ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಈ ವಿದೇಶಿ ಲೀಗ್‌ನಲ್ಲಿ ಆಡಲು ಸಹಿ ಹಾಕಿದ ಸುರೇಶ್ ರೈನಾ; ಇಲ್ಲಿದೆ ವಿವರ

Abu Dhabi T10 League 2022: Suresh Raina Signed To Play For Deccan Gladiators

ಭಾರತದ ಮಾಜಿ ಕ್ರಿಕೆಟಿಗ ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ಮಾಜಿ ಆಟಗಾರ ಸುರೇಶ್ ರೈನಾ ಅವರು ಅಬುಧಾಬಿ ಟಿ10 ಲೀಗ್ 2022ಕ್ಕಾಗಿ ಡೆಕ್ಕನ್ ಗ್ಲಾಡಿಯೇಟರ್ಸ್ ತಂಡದೊಂದಿಗೆ ಸಹಿ ಹಾಕಿದ್ದಾರೆ.

ಈ ವರ್ಷದ ಆರಂಭದಲ್ಲಿ ಸುರೇಶ್ ರೈನಾ ಕ್ರಿಕೆಟ್‌ನ ಎಲ್ಲಾ ಸ್ವರೂಪಗಳಿಂದ ನಿವೃತ್ತಿ ಘೋಷಿಸಿದರು. ಹೀಗಾಗಿ ಸುರೇಶ್ ರೈನಾ ಅವರನ್ನು ವಿದೇಶಿ ಫ್ರಾಂಚೈಸಿಗಳಿಗೆ ಆಡಲು ಅರ್ಹತೆ ನೀಡಿತು. ಯುಎಇ ಮೂಲದ ಲೀಗ್ ಅಬುಧಾಬಿ ಟಿ10 ಲೀಗ್‌ನ ಅಧಿಕೃತ ಟ್ವಿಟರ್ ಹ್ಯಾಂಡಲ್ ಮಂಗಳವಾರ ಸುದ್ದಿ ಪ್ರಕಟಿಸಿದೆ.

ಟಿ20 ವಿಶ್ವಕಪ್ 2022; ಭಾರತ ಸೇರಿ ಫೈನಲ್ ತಲುಪುವ ತಂಡಗಳ ಹೆಸರಿಸಿದ ಮಿಥಾಲಿ ರಾಜ್ಟಿ20 ವಿಶ್ವಕಪ್ 2022; ಭಾರತ ಸೇರಿ ಫೈನಲ್ ತಲುಪುವ ತಂಡಗಳ ಹೆಸರಿಸಿದ ಮಿಥಾಲಿ ರಾಜ್

"ಭಾರತ ತಂಡದ ವಿಶ್ವಕಪ್ ವಿಜೇತ ಸುರೇಶ್ ರೈನಾ ಅವರು ಡೆಕ್ಕನ್ ಗ್ಲಾಡಿಯೇಟರ್ಸ್ ತಂಡಕ್ಕೆ ಸಹಿ ಹಾಕಿದ್ದಾರೆ. ಭಾರತದ ಸಾರ್ವಕಾಲಿಕ ಅತ್ಯುತ್ತಮ ಬಿಳಿ-ಬಾಲ್ ಆಟಗಾರರಲ್ಲಿ ಒಬ್ಬರಾದ ಸುರೇಶ್ ರೈನಾ ಮೊದಲ ಬಾರಿಗೆ ಅಬುಧಾಬಿ ಟಿ10 ಲೀಗ್‌ನಲ್ಲಿ ಆಡುತ್ತಾರೆ ಮತ್ತು ನಾವು ಕಾಯಲು ಸಾಧ್ಯವಿಲ್ಲ," ಎಂದು ಟಿ10 ಲೀಗ್ ಫ್ರಾಂಚೈಸಿ ಟ್ವಿಟರ್‌ನಲ್ಲಿ ಬರೆದಿದ್ದಾರೆ.

ಸುರೇಶ್ ರೈನಾ 18 ಟೆಸ್ಟ್‌ಗಳು, 226 ಏಕದಿನ ಪಂದ್ಯ

ಸುರೇಶ್ ರೈನಾ 18 ಟೆಸ್ಟ್‌ಗಳು, 226 ಏಕದಿನ ಪಂದ್ಯ

13 ವರ್ಷಗಳ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ಸುರೇಶ್ ರೈನಾ 18 ಟೆಸ್ಟ್‌ಗಳು, 226 ಏಕದಿನ ಪಂದ್ಯಗಳು ಮತ್ತು 78 ಟಿ20 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಸುರೇಶ್ ರೈನಾ 226 ಏಕದಿನ ಪಂದ್ಯಗಳಿಂದ 35.31 ಸರಾಸರಿಯಲ್ಲಿ 5615 ರನ್ ಗಳಿಸಿದ್ದಾರೆ. ಈ ಸ್ವರೂಪದಲ್ಲಿ ಅವರ ಅತ್ಯುತ್ತಮ ಸ್ಕೋರ್ ಅಜೇಯ 116 ರನ್ ಆಗಿದೆ.

ಸುರೇಶ್ ರೈನಾ ಐದು ಶತಕ ಮತ್ತು 36 ಅರ್ಧ ಶತಕಗಳನ್ನು ಏಕದಿನ ಮಾದರಿಯಲ್ಲಿ ಗಳಿಸಿದ್ದಾರೆ. 78 ಟಿ20 ಪಂದ್ಯಗಳಲ್ಲಿ ಎಡಗೈ ಆಟಗಾರ, 29.18ರ ಸರಾಸರಿಯಲ್ಲಿ 1,605 ರನ್ ಗಳಿಸಿದ್ದಾರೆ. ಈ ಮಾದರಿಯಲ್ಲಿ ಅವರ ಅತ್ಯುತ್ತಮ ಸ್ಕೋರ್ 101. ಸುರೇಶ್ ರೈನಾ ಒಂದು ಶತಕ ಮತ್ತು ಐದು ಅರ್ಧ ಶತಕಗಳನ್ನು ಈ ಸ್ವರೂಪದಲ್ಲಿ ಗಳಿಸಿದ್ದಾರೆ.

ಸುರೇಶ್ ರೈನಾ 205 ಐಪಿಎಲ್ ಪಂದ್ಯಗಳಲ್ಲಿ 39 ಅರ್ಧ ಶತಕ

ಸುರೇಶ್ ರೈನಾ 205 ಐಪಿಎಲ್ ಪಂದ್ಯಗಳಲ್ಲಿ 39 ಅರ್ಧ ಶತಕ

ಇನ್ನು 18 ಟೆಸ್ಟ್‌ಗಳಲ್ಲಿ 31 ಇನ್ನಿಂಗ್ಸ್‌ಗಳಲ್ಲಿ, ರೈನಾ 26.48 ಸರಾಸರಿಯಲ್ಲಿ 768 ರನ್ ಗಳಿಸಿದರು. 120 ಕ್ರಿಕೆಟ್‌ನ ಟೆಸ್ಟ್ ಸ್ವರೂಪದಲ್ಲಿ ಸುರೇಶ್ ರೈನಾ ಅವರ ಅತ್ಯುತ್ತಮ ಸ್ಕೋರ್ ಆಗಿದೆ. ಈ ಮಾದರಿಯಲ್ಲಿ ಅವರು ಒಂದು ಶತಕ ಮತ್ತು ಏಳು ಅರ್ಧ ಶತಕಗಳನ್ನು ಗಳಿಸಿದ್ದಾರೆ. ಅವರು ಕ್ರಿಕೆಟ್‌ನ ಎಲ್ಲಾ ಮೂರು ಸ್ವರೂಪಗಳಲ್ಲಿ ಶತಕಗಳನ್ನು ಗಳಿಸಿದ ಮೊದಲ ಭಾರತೀಯರಾಗಿದ್ದಾರೆ ಮತ್ತು ಅವರ ಶತಕಗಳನ್ನು ಭಾರತದ ಹೊರಗೆ ಗಳಿಸಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಆಡುತ್ತಿರುವಾಗ ಸುರೇಶ್ ರೈನಾ 205 ಐಪಿಎಲ್ ಪಂದ್ಯಗಳಲ್ಲಿ 39 ಅರ್ಧ ಶತಕಗಳು ಮತ್ತು ಒಂದು ಶತಕದೊಂದಿಗೆ 136.76 ಸ್ಟ್ರೈಕ್ ರೇಟ್ ಮತ್ತು 32.52ರ ಸರಾಸರಿಯಲ್ಲಿ 5,528 ರನ್ ಗಳಿಸಿದ್ದಾರೆ. ಐಪಿಎಲ್‌ನಲ್ಲಿ ಅವರ ಅತ್ಯುತ್ತಮ ಸ್ಕೋರ್ 100.

ಸಾರ್ವಕಾಲಿಕ ಐದನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ

ಸಾರ್ವಕಾಲಿಕ ಐದನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ

ಎಡಗೈ ಬ್ಯಾಟ್ಸ್‌ಮನ್ ಸುರೇಶ್ ರೈನಾ ಐಪಿಎಲ್‌ನಲ್ಲಿ ಸಾರ್ವಕಾಲಿಕ ಐದನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಅವರು ತಮ್ಮ ವೃತ್ತಿಜೀವನದ ಬಹುಪಾಲು ಪ್ರತಿನಿಧಿಸಿದ ಚೆನ್ನೈ ಸೂಪರ್ ಕಿಂಗ್ಸ್ (CSK) ಫ್ರಾಂಚೈಸ್‌ನ ಪ್ರಮುಖ ಆಟಗಾರರಲ್ಲಿ ಒಬ್ಬರಾಗಿದ್ದರು. ಅವರು ಸಿಎಸ್‌ಕೆ ಜೊತೆಗೆ ಎರಡು ಚಾಂಪಿಯನ್ಸ್ ಲೀಗ್ ಟಿ20 ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

ಸುರೇಶ್ ರೈನಾ ದೇಶೀಯ ಕ್ರಿಕೆಟ್‌ನಲ್ಲಿ ಉತ್ತರಪ್ರದೇಶವನ್ನು ಪ್ರತಿನಿಧಿಸಿದರು. 2002-03 ಋತುವಿನಲ್ಲಿ ತಂಡಕ್ಕೆ ಪದಾರ್ಪಣೆ ಮಾಡಿದರು ಮತ್ತು 2020-21 ಋತುವಿನವರೆಗೆ ಆಡಿದರು. 109 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳಲ್ಲಿ ಸುರೇಶ್ ರೈನಾ 42.15ರ ಸರಾಸರಿಯಲ್ಲಿ 6,871 ರನ್ ಗಳಿಸಿದ್ದಾರೆ.

ಅತ್ಯುತ್ತಮ ವೈಯಕ್ತಿಕ ಸ್ಕೋರ್ ಅಜೇಯ 204

ಅತ್ಯುತ್ತಮ ವೈಯಕ್ತಿಕ ಸ್ಕೋರ್ ಅಜೇಯ 204

ಈ ಸ್ವರೂಪದಲ್ಲಿ ಅವರ ಅತ್ಯುತ್ತಮ ವೈಯಕ್ತಿಕ ಸ್ಕೋರ್ ಅಜೇಯ 204 ಆಗಿದೆ. ಈ ಮಾದರಿಯಲ್ಲಿ ಅವರು 14 ಶತಕ ಮತ್ತು 45 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಲಿಸ್ಟ್ ಎ ಕ್ರಿಕೆಟ್‌ನಲ್ಲಿ ರೈನಾ 302 ಪಂದ್ಯಗಳಲ್ಲಿ 35.42 ಸರಾಸರಿಯಲ್ಲಿ 8,078 ರನ್ ಗಳಿಸಿದ್ದಾರೆ.

ಈ ಸ್ವರೂಪದಲ್ಲಿ ಅವರ ಅತ್ಯುತ್ತಮ ಸ್ಕೋರ್ 129. ಈ ಸ್ವರೂಪದಲ್ಲಿ ಅವರ ಬ್ಯಾಟ್‌ನಿಂದ ಏಳು ಶತಕಗಳು ಮತ್ತು 55 ಅರ್ಧ ಶತಕಗಳು ಸಿಡಿದಿವೆ. 336 ಟಿ20 ಪಂದ್ಯಗಳಲ್ಲಿ ಸುರೇಶ್ ರೈನಾ 32.17ರ ಸರಾಸರಿಯಲ್ಲಿ 8,654 ರನ್ ಗಳಿಸಿದ್ದಾರೆ. ಈ ಸ್ವರೂಪದಲ್ಲಿ ಅವರ ಅತ್ಯುತ್ತಮ ವೈಯಕ್ತಿಕ ಸ್ಕೋರ್ ಅಜೇಯ 126 ಆಗಿದೆ.

ಟಿ20 ಕ್ರಿಕೆಟ್‌ನಲ್ಲಿ ಈ ಸ್ಟೈಲಿಶ್ ಬ್ಯಾಟರ್ ನಾಲ್ಕು ಶತಕಗಳು ಮತ್ತು 53 ಅರ್ಧಶತಕಗಳನ್ನು ಗಳಿಸಿದ್ದಾರೆ. ರೈನಾ ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್‌ನ ಎರಡನೇ ಸೀಸನ್‌ನಲ್ಲಿ ಇಂಡಿಯನ್ ಲೆಜೆಂಡ್ಸ್ ಪರ ಆಡಿದ್ದರು.

Story first published: Tuesday, November 1, 2022, 19:51 [IST]
Other articles published on Nov 1, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X