Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ ಹಾಗೂ ಟಿ20 ವಿಶ್ವಕಪ್‌ನಿಂದ ಹೊರಬಿದ್ದ ಯುವ ಆಲ್‌ರೌಂಡರ್ ಸ್ಯಾಮ್ ಕರನ್

All rounder Sam Curran ruled out of IPL 2021 and T20 World Cup with back injury

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಯುವ ಆಲ್‌ರೌಂಡರ್ ಸ್ಯಾಮ್ ಕರನ್ ಬೆನ್ನು ನೋವಿಗೆ ಒಳಗಾಗಿದ್ದು ಈ ಐಪಿಎಲ್‌ನ ಉಳಿದ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಜೊತೆಗೆ ಮುಂಬರುವ ಟಿ20 ವಿಶ್ವಕಪ್‌ನಿಂದಲೂ ಸ್ಯಾಮ್ ಕರನ್ ಹೊರಬಿದ್ದಿದ್ದು ಅವರ ಸ್ಥಾನಕ್ಕೆ ಸ್ಯಾಮ್ ಕರನ್ ಇಂಗ್ಲೆಂಡ್ ಸ್ಕ್ವಾಡ್‌ಗೆ ಸೇರ್ಪಡೆಯಾಗಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ 2020ರ ಆವೃತ್ತಿಯಲ್ಲಿ ಅದ್ಭುತ ಪ್ರದರ್ಶನ ನೀಡಿ ಮಿಂಚಿದ್ದ ಸ್ಯಾಮ್ ಕರನ್ ಸಾಕಷ್ಟು ಭರವಸೆಯನ್ನು ಮೂಡಿಸಿದ್ದರು. ಇಂಗ್ಲೆಂಡ್ ತಂಡದ ಪರವಾಗಿಯೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿ ಮಿಂಚಿದ್ದಾರೆ ಸ್ಯಾಮ್ ಕರನ್. ಆದರೆ ಈ ಬಾರಿ ಐಪಿಎಲ್‌ನಲ್ಲಿ ಸ್ಯಾಮ್ ಕರನ್ ಸಿಕ್ಕ ಅವಕಾಶದಲ್ಲಿ ಪರಿಣಾಮಕಾರಿ ಎನಿಸಲಿಲ್ಲ. ಬೌಲಿಂಗ್‌ನಲ್ಲಿಯೂ ಕೆಲ ಸಂದರ್ಭಗಳಲ್ಲಿ ದುಬಾರಿಯೆನಿಸಿದ ಸ್ಯಾಮ್ ಕರನ್ ಬ್ಯಾಟಿಂಗ್‌ನಲ್ಲಿಯೂ ಮಿಂಚುವಲ್ಲಿ ವಿಫಲವಾಗಿದ್ದರು.

ಸದ್ಯ ಯುಎಇನಲ್ಲಿರುವ ಸ್ಯಾಮ್ ಕರನ್ ಶೂಘ್ರದಲ್ಲಿಯೇ ಇಂಗ್ಲೆಂಡ್‌ಗೆ ವಾಪಾಸಾಗಲಿದ್ದು ಅಲ್ಲಿ ವೈದ್ಯಕೀಯ ಸಿಬ್ಬಂದಿಗಳು ಸ್ಕ್ಯಾನ್ ಮಾಡುವ ಮೂಲಕ ಗಾಯದ ತೀವ್ರತೆಯನ್ನು ಗಮನಿಸಲಿದ್ದಾರೆ. ಅದಾದ ಬಳಿಕ ಪೂರಕ ಚಿಕಿತ್ಸೆಗೆ ಒಳಗಾಗಲಿದ್ದಾರೆ. ಸ್ಯಾಮ್ ಕರನ್ ಮುಂಬರುವ ಆಶಸ್ ಸರಣಿಗೆ ಲಭ್ಯವಾಗಲಿದ್ದಾರಾ ಎಂಬುದು ನಂತರವೇ ತಿಳಿದು ಬರಲಿದೆ. ಮುಂದಿನ ಡಿಸೆಂಬರ್ ತಿಂಗಳಿನಲ್ಲಿ ಆಶಸ್ ಸರಣಿ ನಿಗದಿಯಾಗಿದೆ.

ಇಂಗ್ಲೆಂಡ್ ಕ್ರಿಕೆಟ್ ತಂಡಕ್ಕೆ ಈಗಾಗಲೇ ಗಾಯದ ಸಮಸ್ಯೆ ಕಾಡುತ್ತಿದ್ದು ಸ್ಯಾಮ್ ಕರನ್ ಈ ಪಟ್ಟಿಗೆ ಮತ್ತೊಂದು ಸೇರ್ಪಡೆಯೆಂಬಂತಾಗಿದೆ. ಗಾಯದ ಕಾರಣದಿಂದಾಗಿ ಮುಂದಿನ ಟಿ20 ವಿಶ್ವಕಪ್‌ನ ತಂಡದಿಂದ ವೇಗಿ ಜೋಫ್ರಾ ಆರ್ಚರ್ ಹೊರಗುಳಿದಿದ್ದರೆ ಮತ್ತೊಂದೆಡೆ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಕೂಡ ಮಾನಸಿಕ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಕ್ರಿಕೆಟ್‌ನಿಂದ ವಿರಾಮವನ್ನು ಪಡೆದುಕೊಂಡಿದ್ದಾರೆ.

ಇನ್ನು ಐಪಿಎಲ್‌ನಲ್ಲಿ ಪಾಲ್ಗೊಳ್ಳದಿರುವ ಟಿ20 ವಿಶ್ವಕಪ್‌ನಲ್ಲಿ ಭಾಗಿಯಾಗುವ ಇಂಗ್ಲೆಂಡ್ ತಂಡದ ಆಟಗಾರರು ಸೋಮವಾರ ಒಮಾನ್‌ಗೆ ಬಂದಿಳಿದಿದ್ದಾರೆ. ಅಲ್ಲಿ ಕ್ವಾರಂಟೈನ್ ಪ್ರಕ್ರಿಯೆ ಮುಗಿಸಿದ ಬಳಿಕ ಅಭ್ಯಾಸದಲ್ಲಿ ಪಾಲ್ಗೊಳ್ಳಲಿದ್ದು ಮುಂಬರುವ ಟಿ20 ವಿಶ್ವಕಪ್‌ಗೆ ಸಿದ್ಧತೆಯನ್ನು ನಡೆಸಲಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ 2020ರ ಆವೃತ್ತಿಯಲ್ಲಿ ಅದ್ಭುತ ಪ್ರದರ್ಶನ ನೀಡಿ ಮಿಂಚಿದ್ದ ಸ್ಯಾಮ್ ಕರನ್ ಸಾಕಷ್ಟು ಭರವಸೆಯನ್ನು ಮೂಡಿಸಿದ್ದರು. ಇಂಗ್ಲೆಂಡ್ ತಂಡದ ಪರವಾಗಿಯೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿ ಮಿಂಚಿದ್ದಾರೆ ಸ್ಯಾಮ್ ಕರನ್. ಆದರೆ ಈ ಬಾರಿ ಐಪಿಎಲ್‌ನಲ್ಲಿ ಸ್ಯಾಮ್ ಕರನ್ ಸಿಕ್ಕ ಅವಕಾಶದಲ್ಲಿ ಪರಿಣಾಮಕಾರಿ ಎನಿಸಲಿಲ್ಲ. ಬೌಲಿಂಗ್‌ನಲ್ಲಿಯೂ ಕೆಲ ಸಂದರ್ಭಗಳಲ್ಲಿ ದುಬಾರಿಯೆನಿಸಿದ ಸ್ಯಾಮ್ ಕರನ್ ಬ್ಯಾಟಿಂಗ್‌ನಲ್ಲಿಯೂ ಮಿಂಚುವಲ್ಲಿ ವಿಫಲವಾಗಿದ್ದರು.

ಟಿ20 ವಿಶ್ವಕಪ್‌ನಲ್ಲಿ ಭಾಗಿಯಾಗುವ ಇಂಗ್ಲೆಂಡ್ ಸ್ಕ್ವಾಡ್: ಇಯಾನ್ ಮಾರ್ಗನ್(ನಾಯಕ), ಮೊಯೀನ್ ಅಲಿ, ಜೊನಾಥನ್ ಬೇರ್ಸ್ಟೋವ್, ಸ್ಯಾಮ್ ಬಿಲ್ಲಿಂಗ್ಸ್, ಜೋಸ್ ಬಟ್ಲರ್, ಟಾಮ್ ಕರನ್, ಕ್ರಿಸ್ ಜೋರ್ಡಾನ್, ಲಿಯಾಮ್ ಲಿವಿಂಗ್‌ಸ್ಟೋನ್, ಡೇವಿಡ್ ಮಲನ್, ಟೈಮಲ್ ಮಿಲ್ಸ್, ಆದಿಲ್ ರಶೀದ್, ಜೇಸನ್ ರಾಯ್, ಡೇವಿಡ್ ವಿಲ್ಲಿ, ಕ್ರಿಸ್ ವೋಕ್ಸ್, ಮಾರ್ಕ್ ವುಡ್. ಮೀಸಲು ಆಟಗಾರರು: ಲಿಯಾಮ್ ಡಾಸನ್, ಜೇಮ್ಸ್ ವಿನ್ಸ್.

ಇಂಗ್ಲೆಂಡ್ ತಂಡದ ವೇಳಾಪಟ್ಟಿ: 23 ಅಕ್ಟೋಬರ್ vs ವೆಸ್ಟ್ ಇಂಡೀಸ್, 27 ಅಕ್ಟೋಬರ್‌ vs ಬಿ2, ಅಕ್ಟೋಬರ್‌ 30 vs ಆಸ್ಟ್ರೇಲಿಯಾ, ನವೆಂಬರ್ 1 vs ಎ1, ನವೆಂಬರ್‌ 6 vs ದಕ್ಷಿಣ ಆಫ್ರಿಕಾ

Story first published: Wednesday, October 6, 2021, 10:09 [IST]
Other articles published on Oct 6, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+