ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಹಾಂಕಾಂಗ್ ವಿರುದ್ಧ ಭರ್ಜರಿಯಾಗಿ ಗೆದ್ದ ಪಾಕಿಸ್ತಾನ: 8,2,0,6,1,4,3,3,0,1,0 ಇದು ಹಾಂಕಾಂಗ್ ಸ್ಕೋರ್

Pakistan vs Hongkong

ಹಾಂಕಾಂಗ್ ವಿರುದ್ಧ ಗೆಲ್ಲಲೇಬೇಕಾದ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಭರ್ಜರಿಯಾಗಿ ಪಂದ್ಯವನ್ನ ಗೆದ್ದು ಬೀಗಿದೆ. 194 ರನ್ ಟಾರ್ಗೆಟ್ ಬೆನ್ನತ್ತಿದ ಹಾಂಕಾಂಗ್ ತಂಡವು ಪಾಕಿಸ್ತಾನದ ಬೌಲಿಂಗ್‌ ದಾಳಿಗೆ ಅಕ್ಷರಶಃ ತತ್ತರಿಸಿ ಹೋಗಿದ್ದಲ್ಲದೆ, ಕೇವಲ 38ರನ್‌ಗಳಿಗೆ ಆಲೌಟ್‌ ಆಗಿ ಹೋಗಿದೆ.

ಪಾಕಿಸ್ತಾನದ ಬೌಲಿಂಗ್ ದಾಳಿಗೆ ಎಷ್ಟರ ಮಟ್ಟಿಗೆ ಇತ್ತು ಎಂಬುದಕ್ಕೆ ಸಾಕ್ಷಿ ಹಾಂಕಾಂಗ್‌ ತಂಡದ ಹನ್ನೊಂದು ಆಟಗಾರರ ಸ್ಕೋರ್‌. ಟೆಲಿಫೋನ್ ನಂಬರ್‌ನಂತೆ ಸಿಂಗಲ್ ಡಿಜಿಟ್‌ಗೆ ಔಟಾದ ಹಾಂಕಾಂಗ್ ಆಟಗಾರರ ಸ್ಕೋರ್ ಹೀಗಿದೆ. 8,2,0,6,1,4,3,3,0,1,0 ಇದು ಹಾಂಕಾಂಗ್‌ ಹನ್ನೊಂದು ಆಟಗಾರರು ಗಳಿಸಿದ ಸ್ಕೋರ್ ಆಗಿದ್ದು ಟಿ20 ಕ್ರಿಕೆಟ್ ಇತಿಹಾಸದಲ್ಲಿ ಹಾಂಕಾಂಗ್ ಅತ್ಯಂತ ಹೀನಾಯ ಸೋಲನ್ನ ಅನುಭವಿಸಿದೆ.

ಇನ್ನು ಪಾಕಿಸ್ತಾನ ತಂಡವು ಚುಟುಕು ಕ್ರಿಕೆಟ್ ಇತಿಹಾಸದಲ್ಲಿ ರನ್‌ಗಳ ಆಧಾರದಲ್ಲಿ ಇದು ಬೃಹತ್ ಜಯವಾಗಿದ್ದು, ಬರೋಬ್ಬರಿ 155 ರನ್‌ಗಳಿಂದ ಪಂದ್ಯವನ್ನ ಜಯಿಸಿದೆ. ಇದು ಯಾವುದೇ ಪೂರ್ಣ ಸದಸ್ಯತ್ವ ಹೊಂದಿರುವ ಕ್ರಿಕೆಟ್‌ ರಾಷ್ಟ್ರದ ಎರಡನೇ ಬೃಹತ್ ಗೆಲುವಾಗಿದೆ. ಇದಕ್ಕೂ ಮುನ್ನ ಶ್ರೀಲಂಕಾ 2007ರಲ್ಲಿ ಕೀನ್ಯಾ ವಿರುದ್ಧ 172ರನ್‌ಗಳಿಂದ ಗೆಲುವು ಸಾಧಿಸಿತು.

ಹಾಂಕಾಂಗ್ ವಿರುದ್ಧ ಗೆಲ್ಲುವ ಮೂಲಕ ಪಾಕಿಸ್ತಾನ ಗ್ರೂಪ್ ಎನಲ್ಲಿ ಸೂಪರ್ 4 ತಲುಪಿದ ಎರಡನೇ ತಂಡವಾಗಿದೆ. ಪರಿಣಾಮ ಭಾನುವಾರ (ಸೆ.4) ಭಾರತ-ಪಾಕಿಸ್ತಾನ ಮತ್ತೊಂದು ರೋಚಕ ಕಾದಾಟವನ್ನ ಅಭಿಮಾನಿಗಳು ವೀಕ್ಷಿಸುವ ಅವಕಾಶ ಲಭಿಸಿದೆ. ಇದಕ್ಕೂ ಮುನ್ನ ಹಾಂಕಾಂಗ್ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಆದ ದಾಖಲೆಗಳೇನು ಎಂಬುದನ್ನ ಈ ಕೆಳಗೆ ಕಾಣಬಹುದು.

ಪಾಕಿಸ್ತಾನ ವಿರುದ್ಧ ಕಡಿಮೆ T20 ಸ್ಕೋರ್‌ ದಾಖಲಿಸಿದ ರಾಷ್ಟ್ರಗಳು
38 ಹಾಂಗ್ ಕಾಂಗ್ (ಶಾರ್ಜಾ 2022*)
60 ವೆಸ್ಟ್ ಇಂಡೀಸ್ (ಕರಾಚಿ 2018)
80 ನ್ಯೂಜಿಲೆಂಡ್ (ಕ್ರೈಸ್ಟ್‌ಚರ್ಚ್ 2010)
82 ಸ್ಕಾಟ್ಲೆಂಡ್ (ಎಡಿನ್ಬರ್ಗ್ 2018)

ಹಾಂಕಾಂಗ್‌ನ ಕಡಿಮೆ ಟಿ20 ಸ್ಕೋರ್‌ಗಳು
38 vs ಪಾಕ್ ಶಾರ್ಜಾ 2022 *
69 vs ನೇಪಾಳ ಚಟ್ಟೋಗ್ರಾಮ್ 2014
87/9 vs ಉಗಾಂಡಾ ಬುಲವಾಯೊ 2022
87 vs ಓಮನ್ ಅಬುಧಾಬಿ 2017

T20I ಗಳಲ್ಲಿ ರನ್‌ಗಳ ಅಂತರದ ಬಹುದೊಡ್ಡ ಗೆಲುವು (ಪೂರ್ಣ ಸದಸ್ಯರು)
172 ಶ್ರೀಲಂಕಾ vs ಕೀನ್ಯಾ (ಜೋಹಾನ್ಸ್‌ಬರ್ಗ್ 2007)
155 ಪಾಕ್ vs ಹಾಂಕಾಂಗ್ (ಶಾರ್ಜಾ 2022 *)
143 ಇಂಡಿ vs ಐರ್ಲೆಂಡ್ (ಡಬ್ಲಿನ್ 2018)
143 ಪಾಕ್ vs ವೆಸ್ಟ್‌ ಇಂಡೀಸ್‌ (ಕರಾಚಿ 2018)
137 ಇಂಗ್ಲೆಂಡ್ vs ವೆಸ್ಟ್‌ಇಂಡೀಸ್ (ಬಾಸ್ಸೆಟೆರೆ 2019)

Story first published: Saturday, September 3, 2022, 0:05 [IST]
Other articles published on Sep 3, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X