ಟಿ20 ವಿಶ್ವಕಪ್ ಗೆದ್ದ ಬಳಿಕ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ವಿರುದ್ಧವೇ ಕಿಡಿ ಕಾರಿದ ಮೊಯಿನ್ ಅಲಿ

ಟಿ20 ವಿಶ್ವಕಪ್ 2022ರಲ್ಲಿ ಫೈನಲ್ ಪಂದ್ಯದಲ್ಲಿ ಗೆದ್ದು ಬೀಗುತ್ತಿರುವ ಇಂಗ್ಲೆಂಡ್‌ ತಂಡಕ್ಕೆ ಖುಷಿ ಪಡಲೂ ಕೂಡ ಹೆಚ್ಚಿನ ಸಮಯ ಇಲ್ಲದಂತಾಗಿದೆ. ಒಂದು ತಿಂಗಳು ವಿಶ್ವಕಪ್‌ಗಾಗಿ ಅಭ್ಯಾಸ, ಪಂದ್ಯಗಳಲ್ಲಿ ಆಡಿರುವ ಆಟಗಾರರು, ವಿಶ್ವಕಪ್ ಗೆದ್ದ ಖುಷಿಯನ್ನು ಆಚರಿಸಲೂ ಕೂಡ ಸಮಯ ಸಿಕ್ಕಿಲ್ಲ. ಇದೇ ವಿಚಾರ ಈಗ ಇಂಗ್ಲೆಂಡ್ ತಂಡದ ಆಲ್‌ರೌಂಡರ್ ಮೊಯಿನ್ ಅಲಿ ಕೋಪಕ್ಕೆ ಕಾರಣವಾಗಿದೆ.

ಹೌದು, ನವೆಂಬರ್ 13ರಂದು ಫೈನಲ್ ಪಂದ್ಯವನ್ನಾಡಿದ ಇಂಗ್ಲೆಂಡ್ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯನ್ನು ಆಡಲಿದೆ. ಸರಣಿಯ ಮೊದಲ ಪಂದ್ಯ ನವೆಂಬರ್ 17ರಂದು ನಡೆಯಲಿದೆ. ಆಟಗಾರರಿಗೆ ವಿಶ್ರಾಂತಿಗೂ ಸಮಯ ನೀಡದೆ ವೇಳಾಪಟ್ಟಿ ನಿಗದಿಮಾಡಿರುವ ಬಗ್ಗೆ ಈಗ ಮೊಯಿನ್ ಅಲಿ ಕೋಪಗೊಂಡಿದ್ದಾರೆ.

ಟಿ20 ವಿಶ್ವಕಪ್ ಆರಂಭಕ್ಕೆ ಮುನ್ನ ಇಂಗ್ಲೆಂಡ್ ಪಾಕಿಸ್ತಾನದಲ್ಲಿ 7 ಪಂದ್ಯಗಳ ಟಿ20 ಸರಣಿಯನ್ನು ಆಡಿತ್ತು. ಅದಾದ ನಂತರ ಆಸ್ಟ್ರೇಲಿಯಾದಲ್ಲಿ 3 ಪಂದ್ಯಗಳ ಟಿ20 ಸರಣಿಯನ್ನು ಆಡಿತ್ತು. ಸರಣಿ ಮುಗಿದ ಬಳಿಕ, ಟಿ20 ವಿಶ್ವಕಪ್‌ನಲ್ಲಿ 6 ಪಂದ್ಯಗಳನ್ನು ಆಡಿದೆ. ಅದರ ಹಿಂದೆಯೇ ಈಗ ಏಕದಿನ ಸರಣಿ ಆಡಬೇಕಾದ ಒತ್ತಡಕ್ಕೆ ಆಟಗಾರರು ಸಿಲುಕಿದ್ದಾರೆ.

165 ಎಸೆತಗಳಲ್ಲಿ 407 ರನ್, 24 ಸಿಕ್ಸ್ ಸಿಡಿಸಿ ಸಾಗರದ ಹುಡಗನ ಐತಿಹಾಸಿಕ ಸಾಧನೆ165 ಎಸೆತಗಳಲ್ಲಿ 407 ರನ್, 24 ಸಿಕ್ಸ್ ಸಿಡಿಸಿ ಸಾಗರದ ಹುಡಗನ ಐತಿಹಾಸಿಕ ಸಾಧನೆ

ಆಟಗಾರರಿಗೆ ವಿಶ್ರಾಂತಿ ಪಡೆಯಲು ಕೂಡ ಸಮಯ ನೀಡದೆ ಹೀಗೆ ವೇಳಾಪಟ್ಟಿ ನಿಗದಿ ಮಾಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಮೊಯಿನ್ ಅಲಿ, ಇದರಿಂದ ಆಟಗಾರರು ಹೆಚ್ಚಿನ ಒತ್ತಡಕ್ಕೆ ಒಳಗಾಗಲಿದ್ದು, ಅವರ ಪ್ರದರ್ಶನದ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ.

ಇದು ನಾಚಿಕೆಗೇಡಿನ ಸಂಗತಿ ಎಂದ ಮೊಯಿನ್ ಅಲಿ

ಈ ಬಗ್ಗೆ ಮಾತನಾಡಿರುವ ಮೊಯಿನ್ ಅಲಿ, "2019ರಲ್ಲಿ ಕೂಡ ನಾವು ಏಕದಿನ ವಿಶ್ವಕಪ್ ಗೆದ್ದ ಬಳಿಕ ಎರಡೇ ವಾರದಲ್ಲಿ ಆಶಸ್ ಸರಣಿಯಲ್ಲಿ ಆಡಬೇಕಾಯಿತು, ಫೈನಲ್ ನಡೆದ ಮೂರು ದಿನಗಳಲ್ಲೇ ನಾವು ಐರ್ಲೆಂಡ್ ವಿರುದ್ಧ ಟೆಸ್ಟ್ ಆಡಿದೆವು" ಎಂದು ಹೇಳಿದ್ದಾರೆ.

ಈ ರೀತಿಯ ಬೆಳವಣಿಗೆ ನಾಚಿಕೆಗೇಡಿನ ಸಂಗತಿ. ವಿಶ್ವಕಪ್ ಗೆಲ್ಲಲು ನಾವು ಸಾಕಷ್ಟು ಪರಿಶ್ರಮಪಟ್ಟಿದ್ದೇವೆ. ತಂಡವಾಗಿ ನಾವು ಗೆಲುವನ್ನು ಸಂಭ್ರಮಿಸಬೇಕು ಎಂದು ಹೇಳಿದರು. ಇಂಗ್ಲೆಂಡ್‌ ಈಗ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದ್ದು, ನಂತರ ಡಿಸೆಂಬರ್ ತಿಂಗಳಿನಲ್ಲಿ ಪಾಕಿಸ್ತಾನಕ್ಕೆ ಪ್ರಯಾಣಿಸಲಿದೆ. ಪಾಕಿಸ್ತಾನದ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಡಲಿದೆ.

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಏಕದಿನ ವಿಶ್ವಕಪ್ ಸೂಪರ್ ಲೀಗ್‌ನ ಭಾಗವಾಗಿಲ್ಲ. ಈ ಮೊದಲು ಆಸ್ಟ್ರೇಲಿಯಾ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಆಯೋಜಿಸಲು ನಿರ್ಧರಿಸಿತ್ತು. ಆದರೆ, ಎಸ್‌ಎ20 ಲೀಗ್ ಉದ್ಘಾಟನಾ ಆವೃತ್ತಿಯಲ್ಲಿ ಭಾಗವಹಿಸುವ ಉದ್ದೇಶದಿಂದ ದಕ್ಷಿಣ ಆಫ್ರಿಕಾ ಸರಣಿಯಿಂದ ಹಿಂದೆ ಸರಿಯಿತು. ನಂತರ ಇಂಗ್ಲೆಂಡ್ ವಿರುದ್ಧ ಸರಣಿಯನ್ನು ಆಯೋಜಿಸಲಾಯಿತು.

"ಪ್ರತಿ ಎರಡು ಮೂರು ದಿನಗಳಿಗೆ ಒಮ್ಮೆ ಕ್ರಿಕೆಟ್ ಆಡುತ್ತಿದ್ದರೆ ನಾವು ಸಂಪೂರ್ಣವಾಗಿ ಶ್ರಮ ಹಾಕಲು ಕಷ್ಟವಾಗುತ್ತದೆ" ಎಂದು ಮೊಯಿನ್ ಅಲಿ ಹೇಳಿದ್ದಾರೆ.

"ಆದರೂ ನಾವು ಈಗ ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲು ಆಗುವುದಿಲ್ಲ. ಸವಾಲಿಗೆ ಸದಾ ಸಿದ್ಧವಾಗಿರಬೇಕು." ಎಂದು ಹೇಳಿದರು. ನವೆಂಬರ್ 17ರಂದು ಅಡಿಲೇಡ್ ಓವಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸರಣಿಯ ಮೊದಲನೇ ಪಂದ್ಯವನ್ನು ಆಡಲಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Monday, November 14, 2022, 17:02 [IST]
Other articles published on Nov 14, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X