ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಹಿಳಾ ಏಷ್ಯಾ ಕಪ್ 2022: ಯುಎಇ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಭಾರತ: ಅಂಕಪಟ್ಟಿಯಲ್ಲಿ ಅಗ್ರಸ್ಥಾನ

Asia Cup 2022: India women won against UAE move to top of the table

ಮಹಿಳಾ ಏಷ್ಯಾ ಕಪ್‌ ಟೂರ್ನಿಯಲ್ಲಿ ಭಾರತೀಯ ವನಿತೆಯರ ಗೆಲುವಿನ ಓಟ ಮುಂದುವರಿದಿದೆ. ಇಂದು ಯುಎಇ ವಿರುದ್ಧದ ಪಂದ್ಯದಲ್ಲಿ 104 ರನ್‌ಗಳ ಬೃಹತ್ ಅಂತರದಿಂದ ಗೆಲುವು ಸಾಧಿಸಿರುವ ಟೀಮ್ ಇಂಡಿಯಾ ವನಿತೆಯರು ಸತತ ಮೂರನೇ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿಯೂ ಅಗ್ರಸ್ಥಾನವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಮಾಡಿದ ಭಾರತೀಯ ತಂಡಕ್ಕೆ ದೀಪ್ತಿ ಶರ್ಮಾ ಹಾಗೂ ಜಮೀಮಾ ರೋಡ್ರಗಸ್ ಭರ್ಜರಿ ಪ್ರದರ್ಶನ ನೀಡಿದ ದೊಡ್ಡ ಮೊತ್ತದ ಗುರಿಯನ್ನು ನೀಡುವಲ್ಲಿ ಯಶಸ್ವಿಯಾಯಿತು. ಆರಂಭಿಕ ಆಘಾತ ಅನುಭವಿಸಿದ ಭಾರತ ಒಂದು ಹಂತದಲ್ಲಿ 19 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡಿತ್ತು. ಆದರೆ ನಂತರ ಜೊತೆಯಾದ ದೀಪ್ತಿ ಶರ್ಮಾ ಹಾಗೂ ಜಮಿಮಾ, ಭರ್ಜರಿ ಶತಕದ ಜೊತೆಯಾಟವನ್ನು ನೀಡಿದರು.

ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಖಾಯಂ ನಾಯಕಿ ಹರ್ಮನ್‌ಪ್ರೀತ್ ಹಾಗೂ ಶೆಫಾಲಿ ವರ್ಮ ವಿಶ್ರಾಂತಿ ಪಡೆದುಕೊಂಡಿದ್ದರು. ಹೀಗಾಗಿ ಸ್ಮೃತಿ ಮಂಧಾನ ನಾಯಕಿಯಾಗಿ ತಂಡವನ್ನು ಮುನ್ನಡೆಸಿದ್ದು ಆರಂಭಿಕರಾಗಿ ಎಸ್ ಮೇಘನಾ ಹಾಗೂ ರಿಚಾ ಘೋಷ್ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಆದರೆ ಈ ಜೋಡಿ ವೈಫ್ಯ ಅನುಭವಿಸಿತು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ದೀಪ್ತಿ ಶರ್ಮಾ ಜಮಿಮಾ ರೋಡ್ರಿಸ್ ಜೊತೆಗೂಡಿ ಅದ್ಭುತವಾದ ಇನ್ನಿಂಗ್ಸ್ ಕಟ್ಟಿದರು. ದೀಪ್ತಿ 49 ಎಸೆತಗಳಲ್ಲಿ 64 ರನ್‌ಗಳನ್ನು ಗಳಿಸಿದರೆ ಜಮಿಮಾ 45 ಎಸೆತಗಳಲ್ಲಿ ಭರ್ಜರಿ 75 ರನ್‌ಗಳನ್ನು ಗಳಿಸಿ ಅಜೇಯವಾಗಿಳಿದರು. ಈ ಮೂಲಕ ತಮ್ಮ ಅದ್ಭುತ ಫಾರ್ಮ್ ಮುಂದುವರಿಸಿದ್ದಾರೆ.

ಇರಾನಿ ಕಪ್: ಸೌರಾಷ್ಟ್ರ ತಂಡವನ್ನು 8 ವಿಕೆಟ್‌ಗಳಿಂದ ಮಣಿಸಿ ಇರಾನಿ ಕಪ್ ಗೆದ್ದ ರೆಸ್ಟ್ ಆಫ್ ಇಂಡಿಯಾಇರಾನಿ ಕಪ್: ಸೌರಾಷ್ಟ್ರ ತಂಡವನ್ನು 8 ವಿಕೆಟ್‌ಗಳಿಂದ ಮಣಿಸಿ ಇರಾನಿ ಕಪ್ ಗೆದ್ದ ರೆಸ್ಟ್ ಆಫ್ ಇಂಡಿಯಾ

ಇನ್ನು ಭಾರತ ತಂಡ ನೀಡಿದ ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಯುಎಇ ವನಿತೆಯರ ಬಳಗ ರನ್‌ಗಳಿಸಲು ಅಕ್ಷರಶಃ ತಿಣುಕಾಡಿತು. ನಿಗದಿತ 20 ಓವರ್‌ಗಳ ಕಾಲ ಬ್ಯಾಟಿಂಗ್ ನಡೆಸಿದರೂ ನಾಲ್ಕು ವಿಕೆಟ್ ಕಳೆದುಕೊಂಡು ಯುಎಇ ಗಳಿಸಿದ್ದು ಕೇವಲ 74 ರನ್ ಮಾತ್ರ. ಹೀಗಾಗಿ ಈ ಪಂದ್ಯವನ್ನು ಭಾರತ ತಂಡ ಭರ್ಜರಿ 104 ರನ್‌ಗಳ ಅಂತರದಿಂದ ಗೆದ್ದುಕೊಂಡಿದೆ.

ಇನ್ನು ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಭಾರತ ತಂಡ ಸತತ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದಂತಾಗಿದೆ. ಹೀಗಾಗಿ ಏಷ್ಯಾ ಕಪ್‌ನ ಅಂಕಪಟ್ಟಿಯಲ್ಲಿ ಭಾರತ ಅಗ್ರಸ್ಥಾನವನ್ನು ಪಡೆದುಕೊಂಡಿದೆ. ಮೊದಲ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 41 ರನ್‌ಗಳಿಂದ ಮಣಿಸಿದ್ದ ಭಾರತ ಎರಡನೇ ಪಂದ್ಯದಲ್ಲಿ ಡಕ್‌ವರ್ತ್ ಲೂಯಿಸ್ ನಿಯಮದ ಅಡಿಯಲ್ಲಿ ಮಲೇಶಿಯಾ ತಂಡವನ್ನು 30 ರನ್‌ಗಳಿಂದ ಮಣಿಸಿತ್ತು. ಇದೀಗ ಯುಎಇ ವಿರುದ್ಧ ಗೆಲುವು ಸಾಧಿಸಿರುವ ಮೂಲಕ ಗೆಲುವಿನ ಓಟವನ್ನು ಮುಂದುವರಿಸಿದೆ.

ವಿರಾಟ್ ಕೊಹ್ಲಿ, ರಾಹುಲ್‌ಗೆ ವಿಶ್ರಾಂತಿ ನೀಡಿ ತಪ್ಪು ಮಾಡಿದಿರಿ ಎಂದ ಮಾಜಿ ಆಟಗಾರವಿರಾಟ್ ಕೊಹ್ಲಿ, ರಾಹುಲ್‌ಗೆ ವಿಶ್ರಾಂತಿ ನೀಡಿ ತಪ್ಪು ಮಾಡಿದಿರಿ ಎಂದ ಮಾಜಿ ಆಟಗಾರ

ಇಂಡಿಯಾ ಸ್ಕ್ವಾಡ್: ಸಬ್ಬಿನೇನಿ ಮೇಘನಾ, ಸ್ಮೃತಿ ಮಂಧಾನ (ನಾಯಕಿ), ರಿಚಾ ಘೋಷ್ (ವಿಕೆಟ್ ಕೀಪರ್), ಕಿರಣ್ ನವಗಿರೆ, ಜೆಮಿಮಾ ರಾಡ್ರಿಗಸ್, ದಯಾಲನ್ ಹೇಮಲತಾ, ಪೂಜಾ ವಸ್ತ್ರಾಕರ್, ಸ್ನೇಹ ರಾಣಾ, ದೀಪ್ತಿ ಶರ್ಮಾ, ರೇಣುಕಾ ಸಿಂಗ್, ರಾಜೇಶ್ವರಿ ಗಾಯಕ್ವಾಡ್
ಬೆಂಚ್: ಶಫಾಲಿ ವರ್ಮಾ, ಹರ್ಮನ್‌ಪ್ರೀತ್ ಕೌರ್, ರಾಧಾ ಯಾದವ್, ಮೇಘನಾ ಸಿಂಗ್

ಯುಎಇ ಸ್ಕ್ವಾಡ್: ತೀರ್ಥ ಸತೀಶ್ (ವಿಕೆಟ್ ಕೀಪರ್), ಇಶಾ ರೋಹಿತ್ ಓಜಾ, ಕವಿಶಾ ಎಗೋಡಗೆ, ನತಾಶಾ ಚೆರಿಯತ್, ಛಾಯಾ ಮುಘಲ್ (ನಾಯಕಿ), ಖುಷಿ ಶರ್ಮಾ, ಪ್ರಿಯಾಂಜಲಿ ಜೈನ್, ಸಮೀರ ಧರಣಿಧರಕ, ವೈಷ್ಣವೆ ಮಹೇಶ್, ಮಹಿಕಾ ಗೌರ್, ಸುರಕ್ಷಾ ಕೊಟ್ಟೆ
ಬೆಂಚ್: ಸಿಯಾ ಗೋಖಲೆ, ಇಂಧುಜಾ ನಂದಕುಮಾರ್, ರಿಷಿತಾ ರಜಿತ್, ಲಾವಣ್ಯ ಕೇನಿ

Story first published: Tuesday, October 4, 2022, 19:38 [IST]
Other articles published on Oct 4, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X