ಏಷ್ಯಾ ಕಪ್ 2022: ಆರಂಭಿಕ ವಿಕೆಟ್‌ ಬೇಕಿದ್ದರೆ, ಮೊದಲು ಈತನನ್ನು ಆಯ್ಕೆ ಮಾಡಿ; ಬಾಲಾಜಿ

ಮುಂಬರುವ 2022ರ ಏಷ್ಯಾ ಕಪ್‌ಗಾಗಿ ಭಾರತ ತಂಡದಲ್ಲಿ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಅವರ ಅನುಪಸ್ಥಿತಿಯಲ್ಲಿ ದೀಪಕ್ ಚಹಾರ್ ಮೊದಲ ಆಯ್ಕೆಯ ಬೌಲರ್ ಆಗಬೇಕಿತ್ತು ಎಂದು ಭಾರತದ ಮಾಜಿ ವೇಗಿ ಲಕ್ಷ್ಮೀಪತಿ ಬಾಲಾಜಿ ಹೇಳಿದ್ದಾರೆ.

ಬೆನ್ನುನೋವಿನ ಕಾರಣ ಜಸ್ಪ್ರೀತ್ ಬುಮ್ರಾ ಆಯ್ಕೆಗೆ ಅಲಭ್ಯವಾಗಿದ್ದರೂ, ಮೊಹಮ್ಮದ್ ಶಮಿಯನ್ನು ಕಡೆಗಣಿಸಲಾಯಿತು. ಪ್ರಮುಖ ಟೂರ್ನಿಗೆ ಭಾರತ ತಂಡಕ್ಕೆ ಹೆಸರಿಸದಿರುವ ಕಾರಣವನ್ನು ಬಿಸಿಸಿಐ ಒದಗಿಸಲಿಲ್ಲ. ಟಿ20 ಮಾದರಿಯಲ್ಲಿ ನಡೆಯಲಿರುವ ಏಷ್ಯಾಕಪ್ ಆಗಸ್ಟ್ 27ರಂದು ಯುಎಇಯಲ್ಲಿ ಆರಂಭವಾಗಲಿದೆ. ಮರುದಿನ (ಆಗಸ್ಟ್ 28) ಪಾಕಿಸ್ತಾನ ವಿರುದ್ಧ ಭಾರತ ತಂಡ ಅಭಿಯಾನ ಆರಂಭಿಸಲಿದೆ.

AUS vs ZIM: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಬಲಿಷ್ಠ ತಂಡ ಪ್ರಕಟಿಸಿದ ಜಿಂಬಾಬ್ವೆAUS vs ZIM: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಬಲಿಷ್ಠ ತಂಡ ಪ್ರಕಟಿಸಿದ ಜಿಂಬಾಬ್ವೆ

ಪಂದ್ಯಾವಳಿಯ ಮೂರು ಸ್ಟ್ಯಾಂಡ್‌ಬೈಗಳಲ್ಲಿ ಒಬ್ಬರಾಗಿರುವ ದೀಪಕ್ ಚಹಾರ್, ಗಾಯಗಳಿಂದ ಚೇತರಿಸಿಕೊಂಡ ನಂತರ ಜಿಂಬಾಬ್ವೆಯ ಪ್ರವಾಸದಲ್ಲಿ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದರು. ಫೆಬ್ರವರಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟಿ20 ಪಂದ್ಯದ ಸಂದರ್ಭದಲ್ಲಿ 30 ವರ್ಷ ವಯಸ್ಸಿನ ಚಹಾರ್, ಬಲ ಕ್ವಾಡ್ರೈಸ್ಪ್ಸ್ ಗಾಯದಿಂದ ಬಳಲುತ್ತಿದ್ದರು. ನಂತರ ಅವರು ಬೆನ್ನುನೋವಿಗೆ ಒಳಗಾದರು. ಇದು ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ 14 ಕೋಟಿ ರೂ.ಗೆ ಖರೀದಿಸಿದ ನಂತರ 2022ರ ಐಪಿಎಲ್ ಅನ್ನು ತಪ್ಪಿಸಿಕೊಳ್ಳಬೇಕಾಯಿತು.

ದೀಪಕ್ ಚಹಾರ್‌ನನ್ನು ಮೊದಲ ಆಯ್ಕೆಯಾಗಿ ನೋಡಬೇಕು

ದೀಪಕ್ ಚಹಾರ್‌ನನ್ನು ಮೊದಲ ಆಯ್ಕೆಯಾಗಿ ನೋಡಬೇಕು

ದೀಪಕ್ ಚಹಾರ್ ಬಗ್ಗೆ ಮಾತನಾಡಿದ ಚೆನ್ನೈ ಸೂಪರ್ ಕಿಂಗ್ಸ್ ಬೌಲಿಂಗ್ ಕೋಚ್ ಬಾಲಾಜಿ, "ಯುಎಇಯಲ್ಲಿ ಎದುರಾಳಿ ಬ್ಯಾಟಿಂಗ್‌ನಲ್ಲಿ ಆರಂಭಿಕ ವಿಕೆಟ್ ತೆಗೆಯಲು ಹೊಸ ಬಾಲ್ ಕೌಶಲ್ಯಗಳು ಬೇಕಾಗುತ್ತವೆ, ನಿಮಗೆ ಬೇಕಾಗಿರುವುದು ಹೊಸ ಚೆಂಡಿನೊಂದಿಗೆ ಮುಂಚೂಣಿಯಲ್ಲಿರುವ ವಿಕೆಟ್. ದೀಪಕ್ ಚಹಾರ್ ನಿಮಗೆ ಆರಂಭಿಕ ವಿಕೆಟ್‌ಗಳನ್ನು ನೀಡುತ್ತಾರೆ. ನೀವು ಅವರನ್ನು ಮೊದಲ ಆಯ್ಕೆಯಾಗಿ ನೋಡಬೇಕು. ಆದರೆ, ಸಾಕಷ್ಟು ಬೌಲರ್‌ಗಳಿದ್ದಾರೆ ಮತ್ತು ಸಾಕಷ್ಟು ಪೈಪೋಟಿ ಇದೆ. ನಿಮಗೆ ಹೊಸ ಚೆಂಡಿನೊಂದಿಗೆ ವಿಕೆಟ್ ತೆಗೆದುಕೊಳ್ಳುವ ಬೌಲರ್‌ಗಳು ಬೇಕು. ಬುಮ್ರಾ ಮತ್ತು ಶಮಿ ಅಲಭ್ಯವಿದ್ದಾಗ ಚಹಾರ್ ಅದನ್ನು ಮಾಡುತ್ತಾನೆ," ಎಂದು ಬೆಂಬಲಿಸಿದರು.

ಜಿಂಬಾಬ್ವೆ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಮೂರು ವಿಕೆಟ್

ಜಿಂಬಾಬ್ವೆ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಮೂರು ವಿಕೆಟ್

"ದೀಪಕ್ ಚಹಾರ್ ಸಾಕಷ್ಟು ಸುಧಾರಿಸಿದ್ದಾರೆ. ದುರದೃಷ್ಟವಶಾತ್, ಗಾಯವು ಅವರನ್ನು ಆರು ತಿಂಗಳ ಕಾಲ ಹೊರಗುಳಿಯುವಂತೆ ಮಾಡಿತು. ಅವರು ಕಠಿಣ ಪರಿಶ್ರಮಿ ಕ್ರಿಕೆಟಿಗ. ಇತರ ಬೌಲರ್‌ಗಳು ತಮ್ಮ ಸ್ಥಾನಗಳನ್ನು ಗಳಿಸಿರುವುದರಿಂದ ಅವರ ಅವಕಾಶಗಳಿಗಾಗಿ ಕಾಯಬೇಕು ಎಂದು ನಾನು ಹೇಳುತ್ತೇನೆ. ಚಹಾರ್ ಯಾವಾಗಲೂ ಕೆಲಸ ಮಾಡುತ್ತಾರೆ. ವೇಗದ ಬೌಲಿಂಗ್ ವಿಭಾಗವು ಅಸಾಧಾರಣವಾಗಿ ಉತ್ತಮವಾಗಿದೆ ಮತ್ತು ಸಾಕಷ್ಟು ಪೈಪೋಟಿಯಿಂದ ಕೂಡಿದೆ," ಎಂದು ಲಕ್ಷ್ಮೀಪತಿ ಬಾಲಾಜಿ ತಿಳಿಸಿದ್ದಾರೆ.

ಗಾಯದಿಂದ ಚೇತರಿಸಿಕೊಂಡ ನಂತರ ದೀಪಕ್ ಚಹಾರ್ ತನ್ನ ಮೊದಲ ಪಂದ್ಯದಲ್ಲಿ ಪಂದ್ಯ ಶ್ರೇಷ್ಠ ಪ್ರದರ್ಶನ ನೀಡಿದರು. ಜಿಂಬಾಬ್ವೆ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಅವರು ಮೂರು ವಿಕೆಟ್ ಪಡೆದರು. ಆದಾಗ್ಯೂ, ಎರಡನೇ ಗೇಮ್‌ನಲ್ಲಿ ಅವರನ್ನು ಹೊರಗಿಡಲಾಯಿತು. ಇದು ನಾಯಕ ಕೆಎಲ್ ರಾಹುಲ್ ಮತ್ತು ವಿವಿಎಸ್ ಲಕ್ಷ್ಮಣ್ ನಾಯಕತ್ವದ ಥಿಂಕ್ ಟ್ಯಾಂಕ್ ವಿರುದ್ಧ ಅಭಿಮಾನಿಗಳನ್ನು ಕೆರಳಿಸಿತು. ದೀಪಕ್ ಚಹಾರ್ ಮೂರನೇ ಮತ್ತು ಅಂತಿಮ ಪಂದ್ಯದಲ್ಲಿ ಮರಳಿದರು. ಹರಾರೆಯಲ್ಲಿ ಎರಡು ವಿಕೆಟ್ ಪಡೆಯುವ ಮೂಲಕ ಸರಣಿಯಲ್ಲಿ ಒಟ್ಟು ಐದು ವಿಕೆಟ್‌ಗಳೊಂದಿಗೆ ಮರಳಿದರು.

ಹೊಸ ಚೆಂಡಿನೊಂದಿಗೆ ಸ್ವಿಂಗ್ ಮತ್ತು ಸೀಮ್

ಹೊಸ ಚೆಂಡಿನೊಂದಿಗೆ ಸ್ವಿಂಗ್ ಮತ್ತು ಸೀಮ್

"ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಹಿಂದಿರುಗಿದ ತಕ್ಷಣ ಜಿಂಬಾಬ್ವೆಯಲ್ಲಿ ಅವರು ಸಾಕಷ್ಟು ಬದಲಾವಣೆಗಳನ್ನು ಹೊಂದಿದ್ದಾರೆ. ಸ್ವಿಂಗ್ ಮತ್ತು ಸೀಮ್ ಬೌಲ್ ಮಾಡುವುದು ಅವರ ಸಾಮರ್ಥ್ಯ ಮತ್ತು ಹೊಸ ಚೆಂಡಿನೊಂದಿಗೆ ವಿಕೆಟ್‌ಗಳನ್ನು ಕೀಳುವುದು ಅವರನ್ನು ವಿಶೇಷವಾಗಿಸುತ್ತದೆ. ಹೊಸ ಚೆಂಡಿನೊಂದಿಗೆ ಅವರು ಹೊಂದಿರುವಂತಹ ಕೌಶಲ್ಯಗಳನ್ನು ನೀವು ಹೊಂದಿರುವಾಗ, ಅದನ್ನು ವೀಕ್ಷಿಸಲು ಒಂದು ಸಂತೋಷವಾಗುತ್ತದೆ," ಎಂದು ಸಿಎಸ್‌ಕೆ ಬೌಲಿಂಗ್ ಕೋಚ್ ದೀಪಕ್ ಚಹಾರ್ ಹೇಳಿದರು.

"ಇಂದಿನ ಕ್ರಿಕೆಟ್‌ನಲ್ಲಿ ನೀವು ಹೊಸ ಚೆಂಡಿನೊಂದಿಗೆ ಸ್ವಿಂಗ್ ಮತ್ತು ಸೀಮ್ ಅನ್ನು ಬಹಳ ಅಪರೂಪವಾಗಿ ನೋಡುತ್ತೀರಿ. ಇದು ಹೆಚ್ಚು ಹಿಟ್-ಡೆಕ್ ಪ್ರಕಾರವಾಗಿದೆ. ಮೊದಲ ಬಾಲ್‌ನಿಂದಲೇ ಚಹಾರ್ ನಿಯಂತ್ರಣವನ್ನು ಹೊಂದಿದ್ದಾನೆ. ನೀವು ಗಾಳಿಯಲ್ಲಿ ತಡವಾಗಿ ಹೊಸ ಚೆಂಡಿನ ಸ್ವಿಂಗ್ ನೋಡಬಹುದು. ಅವರು ನಿರಂತರವಾಗಿ ಪಂದ್ಯಗಳನ್ನು ಆಡುವ ಅಗತ್ಯವಿದೆ. ಅವರು ಈಗ ತುಂಬಾ ಫಿಟ್ ಆಗಿ ಕಾಣುತ್ತಿದ್ದಾರೆ," ಎಂದು ಬಾಲಾಜಿ ತಿಳಿಸಿದರು.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Wednesday, August 24, 2022, 11:06 [IST]
Other articles published on Aug 24, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X