ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬೆಲಿಂಡಾ ಕ್ಲಾರ್ಕ್ ಕಂಚಿನ ಪ್ರತಿಮೆ ಅನಾವರಣ : ಈ ಗೌರವ ಪಡೆದ ಮೊದಲ ಮಹಿಳಾ ಕ್ರಿಕೆಟರ್

Australian Belinda Clark Became The First Woman Cricketer To Be Honor With Bronze Statue

ಆಸ್ಟ್ರೇಲಿಯಾದ ಮಾಜಿ ಕ್ರಿಕೆಟ್ ಆಟಗಾರ್ತಿ ಬೆಲಿಂಡಾ ಕ್ಲಾರ್ಕ್‌ಗೆ ಕ್ರಿಕೆಟ್ ಆಸ್ಟ್ರೇಲಿಯಾ ವಿಶೇಷ ಗೌರವ ನೀಡಿದೆ. ಸಿಡ್ನಿ ಕ್ರಿಕೆಟ್ ಗ್ರೌಂಡ್ (ಎಸ್‌ಸಿಜಿ) ಆವರಣದಲ್ಲಿ ಕಂಚಿಮ ಪ್ರತಿಮೆ ಅನಾವರಣಗೊಳಿಸಿದೆ.

ಕಂಚಿನ ಪ್ರತಿಮೆ ಗೌರವ ಪಡೆದ ವಿಶ್ವದ ಮೊದಲ ಮಹಿಳಾ ಕ್ರಿಕೆಟರ್ ಎನ್ನುವ ಖ್ಯಾತಿಗೆ ಬೆಲಿಂಡಾ ಕ್ಲಾರ್ಕ್‌ ಭಾಜನರಾಗಿದ್ದಾರೆ. ಕ್ಲಾರ್ಕ್ ಅವರ ಕಂಚಿನ ಪ್ರತಿಮೆಯನ್ನು ಎಸ್‌ಸಿಜಿಯ ವಾಕ್ ಆಫ್ ಆನರ್ ಪ್ರವೇಶದ್ವಾರದಲ್ಲಿ ಸ್ಥಾಪನೆ ಮಾಡಲಾಗಿದೆ. ಗುರುವಾರ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್‌ನ ಎರಡನೇ ದಿನದಾಟದ ಆರಂಭಕ್ಕೆ ಮುನ್ನ ಪ್ರತಿಮೆ ಅನಾವರಣಗೊಳಿಸಲಾಯಿತು.

ಡೇಮ್ ಕ್ವೆಂಟಿನ್ ಬ್ರೈಸ್ ಮತ್ತು ನ್ಯೂ ಸೌತ್ ವೇಲ್ಸ್ ಪ್ರೀಮಿಯರ್ ಡೊಮಿನಿಕ್ ಪೆರೊಟ್ಟೆಟ್ ಪ್ರತಿಮೆಯನ್ನು ಅನಾವರಣಗೊಳಿಸಿದರು. 2021ರಲ್ಲಿ ಕ್ಲಾರ್ಕ್ ಅವರ ಕಂಚಿನ ಪ್ರತಿಮೆ ಸ್ಥಾಪಿಸುವುದಾಗಿ ಘೋಷಿಸಿತ್ತು. ಎಸ್‌ಸಿಜಿ ಆವರಣದಲ್ಲಿ 73 ಪುರುಷ ಕ್ರಿಕೆಟ್‌ ದಿಗ್ಗಜರ ಕಂಚಿನ ಪ್ರತಿಮೆ ಸ್ಥಾಪಿಸಲಾಗಿದ್ದು, ಆ ಸಾಲಿಗೆ ಸೇರಿದ ಮೊದಲ ಮಹಿಳಾ ಕ್ರಿಕೆಟರ್ ಎನಿಸಿಕೊಂಡಿದ್ದಾರೆ.

IPL 2023: ಐಪಿಎಲ್‌ನಲ್ಲಿ ಬೌಲಿಂಗ್ ಮಾಡುವ ಬಗ್ಗೆ ಸ್ಪಷ್ಟನೆ ನೀಡಿದ ಕೆಮರೂನ್ ಗ್ರೀನ್IPL 2023: ಐಪಿಎಲ್‌ನಲ್ಲಿ ಬೌಲಿಂಗ್ ಮಾಡುವ ಬಗ್ಗೆ ಸ್ಪಷ್ಟನೆ ನೀಡಿದ ಕೆಮರೂನ್ ಗ್ರೀನ್

ವಿಶ್ವಕಪ್ ವಿಜೇತ ತಂಡದ ನಾಯಕರಾಗಿದ್ದ ಕ್ಲಾರ್ಕ್‌ ಅವರಿಗೆ ಈ ಗೌರವ ಲಭಿಸಿದ್ದಕ್ಕಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಅಭಿನಂದನೆ ತಿಳಿಸಿದೆ.

Australian Belinda Clark Became The First Woman Cricketer To Be Honor With Bronze Statue

101 ಪಂದ್ಯಗಳಲ್ಲಿ ನಾಯಕತ್ವ

ಬೆಲಿಂಡಾ ಕ್ಲಾರ್ಕ್‌ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್‌ನ ದಂತಕಥೆ, ಅವರು 12 ವರ್ಷಗಳ ಕಾಲ 101 ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಮಹಿಳಾ ತಂಡಕ್ಕೆ ನಾಯಕಿಯಾಗಿದ್ದರು. 1997 ಮತ್ತು 2005 ರಲ್ಲಿ ವಿಶ್ವಕಪ್‌ ಗೆದ್ದ ಆಸ್ಟ್ರೇಲಿಯಾ ಮಹಿಳಾ ತಂಡದ ನಾಯಕತ್ವ ವಹಿಸಿಕೊಂಡಿದ್ದರು.

15 ಟೆಸ್ಟ್ ಪಂದ್ಯಗಳನ್ನಾಡಿರುವ ಕ್ಲಾರ್ಕ್ 45.95 ಸರಾಸರಿಯಲ್ಲಿ 919 ರನ್ ಗಳಿಸಿದ್ದಾರೆ. ಇದರಲ್ಲಿ ಎರಡು ಶತಕ ಕೂಡ ಸೇರಿವೆ. ಏಕದಿನ ಮಾದರಿಯಲ್ಲಿ ಅವರು 47.49 ಸರಾಸರಿಯಲ್ಲಿ 4844 ರನ್‌ಗಳನ್ನು ಗಳಿಸಿದ್ದಾರೆ. ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಗಳಿಸಿರುವ ಮೊದಲ ಆಟಗಾರ್ತಿ ಎನ್ನುವ ದಾಖಲೆ ಕೂಡ ಕ್ಲಾರ್ಕ್‌ ಹೆಸರಿನಲ್ಲಿದೆ.

ಆಸ್ಟ್ರೇಲಿಯಾ ಪುರುಷ ದಿಗ್ಗಜ ಕ್ರಿಕೆಟಿಗರಾದ ಫ್ರೆಡ್ ಸ್ಪೋಫೋರ್ತ್, ರಿಚೀ ಬೆನಾಡ್, ಸ್ಟಾನ್ ಮೆಕ್‌ಕೇಬ್ ಮತ್ತು ಸ್ಟೀವ್ ವಾ ಅವರ ಕಂಚಿನ ಪ್ರತಿಮೆ ಜೊತೆ ಕ್ಲಾರ್ಕ್ ಕಂಚಿನ ಪ್ರತಿಮೆ ಸ್ಥಾನ ಪಡೆಯುವ ಮೂಲಕ ವಿಶೇಷ ಗೌರವ ಪಡೆದುಕೊಂಡಿದ್ದಾರೆ.

ಬೆಲಿಂಡಾ ಕ್ಲಾರ್ಕ್‌ಗೆ ಸಿಕ್ಕ ಗೌರವದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕ್ರಿಕೆಟ್ ಆಸ್ಟ್ರೇಲಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಿಕ್ ಹಾಕ್ಲೆ, "ಸಿಡ್ನಿ ಕ್ರಿಕೆಟ್ ಅಂಗಳದಲ್ಲಿ ಕಂಚಿನ ಪ್ರತಿಮೆ ಗೌರವ ಪಡೆದ ಮೊದಲ ಮಹಿಳಾ ಆಟಗಾರ್ತಿ ಎನ್ನುವುದು ಹೆಮ್ಮೆಯ ವಿಷಯ. ಅವರು ಬ್ಯಾಟರ್ ಆಗಿ, ಆಸ್ಟ್ರೇಲಿಯಾ ತಂಡದ ನಾಯಕಿಯಾಗಿ ಅಪೂರ್ವ ಸಾಧನೆ ಮಾಡಿದ್ದಾರೆ. ಅವರ ಸಾಧನೆ ಯುವ ಕ್ರಿಕೆಟಿಗರಿಗೆ ಅವರು ಸ್ಪೂರ್ತಿಯಾಗಿದ್ದಾರೆ" ಎಂದು ಹೇಳಿದ್ದಾರೆ.

Story first published: Thursday, January 5, 2023, 12:59 [IST]
Other articles published on Jan 5, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X