Asia cup 2022: ಬಾಬರ್ ಅಥವಾ ಕೊಹ್ಲಿ, ಇಬ್ಬರಲ್ಲಿ ಯಾರಿಗೆ ಬೌಲಿಂಗ್ ಮಾಡುವುದು ಕಷ್ಟ? ರಶೀದ್ ಖಾನ್ ಉತ್ತರ

ಏಷ್ಯಾಕಪ್‌ಗೂ ಮುನ್ನ ಅಫ್ಘಾನಿಸ್ತಾನದ ಸ್ಟಾರ್ ಸ್ಪಿನ್ನರ್ ರಶೀದ್ ಖಾನ್ ವಿರಾಟ್ ಕೊಹ್ಲಿ ಮತ್ತು ಬಾಬರ್ ಅಜಮ್ ಬಗ್ಗೆ ಕುತೂಹಲಕಾರಿ ಹೇಳಿಕೆಗಳನ್ನ ನೀಡಿದ್ದಾರೆ. ಏಷ್ಯಾಕಪ್ ಉದ್ಘಾಟನಾ ಪಂದ್ಯದಲ್ಲಿ ಅಪ್ಘಾನಿಸ್ತಾನ ಮತ್ತು ಶ್ರೀಲಂಕಾ ಮುಖಾಮುಖಿಯಾಗುತ್ತಿದ್ದು, ನಂತರ ಆಗಸ್ಟ್ 28 ರಂದು ಭಾರತ ಮತ್ತು ಪಾಕಿಸ್ತಾನ ಪಂದ್ಯ ನಡೆಯಲಿದೆ. ಹೀಗಾಗಿ ಉಭಯ ತಂಡಗಳ ಸ್ಟಾರ್ ಬ್ಯಾಟರ್‌ ಕುರಿತು ಚರ್ಚೆ ಶುರುವಾಗಿದೆ.

ಬಾಬರ್ ಅಜಮ್ ಮತ್ತು ವಿರಾಟ್ ಕೊಹ್ಲಿ ಬಗ್ಗೆ ಚರ್ಚೆ ಹೆಚ್ಚಾದ ಬೆನ್ನಲ್ಲೇ, ಈ ಇಬ್ಬರು ಸ್ಟಾರ್ ಬ್ಯಾಟರ್‌ಗಳಲ್ಲಿ ಯಾರಿಗೆ ಬೌಲಿಂಗ್ ಮಾಡುವುದು ಕಷ್ಟ ಎಂದು ರಶೀನ್ ಖಾನ್‌ಗೆ ಕೇಳಲಾಗಿದ್ದು, ಅವರ ಉತ್ತವು ತುಂಬಾ ವಿಶೇಷವಾಗಿದೆ.

ಕೊಹ್ಲಿ ಅಥವಾ ಬಾಬರ್ ಯಾರಿಗೆ ಬೌಲಿಂಗ್ ಮಾಡುವುದು ಕಷ್ಟ?

ಕೊಹ್ಲಿ ಅಥವಾ ಬಾಬರ್ ಯಾರಿಗೆ ಬೌಲಿಂಗ್ ಮಾಡುವುದು ಕಷ್ಟ?

ಆಗಸ್ಟ್ 28 ರಂದು ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗುತ್ತಿವೆ. ಅನೇಕ ಬಾರಿ ರಶೀದ್ ಖಾನ್ ಅವರು ಟೀಂ ಇಂಡಿಯಾ ಸೂಪರ್‌ಸ್ಟಾರ್ ಕೊಹ್ಲಿ ಮತ್ತು ಪಾಕ್ ಸೂಪರ್ ಸ್ಟಾರ್ ಬಾಬರ್ ಅಜಮ್‌ಗೆ ಬೌಲಿಂಗ್ ಮಾಡಿದ್ದಾರೆ. ಹೀಗಾಗಿ ಈ ಇಬ್ಬರಲ್ಲಿ ಯಾರಿಗೆ ಬೌಲ್ ಮಾಡುವುದು ಕಷ್ಟ ಎಂದು ಜನಪ್ರಿಯ ಯೂಟ್ಯೂಬರ್ ರಶೀದ್ ಖಾನ್ ಅವರನ್ನು ಕೇಳಿದಾಗ ರಶೀದ್ ಉತ್ತರಿಸಿದರು. ಉಮ್‌, ಎರಡೂ ಎರಡು. ಇಬ್ಬರಿಗೂ ಬೌಲಿಂಗ್ ಮಾಡುವುದು ಕೂಡ ಅಷ್ಟೇ ಕಠಿಣವಾಗಿರುತ್ತದೆ ಎಂದಿದ್ದಾರೆ.

ಇಬ್ಬರು ಒಂದೇ ರೀತಿಯ ಬ್ಯಾಟ್ಸ್‌ಮನ್‌ಗಳು ಎಂದ ರಶೀದ್

ಇಬ್ಬರು ಒಂದೇ ರೀತಿಯ ಬ್ಯಾಟ್ಸ್‌ಮನ್‌ಗಳು ಎಂದ ರಶೀದ್

''ಇಬ್ಬರೂ ಒಂದೇ ರೀತಿಯ ಬ್ಯಾಟ್ಸ್‌ಮನ್‌ಗಳು. ನಾವು ಎಷ್ಟೇ ಉತ್ತಮ ಪ್ರದರ್ಶನ ನೀಡಿದರೂ ಅವರು ತಮ್ಮ ಲಯವನ್ನು ಕಳೆದುಕೊಳ್ಳುವುದಿಲ್ಲ. ಹಾಗಾಗಿ ಇಬ್ಬರಿಗೂ ಬೌಲಿಂಗ್ ಮಾಡಲು ಕಷ್ಟವಾಗುತ್ತಿದೆ. ಆದರೆ, ಅವರಿಗೆ ಬೌಲಿಂಗ್ ಮಾಡುವುದು ನನಗೆ ಉತ್ತಮ ಸವಾಲಾಗಿದೆ. ನಾನು ಸವಾಲನ್ನು ಸಂಪೂರ್ಣವಾಗಿ ಆನಂದಿಸುತ್ತೇನೆ. ಇಬ್ಬರಿಗೂ ಲೂಸ್ ಬಾಲ್ ಎಸೆದರೆ ಅಷ್ಟೇ. ಆದ್ದರಿಂದ ಬಹಳ ಎಚ್ಚರಿಕೆಯಿಂದ ಬೌಲ್ ಮಾಡಬೇಕು. ಸಾಮಾನ್ಯವಾಗಿ ನಾನು ಪಿಚ್‌ನ ಸರಿಯಾದ ಪ್ರದೇಶಗಳಲ್ಲಿ ಬೌಲಿಂಗ್ ಮಾಡಲು ಹೆಚ್ಚು ಗಮನಹರಿಸುತ್ತೇನೆ. ಆದರೆ, ಇವೆರಿಬ್ಬರನ್ನೂ ಎದುರಿಸುವುದು ತುಂಬಾ ಕಷ್ಟ'' ಎಂದು ಸವೇರಾ ಪಾಷಾ ಜೊತೆಗಿನ ಯೂಟ್ಯೂಬ್ ಸಂವಾದದಲ್ಲಿ ರಶೀದ್ ಹೇಳಿದ್ದಾರೆ.

Asia Cup 2022: 10 ವರ್ಷಗಳಲ್ಲಿ ಮೊದಲ ಬಾರಿಗೆ 1 ತಿಂಗಳು ಬ್ಯಾಟ್ ಮುಟ್ಟಿಲ್ಲ; ವಿರಾಟ್ ಕೊಹ್ಲಿ

ಬಾಬರ್ ಮತ್ತು ಕೊಹ್ಲಿ ವಿಶ್ವದ ಅಗ್ರ ಬ್ಯಾಟ್ಸ್‌ಮನ್‌ಗಳು

ಬಾಬರ್ ಮತ್ತು ಕೊಹ್ಲಿ ವಿಶ್ವದ ಅಗ್ರ ಬ್ಯಾಟ್ಸ್‌ಮನ್‌ಗಳು

ಬಾಬರ್ ಅಜಮ್ ಮತ್ತು ವಿರಾಟ್ ಕೊಹ್ಲಿ ವಿಶ್ವದ ಅಗ್ರ ಬ್ಯಾಟರ್‌ಗಳಾಗಿದ್ದಾರೆ. ಹಾಗಾಗಿ ನಾನು ಅವರಿಗೆ ಉತ್ತಮ ಬೌಲಿಂಗ್ ಮಾಡಲು ರೆಡಿಯಿದ್ದೇನೆ ಎಂದು ರಶೀದ್ ಖಾನ್ ಹೇಳಿದ್ದಾರೆ. ಇನ್ನು ರಶೀದ್ ಐಪಿಎಲ್‌ನಲ್ಲಿ ಎಸ್‌ಆರ್‌ಹೆಚ್‌ನಲ್ಲಿದ್ದಾಗ ಕೇನ್ ವಿಲಿಯಮ್ಸನ್‌ಗೆ ನೆಟ್ ಪ್ರಾಕ್ಟೀಸ್‌ನಲ್ಲಿ ಬೌಲಿಂಗ್ ಮಾಡುತ್ತಿದ್ದರು ಎಂದು ಅವರು ಹೇಳಿದರು. ನಂತರ ಕೇನ್‌ಗೆ ನನ್ನ ಬೌಲಿಂಗ್ ಬಗ್ಗೆ ಐಡಿಯಾ ಬಂತು ಮತ್ತು ಅವರ ಬ್ಯಾಟಿಂಗ್ ಬಗ್ಗೆ ನನಗೆ ಐಡಿಯಾ ಸಿಕ್ಕಿತು. ಆದರೆ ಐಪಿಎಲ್‌ನಲ್ಲಿ ನಾನು ಯಾವಾಗಲೂ ಕೊಹ್ಲಿಯನ್ನು ಪ್ರತಿಸ್ಪರ್ಧಿಯಾಗಿ ಎದುರಿಸಿದ್ದೇನೆ. ಐಪಿಎಲ್‌ನಲ್ಲಿ ವಿರಾಟ್ ಜೊತೆ ಹಲವು ಬಾರಿ ಚರ್ಚಿಸಿದ್ದೇನೆ ಮತ್ತು ಕೆಲವು ಸಂದರ್ಭಗಳಲ್ಲಿ ಬಾಬರ್ ಜೊತೆಯೂ ಚರ್ಚಿಸಿದ್ದೇನೆ ಎಂದು ರಶೀದ್ ಹೇಳಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ಸಂಭಾವ್ಯ ಪ್ಲೇಯಿಂಗ್ ಇಲೆವೆನ್

ಭಾರತ ಮತ್ತು ಪಾಕಿಸ್ತಾನ ಸಂಭಾವ್ಯ ಪ್ಲೇಯಿಂಗ್ ಇಲೆವೆನ್

ಆಗಸ್ಟ್ 28ರಂದು ಭಾನುವಾರ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ಪಂದ್ಯದಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಉಭಯ ತಂಡದಲ್ಲಿ ಯಾರು ಸ್ಥಾನ ಪಡೆಯಬಹುದು ಎಂಬುದನ್ನ ಈ ಕೆಳಗೆ ತಿಳಿಯಿರಿ

ಟೀಂ ಇಂಡಿಯಾ
ಕೆ.ಎಲ್ ರಾಹುಲ್, ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಆರ್ ಅಶ್ವಿನ್, ಭುವನೇಶ್ವರ್ ಕುಮಾರ್, ಯುಜವೇಂದ್ರ ಚಾಹಲ್, ಅರ್ಷದೀಪ್ ಸಿಂಗ್

ಪಾಕಿಸ್ತಾನ
ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್, ಫಖರ್ ಜಮಾನ್, ಆಸಿಫ್ ಅಲಿ, ಖುಷ್ದಿಲ್ ಶಾ, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಉಸ್ಮಾನ್ ಖಾದಿರ್, ಹ್ಯಾರಿಸ್ ರೌಫ್, ಮೊಹಮ್ಮದ್ ವಾಸಿಮ್ ಜೂನಿಯರ್, ಶಹನವಾಜ್ ಧಹಾನಿ

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Saturday, August 27, 2022, 16:39 [IST]
Other articles published on Aug 27, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X