ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ಸರಣಿಯಿಂದ ಆಸ್ಟ್ರೇಲಿಯಾದ ಸ್ಟಾರ್ ವೇಗಿ ಮಿಚೆಲ್ ಸ್ಟಾರ್ಕ್ ಹೊರಕ್ಕೆ

Aussie star Mitchell Starc withdraws from T20 series on compassionate grounds

ಆಸ್ಟ್ರೇಲಿಯಾದ ಸ್ಟಾರ್ ವೇಗಿ ಮಿಚೆಲ್ ಸ್ಟಾರ್ಕ್ ಭಾರತ ವಿರುದ್ಧದ ಉಳಿದ ಟಿ20 ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಸಹಾನುಭೂತಿಯ ಆಧಾರದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮ್ಯಾನೇಜ್‌ಮೆಂಟ್ ತಂಡವನ್ನು ತೊರೆಯಲು ಅವಕಾಶವನ್ನು ನೀಡಿದೆ. ಕೌಟುಂಬಿಕ ಕಾರಣಗಳಿಂದಾಗಿ ಸ್ಟಾರ್ಕ್ ಹೊರಗುಳಿಯಲಿದ್ದಾರೆ.

ಆಸ್ಟ್ರೇಲಿಯಾ ತಂಡದಿಂದ ಮಿಚೆಲ್ ಸ್ಟಾರ್ಕ್ ಹೊರಗುಳಿಯುವ ಬಗ್ಗೆ ಕ್ರಿಕೆಟ್ ಆಸ್ಟ್ರೇಲಿಯಾ ಖಚಿತಪಡಿಸಿದೆ. ತನ್ನ ಕುಟುಂಬ ಸದಸ್ಯರ ಅನಾರೋಗ್ಯದ ಬಗ್ಗೆ ಸ್ಟಾರ್ಕ್ ಕ್ರಿಕೆಟ್ ಆಸ್ಟ್ರೇಲಿಯಾಗೆ ಮಾಹಿತಿ ನೀಡಿದ್ದು ಈ ಆಧಾರದಲ್ಲಿ ಅವರಿಗೆ ಕುಟುಂಬವನ್ನು ಸೇರಿಕೊಳ್ಳಲು ಅವಕಾಶ ನೀಡಲಾಗಿದೆ. ಆದರೆ ಸ್ಟಾರ್ಕ್ ಮತ್ತೆ ಐಆವಾಗ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂಬ ಬಗ್ಗೆ ಖಚಿತ ಮಾಹಿತಿ ನೀಡಿಲ್ಲ.

'ಕನ್ಕಶನ್ ಸಬ್‌ಸ್ಟಿಟ್ಯೂಟ್' ದುರ್ಬಳಕೆ ಮಾಡದಂತೆ ಟೇಲರ್ ಎಚ್ಚರಿಕೆ!'ಕನ್ಕಶನ್ ಸಬ್‌ಸ್ಟಿಟ್ಯೂಟ್' ದುರ್ಬಳಕೆ ಮಾಡದಂತೆ ಟೇಲರ್ ಎಚ್ಚರಿಕೆ!

ಮಿಚೆಲ್ ಸ್ಟಾರ್ಕ್ ಅಲಭ್ಯತೆಯ ಬಗ್ಗೆ ಮಾತನಾಡಿರುವ ಜಸ್ಟಿನ್ ಲ್ಯಾಂಗರ್ "ಕುಟುಂಬಕ್ಕಿಂತ ಈ ವಿಶ್ವದಲ್ಲಿ ಹೆಚ್ಚಿನದ್ದು ಯಾವುದು ಇಲ್ಲ. ಇದರಲ್ಲಿ ಸ್ಟಾರ್ಕ್ ಕೂಡ ಹೊರತಾಗಿಲ್ಲ. ನಾವು ಸ್ಟಾರ್ಕ್‌ಗೆ ಬೇಕಾದ ಸಂಪೂರ್ಣ ಸಮಯವನ್ನು ನೀಡುತ್ತಿದ್ದೇವೆ. ಕುಟುಂಬಕ್ಕೆ ಅನುಕೂಲವಾಗುವ ರೀತಿಯಲ್ಲಿ ಯಾವಾತ ತನಗೆ ತಂಡವನ್ನು ಸೇರಿಕೊಳ್ಳಲು ಸರಿಯಾದ ಸಮಯ ಎಂದು ಸ್ಟಾರ್ಕ್‌ಗೆ ಅನಿಸುತ್ತದೋ ಆಗ ಅವರು ಸೇರಿಕೊಳ್ಳಬಹುದು" ಎಂದು ಹೇಳಿದ್ದಾರೆ.

ಮಿಚೆಲ್ ಸ್ಟಾರ್ಕ್ ಗಾಯಗೊಂಡ ಕಾರಣ ಭಾರತದ ವಿರುದ್ಧದ ಮೊದಲ ಎರಡು ಏಕದಿನ ಪಂದ್ಯಗಳಿಂದ ಹೊರಗುಳಿದಿದ್ದರು. ಕ್ಯಾನ್‌ಬೆರಾದಲ್ಲಿ ನಡೆದಿದ್ದ ಅಂತಿಮ ಏಕದಿನ ಪಂದ್ಯದಲ್ಲಿ ಹಾಗೂ ಟಿ20 ಪಂದ್ಯದಲ್ಲಿ ಆಸಿಸ್ ಪರ ಬೌಲಿಂಗ್ ವಿಭಾಗದ ನೇತೃತ್ವ ವಹಿಸಿಕೊಂಡಿದ್ದರು.

ಭಾರತ vs ಆಸ್ಟ್ರೇಲಿಯಾ: 2 ತಾಣ, 2 ತಂಡಗಳ ಕುತೂಹಲಕಾರಿ ಕದನಭಾರತ vs ಆಸ್ಟ್ರೇಲಿಯಾ: 2 ತಾಣ, 2 ತಂಡಗಳ ಕುತೂಹಲಕಾರಿ ಕದನ

ಆಸ್ಟ್ರೇಲಿಯಾದ ಇನ್ನೋರ್ವ ವೇಗಿ ಪ್ಯಾಟ್ ಕಮ್ಮಿನ್ಸ್ ಈಗಾಗಲೇ ಭಾರತದ ವಿರುದ್ಧದ ಟಿ20 ಸರಣಿಯಿಂದ ವಿಶ್ರಾಂತಿಯನ್ನು ಪಡೆದುಕೊಂಡಿದ್ದಾರೆ. ಈಗ ಸ್ಟಾರ್ಕ್ ಕೂಡ ಹೊರಗುಳಿಯುತ್ತಿರುವುದು ಆಸ್ಟ್ರೇಲಿಯಾ ತಂಡಕ್ಕೆ ಖಮಡಿಯಾ ಹಿನ್ನಡೆಯನ್ನುಂಟು ಮಾಡಲಿದೆ. ಈ ಮಧ್ಯೆ ಆಸ್ಟ್ರೇಲಿಯಾಗೆ ಅನುಭವಿ ಸ್ಪಿನ್ನರ್ ನಥನ್ ಲಿಯಾನ್ ಸೇರಿಕೊಂಡಿದ್ದಾರೆ.

Story first published: Sunday, December 6, 2020, 9:36 [IST]
Other articles published on Dec 6, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X