ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

100ನೇ ಶತಕ ಬಾರಿಸಿಯೂ ಸಚಿನ್ ಟೀಕೆಗೆ ಗುರಿಯಾದ ಭಾವುಕ ದಿನವದು!

Asia Cup: Sachin gets 100th hundred but receives a lukewarm welcome

ನವದೆಹಲಿ, ಸೆಪ್ಟೆಂಬರ್ 6: ಭಾರತದ ಉಳಿದೆಲ್ಲ ಕ್ರಿಕೆಟರ್ಸ್ ಸಾಲಿನಲ್ಲಿ ಸಚಿನ್ ತೆಂಡೂಲ್ಕರ್ ಕೊಂಚ ಮುಂಚೂಣಿಯಲ್ಲಿ ನಿಲ್ಲುತ್ತಾರೆ. 16ರ ಹರೆಯದ ಬಾಲಕನಾಗಿದ್ದ ಸಚಿನ್ 1989ರಲ್ಲಿ ಪಾಕಿಸ್ತಾನದ ವಿರುದ್ಧ ಮೊದಲ ಬಾರಿಗೆ ಮೈದಾನಕ್ಕೆ ಇಳಿದಿದ್ದರಿಂದ ಹಿಡಿದು 2013ರಲ್ಲಿ ನಿವೃತ್ತಿ ಪಡೆದುಕೊಳ್ಳುವವರೆಗೂ ತೆಂಡೂಲ್ಕರ್ ವಿಶೇಷ ಗೌರವಕ್ಕೆ ಪಾತ್ರರಾಗಿದ್ದರು. ಈಗಲೂ ಸಚಿನ್ ಗೆ ಕ್ರಿಕೆಟ್ ಲೋಕದಲ್ಲಿ ತನ್ನದೇ ಆದ ಗೌರವಿದೆ.

ಏಷ್ಯಾಕಪ್ 2018 ಕದನ ಮುನ್ನೋಟ, ಎಲ್ಲಾ ತಂಡಗಳ ವಿವರಏಷ್ಯಾಕಪ್ 2018 ಕದನ ಮುನ್ನೋಟ, ಎಲ್ಲಾ ತಂಡಗಳ ವಿವರ

ಕ್ರಿಕೆಟ್ ರಂಗದಲ್ಲಿ ಸುಮಾರು 24 ವರ್ಷಗಳ ಕಾಲ ವೃತ್ತಿಬದುಕು ಕಂಡಿರುವ ತೆಂಡೂಲ್ಕರ್ ಇಂದಿಗೂ ಕ್ರಿಕೆಟ್ ಸಾಧನೆಗಾಗಿ ಕ್ರೀಡಾಭಿಮಾನಿಗಳ ಪ್ರೀತಿಗೆ ಪಾತ್ರರೆ. ಅನೇಕ ದಾಖಲೆಗಳನ್ನು ತನ್ನ ಹೆಸರಲ್ಲಿ ಹೊಂದಿರುವ ಸಚಿನ್ ಅನೇಕ ಸಾರಿ ಟೀಕೆಗೆ ಗುರಿಯಾಗಿದ್ದೂ ಇದೆ. ಶತಕ-ಸೋಲು, ನರ್ವಸ್ 90 ಇಂಥವಕ್ಕೆ ಹಚ್ಚು ಟೀಕಿಸಲ್ಪಟ್ಟವರು ಸಚಿನ್.

ನಮ್ಮದೇ ದೇಶದ ಪ್ರತಿಭಾವಂತ ಕ್ರಿಕೆಟ್ ಆಟಗಾರನೊಬ್ಬ ವಿಶ್ವ ದಾಖಲೆಯ 100ನೇ ಶತಕ ಬಾರಿಸಿದರೂ ತವರಿಗೆ ಆಗಮಿಸಿದಾಗ ನಿರುತ್ಸಾಹದ ಸ್ವಾಗತ ದೊರೆತ ಭಾವುಕ ಕ್ಷಣವೊಂದಿದೆ. ಆಕ್ಷಣವನ್ನು ಮೆಲುಕು ಹಾಕುತ್ತ ಏಷ್ಯನ್ ಕಪ್ ಕ್ರಿಕೆಟ್ ಇತಿಹಾಸದ ಕಡೆಗೆ ಪುಟ್ಟದೊಂದು ರೌಂಡು ಹೊಡೆಯೋಣ. ಸಚಿನ್ ಬಗೆಗಿನ ಪ್ರೀತಿ-ಗೌರವದ ಜೊತೆ ಜೊತೆಯಲ್ಲೇ ಏಷ್ಯಕಪ್ ಪಂದ್ಯವೊಂದರ ಅಪರೂಪದ ಕ್ಷಣದ ಮೆಲುಕು ಇದಷ್ಟೆ.. (ಮೇಲಿನ ವಿಡಿಯೋ ಕೃಪೆ: ಸ್ಟಾರ್ ಸ್ಪೋರ್ಟ್ಸ್)

100ನೇ ಶತಕದ ಹುಡುಕಾಟ

100ನೇ ಶತಕದ ಹುಡುಕಾಟ

ಶತಕದ ಶತಕ ಬಾರಿಸಲು ಸಚಿನ್ ದೀರ್ಘಕಾಲ ಶ್ರಮಿಸಿದ್ದರು. ಇಂಥದ್ದೊಂದು ಅಪೂರ್ವ ಸಾಧನೆ ಬರೆಯುವುದಕ್ಕಾಗಿ ಸಚಿನ್ ಒಂದೂವರೆ ವರ್ಷಗಳ ಕಾಲ ಸುಮಾರು 33 ಇನ್ನಿಂಗ್ಸ್ ಗಾಗಿ ಮುಂದು ನೋಡಬೇಕಾಗಿ ಬಂದಿತ್ತು. ಅಂತಿಮವಾಗಿ ಸಚಿನ್ ಶತಕ ಸಾಧನೆಯಲ್ಲಿ 99 ರಿಂದ 100ಕ್ಕೆ ತಲುಪಿದ್ದರು. ಅದು 2012ರಲ್ಲಿ! ಅವತ್ತು ಸಚಿನ್ ಶತಕದ ಶತಕ ಪೂರೈಸಿ ಬಳಿಕ ಹೆಲ್ಮೆಟ್ ಗಂಟಿದ ಅಶೋಕ ಚಕ್ರವನ್ನು ಹೆಮ್ಮೆಯಿಂದ ತಟ್ಟಿ 'ನಾನಿದನ್ನು ಸಾಧಿಸಿದ್ದು ದೇಶಕ್ಕಾಗಿ' ಎಂದು ಸಾರಿದ್ದರು. ಆದರೂ ಕ್ರಿಕೆಟ್ ಅಭಿಮಾನಿಗಳು ಬೇಸರಕ್ಕೀಡಾಗುವಂತಾಗಿದ್ದ ದುರಾದೃಷ್ಟಕರ ದಿನ ಅದಾಗಿತ್ತು.

ಭಾವುಕ ದಿನವದು!

ಭಾವುಕ ದಿನವದು!

ಅದು 2012ರ ಮಾರ್ಚ್ 17ನೇ ತಾರೀಖು. ಪಾಕಿಸ್ತಾನದ ಮೀರ್ಪುರ್ ನಲ್ಲಿ ನಡೆದಿದ್ದ ಏಷ್ಯ್ ಕಪ್ ಪಂದ್ಯದಲ್ಲಿ ಬಾಂಗ್ಲಾ ದೇಶದೆದುರು ಸಚಿನ್ 100 ಶತಕದೊಂದಿಗೆ ವಿಶ್ವ ದಾಖಲೆ ಬರೆದಿದ್ದರು. ದುರಾದೃಷ್ಟವೆಂದರೆ ಸಚಿನ್ ಭಾರತಕ್ಕೆ ಆಗಮಿಸಿದಾಗ ಅವರನ್ನು ನಿರುತ್ಸಾಹದಿಂದ ಬರ ಮಾಡಿಕೊಳ್ಳಲಾಯಿತು. ಯಾಕೆಂದರೆ ಭಾರತ ತಂಡ ಬಾಂಗ್ಲದೆದುರು 5 ವಿಕೆಟ್ ಸೋಲನುಭವಿಸಿತ್ತು!

20 ರನ್ನಿಗೆ 36 ಎಸೆತ

20 ರನ್ನಿಗೆ 36 ಎಸೆತ

ಮೀರ್ಪುರ್ ನಲ್ಲಿ ಏಷ್ಯಾ ಕಪ್ ಪಂದ್ಯಕ್ಕಾಗಿ ಮೈದಾನಕ್ಕಿಳಿಯುವಾಗಲೇ ಸಚಿನ್ ಅವರ ತಲೆಯಲ್ಲಿ 100ನೇ ಶತಕದ ವಿಚಾರ ಇತ್ತೋ ಏನೊ. ಪಂದ್ಯದಲ್ಲಿ 102 ಎಸೆತಗಳನ್ನು ಎದುರಿಸಿದ ಸಚಿನ್ 80ರನ್ ಕಲೆ ಹಾಕಿದ್ದರು. ಆದರೆ ಇನ್ನುಳಿದ 20 ರನ್ ಗಾಗಿ ತೆಂಡೂಲ್ಕರ್ ಬರೋಬ್ಬರಿ 36 ಎಸೆತಗಳನ್ನು ವ್ಯಯಿಸಿದ್ದರು.

ಏಕದಿನದ 49ನೇ ಶತಕ

ಏಕದಿನದ 49ನೇ ಶತಕ

ಬಾಂಗ್ಲಾ ಎದುರಿನ ಈ ನಾಲ್ಕನೇ ಏಷ್ಯಕಪ್ ಏಕದಿನ ಪಂದ್ಯದಲ್ಲಿ ಸಚಿನ್ 114 ರನ್ ಮೂಲಕ ಗಳಿಸಿದ ಶತಕ ಏಕದಿನ ಕ್ರಿಕೆಟ್ ನಲ್ಲಿ 49ನೇ ಶತಕವಾಗಿಯೂ ಗುರುತಿಸಿಕೊಂಡಿದೆ. ಸಚಿನ್ ಒಂದುವೇಳೆ ಶತಕ ಬಾರಿಸದೆ ಭಾರತ ಸೋತಿದ್ದರೂ ದೇಶದ ಆಟಗಾರನೊಬ್ಬನ ಪರ ಆಗಬೇಕಿದ್ದ ವಿಶ್ವ ದಾಖಲೆ ಮುಂದೂಡಲ್ಪಡುತ್ತಿತ್ತು. ಆದರೆ ಸಚಿನ್ ತಂಡದ ಪರ ಯೋಚಿಸದೆ ವೈಯಕ್ತಿಕ ಸಾಧನೆ ನೆಲೆಯಲ್ಲಿ ನಿಂತಿದ್ದು ಕ್ರೀಡಾಭಿಮಾನಿಗಳ ಬೇಸರಕ್ಕೆ ಕಾರಣವಾಗಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡುವಾಗ ವೈಯಕ್ತಿಕ ಸಾಧನೆಗಿಂತ ದೇಸಿ ತಂಡದ ಗೆಲುವೇ ಮುಖ್ಯ ಅಲ್ಲವೆ?

Story first published: Wednesday, September 26, 2018, 22:06 [IST]
Other articles published on Sep 26, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X