ನಿವೃತ್ತಿ ದಿನಾಂಕ ಘೋಷಿಸಿದ ಭಾರತದ ವೇಗಿ ಆಶೀಶ್ ನೆಹ್ರಾ

Posted By:

ಹೈದರಾಬಾದ್, ಅಕ್ಟೋಬರ್ 12: ಟೀಂ ಇಂಡಿಯಾಕ್ಕೆ ಮತ್ತೆ ಮರಳಿದ್ದ ಹಿರಿಯ ವೇಗಿ ಆಶೀಶ್ ನೆಹ್ರಾ ಅವರು ಮುಂದಿನ ಸರಣಿ ನಂತರ ನಿವೃತ್ತಿರಾಗುವುದಾಗಿ ಗುರುವಾರದಂದು ಘೋಷಿಸಿದ್ದಾರೆ.

ನ್ಯೂಜಿಲೆಂಡ್ ನಿಂದ ಭಾರತ ಪ್ರವಾಸ ಸಂಪೂರ್ಣ ವೇಳಾಪಟ್ಟಿ

ಆಸ್ಟ್ರೇಲಿಯಾ ವಿರುದ್ಧದ ಟಿ20ಐ ಸರಣಿಯ ನಂತರ ಅಥವಾ ಮುಂಬರುವ ನ್ಯೂಜಿಲೆಂಡ್ ವಿರುದ್ಧದ ಸರಣಿಯ ನಂತರ ವಿದಾಯ ಹೇಳುತ್ತಿದ್ದಾರೆ.

Ashish Nehra announces retirement, will sign off in Delhi

ತವರು ನೆಲದಲ್ಲೇ ಕ್ರಿಕೆಟ್ ಗೆ ಗುಡ್ ಬೈ ಹೇಳುವ ಒಳ್ಳೆ ಅವಕಾಶ ಸಿಕ್ಕಿದ್ದು, ನವೆಂಬರ್ 01ರಂದು ದೆಹಲಿಯಲ್ಲಿ ವೃತ್ತಿ ಬದುಕಿಗೆ ಅಂತ್ಯ ಹಾಡುತ್ತೇನೆ ಎಂದು ನೆಹ್ರಾ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.

20 ವರ್ಷಗಳ ಕಾಲ ರಣಜಿ ಆಡಿದ್ದು ತೃಪ್ತಿಕೊಟ್ಟಿದೆ. ನನ್ನ ನಿರ್ಧಾರವನ್ನು ಈಗಾಗಲೇ ಕೋಚ್ ರವಿಶಾಸ್ತ್ರಿ, ನಾಯಕ ವಿರಾಟ್ ಕೊಹ್ಲಿಗೆ ತಿಳಿಸಿದ್ದೇನೆ. ಇನ್ಮುಂದೆ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲೂ ಆಡುವುದಿಲ್ಲ ಎಂದರು.

ತಂಡಕ್ಕೆ ಮರಳಿದ ಬೆನ್ನಲ್ಲೇ ನಿವೃತ್ತಿ, ಇದು ನೆಹ್ರಾ ಸ್ಟೈಲ್?

ಆಸ್ಟ್ರೇಲಿಯಾ ವಿರುದ್ಧದ ಟಿ20ಐ ಸರಣಿಗೆ 38 ವರ್ಷದ ನೆಹ್ರಾರನ್ನು ಆಯ್ಕೆ ಮಾಡಿದ್ದು ಭಾರಿ ಚರ್ಚೆಗೀಡಾಗಿತ್ತು. ಯುವರಾಜ್ ಸಿಂಗ್, ಸುರೇಶ್ ರೈನಾ, ಅಮಿತ್ ಮಿಶ್ರಾ ಮುಂತಾದ ಆಟಗಾರರ ಫಿಟ್ನೆಸ್ ಗೆ ಸವಲೊಡುವಂತೆ ನೆಹ್ರಾ ಆಯ್ಕೆಯಾಗಿದ್ದರು.

17 ಟೆಸ್ಟ್(44 ವಿಕೆಟ್) ,120 ಏಕದಿನ ಪಂದ್ಯ(157) ಹಾಗೂ 26 ಟಿ20ಐ(34) ಪಂದ್ಯಗಳನ್ನಾಡಿರುವ ನೆಹ್ರಾ ಅವರು ರಾಂಚಿ ಹಾಗೂ ಗೌಹಾತಿ ಪಂದ್ಯದ ಆಡುವ ಹನ್ನೊಂದರಲ್ಲಿ ಕಾಣಿಸಿಕೊಂಡಿರಲಿಲ್ಲ.

2003ರಲ್ಲಿ ವಿಶ್ವಕಪ್ ನಲ್ಲಿ ಇಂಗ್ಲೆಂಡ್ ವಿರುದ್ಧ 6/23 ಗಳಿಸಿದ್ದು ನೆನಪಿನಲ್ಲಿ ಉಳಿಯಬಹುದಾದ ಪ್ರದರ್ಶನವಾಗಿದೆ.(ಪಿಟಿಐ)

Story first published: Thursday, October 12, 2017, 17:47 [IST]
Other articles published on Oct 12, 2017
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ