ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಂತಾರಾಷ್ಟ್ರೀಯ ಟಿ20 ವಿಶ್ವದಾಖಲೆ ಬರೆದ ಆಸ್ಟ್ರೇಲಿಯಾದ ಅಲಿಸಾ ಹೀಲಿ

Australia’s Alyssa Healy smashes women’s T20Is World Record

ಸಿಡ್ನಿ, ಅಕ್ಟೋಬರ್ 2: ಆಸ್ಟ್ರೇಲಿಯಾದ ಆರಂಭಿಕ ಆಟಗಾರ್ತಿ ಅಲಿಸಾ ಹೀಲಿ ಅಂತಾರಾಷ್ಟ್ರೀಯ ಟಿ20ಯಲ್ಲಿ ವಿಶ್ವದಾಖಲೆ ಬರೆದಿದ್ದಾರೆ. ಬುಧವಾರ (ಅಕ್ಟೋಬರ್ 2) ನಡೆದ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಅಲಿಸಾ ಅತೀವೇಗದ ಶತಕ ಮತ್ತು ಅತ್ಯಧಿಕ ರನ್‌ ಮೈಲಿಗಲ್ಲು ಸ್ಥಾಪಿಸಿದ್ದಾರೆ.

ಭಾರತ vs ದ.ಆಫ್ರಿಕಾ: 47 ವರ್ಷಗಳ ದಾಖಲೆ ಮುರಿದ ರೋಹಿತ್-ಮಯಾಂಕ್!ಭಾರತ vs ದ.ಆಫ್ರಿಕಾ: 47 ವರ್ಷಗಳ ದಾಖಲೆ ಮುರಿದ ರೋಹಿತ್-ಮಯಾಂಕ್!

ಸಿಡ್ನಿಯ ನಾರ್ತ್ ಸಿಡ್ನಿ ಓವಲ್ ಸ್ಟೇಡಿಯಂನಲ್ಲಿ ನಡೆದ ಆಸ್ಟ್ರೇಲಿಯಾ ಮಹಿಳೆಯರು-ಶ್ರೀಲಂಕಾ ಮಹಿಳೆಯರ ನಡುವಿನ 3ನೇ ಟಿ20 ಪಂದ್ಯದಲ್ಲಿ ಅಲಿಸಾ ಕೇವಲ 61 ಎಸೆತಗಳಿಗೆ 148 ರನ್ ಸಿಡಿಸಿದರು. ಇದರಲ್ಲಿ 19 ಫೋರ್ಸ್, 7 ಸಿಕ್ಸರ್‌ಗಳು ಸೇರಿವೆ.

ಹಾರ್ದಿಕ್ ಪಾಂಡ್ಯಗೆ ತೀವ್ರವಾದ ಬೆನ್ನು ನೋವು, ಮೈದಾನದಿಂದ ದೀರ್ಘಕಾಲ ದೂರ!ಹಾರ್ದಿಕ್ ಪಾಂಡ್ಯಗೆ ತೀವ್ರವಾದ ಬೆನ್ನು ನೋವು, ಮೈದಾನದಿಂದ ದೀರ್ಘಕಾಲ ದೂರ!

ಅಲಿಸಾ ಹೀಲಿ ಶತಕ ಸಿಡಿಸಿದ್ದು ಬರೀ 46 ಎಸೆತಗಳಿಗೆ. ಇದು ಮಹಿಳಾ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಎರಡನೇ ಅತೀ ವೇಗದ ಶತಕವಾಗಿ ದಾಖಲೆ ನಿರ್ಮಿಸಿದೆ. ಹೀಲಿ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ ಆಸ್ಟ್ರೇಲಿಯಾ ಮಹಿಳಾ ತಂಡ 20 ಓವರ್‌ಗೆ 2 ವಿಕೆಟ್ ಕಳೆದು 226 ರನ್ ಮಾಡಿತ್ತು.

ಐಪಿಎಲ್‌ ಹರಾಜು ದಿನಾಂಕ, ಸ್ಥಳ ನಿಗದಿ: ಬೆಂಗಳೂರಿಗೆ ತಪ್ಪಿದ ಅವಕಾಶಐಪಿಎಲ್‌ ಹರಾಜು ದಿನಾಂಕ, ಸ್ಥಳ ನಿಗದಿ: ಬೆಂಗಳೂರಿಗೆ ತಪ್ಪಿದ ಅವಕಾಶ

29ರ ಹರೆಯದ ಅಲಿಸಾ ಓವರ್‌ನ ಕೊನೆಯ ಎಸೆತಕ್ಕೆ ಸಿಕ್ಸ್ ಚಚ್ಚುವ ಮೂಲಕ ಈ ವಿಶ್ವದಾಖಲೆ ನಿರ್ಮಿಸಿರುವುದು ವಿಶೇಷ. ಟಿ20ಐ ಮಹಿಳಾ ಕ್ರಿಕೆಟ್‌ನಲ್ಲಿ ಅತೀ ಹೆಚ್ಚಿನ ರನ್ ದಾಖಲೆ ಈ ಮೊದಲು ಆಸ್ಟ್ರೇಲಿಯಾದವರೇ ಆದ ಮೆಗ್ ಲ್ಯಾನಿಂಗ್ ಹೆಸರಿನಲ್ಲಿತ್ತು. ಇದೇ ವರ್ಷ ಜುಲೈ ತಿಂಗಳಲ್ಲಿ ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ಮೆಗ್ ದಾಖಲೆ ನಿರ್ಮಿಸಿದ್ದರು.

ಎಮರ್ಜಿಂಗ್‌ ಏಷ್ಯಾಕಪ್: ಭಾರತ ತಂಡ ಪ್ರಕಟ, ಕನ್ನಡಿಗ ಶರತ್ ನಾಯಕಎಮರ್ಜಿಂಗ್‌ ಏಷ್ಯಾಕಪ್: ಭಾರತ ತಂಡ ಪ್ರಕಟ, ಕನ್ನಡಿಗ ಶರತ್ ನಾಯಕ

ಎರಡು ದಿನಗಳ ಹಿಂದಷ್ಟೇ ಹೀಲಿ ತನ್ನ 100ನೇ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ್ದರು. ಆಸೀಸ್‌ ವನಿತೆಯರು ನೀಡಿದ್ದ 227 ರನ್ ಗುರಿ ಬೆಂಬತ್ತಿದ ಶ್ರೀಲಂಕಾ ವನಿತಾ ತಂಡ, ಚಮರಿ ಅಥಾಪತ್ತು 31, ಹರ್ಷಿತಾ ಮಾಧವಿ 28 ರನ್‌ನೊಂದಿಗೆ 20 ಓವರ್‌ಗೆ 7 ವಿಕೆಟ್ ನಷ್ಟದಲ್ಲಿ 94 ರನ್ ಬಾರಿಸಿ ಬರೋಬ್ಬರಿ 132 ರನ್‌ನಿಂದ ಶರಣಾಗಿದೆ.

Story first published: Wednesday, October 2, 2019, 15:18 [IST]
Other articles published on Oct 2, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X