ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಕಕಾಲಕ್ಕೆ ಟೆಸ್ಟ್, ಟಿ20 ಪ್ರಸ್ತಾಪಕ್ಕೆ ಆಸ್ಟ್ರೇಲಿಯಾ ಕೋಚ್ ಲ್ಯಾಂಗರ್ ವಿರೋಧ

Australia coach Justin Langer opposed to Test series and Twenty20 series clash

ಸಿಡ್ನಿ: 2021ರ ಆರಂಭದಲ್ಲಿ ಏಕಕಾಲಕ್ಕೆ ಟೆಸ್ಟ್ ಸರಣಿ ಮತ್ತು ಟಿ20 ಸರಣಿ ನಡೆಸಲುದ್ದೇಶಿಸಿರುವುದಕ್ಕೆ ತಾನು ವಿರೋಧ ವ್ಯಕ್ತಪಡಿಸಿರುವುದಾಗಿ ಆಸ್ಟ್ರೆಲಿಯಾ ಕ್ರಿಕೆಟ್ ತಂಡದ ಹೆಡ್‌ ಕೋಚ್ ಜಸ್ಟಿನ್ ಲ್ಯಾಂಗರ್ ಹೇಳಿದ್ದಾರೆ. ಕ್ರಿಕೆಟ್ ಆಸ್ಟ್ರೇಲಿಯಾಕ್ಕೆ ಈ ಬಗ್ಗೆ ತಾನು ತಿಳಿಸಿರುವುದಾಗಿ ಲ್ಯಾಂಗರ್ ಹೇಳಿಕೊಂಡಿದ್ದಾರೆ.

ನಿಮ್ಮನ್ನು ಬೆರಗುಗೊಳಿಸಬಲ್ಲ ಐಪಿಎಲ್‌ನ 10 ಸತ್ಯ ಸಂಗತಿಗಳಿವು!ನಿಮ್ಮನ್ನು ಬೆರಗುಗೊಳಿಸಬಲ್ಲ ಐಪಿಎಲ್‌ನ 10 ಸತ್ಯ ಸಂಗತಿಗಳಿವು!

ಫೆಬ್ರವರಿ 22ರಿಂದ ಮಾರ್ಚ್ 7ರ ವರೆಗೆ ಆಸ್ಟ್ರೇಲಿಯಾ ತಂಡ ನ್ಯೂಜಿಲೆಂಡ್ ವಿರುದ್ಧ ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ ಆಡಲಿದೆ. ಇದೇ ಸಮಯಕ್ಕೆ ಟೆಸ್ಟ್ ಸರಣಿಗಾಗಿ ಆಸ್ಟ್ರೇಲಿಯಾ ತಂಡ ದಕ್ಷಿಣ ಆಫ್ರಿಕಾಕ್ಕೆ ಪ್ರವಾಸ ಹೊರಡುವುದರ ಬಗ್ಗೆ ಪ್ರಸ್ತಾವನೆಯಿದೆ. ಈ ಪ್ರಸ್ತಾವನೆಗೆ ಲ್ಯಾಂಗರ್ ವಿರೋಧ ವ್ಯಕ್ತಪಡಿಸಿದ್ದಾರೆ.

'ಕ್ರಿಕೆಟ್ ಆಸ್ಟ್ರೇಲಿಯಾದ ಅಧ್ಯಕ್ಷರಿಗೆ ಈ ವಿಚಾರ ಗೊತ್ತಿದೆ. ಸಿಇಒಗೂ ಈ ಸಂಗತಿ ಸ್ಪಷ್ಟವಾಗಿ ಗೊತ್ತಿದೆ. ಆದರೆ ನನ್ನ ವೈಯಕ್ತಿಕ ಅಭಿಪ್ರಾಯ ಹೇಳೋದಾದ್ರೆ ನನಗಿದು ಖಂಡಿತಾ ಇಷ್ಟವಿಲ್ಲ,' ಎಂದು ಸ್ಥಳೀಯ ರೇಡಿಯೋ ಸ್ಟೇಶನ್ ಸೆನ್ ಜೊತೆ ಮಾತನಾಡಿದ ಲ್ಯಾಂಗರ್ ತಿಳಿಸಿದ್ದಾರೆ.

ಸಾರಾ- ಶುಬ್ಮನ್ ಗಿಲ್ ಮದುವೆ ಆಗೇ ಬಿಟ್ರಾ? ತೆಂಡೂಲ್ಕರ್ ಪುತ್ರಿಯ ವಿಚಾರದಲ್ಲೂ ಗೂಗಲ್ ಪ್ರಮಾದಸಾರಾ- ಶುಬ್ಮನ್ ಗಿಲ್ ಮದುವೆ ಆಗೇ ಬಿಟ್ರಾ? ತೆಂಡೂಲ್ಕರ್ ಪುತ್ರಿಯ ವಿಚಾರದಲ್ಲೂ ಗೂಗಲ್ ಪ್ರಮಾದ

'ಒಂದೇ ಜಾಗದಲ್ಲಿ ಎರಡೆರಡು ಆಸ್ಟ್ರೇಲಿಯಾ ತಂಡಗಳನ್ನು ನೋಡಲು ನಾನು ಯಾವತ್ತಿಗೂ ಇಷ್ಟಪಡಲಾರೆ. ಇದು ನನ್ನ ವೈಯಕ್ತಿಕ ಅಭಿಪ್ರಾಯ. ನಾವು ಒಂದೇ ದೇಶವಲ್ಲವೆ? ನಾವು ಎರಡು ರಾಷ್ಟ್ರಗಳು ಅಲ್ಲವಲ್ಲ? ಹಾಗೇನೆ ನಾವು ಒಂದೇ ಕ್ರೀಡಾಕೂಟ ಆಡಬಯಸುತ್ತೇವೆ,' ಎಂದು ಲ್ಯಾಂಗರ್ ಹೇಳಿದ್ದಾರೆ.

Story first published: Friday, October 16, 2020, 10:16 [IST]
Other articles published on Oct 16, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X