ಆಸ್ಟ್ರೇಲಿಯಾ ತಂಡಕ್ಕೆ ಶಾಕ್: ಪ್ರಮುಖ ಆಟಗಾರರು ಭಾರತದ ವಿರುದ್ಧದ ಸರಣಿಯಿಂದ ಹೊರಕ್ಕೆ

ಅಕ್ಟೋಬರ್ ತಿಂಗಳಿನಿಂದ ಆರಂಭವಾಗಲಿರುವ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸುವ ಮುನ್ನ ಸದ್ಯ ಟಿ20 ಚಾಂಪಿಯನ್ ಆಗಿರುವ ಆಸ್ಟ್ರೇಲಿಯಾ ತಂಡ ಭಾರತಕ್ಕೆ ಪ್ರವಾಸ ಕೈಗೊಂಡಿದೆ. ಭಾರತದಲ್ಲಿ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಆಡಲಿದೆ.

ಭಾರತದ ವಿರುದ್ಧದ ಸರಣಿ ಆರಂಭವಾಗಲು ಕೆಲವೇ ದಿನಗಳು ಇದ್ದು, ಸರಣಿಗೂ ಮುನ್ನವೇ ಆಸ್ಟ್ರೇಲಿಯಾ ತಂಡಕ್ಕೆ ಆಘಾತ ಎದುರಾಗಿದೆ. ಗಾಯದ ಸಮಸ್ಯೆಯಿಂದ ಪ್ರಮುಖ ಆಟಗಾರರು ಸರಣಿಯಿಂದ ಹೊರಗುಳಿಯಲಿದ್ದು, ಬದಲೀ ಆಟಗಾರರನ್ನು ಹೆಸರಿಸಲಾಗಿದೆ.

ಭಾರತದ ವಿರುದ್ಧದ ಸರಣಿಯಿಂದ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ ಈಗಾಗಲೇ ವಿಶ್ರಾಂತಿ ಪಡೆದಿದ್ದರು. ಆದರೆ ಸರಣಿ ಆರಂಭಕ್ಕೆ ಕೆಲವೇ ದಿನಗಳಿಗೆ ಮುನ್ನ ಮೂವರು ಪ್ರಮುಖ ಆಟಗಾರರು ಸರಣಿಯಿಂದ ಹೊರಗುಳಿಯಲಿದ್ದಾರೆ.

ಟಿ20 ವಿಶ್ವಕಪ್‌: ಭಾರತ ತಂಡದಲ್ಲಿ ಈತನೊಬ್ಬನೇ ವಿಕೆಟ್-ಟೇಕಿಂಗ್ ಆಯ್ಕೆ; ಆಕಾಶ್ ಚೋಪ್ರಾಟಿ20 ವಿಶ್ವಕಪ್‌: ಭಾರತ ತಂಡದಲ್ಲಿ ಈತನೊಬ್ಬನೇ ವಿಕೆಟ್-ಟೇಕಿಂಗ್ ಆಯ್ಕೆ; ಆಕಾಶ್ ಚೋಪ್ರಾ

ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಮೊಣಕಾಲು ನೋವಿನ ಕಾರಣದಿಂದ ಭಾರತದ ಪ್ರವಾಸವನ್ನು ತಪ್ಪಿಸಿಕೊಂಡಿದ್ದಾರೆ, ಆಲ್‌ ರೌಂಡರ್ ಮಾರ್ಕಸ್‌ ಸ್ಟೊಯಿನಿಸ್ ಕೂಡ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ, ಪಾದದ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಬ್ಯಾಟರ್ ಮಿಚೆಲ್ ಮಾರ್ಷ್ ಕೂಡ ಭಾರತದ ಪ್ರವಾಸದಿಂದ ಹೊರಗುಳಿದಿದ್ದಾರೆ. ಇವರ ಬದಲಾಗಿ ಮೂವರು ಬದಲಿ ಆಟಗಾರರನ್ನು ಈಗ ಆಯ್ಕೆ ಮಾಡಲಾಗಿದೆ.

ಗಾಯಾಳುಗಳ ಬದಲಿಗೆ ಬೇರೆ ಆಟಗಾರರು ಆಯ್ಕೆ

ಗಾಯಾಳುಗಳ ಬದಲಿಗೆ ಬೇರೆ ಆಟಗಾರರು ಆಯ್ಕೆ

ಆಸ್ಟ್ರೇಲಿಯಾ ಕ್ರಿಕೆಟ್ ಗಾಯಗೊಂಡ ಆಟಗಾರರ ಬದಲಿಗೆ ಬೇರೆ ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಬ್ಯಾಟರ್ ನಾಥನ್ ಎಲ್ಲಿಸ್, ಆಲ್‌ ರೌಂಡರ್ ಡೇನಿಯಲ್ ಸ್ಯಾಮ್ಸ್ ಮತ್ತು ವೇಗದ ಬೌಲರ್ ಸೀನ್ ಅಬಾಟ್ ಭಾರತದ ಪ್ರವಾಸಕ್ಕಾಗಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಮೂವರ ಗಾಯಗಳು ಚಿಕ್ಕದಾಗಿದೆ, ಆದರೆ ಭಾರತದಲ್ಲಿ ಆರು ದಿನಗಳಲ್ಲಿ ಮೂರು ಪ್ರತ್ಯೇಕ ನಗರಗಳಲ್ಲಿ ಮೂರು ಪಂದ್ಯಗಳಿಗೆ ಪ್ರಯಾಣಿಸುವುದರಿಂದ, ಆಟಗಾರರಿಗೆ ಹೆಚ್ಚಿನ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಮುಂಜಾಗ್ರತಾ ಕ್ರಮವಾಗಿ ಆಸ್ಟ್ರೇಲಿಯಾ ಈ ಕ್ರಮ ತೆಗೆದುಕೊಂಡಿದೆ.

ಟಿ20 ವಿಶ್ವಕಪ್‌: ಭಾರತ ತಂಡದಲ್ಲಿ ಈತನೊಬ್ಬನೇ ವಿಕೆಟ್-ಟೇಕಿಂಗ್ ಆಯ್ಕೆ; ಆಕಾಶ್ ಚೋಪ್ರಾ

ವೇಗಿ ಮಿಚೆಲ್‌ ಸ್ಟಾರ್ಕ್‌ಗೆ ಮೊಣಕಾಲಿನ ಗಾಯ

ವೇಗಿ ಮಿಚೆಲ್‌ ಸ್ಟಾರ್ಕ್‌ಗೆ ಮೊಣಕಾಲಿನ ಗಾಯ

ಜಿಂಬಾಬ್ವೆ ವಿರುದ್ಧ ಏಕದಿನ ಸರಣಿಯ ವೇಳೆ ಮಿಚೆಲ್ ಮಾರ್ಷ್ ಮತ್ತು ಮಾರ್ಕಸ್‌ ಸ್ಟೊಯಿನಿಸ್ ಗಾಯಗೊಂಡಿದ್ದರು. ಆದರೆ, ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿಯಲ್ಲಿ ಆಟಿದ್ದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಕೂಡ ಮೊಣಕಾಲಿನ ಗಾಯಕ್ಕೆ ತುತ್ತಾಗಿರುವುದು ಇತ್ತೀಚೆಗೆ ಮಾರ್ಕಸ್‌ ಸ್ಟೊಯಿನಿಸ್ ತಿಳಿದು ಬಂದಿದ್ದು, ಕೊನೆಯ ಕ್ಷಣದಲ್ಲಿ ಅವರನ್ನು ತಂಡದಿಂದ ಕೈಬಿಡಲಾಗಿದೆ.

ವಿಶ್ವಕಪ್‌ಗೆ ಮುನ್ನ ಆಸ್ಟ್ರೇಲಿಯಾ ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ಟಿ20 ಸರಣಿ ಆಡಲಿದೆ, ಆ ಪಂದ್ಯಗಳಿಗೆ ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್ ಮತ್ತು ಮಾರ್ಕಸ್ ಸ್ಟೊಯಿನಿಸ್ ಲಭ್ಯರಾಗುವ ನಿರೀಕ್ಷೆಯಿದೆ.

ಟಿಮ್‌ ಡೇವಿಡ್‌ಗೆ ಉತ್ತಮ ಅವಕಾಶ

ಟಿಮ್‌ ಡೇವಿಡ್‌ಗೆ ಉತ್ತಮ ಅವಕಾಶ

ಆಲ್‌ರೌಂಡರ್ ಮಾರ್ಕಸ್ ಸ್ಟೊಯಿನಿಸ್‌ನ ಅನುಪಸ್ಥಿತಿಯಿಂದಾಗಿ ಟಿಮ್‌ ಡೇವಿಡ್‌ಗೆ ಅವಕಾಶ ಲಭ್ಯವಾಗಿದೆ. ಭಾರತದ ಪ್ರವಾಸದ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲಿದ್ದಾರೆ. ಭಾರತದ ವಿರುದ್ಧದ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಬೇಕಿದೆ. ಆದರೂ, ಟಿಮ್‌ ಡೇವಿಡ್‌ ಟಿ20 ವಿಶ್ವಕಪ್‌ನಲ್ಲಿ ಮಾರ್ಕಸ್‌ ಸ್ಟೊಯಿನಿಸ್‌ಗೆ ಜಾಗವನ್ನು ಬಿಟ್ಟುಕೊಡಬೇಕಾಗುತ್ತದೆ.

ಮಿಚೆಲ್‌ ಮಾರ್ಷ್ ಅನುಪಸ್ಥಿತಿಯಲ್ಲಿ ಸ್ಟೀವ್ ಸ್ಮಿತ್ 3ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲಿದ್ದಾರೆ. ಡೇವಿಡ್ ವಾರ್ನರ ಗೈರು ಹಾಜರಿಯಲ್ಲಿ, ಜೋಶ್ ಇಂಗ್ಲಿಸ್ ಜೊತೆಗೆ ತಂಡದ ನಾಯಕ ಆರೊನ್ ಫಿಂಚ್‌ ಇನ್ನಿಂಗ್ಸ್ ಆರಂಭಿಸಲಿದ್ದಾರೆ.

ಆಸ್ಟ್ರೇಲಿಯಾ ಸರಣಿಗೆ ಬಲಿಷ್ಠ ಭಾರತ ತಂಡ

ಆಸ್ಟ್ರೇಲಿಯಾ ಸರಣಿಗೆ ಬಲಿಷ್ಠ ಭಾರತ ತಂಡ

ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಬಲಿಷ್ಠವಾದ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಟಿ20 ವಿಶ್ವಕಪ್‌ಗೆ ಮುನ್ನ ಹಲವು ಪ್ರಯೋಗಗಳನ್ನು ಮಾಡಲು ಟೀಂ ಇಂಡಿಯಾ ಸಜ್ಜಾಗಿದೆ. ಅದರಲ್ಲೂ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗದಲ್ಲಿ ಇರುವ ಸಮಸ್ಯೆ ಸುಧಾರಣೆ ಮಾಡಿಕೊಳ್ಳಬೇಕಿದೆ.

ಸೆಪ್ಟೆಂಬರ್ 20ರಿಂದ ಸರಣಿ ಆರಂಭವಾಗಲಿದೆ. ಮೊದಲ ಪಂದ್ಯ ಮೊಹಾಲಿಯಲ್ಲಿ ನಡೆಯಲಿದ್ದು, ಎರಡನೇ ಪಂದ್ಯ ಸೆಪ್ಟೆಂಬರ್ 23ರಂದು ನಾಗ್ಪುರದಲ್ಲಿ ನಡೆಯಲಿದೆ. ಮೂರನೇ ಮತ್ತು ಸರಣಿಯ ಕೊನೆಯ ಪಂದ್ಯ ಸೆಪ್ಟೆಂಬರ್ 25ರಂದು ಹೈದರಾಬಾದ್‌ನಲ್ಲಿ ನಡೆಯಲಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Wednesday, September 14, 2022, 13:05 [IST]
Other articles published on Sep 14, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X