ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

AUS vs SL: ಮೊದಲ ಟಿ20 ಪಂದ್ಯದಲ್ಲಿ ಈ ಮೈಲಿಗಲ್ಲುಗಳತ್ತ ಕಣ್ಣಿಟ್ಟಿದ್ದಾರೆ ವಾರ್ನರ್‌, ಮ್ಯಾಕ್ಸ್‌ವೆಲ್

AUS vs SL 1st T20I Stats preview: Players records and approaching milestones

ಇಂಡಿಯನ್ ಪ್ರೀಮಿಯರ್ ಲೀಗ್ ಹದಿನೈದನೇ ಆವೃತ್ತಿ ಮುಕ್ತಾಯವಾದ ಬೆನ್ನಲ್ಲೇ ಅಂತರರಾಷ್ಟ್ರೀಯ ಸರಣಿಗಳು ಆರಂಭವಾಗಿದ್ದು, ಆಸ್ಟ್ರೇಲಿಯಾ ಶ್ರೀಲಂಕಾ ಪ್ರವಾಸವನ್ನು ಕೈಗೊಂಡಿದೆ. ಇತ್ತಂಡಗಳು 3 ಟಿ ಟ್ವೆಂಟಿ ಪಂದ್ಯಗಳ ಟಿ ಟ್ವೆಂಟಿ ಸರಣಿ, 5 ಪಂದ್ಯಗಳ ಏಕದಿನ ಸರಣಿ ಮತ್ತು 2 ಪಂದ್ಯಗಳ ಟೆಸ್ಟ್ ಸರಣಿಗಳಲ್ಲಿ ಮುಖಾಮುಖಿಯಾಗಲಿದ್ದು, ಮೊದಲಿಗೆ ಟಿ ಟ್ವೆಂಟಿ ಸರಣಿ ನಡೆಯಲಿದೆ.

IPL 2022: ಕಳಪೆ ಆಟ ಆಡಿದ್ರೂ ಈ ಮೂವರನ್ನು ಐಪಿಎಲ್ 2023ಕ್ಕೆ ತಂಡದಿಂದ ಕೈಬಿಡುವುದಿಲ್ಲ ಆರ್‌ಸಿಬಿ!IPL 2022: ಕಳಪೆ ಆಟ ಆಡಿದ್ರೂ ಈ ಮೂವರನ್ನು ಐಪಿಎಲ್ 2023ಕ್ಕೆ ತಂಡದಿಂದ ಕೈಬಿಡುವುದಿಲ್ಲ ಆರ್‌ಸಿಬಿ!

ಜೂನ್ 7ರ ಮಂಗಳವಾರದಿಂದ ಈ ಟಿ ಟ್ವೆಂಟಿ ಸರಣಿ ಆರಂಭವಾಗುತ್ತಿದ್ದು, ಮೊದಲ ಪಂದ್ಯ ಕೊಲಂಬೋದ ಆರ್ ಪ್ರೇಮದಾಸ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಇನ್ನು ಈ ಪಂದ್ಯಕ್ಕೆ ಆಸ್ಟ್ರೇಲಿಯ ಈಗಾಗಲೇ ಆಡುವ ಬಳಗವನ್ನು ಪ್ರಕಟಿಸಿದ್ದು, ಆತಿಥೇಯ ಶ್ರೀಲಂಕಾ ಪಂದ್ಯದ ದಿನ ಆಡುವ ಬಳಗವನ್ನು ಪ್ರಕಟಿಸಲಿದೆ.

ಇನ್ನು ಇದೇ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಆರಂಭವಾಗುತ್ತಿದ್ದು, ಎರಡೂ ತಂಡಗಳು ಸಹ ಟಿ ಟ್ವೆಂಟಿ ಸರಣಿಗಳಲ್ಲಿ ಉತ್ತಮ ಪ್ರದರ್ಶನವನ್ನು ನೀಡಿ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗಾಗಿ ಸಿದ್ಧತೆ ನಡೆಸಿಕೊಳ್ಳುವ ಯೋಜನೆಯಲ್ಲಿವೆ.

ಈ ಟಿ ಟ್ವೆಂಟಿ ಪಂದ್ಯದ ಮೂಲಕ ಎರಡೂ ತಂಡಗಳ ಕೆಲ ಆಟಗಾರರು ವಿವಿಧ ಮೈಲಿಗಲ್ಲುಗಳನ್ನು ಮುಟ್ಟುವ ಸಾಧ್ಯತೆಗಳಿದ್ದು, ಅವುಗಳ ಕುರಿತಾದ ಪಟ್ಟಿ ಕೆಳಕಂಡಂತಿದೆ

• ಆಸ್ಟ್ರೇಲಿಯದ ವೇಗಿ ಜೋಶ್ ಹೇಜಲ್ ವುಡ್ ಎಲ್ಲಾ ಕ್ರಿಕೆಟ್ ಮಾದರಿಯೂ ಸೇರಿದಂತೆ 348 ವಿಕೆಟ್ ಕಬಳಿಸಿದ್ದು, ಈ ಪಂದ್ಯದಲ್ಲಿ 2 ವಿಕೆಟ್ ಪಡೆದರೆ 350 ವಿಕೆಟ್ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.

• ಮಿಚೆಲ್ ಮಾರ್ಷ್ ಈ ಪಂದ್ಯದಲ್ಲಿ 7 ಸಿಕ್ಸರ್ ಬಾರಿಸಿದರೆ 100 ಅಂತರರಾಷ್ಟ್ರೀಯ ಸಿಕ್ಸರ್ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.

ಅತಿಹೆಚ್ಚು ಟೆಸ್ಟ್ ರನ್ ಬಾರಿಸಿರುವ ನಿವೃತ್ತಿ ಹೊಂದದ ಆಟಗಾರರ ಟಾಪ್ 10 ಪಟ್ಟಿ; ಕೊಹ್ಲಿ ಅಲ್ಲ ನಂಬರ್ 1!ಅತಿಹೆಚ್ಚು ಟೆಸ್ಟ್ ರನ್ ಬಾರಿಸಿರುವ ನಿವೃತ್ತಿ ಹೊಂದದ ಆಟಗಾರರ ಟಾಪ್ 10 ಪಟ್ಟಿ; ಕೊಹ್ಲಿ ಅಲ್ಲ ನಂಬರ್ 1!

• ದಸನ್ ಶನಕ ಈ ಪಂದ್ಯದಲ್ಲಿ 53 ರನ್ ಬಾರಿಸಿದರೆ 1000 ಅಂತರರಾಷ್ಟ್ರೀಯ ಟಿ ಟ್ವೆಂಟಿ ರನ್ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.

• ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್ 1982 ಅಂತರರಾಷ್ಟ್ರೀಯ ಟಿ ಟ್ವೆಂಟಿ ರನ್ ದಾಖಲಿಸಿದ್ದು, ಈ ಪಂದ್ಯದಲ್ಲಿ 18 ರನ್ ಬಾರಿಸಿದರೆ 2000 ಅಂತರರಾಷ್ಟ್ರೀಯ ಟಿ ಟ್ವೆಂಟಿ ರನ್ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.

• ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ 99 ಅಂತರರಾಷ್ಟ್ರೀಯ ಟಿ ಟ್ವೆಂಟಿ ಸಿಕ್ಸರ್ ಬಾರಿಸಿದ್ದು, ಈ ಪಂದ್ಯದಲ್ಲಿ ಇನ್ನೊಂದು ಸಿಕ್ಸರ್ ಬಾರಿಸಿದರೆ 100 ಅಂತರರಾಷ್ಟ್ರೀಯ ಟಿ ಟ್ವೆಂಟಿ ಸಿಕ್ಸರ್ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.

• ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್ 97 ಅಂತರರಾಷ್ಟ್ರೀಯ ಟಿ ಟ್ವೆಂಟಿ ಸಿಕ್ಸರ್ ದಾಖಲಿಸಿದ್ದು, ಈ ಪಂದ್ಯದಲ್ಲಿ 3 ಸಿಕ್ಸರ್ ಬಾರಿಸಿದರೆ 100 ಅಂತರರಾಷ್ಟ್ರೀಯ ಟಿ ಟ್ವೆಂಟಿ ಸಿಕ್ಸರ್ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.

ಪಂದ್ಯ ಆರಂಭವಾಗುವ ದಿನಕ್ಕೂ ಮುನ್ನವೇ ಆಸ್ಟ್ರೇಲಿಯಾ ಪ್ರಕಟಿಸಿರುವ ಆಡುವ ಬಳಗ ಹೀಗಿದೆ: ಆರನ್ ಫಿಂಚ್ (ನಾಯಕ), ಡೇವಿಡ್ ವಾರ್ನರ್, ಮಿಚ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಸ್ಟೀವ್ ಸ್ಮಿತ್, ಮಾರ್ಕಸ್ ಸ್ಟೊಯಿನಿಸ್, ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ಆಷ್ಟನ್ ಅಗರ್, ಮಿಚೆಲ್ ಸ್ಟಾರ್ಕ್, ಕೇನ್ ರಿಚರ್ಡ್ಸನ್, ಜೋಶ್ ಹ್ಯಾಜಲ್‌ವುಡ್

ಐಪಿಎಲ್: 20ನೇ ಓವರ್‌ಲ್ಲಿ ಅತಿಹೆಚ್ಚು ಸಿಕ್ಸರ್ ಬಾರಿಸಿದ ಡೇಂಜರಸ್ ಆಟಗಾರರ ಟಾಪ್ 5 ಪಟ್ಟಿಐಪಿಎಲ್: 20ನೇ ಓವರ್‌ಲ್ಲಿ ಅತಿಹೆಚ್ಚು ಸಿಕ್ಸರ್ ಬಾರಿಸಿದ ಡೇಂಜರಸ್ ಆಟಗಾರರ ಟಾಪ್ 5 ಪಟ್ಟಿ

ಪಂದ್ಯದ ಮಾಹಿತಿ

South Africaಗೆ ನಡುಕ ಹುಟ್ಟಿಸಲು Dinesh Karthik ಹೇಗೆ ಪ್ರಾಕ್ಟೀಸ್ ಮಾಡ್ತಿದ್ದಾರೆ ನೋಡಿ | OneIndia Kannada

ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ತಂಡಗಳ ನಡುವಿನ ಮೊದಲನೇ ಟಿ ಟ್ವೆಂಟಿ ಪಂದ್ಯ ಜೂನ್ 7ರ ಮಂಗಳವಾರದಂದು ಕೊಲಂಬೋದ ಆರ್ ಪ್ರೇಮದಾಸ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಭಾರತೀಯ ಕಾಲಮಾನದ ಪ್ರಕಾರ ಸಂಜೆ 7 ಗಂಟೆಗೆ ಈ ಪಂದ್ಯ ಆರಂಭವಾಗಲಿದೆ. ಈ ಪಂದ್ಯ ಮುಕ್ತಾಯವಾದ ಬೆನ್ನಲ್ಲೇ ಜೂನ್ 8ರ ಬುಧವಾರದಂದು ಇದೇ ಕ್ರೀಡಾಂಗಣದಲ್ಲಿ ಇತ್ತಂಡಗಳ ನಡುವಿನ ಎರಡನೆ ಟಿ ಟ್ವೆಂಟಿ ಪಂದ್ಯ ಜರುಗಲಿದೆ ಹಾಗೂ ಜೂನ್ 11ರ ಶನಿವಾರದಂದು ಮೂರನೇ ಟಿ ಟ್ವೆಂಟಿ ಪಂದ್ಯ ಪಲ್ಲೆಕೆಲೆಯಲ್ಲಿ ನಡೆಯಲಿದೆ.

Story first published: Monday, June 6, 2022, 22:00 [IST]
Other articles published on Jun 6, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X