ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಜಸ್ಟಿನ್ ಲ್ಯಾಂಗರ್ ರಾಜೀನಾಮೆ: ಕ್ರಿಕೆಟ್ ಆಸ್ಟ್ರೇಲಿಯಾಗೆ ದುಃಖದ ದಿನವಾಗಿದೆ ಎಂದ ರಿಕಿ ಪಾಂಟಿಂಗ್

Ricky ponting

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಸ್ಥಾನಕ್ಕೆ ಜಸ್ಟಿನ್ ಲ್ಯಾಂಗರ್ ರಾಜೀನಾಮೆ ನೀಡಿದ ಬಳಿಕ ಎಲ್ಲೆಡೆ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಅದರಲ್ಲೂ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗರು ಲ್ಯಾಂಗರ್ ಕೋಚ್ ಸ್ಥಾನದಿಂದ ಕೆಳಗಿಳಿಯುವಂತೆ ನೋಡಿಕೊಂಡ ಕ್ರಿಕೆಟ್ ಆಸ್ಟ್ರೇಲಿಯಾ ಬೋರ್ಡ್ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಸ್ಟಿನ್ ಲ್ಯಾಂಗರ್ ಫೆಬ್ರವರಿ 5ರಂದೇ ಅನ್ವಯವಾಗುವಂತೆ ಆಸೀಸ್ ಕ್ರಿಕೆಟ್ ತಂಡದ ಕೋಚ್ ಸ್ಥಾನದಿಂದ ಹೊರನಡೆದಿದ್ದಾರೆ. ಈ ಕುರಿತಾಗಿ ಮಾಜಿ ಮಾಯಕ ರಿಕಿ ಪಾಂಟಿಂಗ್ ಮತ್ತು ಮಾಜಿ ಕ್ರಿಕೆಟಿಗ ಮ್ಯಾಥ್ಯೂ ಹೇಡನ ಬೇಸರ ವ್ಯಕ್ತಪಡಿಸಿದ್ದಾರೆ.

ಜಸ್ಟಿನ್ ಲ್ಯಾಂಗ್ ಕೋಚ್ ಸ್ಥಾನದಿಂದ ಹೊರನಡೆದಿದ್ದು, ಆಸ್ಟ್ರೇಲಿಯಾ ಕ್ರಿಕೆಟ್‌ಗೆ ದುಃಖದ ದಿನವಾಗಿದೆ. ಜಸ್ಟಿನ್ ಲ್ಯಾಂಗರ್ ಕುರಿತಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಬೋರ್ಡ್ ವ್ಯವಹರಿಸಿದ ರೀತಿ ನಿಜಕ್ಕೂ ಮುಜುಗರ ತರುವಂತಹದ್ದು ಎಂದು ರಿಕಿ ಪಾಂಟಿಂಗ್ ಹೇಳಿದ್ದಾರೆ.

"ಆಸ್ಟ್ರೇಲಿಯಾದ ಕ್ರಿಕೆಟ್‌ಗೆ ಸಂಬಂಧಿಸಿದಂತೆ ಇದು ನಿಜವಾಗಿಯೂ ದುಃಖದ ದಿನ ಎಂದು ನಾನು ಭಾವಿಸುತ್ತೇನೆ. ಹಿಂತಿರುಗಿ ನೋಡಿದರೆ, ಕಳೆದ ಆರು ತಿಂಗಳುಗಳು ಕಳಪೆ ದಿನಗಳಾಗಿವೆ. ಒಟ್ಟಾರೆಯಾಗಿ ಆಸ್ಟ್ರೇಲಿಯನ್ ಕ್ರಿಕೆಟ್‌ನಲ್ಲಿ ಉತ್ತಮ ವ್ಯಕ್ತಿಗಳಾದ ಜಸ್ಟಿನ್ ಲ್ಯಾಂಗರ್ ಮತ್ತು ಟಿಮ್ ಪೈನ್ ಅವರನ್ನು ಕ್ರಿಕೆಟ್ ಆಸ್ಟ್ರೇಲಿಯಾ ನಿಭಾಯಿಸಿದ ರೀತಿಯನ್ನು ನಾನು ಕಡೆಗಣಿಸುತ್ತೇವೆ. ಅವರು ಆ ಎರಡು ಪ್ರಕರಣಗಳನ್ನು ನಿಭಾಯಿಸಿದ ರೀತಿ ಬಹುತೇಕ ಮುಜುಗರಕ್ಕೊಳಗಾಗಿದೆ ಎಂದು ನಾನು ಭಾವಿಸುತ್ತೇನೆ" ಎಂದು ಪಾಂಟಿಂಗ್ ತಿಳಿಸಿದ್ದಾರೆ.

ಮಾಜಿ ಆಸಿಸ್ ಕ್ರಿಕೆಟಿಗ ಮ್ಯಾಥ್ಯೂ ಹೇಡನ್ ಕೂಡ ಮಾಜಿ ಕೋಚ್ ಜಸ್ಟಿನ್ ಲ್ಯಾಂಗರ್‌ ಅನ್ನು ಬೆಂಬಲಿಸಿದ್ದಾರೆ. ''ಆಸ್ಟ್ರೇಲಿಯಾ ಟೆಸ್ಟ್ ನಾಯಕ ಪ್ಯಾಟ್ ಕಮಿನ್ಸ್ ಕೂಡ ಲ್ಯಾಂಗರ್‌ಗೆ ಬೆಬಲ ನೀಡದಿರುವುದು ನೋವುಂಟು ಮಾಡಿದೆ ಎಂದು ಹೇಡನ್ ಹೇಳಿದ್ದಾರೆ. ಇಡೀ ಘಟನೆಯು ಸಂಘಟಿತವಾಗಿರುವಂತೆ ತೋರುತ್ತಿದೆ'' ಎಂದು ಹೇಡನ್ ಹೇಳಿದ್ದಾರೆ.

''ಆತನನ್ನ ಯಾರು ಬೆಂಬಲಿಸಿಲ್ಲ ಎಂಬುದು ಸಂಪೂರ್ಣವಾಗಿ ಸ್ಪಷ್ಟವಾಗಿದೆ. ಇನ್ನೊಮ್ಮೆ ಆಸ್ಟ್ರೇಲಿಯಾದ ನಾಯಕ ಮಾತನ್ನು ಕೇಳಿದರೆ, ಯಾವುದೇ ರೀತಿಯ ಪ್ರಶಂಸೆ ಅಥವಾ ಬೆಂಬಲ ಸಿಗುವುದಿಲ್ಲ. ಇದು ಅತ್ಯಂತ ನೋವುಂಟು ಮಾಡುತ್ತಿದೆ'' ಎಂದು ಹೇಡನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆಸ್ಟ್ರೇಲಿಯಾ ಮುಂಬರುವ ಸರಣಿಯಲ್ಲಿ ಶ್ರೀಲಂಕಾ ವಿರುದ್ಧ ತವರಿನಲ್ಲಿ ಐದು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಈ ಟಿ20 ಪಂದ್ಯವು 11ನೇ ಫೆಬ್ರವರಿ 2022ರಂದು ಸಿಡ್ನಿ ಕ್ರಿಕೆಟ್‌ ಮೈದಾನದಲ್ಲಿ (ಎಸ್‌ಸಿಜಿ) ಪ್ರಾರಂಭವಾಗಲಿದೆ. ಇದರ ನಡುವೆ ಆಂಡ್ರ್ಯೂ ಮೆಕ್‌ಡೊನಾಲ್ಡ್ ಅವರನ್ನು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಹಂಗಾಮಿ ಮುಖ್ಯ ಕೋಚ್ ಆಗಿ ನೇಮಿಸಲಾಗಿದೆ.

ಮಾಜಿ ಕೋಚ್ ಜಸ್ಟಿನ್ ಲ್ಯಾಂಗರ್ ಮಾರ್ಗದರ್ಶನದಲ್ಲಿ ಆಸ್ಟ್ರೇಲಿಯಾ ಚೊಚ್ಚಲ ಬಾರಿಗೆ ಐಸಿಸಿ ಟಿ20 ವಿಶ್ವಕಪ್ ಗೆದ್ದು ಬೀಗಿತು. ಅಲ್ಲದೆ ಇತ್ತೀಚಿಗೆ ಪ್ರತಿಷ್ಠಿತ ಆ್ಯಶಸ್ ಟೆಸ್ಟ್ ಸರಣಿಯನ್ನು 4-0 ಅಂತರದಲ್ಲಿ ಗೆಲುವು ಸಾಧಿಸಿತು.

Story first published: Saturday, February 5, 2022, 15:34 [IST]
Other articles published on Feb 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X