ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ತನ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನು ಕಿತ್ತೆಸೆದ ಅಫ್ಘಾನಿಸ್ತಾನ ಕ್ರಿಕೆಟ್ ಬೋರ್ಡ್

Afghanistan Cricket Board Sacks Its Ceo

ಅಪ್ಘಾನಿಸ್ತಾನ ಕ್ರಿಕೆಟ್ ಮಂಡಳಿ(ಎಸಿಬಿ) ಅತ್ಯಂತ ಪ್ರಮುಖ ನಿರ್ಧಾರವೊಂದನ್ನು ಪ್ರಕಟಿಸಿದೆ. ಅಪ್ಘಾನಿಸ್ತಾನ ಕ್ರಿಕೆಟ್ ಮಂಡಲಿಯ ಹಾಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲುತ್‌ಫುಲ್ಲಾ ಸ್ತಾನಿಕ್ಸಾಯ್ ಅವರನ್ನು ಆ ಸ್ಥಾನದಿಂದ ವಜಾಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ.

ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಲುತ್‌ಫುಲ್ಲಾ ಸ್ತಾನಿಕ್ಸಾಯ್ ಅವರ ಅವಧಿ ಇನ್ನೂ ಎರಡು ವರ್ಷಗಳು ಉಳಿದಿತ್ತು. ಈ ಬಗ್ಗೆ ಸ್ತಾನಿಕ್ಸಾಯ್ ಅವರಗೆ ಪತ್ರ ಬರೆದಿರುವ ಎಸಿಬಿ ಮುಖ್ಯಸ್ಥ ಫರ್ಹಾನ್ ಯೂಸುಫ್ಸಾಯ್ "ಅತೃಪ್ತಿಕರ ಕಾರ್ಯಕ್ಷಮತೆ, ಕೆಟ್ಟ ನಿರ್ವಹಣೆ ಹಾಗೂ ಮ್ಯಾನೇಜರ್‌ಗಳ ಜೊತೆ ಅನುಚಿತ ವರ್ತನೆಯ ಕಾರಣದಿಂದಾಗಿ ಒಪ್ಪಂದ ಕೊನೆಗೊಂಡಿದೆ ಎಂದು ತಿಳಿಸಿದ್ದಾರೆ.

'ಅವನ ಕ್ರಿಕೆಟ್ ಎಲ್ಲೀವರೆಗೆ ಹೋಗುತ್ತೆ ನೋಡೋಣ': ರೋಹಿತ್ ಟೆಸ್ಟ್ ಭವಿಷ್ಯಕ್ಕೆ ಗಂಭೀರ್ ಹೇಳಿಕೆ'ಅವನ ಕ್ರಿಕೆಟ್ ಎಲ್ಲೀವರೆಗೆ ಹೋಗುತ್ತೆ ನೋಡೋಣ': ರೋಹಿತ್ ಟೆಸ್ಟ್ ಭವಿಷ್ಯಕ್ಕೆ ಗಂಭೀರ್ ಹೇಳಿಕೆ

ಈ ಬಗ್ಗೆ ಅಧಿಕೃತ ಪ್ರಕಟಣೆಯನ್ನು ಎಸಿಬಿ ಹೊರಡಿಸಿದ್ದು "ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲುತ್‌ಫುಲ್ಲಾ ಸ್ತಾನಿಕ್ಸಾಯ್ ಅವರ ಅತೃಪ್ತಿಕರ ಕಾರ್ಯಕ್ಷಮತೆ ಹಾಗೂ ಕೆಟ್ಟ ನಿರ್ವಹಣೆಯ ಕಾರಣಕ್ಕಾಗಿ ಎಸಿಬಿ ಮುಖ್ಯಸ್ಥ ಫರ್ಹಾನ್ ಯೂಸುಫ್ಸಾಯ್ ಕಠಿಣ ಕ್ರಮವನ್ನು ಕೈಗೊಂಡಿದ್ದಾರೆ. ಸಂಬಧಿಸಿದ ದಾಖಲಾತಿಗಳನ್ನು ಜುಲೈ 29ರ ಒಳಗೆ ಮಂಡಳಿಗೆ ಒಪ್ಪಿಸಬೇಕೆಂದು ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದೆ.

ಲುತ್‌ಫುಲ್ಲಾ ಸ್ತಾನಿಕ್ಸಾಯ್ ಅವರ ನಿರ್ವಹಣೆ ತೃಪ್ತಿಕರವಾಗಿಲ್ಲದ ಕಾರಣದಿಂದಾಗಿ ಅವರಿಗೆ ಈ ಹಿಂದೆಯೇ ಮೌಖಿಕವಾಗಿ ಹಾಗೂ ಲಿಖಿತ ರೂಪದಲ್ಲಿ ಸೂಚನೆಯನ್ನು ನೀಡಲಾಗಿತ್ತು. ಆದರೆ ನಿರ್ವಹಣೆಯಲ್ಲಿ ಬದಲಾವಣೆ ಕಂಡುಬಾರದ ಕಾರಣದಿಂದಾಗಿ ಅವರನ್ನು ವಜಾಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

ರೊನಾಲ್ಡೋ, ಮೆಸ್ಸಿ, ನೇಮರ್‌ನಂತೆ ವಿಶಿಷ್ಠ ದಾಖಲೆ ಬರೆದ ವಿರಾಟ್ ಕೊಹ್ಲಿ!ರೊನಾಲ್ಡೋ, ಮೆಸ್ಸಿ, ನೇಮರ್‌ನಂತೆ ವಿಶಿಷ್ಠ ದಾಖಲೆ ಬರೆದ ವಿರಾಟ್ ಕೊಹ್ಲಿ!

ಎಸಿಬಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಲುತ್‌ಫುಲ್ಲಾ ಸ್ತಾನಿಕ್ಸಾಯ್ ಅವರನ್ನು 2019ರ ಜುಲೈ ತಿಂಗಳಲ್ಲಿ 3 ವರ್ಷಗಳ ಒಪ್ಪಂದದೊಂದಿಗೆ ನೇಮಿಸಲಾಗಿತ್ತು.

Story first published: Tuesday, July 28, 2020, 13:53 [IST]
Other articles published on Jul 28, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X