ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆಸ್ಟ್ರೇಲಿಯಾದ ವೇಗಿ ಜೇಮ್ಸ್ ಪ್ಯಾಟಿನ್ಸನ್

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ವೇಗದ ಬೌಲರ್ ಜೇಮ್ಸ್ ಪ್ಯಾಟಿನ್ಸನ್ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿಯನ್ನು ಘೋಷಿಸಿದ್ದಾರೆ. ಪ್ರತಿಷ್ಠಿತ ಆ್ಯಶಸ್ ಟೆಸ್ಟ್ ಸರಣಿ ಈ ವರ್ಷಾಂತ್ಯದಲ್ಲಿ ನಡೆಯಲಿದ್ದು ಅದಕ್ಕೂ ಮುನ್ನವೇ ಪ್ಯಾಟಿನ್ಸನ್ ಈ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಅನುಭವಿ ಬೌಲರ್‌ನ ಸೇವೆಯಿಂದ ವಂಚಿತವಾಗಲಿದೆ.

ಕೇವಲ 31ರ ಹರೆಯದ ಜೇಮ್ಸ್ ಪ್ಯಾಟಿನ್ಸನ್ ಆಸ್ಟ್ರೇಲಿಯಾ ಟೆಸ್ಟ್ ಕ್ರಿಕೆಟ್ ಮಾದರಿಯಲ್ಲಿ ಆಸಿಸ್ ಪರವಾಗಿ ಉತ್ತಮವಾದ ಪ್ರದರ್ಶನ ನೀಡುತ್ತಿದ್ದರು. ಹೀಗಾಗಿ ಈ ನಿವೃತ್ತಿಯ ನಿರ್ಧಾರ ಅಭಿಮಾನಿಗಳನ್ನು ಅಚ್ಚರಿಗೆ ದೂಡಿದೆ. ಆದರೆ ಮೊಣಕಾಲಿನ ಗಾಯದ ಹಿನ್ನಲೆಯಲ್ಲಿ ಪ್ಯಾಟಿನ್ಸನ್ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ಪ್ಯಾಟಿನ್ಸನ್‌ಗೆ ಈ ನೋವು ಸಾಕಷ್ಟು ತೊಂದರೆ ನೀಡುತ್ತಿದ್ದ ಕಾರಣದಿಂದಾಗಿ ಸುದೀರ್ಘ ಮಾದರಿಯ ಕ್ರಿಕೆಟ್‌ನಿಂದ ದೂರವಾಗುವ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ಭಾರತ vs ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯ: ಸಾಮಾಜಿಕ ಜಾಲತಾಣದಿಂದ ಸಾನಿಯಾ ಮಿರ್ಜಾ ಹೊರಕ್ಕೆಭಾರತ vs ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯ: ಸಾಮಾಜಿಕ ಜಾಲತಾಣದಿಂದ ಸಾನಿಯಾ ಮಿರ್ಜಾ ಹೊರಕ್ಕೆ

ಕಳೆದ ಒಂದು ದಶಕದಿಮದ ಆಸ್ಟ್ರೇಲಿಯಾದ ಉತ್ತಮ ವೇಗಿಗಳ ಸಾಲಿನಲ್ಲಿ ಪ್ಯಾಟಿನ್ಸನ್ ಕೂಡ ಗುರುತಿಸಿಕೊಳ್ಳುತ್ತಾರೆ. 2011ರಲ್ಲಿ ಟೆಸ್ಟ್ ತಂಡಕ್ಕೆ ಪದಾರ್ಪಣೆ ಮಾಡಿದ ಅವರು ತಮ್ಮ ಚೊಚ್ಚಲ ಪಂದ್ಯದಲ್ಲಿಯೇ ಐದು ವಿಕೆಟ್‌ಗಳ ಗೊಂಚಲು ಪಡೆದು ಮಿಂಚಿದ್ದರು. ತಮ್ಮ ಮುಂದಿನ ಸರಣಿಯಲ್ಲಿಯೂ ಅವರು ಉತ್ತಮ ಪ್ರದರ್ಶನ ನೀಡುವ ಮೂಲಕ ಭರವಸೆ ಮೂಡಿಸಿದ್ದರು. ಆದರೆ ಪದೇ ಪದೆ ಕಾಡುತ್ತಿದ್ದ ಗಾಯ ತಂಡದಲ್ಲಿ ಸ್ಥಿರವಾಗಿ ಸ್ಥಾನ ಪಡೆಯಲು ಅಡ್ಡಿಯಾಯಿತು. ಮತ್ತೊಂದೆಡೆ ಇದೇ ಸಂದರ್ಭದಲ್ಲಿ ಜೋಶ್ ಹ್ಯಾಜಲ್‌ವುಡ್, ಪ್ಯಾಟ್ ಕಮ್ಮಿನ್ಸ್ ಹಾಗೂ ಮಿಚೆಲ್ ಸ್ಟಾರ್ಕ್ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಮಿಂಚಿ ಹರಿಸುತ್ತಿದ್ದ ಕಾರಣ ಇತ್ತೀಚೆಗೆ ಆಡುವ ಬಳಗದಲ್ಲಿ ನಿರಂತರವಾಗಿ ಸ್ಥಾನ ಕಾಪಾಡಿಕೊಳ್ಳಲು ಕೂಡ ವಿಫಲವಾದರು.

ಟಿ20 ವಿಶ್ವಕಪ್: ಭಾರತದ ವಿರುದ್ಧ ಪಾಕಿಸ್ತಾನ ಗೆಲ್ಲುವ ಸಾಧ್ಯತೆ ಹೆಚ್ಚಿದೆ; ಕಾರಣ ಬಿಚ್ಚಿಟ್ಟ ಸೆಹ್ವಾಗ್!ಟಿ20 ವಿಶ್ವಕಪ್: ಭಾರತದ ವಿರುದ್ಧ ಪಾಕಿಸ್ತಾನ ಗೆಲ್ಲುವ ಸಾಧ್ಯತೆ ಹೆಚ್ಚಿದೆ; ಕಾರಣ ಬಿಚ್ಚಿಟ್ಟ ಸೆಹ್ವಾಗ್!

ಹಾಗಿದ್ದರೂ ಪ್ಯಾಟ್ ಕಮ್ಮಿನ್ಸನ್ ಆಸ್ಟ್ರೇಲಿಯಾ ಟೆಸ್ಟ್ ತಂಡದ ಸ್ಕ್ವಾಡ್‌ನಲ್ಲಿ ನಿರಂತರವಾಗಿ ಸ್ಥಾನ ಪಡೆಯುತ್ತಲೇ ಬಂದಿದ್ದಾರೆ. ಆದರೆ ಆಸ್ಟ್ರೇಲಿಯಾದ ಮೂವರು ಪ್ರಮುಖ ವೇಗಿಗಳಾದ ಜೋಶ್ ಹ್ಯಾಜಲ್‌ವುಡ್, ಪ್ಯಾಟ್ ಕಮ್ಮಿನ್ಸ್ ಹಾಗೂ ಮಿಚೆಲ್ ಸ್ಟಾರ್ಕ್ ಇವರಲ್ಲಿ ಯಾರಿಗಾದರೂ ವಿಶ್ರಾಂತಿ ನೀಡದರೆ ಮಾತ್ರ ಪ್ಯಾಟಿನ್ಸನ್ ಅವಕಾಶ ಪಡೆಯುವಂತಾಯಿತು.

ಟಿ20 ವಿಶ್ವಕಪ್: ಟೀಮ್ ಇಂಡಿಯಾ ಆಟಗಾರರಿಗೆ ಹೆಚ್ಚಿನ ಸಿದ್ಧತೆಯ ಅವಶ್ಯಕತೆಯಿಲ್ಲ: ರವಿ ಶಾಸ್ತ್ರಿಟಿ20 ವಿಶ್ವಕಪ್: ಟೀಮ್ ಇಂಡಿಯಾ ಆಟಗಾರರಿಗೆ ಹೆಚ್ಚಿನ ಸಿದ್ಧತೆಯ ಅವಶ್ಯಕತೆಯಿಲ್ಲ: ರವಿ ಶಾಸ್ತ್ರಿ

ಜೇಮ್ಸ್ ಪ್ಯಾಟಿನ್ಸನ್ ಈವರೆಗೆ ಆಸ್ಟ್ರೇಲಿಯಾ ಪರವಾಗಿ 21 ಟೆಸ್ಟ್ ಪಂದ್ಯಗಳನ್ನಾಡಿದ್ದು ಇದರಲ್ಲಿ 81 ವಿಕೆಟ್ ಸಂಪಾದಿಸಿದ್ದಾರೆ. ಇದರಲ್ಲಿ 4 ಐದು ವಿಕೆಟ್‌ಗಳ ಗೊಂಚಲು ಇದೆ. ಇದೀಗ ಜೇಮ್ಸ್ ಪ್ಯಾಟಿನ್ಸನ್ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿಯನ್ನು ಘೋಷಿಸಿದ್ದಾರೆ.

Virat Kohli ಹಾಗು Anushka Sharma UAEನಲ್ಲಿ ಕಾಲ ಕಳೆದಿದ್ದು ಹೀಗೆ | Oneindia Kannada

For Quick Alerts
ALLOW NOTIFICATIONS
For Daily Alerts
Story first published: Wednesday, October 20, 2021, 12:44 [IST]
Other articles published on Oct 20, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X