ವಿರಾಟ್ ಯಾವಾಗಲೂ ಫಾರ್ಮ್‌ನಲ್ಲಿದ್ದಾರೆ, ಜನರು ಬಿಗ್ ಸ್ಕೋರ್‌ ನಿರೀಕ್ಷಿಸುತ್ತಿದ್ದಾರೆ: ವೀರೇಂದ್ರ ಸೆಹ್ವಾಗ್

ಟೀಂ ಇಂಡಿಯಾ ಮಾಜಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿಯನ್ನು ಹೊಗಳಿದ್ದಾರೆ. ಏಷ್ಯಾ ಕಪ್ 2022 ರ ಸೂಪರ್ 4 ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಅದ್ಭುತ ಆಟವಾಡಿದ ವಿರಾಟ್ ಅರ್ಧ ಶತಕದೊಂದಿಗೆ ತಮ್ಮ ನಿರ್ಣಾಯಕ ಇನ್ನಿಂಗ್ಸ್ ಆಡಿದ್ದು, ಈ ಇನ್ನಿಂಗ್ಸ್‌ ಅನ್ನು ಸೆಹ್ವಾಗ್‌ ಶ್ಲಾಘಿಸಿದರು.

ವಾಸ್ತವವಾಗಿ, ವಿರಾಟ್ ಯಾವಾಗಲೂ ಫಾರ್ಮ್‌ನಲ್ಲಿದ್ದಾರೆ ಎಂದು ಸೆಹ್ವಾಗ್ ಹೇಳಿದ್ದಾರೆ. ಆದ್ರೆ ಜನರು ಅವರಿಂದ ಹೆಚ್ಚು ನಿರೀಕ್ಷಿಸುವುದು ಸಮಸ್ಯೆಯಾಗಿದೆ ಎಂದು ಅವರು ನಂಬಿದ್ದಾರೆ. ಪಾಕ್ ವಿರುದ್ಧ ಸೂಪರ್ 4 ಪಂದ್ಯದಲ್ಲಿ ಭಾರತ 5 ವಿಕೆಟ್ ಗಳಿಂದ ಸೋತಿದ್ದು ಗೊತ್ತೇ ಇದೆ. ಈ ಪಂದ್ಯದ ಬಳಿಕ ಮಾತನಾಡಿದ ಸೆಹ್ವಾಗ್, ಕೊಹ್ಲಿ ಆಟದ ಶೈಲಿಯನ್ನು ವಿಶ್ಲೇಷಿಸಿದ್ದಾರೆ.

ಏಷ್ಯಾಕಪ್‌ನಲ್ಲಿ ಭಾರತ ತಂಡದ ಸೆಲೆಕ್ಷನ್‌ನಲ್ಲೇ ದೊಡ್ಡ ಎಡವಟ್ಟು: ಮೊಹಮ್ಮದ್ ಕೈಫ್ಏಷ್ಯಾಕಪ್‌ನಲ್ಲಿ ಭಾರತ ತಂಡದ ಸೆಲೆಕ್ಷನ್‌ನಲ್ಲೇ ದೊಡ್ಡ ಎಡವಟ್ಟು: ಮೊಹಮ್ಮದ್ ಕೈಫ್

ವಿರಾಟ್ ಕ್ರೀಸ್ ಗೆ ಬಂದಾಗಲೆಲ್ಲಾ ಶತಕ ಸಿಡಿಸಬೇಕು ಎಂದು ಜನರು ಬಯಸುತ್ತಾರೆ, ಹಾಗಾಗಿಯೇ ಎಷ್ಟೇ ಉತ್ತಮ ಇನ್ನಿಂಗ್ಸ್ ಆಡಿದರೂ ಫಾರ್ಮ್ ನಲ್ಲಿಲ್ಲ ಎಂಬ ಕಾಮೆಂಟ್ ಗಳು ಬರುತ್ತಿವೆ ಎಂದು ಸೆಹ್ವಾಗ್‌ ವಿವರಿಸಿದರು.

ನಾವು ವಿರಾಟ್ ಕೊಹ್ಲಿಯಿಂದ ಬಹಳಷ್ಟು ನಿರೀಕ್ಷಿಸಿದ್ದೇವೆ. ನಾವು ಬ್ಯಾಟಿಂಗ್‌ಗೆ ಬಂದಾಗಲೆಲ್ಲಾ ಆತ ದೊಡ್ಡ ಸ್ಕೋರ್ ಮಾಡಬೇಕೆಂದು ಬಯಸುತ್ತೇವೆ . ವಿರಾಟ್ ಕನಿಷ್ಠ ಶತಕವನ್ನು ಮಾಡಬೇಕಾಗಿತ್ತು ಎಂದು ಭಾವಿಸುತ್ತೇವೆ. ಸಚಿನ್ 100 ಶತಕಗಳ ದಾಖಲೆ ಮುರಿಯುತ್ತಾರಾ ಕೊಹ್ಲಿ..? ಅಥವಾ ಮುರಿಯೋದಿಲ್ವಾ ಎಂಬೆಲ್ಲಾ ಚರ್ಚಿಸಿದೆವು. ವಿರಾಟ್ 40 ಮತ್ತು 50 ರ ಹಂತದಲ್ಲಿ ಯಾವಾಗ ಔಟಾಗುತ್ತಿದ್ದಾರೋ, ಅಂದಿನಿಂದ ನಾವು ಎಣಿಸುವುದನ್ನು ನಿಲ್ಲಿಸಿದ್ದೇವೆ. ಅವರು ಫಾರ್ಮ್‌ನಲ್ಲಿಲ್ಲ ಎಂದು ನಮಗೆ ಅನ್ನಿಸುತ್ತಿದೆ. ಆದ್ರೆ ನನ್ನ ಪಾಲಿಗೆ ವಿರಾಟ್ ಯಾವಾಗಲೂ ಫಾರ್ಮ್‌ನಲ್ಲಿದ್ದಾನೆ. ಆದರೆ ಉತ್ತಮ ಆರಂಭಗಳನ್ನು ದೊಡ್ಡ ಸ್ಕೋರ್‌ಗಳಾಗಿ ಪರಿವರ್ತಿಸುವಲ್ಲಿ ವಿಫಲರಾಗಿದ್ದಾರೆ ಎಂದು ಸೆಹ್ವಾಗ್ ಹೇಳಿದ್ದಾರೆ.

''ಪಾಕಿಸ್ತಾನದ ವಿರುದ್ಧ ಕೊಹ್ಲಿ ಆಡಿದ ಇನ್ನಿಂಗ್ಸ್ ಬಹಳ ಮೌಲ್ಯಯುತವಾಗಿತ್ತು. ರೋಹಿತ್-ರಾಹುಲ್ ಉತ್ತಮ ಆರಂಭ ನೀಡಿದರೂ ಉಳಿದ ಬ್ಯಾಟ್ಸ್ ಮನ್ ಗಳು ಉತ್ತಮ ಪ್ರದರ್ಶನ ನೀಡಲಿಲ್ಲ. ಈ ಸಮಯದಲ್ಲಿ ಈ ರೀತಿಯ ಅರ್ಧಶತಕ ಸಾಮಾನ್ಯ ಸಂಗತಿಯಲ್ಲ. ಕೊಹ್ಲಿ ಕೂಡ ಬೇಗ ಔಟಾದರೆ ಭಾರತದ ಸ್ಕೋರ್ ಬೋರ್ಡ್ 150 ರನ್ ಗಳಿಗೆ ನಿಲ್ಲುತ್ತಿತ್ತು''

''ಕಡಿಮೆ ಸ್ಕೋರ್ ಗೆ ಔಟಾದರೆ ಬ್ಯಾಟ್ಸ್ ಮನ್ ಫಾರ್ಮ್ ನಲ್ಲಿಲ್ಲ ಎನ್ನಬಹುದು. ಆದರೆ ಕೊಹ್ಲಿ ರನ್‌ಗಳಿಸುತ್ತಿದ್ದಾರೆ, ಆದರೆ ಶತಕ ಸಿಡಿಸುತ್ತಿಲ್ಲ. ಹಾಗಾಗಿಯೇ ಅದು ನಮ್ಮ ನಿರೀಕ್ಷೆಯನ್ನು ಪೂರೈಸಲಿಲ್ಲ ಎಂದು ಹೇಳುತ್ತೇವೆ. ಆದರೆ ನಾವು ಏನನ್ನು ನಿರೀಕ್ಷಿಸುತ್ತೇವೆ ಎಂಬುದನ್ನು ಕೊಹ್ಲಿ ಲೆಕ್ಕಿಸುವುದಿಲ್ಲ,'' ಎಂದು ಸೆಹ್ವಾಗ್ ಹೇಳಿದ್ದಾರೆ.

ಇಂಗ್ಲೆಂಡ್ ಪ್ರವಾಸದಲ್ಲಿ ಹೀನಾಯವಾಗಿ ವಿಫಲರಾಗಿ ತೀವ್ರ ಟೀಕೆ ಎದುರಿಸಿದ್ದ ವಿರಾಟ್ ಒಂದು ತಿಂಗಳ ವಿರಾಮ ಪಡೆದು ಏಷ್ಯಾಕಪ್ ಕಣಕ್ಕೆ ಇಳಿದಿದ್ದರು. ರೀ ಎಂಟ್ರಿಯಲ್ಲಿ ಹಳೇ ಕೊಹ್ಲಿ ಮುಂಚೂಣಿಯಲ್ಲಿದ್ದು ರನ್ ಗಳಿಸುತ್ತಿದ್ದಾರೆ. ಅವರು ಸತತ ಎರಡು ಅರ್ಧಶತಕಗಳನ್ನು ಗಳಿಸಿದ್ದಾರೆ. ಹಾಂಕಾಂಗ್ ವಿರುದ್ಧ 59 ರನ್ ಹಾಗೂ ಪಾಕಿಸ್ತಾನ ವಿರುದ್ಧ 60 ರನ್ ಗಳಿಸಿದ್ದ ವಿರಾಟ್, ಪಾಕ್ ವಿರುದ್ಧ ಮೊದಲ ಪಂದ್ಯದಲ್ಲಿ ನಿರ್ಣಾಯಕ 35 ರನ್ ಗಳಿಸಿ ಟೀಂ ಇಂಡಿಯಾ ಪರ ಅಗ್ರ ಸ್ಕೋರರ್ ಆಗಿ ಮುಂದುವರಿದಿದ್ದಾರೆ.

ಏಷ್ಯಾ ಕಪ್ ಸೂಪರ್-4 ಮುಂದಿನ ಪಂದ್ಯದಲ್ಲಿ ಭಾರತ ಮಂಗಳವಾರ ಶ್ರೀಲಂಕಾವನ್ನು ಎದುರಿಸಲಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Monday, September 5, 2022, 22:23 [IST]
Other articles published on Sep 5, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X