ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಾನು ಚೆನ್ನಾಗೇ ಬ್ಯಾಟಿಂಗ್ ಮಾಡ್ತಿದ್ದೆ, ಆದ್ರೆ ರನ್ ಗಳೇ ಬರುತ್ತಿರಲಿಲ್ಲ: ಧವನ್

Asia Cup: I was batting well but wasnt getting runs: Dhawan

ದುಬೈ, ಸೆಪ್ಟೆಂಬರ್ 19: ಹಾಕಾಂಗ್ ಎದುರಿನ ಏಷ್ಯಾಕಪ್ ಮೊದಲ ಪಂದ್ಯಕ್ಕೂ ಮೊದಲು (ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ) ಬ್ಯಾಟಿಂಗ್ ಮಾಡಿದರೂ ಸರಿಯಾದ ರನ್ ಗಳೇ ಬರುತ್ತಿರಲಿಲ್ಲ. ನಾನು ಚೆನ್ನಾಗೇ ಬ್ಯಾಟಿಂಗ್ ಮಾಡುತ್ತಿದ್ದೆ. ಆದ್ರೆ ಬ್ಯಾಟಿಂಗ್ ಗೆ ತಕ್ಕಂತೆ ರನ್ ಗಳೇ ಯಾಕೋ ಬರುತ್ತಿರಲಿಲ್ಲ ಎಂದು ಭಾರತದ ಬ್ಯಾಟ್ಸ್ಮನ್ ಶಿಖರ್ ಧವನ್ ಹೇಳಿದ್ದಾರೆ.

ಪಾಕಿಸ್ತಾನ ವಿರುದ್ಧ ಭಾರತ ಹಣಾಹಣಿ, ತಂಡಗಳ ಬಲಾ-ಬಲ ಹೇಗಿದೆ?ಪಾಕಿಸ್ತಾನ ವಿರುದ್ಧ ಭಾರತ ಹಣಾಹಣಿ, ತಂಡಗಳ ಬಲಾ-ಬಲ ಹೇಗಿದೆ?

ಮಂಗಳವಾರ (ಸೆಪ್ಟೆಂಬರ್ 18) ನಡೆದ ಏಷ್ಯಾ ಕಪ್ 2018ರ ಭಾರತ ಮತ್ತು ಹಾಂಕಾಂಗ್ ಪಂದ್ಯದಲ್ಲಿ ಧವನ್ 127ರನ್ ಸಿಡಿಸಿದ್ದರು. ಆರಂಭಿಕ ಆಟಗಾರ ಧವನ್ ಶತಕ ಮತ್ತು ಅಂಬಾಟಿ ರಾಯುಡು ಅರ್ಧ ಶತಕ (60) ನೆರವಿನಿಂದ ಭಾರತ ಹೊಸ ತಂಡ ಹಾಂಕಾಂಗ್ ಎದುರು 26 ರನ್ ಜಯ ಸಾಧಿಸಿತ್ತು. ಆದರೆ ಈ ಗೆಲುವಿಗೋಸ್ಕರ ಭಾರತ ಪರದಾಡಿದ್ದು ಕಂಡುಬಂದಿತ್ತು.

ಪಂದ್ಯದ ಬಗ್ಗೆ ಮಾತನಾಡುತ್ತ, 'ರನ್ ಬಾರದಿದ್ದ ಮಾತ್ರಕ್ಕೆ ಫಾರ್ಮ್ ಕಳೆದುಕೊಂಡಿದ್ದೇನೆ ಎಂದಲ್ಲ. ಹಿಂದಿನ ಪಂದ್ಯಗಳಲ್ಲೂ ನಾನು ಚೆನ್ನಾಗೇ ಬ್ಯಾಟಿಂಗ್ ಮಾಡಿದ್ದೆ. ಆದರೆ ಯಾಕೋ ಸರಿಯಾದ ರನ್ ಗಳಿಸಲೇ ಸಾಧ್ಯವಾಗಲಿಲ್ಲ' ಎಂದು ಹಾಂಕಾಂಗ್ ಎದುರು 14ನೇ ಏಕದಿನ ಶತಕ ಸಿಡಿಸಿದ ಶಿಖರ್ ಅಭಿಪ್ರಾಯ ಹಂಚಿಕೊಂಡರು.

'ಫಾರ್ಮ್ ನಲ್ಲಿದ್ದರೂ ಕೆಲವೊಮ್ಮ ರನ್ ಗಳಿಸೋದು ಕಷ್ಟ ಅನ್ನಿಸೋದಿದೆ. ಫಾರ್ಮ್ ನಲ್ಲಿದ್ದೂ ಫಾರ್ಮನ್ನು ರನ್ನಿಗೆ ಪರಿವರ್ತಿಸುವಲ್ಲಿ ಎಡವುತ್ತಿರುತ್ತೇವೆ. ಆಡಬೇಕೆಂದು ಎಷ್ಟು ಪ್ರಯತ್ನಿಸಿದರೂ ಕೆಲವು ಸಂದರ್ಭ ರನ್ ಗಳಿಸಲು ಸಾಧ್ಯವೇ ಆಗೋಲ್ಲ. ಹಿಂದಿನ ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲೂ ಹೀಗೇ ಆಯಿತು' ಎಂದು ಧವನ್ ಪ್ರತಿಕ್ರಿಯಿಸಿದರು. ಹಿಂದಿನ ಇಂಗ್ಲೆಂಡ್-ಭಾರತ ಟೆಸ್ಟ್ ಸರಣಿಯಲ್ಲಿ 8 ಇನ್ನಿಂಗ್ಸ್ ಆಡಿದ್ದ ಧವನ್ ಒಂದು ಅರ್ಥ ಶತಕವನ್ನೂ ಬಾರಿಸಿರಲಿಲ್ಲ.

Story first published: Wednesday, September 19, 2018, 17:03 [IST]
Other articles published on Sep 19, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X