ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆ್ಯಷಸ್ ಸರಣಿ: ಬದ್ಧ ವೈರಿಗಳ ಮೊದಲ ಕಾದಾಟಕ್ಕೆ ಗಬ್ಬಾ ಪಿಚ್ ರೆಡಿ: ಪ್ಲೇಯಿಂಗ್ 11, ಪಿಚ್ ರಿಪೋರ್ಟ್

Ashes 1st test

ಕ್ರಿಕೆಟ್ ಲೋಕದ ಪ್ರತಿಷ್ಠಿತ ಆಷಸ್ ಟೆಸ್ಟ್ ಸರಣಿಗೆ ಕೌಂಟ್‌ಡೌನ್ ಶುರುವಾಗಿದ್ದು, ಬದ್ಧ ವೈರಿಗಳಾದ ಇಂಗ್ಲೆಂಡ್ -ಆಸ್ಟ್ರೇಲಿಯಾ ತಂಡಗಳು ಡಿಸೆಂಬರ್ 8ರಂದು ಮೊದಲ ಟೆಸ್ಟ್ ಪಂದ್ಯವನ್ನಾಡಲು ಕಣಕ್ಕಿಳಿಯಲಿವೆ.

ಆ್ಯಷಸ್ ಅಂದ ಕೂಡಲೇ ಕ್ರಿಕೆಟ್ ಅಭಿಮಾನಿಗಳಲ್ಲಿ ಒಂದು ರೀತಿಯ ಉತ್ಸಾಹ ತುಂಬುತ್ತದೆ. ಇಂಗ್ಲೆಂಡ್- ಆಸ್ಟ್ರೇಲಿಯಾ ನಡುವಿನ ನೂರಾರು ವರ್ಷಗಳ ಇತಿಹಾಸವಿರುವ ಆ್ಯಷಸ್ ಟೆಸ್ಟ್ ಸರಣಿಗೆ ಎಲ್ಲಿಲ್ಲದ ಮಹತ್ವದಿದೆ. ಉಭಯ ತಂಡಗಳಿಗೂ ವಿಶ್ವಕಪ್‌ಗೂ ಮಿಗಿಲಾದ ಪ್ರತಿಷ್ಠಿತ ಸರಣಿ ಇದಾಗಿದೆ.

1883 ರಲ್ಲಿ ಪ್ರಾರಂಭವಾದ ಈ ಆ್ಯಷಸ್ ಟೆಸ್ಟ್‌ ಸರಣಿಯು ವರ್ಷದಿಂದ ವರ್ಷಕ್ಕೆ ಸಾಕಷ್ಟು ಪ್ರಾಮುಖ್ಯತೆ ಪಡೆಯುತ್ತಲೇ ಇದೆ. ಆ್ಯಷಸ್ ಟೆಸ್ಟ್‌ ಸರಣಿಯಲ್ಲಿ ಯಾವ ಆಟಗಾರ ಮಿಂಚಿದ್ರು ಸಾಕು, ಆತ ಸಾಕಷ್ಟು ಪ್ರಚಾರಗಿಟ್ಟಿಸುತ್ತಾನೆ, ಪಂದ್ಯ ಗೆಲ್ಲುವ ಚಾಣಾಕ್ಯತೆಯ ಆಧಾರದ ಮೇಲೆ ನಾಯಕನ ಸಾಮರ್ಥ್ಯವನ್ನ ಅಳೆಯಲಾಗುತ್ತದೆ.

ಬ್ರಿಸ್ಬೇನ್‌ನ ಗಬ್ಬಾದಲ್ಲಿ ಉಭಯ ತಂಡಗಳ ಮುಖಾಮುಖಿ

ಬ್ರಿಸ್ಬೇನ್‌ನ ಗಬ್ಬಾದಲ್ಲಿ ಉಭಯ ತಂಡಗಳ ಮುಖಾಮುಖಿ

ಬುಧವಾರ (ಡಿ. 08) ಬ್ರಿಸ್ಬೇನ್‌ ಗಬ್ಬಾ ಮೈದಾನದಲ್ಲಿ ಆ್ಯಷಸ್ ಟೆಸ್ಟ್ ಸರಣಿಯ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ. ಉಭಯ ತಂಡಗಳು ಸಾಕಷ್ಟು ತಯಾರಿಗಳ ನಂತರ ಟೆಸ್ಟ್‌ ಸರಣಿಯಲ್ಲಿ ಕಾದಾಟಕ್ಕೆ ಇಳಿಯುತ್ತಿವೆ. ಐದು ಟೆಸ್ಟ್ ಪಂದ್ಯಗಳ ಬೃಹತ್ ಟೆಸ್ಟ್ ಸರಣಿಯ ಮೊದಲ ಹೆಜ್ಜೆ ಇಲ್ಲಿಂದಲೇ ಶುರುವಾಗಲಿದೆ.

11 ತಿಂಗಳ ಬಳಿಕ ಟೆಸ್ಟ್ ಪಂದ್ಯವನ್ನಾಡುತ್ತಿರುವ ಆಸ್ಟ್ರೇಲಿಯಾ

11 ತಿಂಗಳ ಬಳಿಕ ಟೆಸ್ಟ್ ಪಂದ್ಯವನ್ನಾಡುತ್ತಿರುವ ಆಸ್ಟ್ರೇಲಿಯಾ

ಆಸೀಸ್ ಕೊನೆಯ ಬಾರಿಗೆ 11 ತಿಂಗಳ ಹಿಂದೆ ಟೆಸ್ಟ್ ಪಂದ್ಯವನ್ನು ಆಡಿದೆ ಮತ್ತು ಇದು ಮೊದಲ ಆಶಸ್ ಟೆಸ್ಟ್ ನಡೆಯುವ ಸ್ಥಳದಲ್ಲೇ ಆಗಿತ್ತು. ಜನವರಿ 2021 ರಲ್ಲಿ, ಕಾಂಗರೂಗಳನ್ನು ಬಲಿಷ್ಠ ಭಾರತೀಯ ತಂಡವು ಸೋಲಿಸಿತು ಮತ್ತು ಅವರ 'ಗಬ್ಬಾ ಕೋಟೆ' ಮೂರು ದಶಕಗಳಿಗಿಂತಲೂ ಹೆಚ್ಚು ಕಾಲದ ಬಳಿಕ ಮೊದಲ ಬಾರಿಗೆ ಭೇದಿಸಲ್ಪಟ್ಟಿತು.

ಆಶಸ್ ಟೆಸ್ಟ್: ಅನುಭವಿ ವೇಗಿ ಜೇಮ್ಸ್ ಆಂಡರ್ಸನ್‌ಗೆ ಬ್ರಿಸ್ಬೇನ್ ಟೆಸ್ಟ್‌ನಿಂದ ವಿಶ್ರಾಂತಿ

ಇಂಗ್ಲೆಂಡ್ ತಂಡದ ಬಲ ಹೆಚ್ಚಿಸಿದ ಬೆನ್‌ಸ್ಟೋಕ್ಸ್‌

ಇಂಗ್ಲೆಂಡ್ ತಂಡದ ಬಲ ಹೆಚ್ಚಿಸಿದ ಬೆನ್‌ಸ್ಟೋಕ್ಸ್‌

ಮತ್ತೊಂದೆಡೆ, ಇಂಗ್ಲೆಂಡ್ ತನ್ನ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ತಂಡಕ್ಕೆ ಮರಳಿರುವ ಖುಷಿಯಲ್ಲಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ತಂಡಕ್ಕೆ ಅಮೂಲ್ಯ ಕೊಡುಗೆ ನೀಡಬಲ್ಲ ನಂಬರ್ 1 ಆಲ್‌ರೌಂಡರ್ ಬೆನ್‌ಸ್ಟೋಕ್ಸ್‌ ಸುದೀರ್ಘ ವಿರಾಮದ ಬಳಿಕ ಆತ ಕ್ರಿಕೆಟ್ ಮೈದಾನ ಪ್ರವೇಶಿಸುತ್ತಿದ್ದಾನೆ. ಬೆನ್‌ ಸ್ಟೋಕ್ಸ್ ತಂದೆ ಇಹಲೋಕ ತ್ಯಜಿಸಿದ ಬಳಿಕ ದೀರ್ಘ ವಿರಾಮ ತೆಗೆದುಕೊಂಡಿದ್ರು. ಆದ್ರೀತ ಆತನ ವಾಪಸ್ಸಾತಿಯು ತಂಡಕ್ಕೆ ಬಲ ಹೆಚ್ಚಿಸಿದೆ ಜೊತೆಗೆ ಎಲ್ಲರ ಕಣ್ಣು ಆತನ ಮೇಲಿರಲಿದೆ.

ದ.ಆಫ್ರಿಕಾ ಪ್ರವಾಸ: ಟೀಮ್ ಇಂಡಿಯಾದಿಂದ ಹೊರಬೀಳಲಿದ್ದಾರೆ ಈ ಇಬ್ಬರು ಸ್ಟಾರ್ ಆಟಗಾರರು!

ಪ್ಯಾಟ್‌ ಕಮಿನ್ಸ್ ಆಸೀಸ್‌ನ ಹೊಸ ನಾಯಕ

ಪ್ಯಾಟ್‌ ಕಮಿನ್ಸ್ ಆಸೀಸ್‌ನ ಹೊಸ ನಾಯಕ

ಪ್ಯಾಟ್ ಕಮ್ಮಿನ್ಸ್ 6 ದಶಕಗಳ ನಂತರ ಆಸ್ಟ್ರೇಲಿಯಾದ ಮೊದಲ ಪೂರ್ಣ ಸಮಯದ ವೇಗದ ಬೌಲಿಂಗ್ ನಾಯಕನಾಗಿದ್ದಾರೆ. ಪ್ರತಿಷ್ಠಿತ ಆ್ಯಷಸ್ ಟೆಸ್ಟ್ ಸರಣಿಗೂ ಮುನ್ನ ಸೆಕ್ಸ್ಟಿಂಗ್ ವಿವಾದದ ಮೂಲಕ ನಾಯಕತ್ವದಿಂದ ಕೆಳಗಿಳಿದಿದ್ದ ನಾಯಕ ಟಿಮ್ ಪೈನ್ ಬದಲಿಗೆ ಆಲ್‌ರೌಂಡರ್ ಪ್ಯಾಟ್ ಕಮಿನ್ಸ್‌ ಆಸ್ಟ್ರೇಲಿಯಾದ ಟೆಸ್ಟ್‌ ತಂಡದ ನಾಯಕನಾಗಿ ಆಯ್ಕೆಯಾಗಿದ್ದರು.

ಆಸ್ಟ್ರೇಲಿಯಾದ 47ನೇ ಟೆಸ್ಟ್ ನಾಯಕನಾಗಿ ಆಯ್ಕೆಯಾಗಿರುವ ಪ್ಯಾಟ್ ಕಮಿನ್ಸ್‌ ಆ್ಯಶಸ್ ಸರಣಿಯಲ್ಲಿ ಆಸ್ಟ್ರೇಲಿಯಾವನ್ನು ಮುನ್ನಡೆಸಲಿದ್ದಾರೆ. ಈ ಮೂಲಕ 65 ವರ್ಷಗಳ ನಂತರ ಆಸ್ಟ್ರೇಲಿಯಾ ತಂಡವನ್ನು ವೇಗದ ಬೌಲರ್ ಒಬ್ಬರು ತಂಡಕ್ಕೆ ನಾಯಕನಾಗಿ ಆಯ್ಕೆಯಾಗಿದ್ದಾರೆ. ಬಾಲ್ ಟ್ಯಾಂಪರಿಂಗ್ ವಿವಾದದಿಂದ ನಾಯಕತ್ವದಿಂದ ಕೆಳಗಿಳಿದ ಬಳಿಕ ಸ್ಟೀವನ್ ಸ್ಮಿತ್ ಮೊದಲ ಬಾರಿಗೆ ಉಪನಾಯಕರಾಗಿ ಆಯ್ಕೆಗೊಂಡಿದ್ದಾರೆ.

ತವರಿನಲ್ಲಿ ವೇಗವಾಗಿ 300 ಟೆಸ್ಟ್‌ ವಿಕೆಟ್ ಪಡೆದ ಬೌಲರ್ಸ್‌: ಭಾರತದವರೆಷ್ಟು?

ಪಿಚ್ ರಿಪೋರ್ಟ್

ಪಿಚ್ ರಿಪೋರ್ಟ್

ಪಿಚ್ ಆರಂಭದಲ್ಲಿ ಸೀಮರ್‌ಗಳಿಗೆ ಸ್ವಲ್ಪ ಬೌನ್ಸ್ ಮತ್ತು ಚಲನೆಯನ್ನು ಹೊಂದಿರುತ್ತದೆ, ಮತ್ತು ಬ್ಯಾಟರ್‌ಗಳು ಸ್ವಲ್ಪ ಸಮಯವನ್ನು ತೆಗೆದುಕೊಳ್ಳಬೇಕಾಗುತ್ತದೆ. ಗುಡುಗು ಸಹಿತ ಮಳೆಯು ಟೆಸ್ಟ್ ಪಂದ್ಯದ ಮೊದಲ 3 ದಿನಗಳಲ್ಲಿ ಆಟವನ್ನು ಅಡ್ಡಿಪಡಿಸಬಹುದು. ಹೀಗಾಗಿ ಪಂದ್ಯದ ಫಲಿತಾಂಶವು ಕಾಣದ ಮುಕ್ತಾಯವಾದ್ರೂ ಆಶ್ಚರ್ಯವಿಲ್ಲ.

ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಸಂಭಾವ್ಯ 11 ಆಟಗಾರರು

ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಸಂಭಾವ್ಯ 11 ಆಟಗಾರರು

ಆಸ್ಟ್ರೇಲಿಯಾ ಸಂಭಾವ್ಯ ಪ್ಲೇಯಿಂಗ್ 11
ಡೇವಿಡ್ ವಾರ್ನರ್, ಮಾರ್ಕಸ್ ಹ್ಯಾರಿಸ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ನಥಾನ್ ಲಿಯಾನ್, ಜೋಶ್ ಹ್ಯಾಜಲ್‌ವುಡ್

ಇಂಗ್ಲೆಂಡ್ ಸಂಭಾವ್ಯ ಪ್ಲೇಯಿಂಗ್ 11
ರೋರಿ ಬರ್ನ್ಸ್, ಹಸೀಬ್ ಹಮೀದ್, ಡೇವಿಡ್ ಮಲನ್, ಜೋ ರೂಟ್ (ನಾಯಕ), ಬೆನ್ ಸ್ಟೋಕ್ಸ್, ಒಲ್ಲಿ ಪೋಪ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಕ್ರಿಸ್ ವೋಕ್ಸ್, ಒಲ್ಲಿ ರಾಬಿನ್ಸನ್, ಮಾರ್ಕ್ ವುಡ್, ಸ್ಟುವರ್ಟ್ ಬ್ರಾಡ್/ಜ್ಯಾಕ್ ಲೀಚ್

ಆಸ್ಟ್ರೇಲಿಯಾ-ಇಂಗ್ಲೆಂಡ್ ಹೆಡ್ ಟು ಹೆಡ್‌

ಆಸ್ಟ್ರೇಲಿಯಾ-ಇಂಗ್ಲೆಂಡ್ ಹೆಡ್ ಟು ಹೆಡ್‌

ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳು ಇದುವರೆಗೂ 351 ಟೆಸ್ಟ್ ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಆಸ್ಟ್ರೇಲಿಯಾ 146 ಟೆಸ್ಟ್ ಪಂದ್ಯಗಳಲ್ಲಿ ಜಯಸಿದ್ರೆ, 110 ಟೆಸ್ಟ್ ಪಂದ್ಯಗಳಲ್ಲಿ ಇಂಗ್ಲೆಂಡ್ ಗೆದ್ದಿದೆ. ಇನ್ನು 95 ಪಂದ್ಯಗಳಲ್ಲಿ ಡ್ರಾನಲ್ಲಿ ಅಂತ್ಯಗೊಂಡಿವೆ.

ಇನ್ನು ಕಾಂಗರೂಗಳ ನಾಡಿನಲ್ಲಿ ನಡೆದ ಉಭಯ ತಂಡಗಳ 180 ಟೆಸ್ಟ್ ಪಂದ್ಯಗಳ ಮುಖಾಮುಖಿಯಲ್ಲಿ 95 ಟೆಸ್ಟ್ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಗೆದ್ದರೆ, ಇಂಗ್ಲೆಂಡ್ 57 ಪಂದ್ಯ ಜಯಿಸಿದೆ ಮತ್ತು 28 ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿವೆ.

ಪಂದ್ಯವು ಭಾರತೀಯ ಕಾಲಮಾನ ಬೆಳಿಗ್ಗೆ 5.30ರಿಂದ ಆರಂಭಗೊಳ್ಳಲಿದ್ದು, ಸೋನಿ ಸ್ಫೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರಪ್ರಸಾರ ಇರಲಿದೆ. ಲೈವ್‌ ಸ್ಟ್ರೀಮಿಂಗ್ ಸೋನಿಲಿವ್‌ನಲ್ಲಿ ನೋಡಬಹುದು.

Story first published: Tuesday, December 7, 2021, 16:34 [IST]
Other articles published on Dec 7, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X