ಮೋಸದಾಟ ಬಯಲು, ಆಸೀಸ್ ನಾಯಕ ಸ್ಮಿತ್ ತಲೆದಂಡಕ್ಕೆ ಆಗ್ರಹ

Posted By:
ASC calls for Smith to be stood down as Australia captain

ಕೇಪ್ ಟೌನ್, ಮಾರ್ಚ್ 25: ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಟೆಸ್ಟ್ ಪಂದ್ಯದ 3ನೇ ದಿನದಾಟದ ವೇಳೆ ಆಸ್ಟ್ರೇಲಿಯಾದ ಆಟಗಾರರೊಬ್ಬರು ಚೆಂಡು ವಿರೂಪಗೊಳಿಸಿದ ಘಟನೆಗೆ ಸಂಬಂಧಿಸಿದಂತೆ ನಾಯಕ ಸ್ಟೀವ್ ಸ್ಮಿತ್ ಅವರು ನೈತಿಕ ಹೊಣೆ ಹೊತ್ತು, ತಂಡದ ನಾಯಕತ್ವದಿಂದ ಕೆಳಗಿಳಿಯುವಂತೆ ಆಸ್ಟ್ರೇಲಿಯಾ ಸರ್ಕಾರದ ಕ್ರೀಡಾ ಸಮಿತಿ(ಎಎಸ್ ಸಿ) ಸೂಚಿಸಿದೆ.

ಆಸ್ಟ್ರೇಲಿಯಾ ತಂಡದ ಆರಂಭಿಕ ಬ್ಯಾಟ್ಸ್​ಮನ್ ಕ್ಯಾಮರೂನ್ ಬ್ಯಾಂಕ್ರಾಫ್ಟ್ ಅವರು ಸಣ್ಣ ಚಿಪ್ ಬಳಸಿ ಚೆಂಡನ್ನು ವಿರೂಪಗೊಳಿಸಲು ಯತ್ನಿಸಿದ ವಿಡಿಯೋ ಈಗ ಕ್ರಿಕೆಟ್ ಜಗತ್ತನ್ನು ಬೆಚ್ಚಿ ಬೀಳಿಸಿದೆ. ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವನ್ ಸ್ಮಿತ್, ಇದರಲ್ಲಿ ಕೋಚ್​ಗಳ ಪಾತ್ರವಿಲ್ಲ. ಆಟಗಾರರು ಮಾತ್ರವೇ ಇದರಲ್ಲಿದ್ದಾರೆ. ಬ್ಯಾಂಕ್ರಾಫ್ಟ್ ವರ್ತನೆಗೆ ವಿಷಾದವಿದೆ ಎಂದು ಹೇಳಿದ್ದಾರೆ. ಆದರೆ, ಚೆಂಡು ವಿರೂಪ ಪ್ರಕರಣಕ್ಕಾಗಿ ನಾಯಕತ್ವದಿಂದ ಕೆಳಗಿಳಿಯುವುದಿಲ್ಲ ಎಂದಿದ್ದರು.

ಟಿವಿ ನೇರಪ್ರಸಾರದಲ್ಲಿ ಬ್ಯಾಂಕ್ರಾಫ್ಟ್ ಚೆಂಡನ್ನು ವಿರೂಪಗೊಳಿಸುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದೆ.ನಡುಬೆರಳಿನ ಮಧ್ಯದಲ್ಲಿ ಚಿಪ್ ಇಟ್ಟುಕೊಂಡು, ಚೆಂಡನ್ನು ತೀಡುವುದು ನೇರ ಪ್ರಸಾರದ ವೇಳೆ ತಿಳಿದು ಬಂದಿದೆ ಇದನ್ನು ಕ್ರಿಕೆಟ್ ಆಸ್ಟ್ರೇಲಿಯಾ ಒಪ್ಪಲು ಸಾಧ್ಯವಿಲ್ಲ ಎಂದು ಮುಖ್ಯ ಕಾರ್ಯಕಾರಿ ಕೇಟ್ ಪಾಲ್ಮರ್ ಹೇಳಿದ್ದಾರೆ. ಈ ಘಟನೆ ಬಗ್ಗೆ ಸಮಗ್ರ ತನಿಖೆ ನಡೆಸಲು ಕ್ರಿಕೆಟ್ ಆಸ್ಟ್ರೇಲಿಯಾ ಮುಂದಾಗಿದೆ.

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Sunday, March 25, 2018, 13:33 [IST]
Other articles published on Mar 25, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ