ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಟ್ಲರ್ ಬ್ಲಂಡರ್: ಲ್ಯಾಬುಶೈನ್‌ಗೆ ಎರಡು ಬಾರಿ ಜೀವದಾನ ನೀಡಿದ ಇಂಗ್ಲೆಂಡ್ ಕೀಪರ್: ವಿಡಿಯೋ

Ashes: Jos Buttler drops two catches of Labuschagne after plucking one-handed blinder: Watch

ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವಿನ ಆಶಸ್ ಟೆಸ್ಟ್ ಸರಣಿಯ ಎರಡನೇ ಪಂದ್ಯದ ಮೊದಲ ದಿನದಾಟದಲ್ಲಿ ಆಸ್ಟ್ರೇಲಿಯಾ ತಂಡ ಸಂಪೂರ್ಣ ಮೇಲುಗೈ ಸಾಧಿಸಿದೆ. ಆಸ್ಟ್ರೇಲಿಯಾ ತಂಡ ಎರಡು ವಿಕೆಟ್‌ಗಳನ್ನು ಮಾತ್ರವೇ ಕಳೆದುಕೊಂಡಿದ್ದು ಮೊದಲ ದಿನ 221 ರನ್‌ಗಳನ್ನು ಗಳಿಸಿ ಎರಡನೇ ದಿನ ಆಟ ಮುಂದುವರಿಸಲಿದೆ. ಇನ್ನು ಮೊದಲ ದಿನದಾಟದಲ್ಲಿ ಆರಂಭಿಕ ಆಟಗಾರ ಡೇವಿಡ್ ವಾರ್ನರ್ 95 ರನ್‌ಗಳಿಸಿ ಔಟಾಗಿ ಫೆವಿಲಿಯನ್ ಸೇರಿದರೆ ಯುವ ಆಟಗಾರ ಮಾರ್ನಾಸ್ ಲ್ಯಾಬುಶೈನ್ 95 ರನ್‌ಗಳಿಸಿ ವಿಕೆಟ್ ಕಳೆದುಕೊಳ್ಳದೆ ಸ್ಟೀಚ್ ಸ್ಮಿತ್ ಅವರೊಂದಿಗೆ ಎರಡನೇ ದಿನಕ್ಕೆ ಕ್ರೀಸ್ ಕಾಯ್ದಿರಿಸಿದ್ದಾರೆ.

ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಮಾರ್ನಾಸ್ ಲ್ಯಾಬುಶೈನ್‌ಗೆ ಅದ್ಭುತವಾಗಿ ಸಾಥ್ ನೀಡಿದರು. ಈ ಜೋಡಿ ಎರಡನೇ ವಿಕೆಟ್‌ಗೆ ಭರ್ಜರಿ 172 ರನ್‌ಗಳ ಜೊತೆಯಾಟ ನೀಡುವ ಮೂಲಕ ಆಸಿಸ್ ತಂಡಕ್ಕೆ ದೊಡ್ಡ ಬಲ ನೀಡಿದರು. ಆದರೆ ಶತಕದಂಚಿನಲ್ಲಿ ಎಡವಿದ ಡೇವಿಡ್ ವಾರ್ನರ್ 95 ರನ್‌ಗಳಿಸಿ ಬೆನ್ ಸ್ಟೋಕ್ಸ್‌ಗೆ ವಿಕೆಟ್ ಒಪ್ಪಿಸಿದರು.

ಆ್ಯಶಸ್ ಸರಣಿಯಲ್ಲಿ ಕೋವಿಡ್ ಡ್ರಾಮಾ: ಅಡಿಲೇಡ್ ಟೆಸ್ಟ್‌ನಿಂದ ಆಸ್ಟ್ರೇಲಿಯಾ ನಾಯಕ ಔಟ್!ಆ್ಯಶಸ್ ಸರಣಿಯಲ್ಲಿ ಕೋವಿಡ್ ಡ್ರಾಮಾ: ಅಡಿಲೇಡ್ ಟೆಸ್ಟ್‌ನಿಂದ ಆಸ್ಟ್ರೇಲಿಯಾ ನಾಯಕ ಔಟ್!

ಆದರೆ ಮೊದಲ ದಿನದಾಟದಲ್ಲಿ ಅಜೇಯವಾಗುಳಿದಿರುವ ಮಾರ್ನಾಸ್ ಲ್ಯಾಬುಶೈನ್ ಎರಡನೇ ದಿನವೂ ಇಂಗ್ಲೆಂಡ್ ಬೌಲರ್‌ಗಳಿಗೆ ಕಂಟಕವಾಗುವ ಲಕ್ಷಣವಿದೆ. ಈಗಾಗಲೇ 95 ರನ್‌ಗಳಿಸಿರುವ ಲ್ಯಾಬುಶೈನ್ ಶತಕದ ಸನಿಹಕ್ಕೆ ತಲುಪಿದ್ದಾರೆ. ಆದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ಅಪಾಯಕಾರಿ ಆಟಗಾರ ಎನಿಸಿರುವ ಲ್ಯಾಬುಶೈನ್ ಈ ಪಂದ್ಯದಲ್ಲಿ ಅಬ್ಬರಿಸಲು ಇಂಗ್ಲೆಂಡ್ ತಂಡವೇ ಅವಕಾಶ ಮಾಡಿಕೊಟ್ಟಿದೆ. ಒಂದಲ್ಲ ಎರಡು ಬಾರಿ ಮಾರ್ನಾಸ್ ಲ್ಯಾಬುಶೈನ್ ಜೀವದಾನ ಪಡೆದುಕೊಂಡಿದ್ದಾರೆ. ಮತ್ತೊಂದು ವಿಪರ್ಯಾಸವೆಂದರೆ ಈ ಎರಡು ಕ್ಯಾಚ್‌ಗಳನ್ನು ಕೂಡ ವಿಕೆಟ್ ಕೀಪರ್ ಜೋಸ್ ಬಟ್ಲರ್ ಕೈ ಚೆಲ್ಲಿದ್ದಾರೆ.

ಈ ಪಂದ್ಯದಲ್ಲಿ ಜೋಸ್ ಬಟ್ಲರ್ ಆರಂಭದಲ್ಲಿ ಆಸ್ಟ್ರೇಲಿಯಾ ತಂಡದ ಆರಂಬಿಕ ಆಟಗಾರ ಮಾರ್ಕಸ್ ಹ್ಯಾರಿಸ್ ನೀಡಿದ ಕ್ಯಾಚನ್ನು ಹಾರಿ ಸೂಪರ್‌ಮ್ಯಾನ್ ಶೈಲಿಯಲ್ಲಿ ಹಿಡಿಯುವ ಮೂಲಕ ನಿಬ್ಬೆರಗಾಗಿಸಿದ್ದರು. ಕಠಿಣ ಕ್ಯಾಚ್‌ಅನ್ನು ಪಡೆಯುವ ಮೂಲಕ ಇಂಗ್ಲೆಂಡ್ ತಂಡಕ್ಕೆ ಆರಂಭದಲ್ಲಿಯೇ ಮೇಲುಗೈ ಒದಗಿಸಿದ್ದರು. ಈ ಕ್ಯಾಚ್ ನೋಡಿ ಕ್ರಿಕೆಟ್ ಅಭಿಮಾನಿಗಳು ಬಟ್ಲರ್‌ಗೆ ಶಬ್ಬಾಶ್ ಎಂದಿದ್ದರು.

ಆದರೆ ಬಳಿಕ ಎರಡು ಸುಲಭ ಕ್ಯಾಚ್‌ಗಳನ್ನು ಕೈ ಚೆಲ್ಲಿ ದುಬಾರಿಯಾದರು. ಈ ಎರಡು ಕ್ಯಾಚ್‌ಗಳು ಕೂಡ ಮಾರ್ನಾಸ್ ಲ್ಯಾಬುಶೈನ್ ಅವರದ್ದೇ ಆಗಿದೆ. ಜೋಸ್ ಬಟ್ಲರ್ ಮೊದಲ ಕ್ಯಾಚ್ ನೆಲಕ್ಕೆ ಚೆಲ್ಲಿದಾಗ ಲ್ಯಾಬುಶೈನ್ ಕೇವಲ 21 ರನ್‌ ಮಾತ್ರ ಗಳಿಸಿದ್ದರು. ಸ್ವಲ್ಪ ಎತ್ತರದಲ್ಲಿ ಬಂದಿದ್ದ ಚೆಂಡನ್ನು ಬೊಗಸೆಯೊಳಕ್ಕೆ ಸೇರಿಸಿಕೊಳ್ಳುವಲ್ಲಿ ವಿಫಲವಾಗಿದ್ದರು. ಎರಡನೇ ಕ್ಯಾಚ್ ಪಂದ್ಯ ಇನ್ನೇನು ಮುಗಿಯುವ ಹಂತದಲ್ಲಿರುವಾಗ ಡ್ರಾಪ್ ಮಾಡಿದ್ದರು. ಅತ್ಯಂತ ಸುಲಭದ ಕ್ಯಾಚ್ ಬಟ್ಲರ್ ಕ್ಷಣಾರ್ಧದಲ್ಲಿ ಕೈಚೆಲ್ಲಿದ್ದು ಇಂಗ್ಲೆಂಡ್ ತಂಡಕ್ಕೆ ಬಹಳ ದುಬಾರಿಯಾಗಿದೆ.

Flashback 2021: ಟೀಂ ಇಂಡಿಯಾ ಆಟಗಾರರ 4 ವಿಶ್ವದಾಖಲೆಗಳುFlashback 2021: ಟೀಂ ಇಂಡಿಯಾ ಆಟಗಾರರ 4 ವಿಶ್ವದಾಖಲೆಗಳು

ಇನ್ನು ಈ ಪಂದ್ಯದಲ್ಲಿ ಲ್ಯಾಬುಶೈನ್ ಮಹತ್ವದ ಮೈಲಿಗಲ್ಲೊಂದನ್ನು ಸಾಧಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಂತ ವೇಗವಾಗಿ 2000 ರನ್‌ಗಳಿಸಿದ ಆಟಗಾರರ ಪಟ್ಟಿಯಲ್ಲಿ ಲ್ಯಾಬಿಶೈನ್ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಇನ್ನು ದಿನದಾಟ ಮುಕ್ತಾಯವಾದ ಬಳಿಕ ಲ್ಯಾಬುಶೈನ್ ಪ್ರತಿಕ್ರಿಯಿಸಿದ್ದಾರೆ. "ಕೊನೆಯ ಹಂತ ಸಾಕಷ್ಟು ಕುತೂಹಲಕಾರಿಯಾಗಿತ್ತು ಹಾಗೂ ನನ್ನ ತಾಳ್ಮೆಯನ್ನು ಪರೀಕ್ಷಿಸಿತ್ತು. ಬಟ್ಲರ್ ಕ್ಯಾಚ್ ಡ್ರಾಪ್ ಮಾಡಿದ್ದು ನಂಬುವುದು ಕಷ್ಟವಾಗಿತ್ತು. ಈಗ ಅದನ್ನು ಉತ್ತಮವಾಗಿ ಬಳಸಿಕೊಳ್ಳುವುದು ನನ್ನ ಕರ್ತವ್ಯವಾಗಿದೆ" ಎಂದಿದ್ದಾರೆ ಮಾರ್ನಾಸ್ ಲ್ಯಾಬುಶೈನ್.

ಇನ್ನು ಆಸ್ಟ್ರೇಲಿಯಾ ಮೊದಲ ದಿನದಾಟದಲ್ಲಿ ಕೇವಲ ಎರಡು ವಿಕೆಟ್‌ಗಳನ್ನು ಮಾತ್ರವೇ ಕಳೆದುಕೊಂಡಿದ್ದು 221 ರನ್ ಗಳಿಸಿದೆ. ಇನ್ನು ಇಂಗ್ಲೆಂಡ್ ತಂಡದ ಪರವಾಗಿ ಕ್ರಿಸ್ ವೋಕ್ಸ್ ಹಾಗೂ ಬೆನ್ ಸ್ಟೋಕ್ಸ್ ,ಆತ್ರ ತಲಾ ಒಂದೊಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಜೇಮ್ಸ್ ಆಂಡರ್ಸನ್ ಹಾಗೂ ಸ್ಟುವರ್ಟ್ ಬ್ರಾಡ್ ಜೋಡಿ ಈ ಪಂದ್ಯದಲ್ಲಿ ಜೊತೆಯಾಗಿ ಕಣಕ್ಕಿಳಿದಿದ್ದರೂ ವಿಕೆಟ್ ಪಡೆಯುವಲ್ಲಿ ವಿಫಲವಾಗಿದ್ದಾರೆ. ಎರಡನೇ ದಿನ ಪ್ರವಾಸಿ ಇಂಗ್ಲೆಂಡ್ ಯಾವ ರೀತಿಯ ಪ್ರದರ್ಶನ ನೀಡಲಿದೆ ಎಂಬುದು ಕುತೂಹಲ ಮೂಡಿಸಿದೆ.

ಆಸ್ಟ್ರೇಲಿಯಾ ಆಡುವ ಬಳಗ: ಡೇವಿಡ್ ವಾರ್ನರ್, ಮಾರ್ಕಸ್ ಹ್ಯಾರಿಸ್, ಮಾರ್ನಸ್ ಲ್ಯಾಬುಶೈನ್, ಸ್ಟೀವನ್ ಸ್ಮಿತ್ (ನಾಯಕ), ಟ್ರಾವಿಸ್ ಹೆಡ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಮೈಕೆಲ್ ನೆಸರ್, ಮಿಚೆಲ್ ಸ್ಟಾರ್ಕ್, ಝೈ ರಿಚರ್ಡ್ಸನ್, ನಾಥನ್ ಲಿಯಾನ್

ಪಾಕಿಸ್ತಾನದ ಫೀಲ್ಡಿಂಗ್ ಎಷ್ಟು ಕಳಪೆ ಅನ್ನೋದಕ್ಕೆ ಮತ್ತೊಂದು ಸಾಕ್ಷಿ | Oneindia Kannada

ಇಂಗ್ಲೆಂಡ್ ಆಡುವ ಬಳಗ: ರೋರಿ ಬರ್ನ್ಸ್, ಹಸೀಬ್ ಹಮೀದ್, ಡೇವಿಡ್ ಮಲನ್, ಜೋ ರೂಟ್ (ನಾಯಕ), ಬೆನ್ ಸ್ಟೋಕ್ಸ್, ಆಲಿ ಪೋಪ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಕ್ರಿಸ್ ವೋಕ್ಸ್, ಆಲಿ ರಾಬಿನ್ಸನ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆಂಡರ್ಸನ್

Story first published: Thursday, December 16, 2021, 22:06 [IST]
Other articles published on Dec 16, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X