont return to International cricket, confirms South Africa Cricket
AB de Villiers ಬಗ್ಗೆ ಸ್ಪಷ್ಟನೆ ನೀಡಿದ ದಕ್ಷಿಣ ಆಫ್ರಿಕಾ | Oneindia Kannada

ಕೇಪ್‌ ಟೌನ್: 'ಮಿಸ್ಟರ್ 360 ಡಿಗ್ರೀ' ಎಂದೇ ಖ್ಯಾತರಾಗಿದ್ದ ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್‌ಮನ್‌ ಎಬಿ ಡಿ ವಿಲಿಯರ್ಸ್ ಮತ್ತೆ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಅಭಿಮಾನಿಗಳ ಆಸೆಗೆ ತಣ್ಣೀರು ಬಿದ್ದಿದೆ. ಡಿ ವಿಲಿಯರ್ಸ್ ಇನ್ನು ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡುತ್ತಿಲ್ಲ. ಇದರೊಂದಿಗೆ ಎಬಿಡಿ ಆಟವನ್ನು ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ನೋಡುವ ಆಸೆಯೂ ಮಣ್ಣಾಗಿದೆ.

ಈ ಬಾರಿಯ ಐಪಿಎಲ್ ಮುಂದುವರೆದರೆ ಕಪ್ ಆರ್‌ಸಿಬಿಯದ್ದೇ; ಇಲ್ಲಿವೆ 5 ಪ್ರಮುಖ ಕಾರಣಗಳುಈ ಬಾರಿಯ ಐಪಿಎಲ್ ಮುಂದುವರೆದರೆ ಕಪ್ ಆರ್‌ಸಿಬಿಯದ್ದೇ; ಇಲ್ಲಿವೆ 5 ಪ್ರಮುಖ ಕಾರಣಗಳು

ಒಮ್ಮೆ ನಿವೃತ್ತಿ ನೀಡಿದ್ದ ಎಬಿ ಡಿ ವಿಲಿಯರ್ಸ್ ಮತ್ತೆ ನಿವೃತ್ತಿ ವಾಪಸ್ ಪಡೆದು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ ಬಲ ತುಂಬುವ ಆಸೆ ಮೂಡಿಸಿದ್ದರು. ಆದರೆ ಎಬಿಡಿ ಮತ್ತೆ ದಕ್ಷಿಣ ಆಫ್ರಿಕಾ ರಾಷ್ಟ್ರೀಯ ತಂಡ ಪ್ರತಿನಿಧಿಸುತ್ತಿಲ್ಲ ಎಂದು ಅಲ್ಲಿನ ಕ್ರಿಕೆಟ್ ಬೋರ್ಡ್ ಖಾತರಿಪಡಿಸಿದೆ.

ನಿವೃತ್ತಿ ವಾಪಸ್ ಪಡೆದಿದ್ದ ಎಬಿಡಿ

ನಿವೃತ್ತಿ ವಾಪಸ್ ಪಡೆದಿದ್ದ ಎಬಿಡಿ

2018 ಮೇ 23ರಂದು ಎಬಿ ಡಿವಿಲಿಯರ್ಸ್ ಅಂತಾರಾಷ್ಟ್ರೀಯ ನಿವೃತ್ತಿ ಘೋಷಿಸಿದ್ದರು. ಆದರೆ ಆ ಬಳಿಕ ಮತ್ತೆ ವಿಶ್ವಕಪ್‌ ವೇಳೆ ದಕ್ಷಿಣ ಆಫ್ರಿಕಾ ಪರ ಆಡುವ ಇಂಗಿತದಿಂದ ನಿವೃತ್ತಿ ವಾಪಸ್ ಪಡೆದಿದ್ದರು. ಆದರೆ ಏಕದಿನ ವಿಶ್ವಕಪ್‌ ತಂಡದಲ್ಲಿ ಎಬಿಡಿಗೆ ಸ್ಥಾನ ಸಿಕ್ಕಿರಲಿಲ್ಲ. ಮತ್ತೆ ಈ ಬಾರಿಯ ಟಿ20ಐ ವಿಶ್ವಕಪ್‌ನಲ್ಲಿ ಎಬಿಡಿ ಆಡುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆ ನಿರೀಕ್ಷೆ ಕೂಡ ಈಗ ಸುಳ್ಳಾಗಿದೆ.

ಆರ್‌ಸಿಬಿಯ ಆಪಾದ್ಭಾಂಧವ

ಆರ್‌ಸಿಬಿಯ ಆಪಾದ್ಭಾಂಧವ

ಎಬಿ ಡಿ ಜೊತೆಗೆ ಚರ್ಚೆ ನಡೆಸಿದ ಬಳಿಕ ಕ್ರಿಕೆಟ್ ಸೌತ್ ಆಫ್ರಿಕಾ ಈ ಸಂಗತಿ ಬಹಿರಂಗಪಡಿಸಿದೆ. 'ಚರ್ಚೆ ಮುಗಿದಿದೆ. ಎಬಿಡಿಯ ಅಂತಾರಾಷ್ಟ್ರೀಯ ನಿವೃತ್ತಿ ಹಾಗೇ ಇರಲಿದೆ' ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಹೇಳಿದೆ. ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿರುವ ಎಬಿಡಿ ಈ ಬಾರಿಯ ಸೀಸನ್‌ ಅರ್ಧಕ್ಕೆ ನಿಲುಗಡೆಯಾಗುವ ಮುನ್ನ ತಂಡವನ್ನು ಗೆಲುವಿನ ಹಾದಿಗೆ ತರಲು ಪ್ರಮುಖ ಕೊಡುಗೆ ನೀಡಿದ್ದರು.

ಅತೀ ವೇಗದ ಶತಕ ವಿಶ್ವದಾಖಲೆ

ಅತೀ ವೇಗದ ಶತಕ ವಿಶ್ವದಾಖಲೆ

37ರ ಹರೆಯದ ಎಬಿ ಡಿ ವಿಲಿಯರ್ಸ್, 114 ಟೆಸ್ಟ್‌ ಪಂದ್ಯಗಳಲ್ಲಿ 8765 ರನ್, 228 ಏಕದಿನ ಪಂದ್ಯಗಳಲ್ಲಿ 9577 ರನ್, 78 ಟಿ20ಐ ಪಂದ್ಯಗಳಲ್ಲಿ 1672 ರನ್, 176 ಐಪಿಎಲ್ ಪಂದ್ಯಗಳಲ್ಲಿ 5056 ರನ್ ದಾಖಲೆ ಹೊಂದಿದ್ದಾರೆ. ಅತೀ ವೇಗದ ಏಕದಿನ ಶತಕ ವಿಶ್ವದಾಖಲೆ ಈಗಲೂ ಎಬಿಡಿ ಹೆಸರಿನಲ್ಲಿದೆ. ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ 31 ಎಸೆತಗಳಲ್ಲಿ ಎಬಿಡಿ ಶತಕ ಬಾರಿಸಿದ್ದರು.

Story first published: Wednesday, May 19, 2021, 9:29 [IST]
Other articles published on May 19, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X