ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ತಂಡಕ್ಕೆ ಮರಳಿದ ಸ್ಟೀವನ್‌ ಸ್ಮಿತ್‌ ಬಗ್ಗೆ ಕೋಚ್‌ ಲ್ಯಾಂಗರ್‌ ಹೇಳಿದ್ದೇನು?

ಸ್ಮಿತ್ ಬಗ್ಗೆ ಅಚ್ಚರಿಯ ಹೇಳಿಕೆ ಕೊಟ್ಟ ಆಸ್ಟ್ರೇಲಿಯಾ ಕೋಚ್..!? | Oneindia Kannada
Steve Smith in best physical condition of his life: Justin Langer

ಬ್ರಿಸ್ಬೇನ್‌, ಮೇ 10: ಬಾಲ್‌ ಟ್ಯಾಂಪರಿಂಗ್‌ನಲ್ಲಿಸಿಕ್ಕಿಬಿದ್ದು ಕ್ರಿಕೆಟ್‌ ಆಸ್ಟ್ರೇಲಿಯಾದಿಂದ 13 ತಿಂಗಳು ಕಾಲ ನಿಷೇಧ ಶಿಕ್ಷೆ ಎದುರಿಸಿದ ಆಸೀಸ್‌ ಕ್ರಿಕೆಟ್‌ ತಂಡದ ಮಾಜಿ ನಾಯಕ ಸ್ಟೀವನ್‌ ಸ್ಮಿತ್‌ ಇದೀಗ ಕಾಂಗರೂ ಪಡೆಗೆ ಹಿಂದಿರುಗಿದ್ದಾರೆ. ಪ್ರಸಕ್ತುತ ನ್ಯೂಜಿಲೆಂಡ್‌ 11 ವಿರುದ್ಧದ ಅಭ್ಯಾಸ ಪಂದ್ಯಗಳಲ್ಲಿ ಆಸ್ಟ್ರೇಲಿಯಾ 11 ಪರ ಸ್ಮಿತ್‌ ಭರ್ಜರಿ ಬ್ಯಾಟಿಂಗ್‌ ನಡೆಸಿ ಮ್ಯಾಚ್‌ ವಿನ್ನರ್‌ ಎನಿಸಿಕೊಂಡಿದ್ದಾರೆ.

 ಆಸ್ಟ್ರೇಲಿಯಾ ತಂಡದಲ್ಲಿ ಡೇವಿಡ್‌ ವಾರ್ನರ್‌ಗೆ ಎದುರಾಯ್ತು ಅಚ್ಚರಿ! ಆಸ್ಟ್ರೇಲಿಯಾ ತಂಡದಲ್ಲಿ ಡೇವಿಡ್‌ ವಾರ್ನರ್‌ಗೆ ಎದುರಾಯ್ತು ಅಚ್ಚರಿ!

ತಂಡಕ್ಕೆ ಮರಳಿದ ಸ್ಟೀವನ್‌ ಸ್ಮಿತ್‌ ಅವರ ಫಾರ್ಮ್‌ ಕುರಿತಾಗಿ ಮಾತನಾಡಿರುವ ಆಸೀಸ್‌ ಕ್ರಿಕೆಟ್‌ ತಂಡದ ಕೋಚ್‌, "ಸ್ಟೀವ್‌ ತಮ್ಮ ಜೀವನದಲ್ಲಿ ಇದೀಗ ದೈಹಿಕವಾಗಿ ಉತ್ತಮ ಸ್ಥಿತಿಯಲ್ಲಿದ್ದಾರೆ,'' ಎಂದು ಹೊಗಳಿದ್ದಾರೆ.

ಶುಕ್ರವಾರ ನಡೆದ ನ್ಯೂಜಿಲೆಂಡ್‌ 11 ವಿರುದ್ಧದ 3ನೇ ಅಭ್ಯಾಸ ಪಂದ್ಯದಲ್ಲಿ ಮಿಂಚಿನ ಬ್ಯಾಟಿಂಗ್‌ ನಡೆಸಿದ ಸ್ಮಿತ್‌ ಅಜೇಯ 91 ರನ್‌ಗಳನ್ನು ದಾಖಲಿಸಿ ಆಸ್ಟ್ರೇಲಿಯಾ 11ಗೆ ಗೆಲುವು ತಂದುಕೊಟ್ಟರಿದ್ದರು. ಇದಕ್ಕೂ ಮುನ್ನ ನಡೆದ 2ನೇ ಅಭ್ಯಾಸ ಪಂದ್ಯದಲ್ಲೂ 77 ಎಸೆತಗಳಲ್ಲಿ 89 ರನ್‌ ದಾಖಲಿಸಿದ ಸ್ಮಿತ್‌ ತಮ್ಮ ಶ್ರೇಷ್ಠ ಲಯ ಕಂಡುಕೊಂಡಿರುವುದರ ಸಂದೇಶ ರವಾನಿಸಿದ್ದರು.

 ಐಸಿಸಿ ಕ್ರಿಕೆಟ್‌ ವಿಶ್ವಕಪ್‌ ಸನಿಹ ಭಾರತ ತಂಡಕ್ಕೆ ಎದುರಾದ ಶಾಕ್‌! ಐಸಿಸಿ ಕ್ರಿಕೆಟ್‌ ವಿಶ್ವಕಪ್‌ ಸನಿಹ ಭಾರತ ತಂಡಕ್ಕೆ ಎದುರಾದ ಶಾಕ್‌!

"ಸ್ಮಿತ್‌ ಮತ್ತು ವಾರ್ನರ್‌ ಇಬ್ಬರೂ ಉತ್ತಮ ದೇಹ ಸ್ಥಿತಿ ಕಾಯ್ದುಕೊಂಡಿದ್ದಾರೆ. ಅದರಲ್ಲೂ ಸ್ಮಿತ್‌ ಈ ಹಿಂದಿನ ದಿನಗಳಿಗಿಂತಲೂ ಉತ್ತಮವಾಗಿದ್ದಾರೆ. ತಮ್ಮ ಶ್ರೇಷ್ಠ ಲಯಕ್ಕೆ ಮರಳಲು ಕಠಿಣ ಶ್ರಮ ವಹಿಸುತ್ತಿದ್ದಾರೆ. ಎರಡನೇ ಅಭ್ಯಾಸ ಪಂದ್ಯದ ವೇಳೆ ಸ್ಮಿತ್‌ ಅವರ ಇನಿಂಗ್ಸ್‌ ನಿಜಕ್ಕೂ ಮನಮೋಹಕವಾಗಿತ್ತು. ಸಹಾಯಕ ಕೋಚ್‌ಗಳ ಬಳಿ ಸ್ಮಿತ್‌ ಅವರಲ್ಲಿ ಅಡಕವಾಗಿರುವ ಪ್ರತಿಭೆ ಕುರಿತಾಗಿ ಚರ್ಚಿಸುತ್ತಿದ್ದೆ,'' ಎಂದು 48 ವರ್ಷದ ಆಸ್ಟ್ರೇಲಿಯಾ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ಲ್ಯಾಂಗರ್‌ ಹೇಳಿದ್ದಾರೆ.

 ರಾಹುಲ್‌ ಬ್ಯಾಟಿಂಗ್‌ ಬಗ್ಗೆ ಕ್ರಿಸ್‌ ಗೇಲ್‌ ಈ ರೀತಿ ಹೇಳಿದ್ದಾರೆ ರಾಹುಲ್‌ ಬ್ಯಾಟಿಂಗ್‌ ಬಗ್ಗೆ ಕ್ರಿಸ್‌ ಗೇಲ್‌ ಈ ರೀತಿ ಹೇಳಿದ್ದಾರೆ

ಮತ್ತೊಂದೆಡೆ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) 2019ರಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಡೇವಿಡ್‌ ವಾರ್ನರ್‌, ಸನ್‌ರೈಸರ್ಸ್‌ ಹೈದರಾಬಾದ್‌ ಪರ ಆಡಿದ 12 ಪಂದ್ಯಗಳಿಂದ 70ರ ಸರಾಸರಿಯಲ್ಲಿ 692 ರನ್‌ಗಳನ್ನು ಚಚ್ಚಿ, ವಿಶ್ವಕಪ್‌ಗೂ ಮುನ್ನ ತಮ್ಮ ಬ್ಯಾಟಿಂಗ್‌ ಲಯ ಕಂಡುಕೊಂಡಿದ್ದಾರೆ.

ಆಸ್ಟ್ರೇಲಿಯಾದ ವಿಶ್ವಕಪ್‌ ತಂಡ ಇಂತಿದೆ
ಆರೊನ್‌ ಫಿಂಚ್‌ (ನಾಯಕ), ಉಸ್ಮಾನ್‌ ಖವಾಜ, ಡೇವಿಡ್‌ ವಾರ್ನರ್‌, ಸ್ಟೀವನ್‌ ಸ್ಮಿತ್‌, ಶಾನ್‌ ಮಾರ್ಷ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಮಾರ್ಕಸ್‌ ಸ್ಟೋಯ್ನಿಸ್‌, ಅಲೆಕ್ಸ್‌ ಕ್ಯಾರಿ (ವಿಕೆಟ್‌ಕೀಪರ್‌), ಪ್ಯಾಟ್‌ ಕಮಿನ್ಸ್‌, ಮಿಚೆಲ್‌ ಸ್ಟಾರ್ಕ್‌, ಕೇನ್‌ ರಿಚರ್ಡ್‌ಸನ್‌, ನೇಥನ್‌ ಕೌಲ್ಟರ್‌ ನೈಲ್‌, ಜೇಸನ್‌ ಬೆಹ್ರೆನ್‌ಡಾರ್ಫ್‌, ನೇಥನ್‌ ಲಯಾನ್‌, ಆಡಮ್‌ ಝಾಂಪ.

Story first published: Friday, May 10, 2019, 18:02 [IST]
Other articles published on May 10, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X