ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಾರ್ನರ್‌ ಮಗುವನ್ನು ಬಲಿ ತೆಗೆದುಕೊಂಡ ಚೆಂಡು ವಿರೂಪ ಪ್ರಕರಣ

ball tampering cost warner couple third child

ಬೆಂಗಳೂರು, ಮೇ 24: ಚೆಂಡು ವಿರೂಪ ಪ್ರಕರಣದಿಂದ ಒಂದು ವರ್ಷ ಕ್ರಿಕೆಟ್‌ನಿಂದ ನಿಷೇಧಕ್ಕೆ ಒಳಗಾಗಿರುವ ಆಸ್ಟ್ರೇಲಿಯಾದ ಕ್ರಿಕೆಟಿಗ ಡೇವಿಡ್ ವಾರ್ನರ್ ಮತ್ತೊಂದು ಆಘಾತಕ್ಕೆ ಒಳಗಾಗಿದ್ದಾರೆ.

ಚೆಂಡು ವಿರೂಪದ ಘಟನೆಯ ಪರಿಣಾಮವಾಗಿ ವಾರ್ನರ್ ದಂಪತಿ ತಮ್ಮ ಮೂರನೇ ಮಗುವನ್ನು ಕಳೆದುಕೊಂಡಿದ್ದಾರೆ.

ಚೆಂಡು ವಿರೂಪ ಪ್ರಕರಣ ದೋಷಿ ವಾರ್ನರ್‌ ಕ್ರಿಕೆಟ್‌ನಿಂದ ನಿವೃತ್ತಿಚೆಂಡು ವಿರೂಪ ಪ್ರಕರಣ ದೋಷಿ ವಾರ್ನರ್‌ ಕ್ರಿಕೆಟ್‌ನಿಂದ ನಿವೃತ್ತಿ

ಕ್ರಿಕೆಟ್ ಜಗತ್ತಿನ ಅತಿ ಅವಮಾನಕರ ಘಟನೆ ಎಂದೇ ಕರೆಯಲಾಗಿರುವ ಚೆಂಡು ವಿರೂಪದಲ್ಲಿ ಕ್ಯಾಮೆರಾಗಳು ಡೇವಿಡ್ ವಾರ್ನರ್‌ ಅವರತ್ತ ತಿರುಗಿದ್ದವು. ವಾರ್ನರ್ ವಿರುದ್ಧ ತೀವ್ರ ಆಕ್ರೋಶ, ಟೀಕೆಗಳು ವ್ಯಕ್ತವಾಗಿದ್ದರೆ, ಇನ್ನು ಕೆಲವರು ಅವರ ಕುರಿತು ಮೃದು ಧೋರಣೆ ತಾಳಿದ್ದರು.

ಇಂತಹ ಸಂದರ್ಭದಲ್ಲಿ ವಾರ್ನರ್‌ಗೆ ಬೆಂಬಲವಾಗಿ ನಿಂತು, ಭರವಸೆ ತುಂಬಿದ್ದು ಅವರ ಪತ್ನಿ ಕ್ಯಾಂಡೈಸ್ ವಾರ್ನರ್. ಆದರೆ, ಅವರು ತಮ್ಮೊಳಗಿನ ಆಘಾತವನ್ನು ತಾಳಿಕೊಳ್ಳದಾದರು.

ಈಗಾಗಲೇ ಮೂರು ಮತ್ತು ಎರಡು ವರ್ಷದ ಮಕ್ಕಳನ್ನು ಹೊಂದಿರುವ ವಾರ್ನರ್ ದಂಪತಿ, ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ನಲ್ಲಿ ಪಂದ್ಯವಾಡುವ ವೇಳೆಯಲ್ಲಿಯೇ ಮೂರನೇ ಮಗುವನ್ನು ಕುಟುಂಬಕ್ಕೆ ಬರಮಾಡಿಕೊಳ್ಳುವ ಸೂಚನೆ ಸಿಕ್ಕಿತ್ತು.

ಮತ್ತೊಬ್ಬ ಕಿರಿ ವಾರ್ನರ್ ಮನೆಗೆ ಬರುವ ಸಂಭ್ರಮ ಅವರಲ್ಲಿ ತುಂಬಿತ್ತು. ಆದರೆ, ಈ ಮಗು ಎಷ್ಟು ಕಾಲ ನನ್ನೊಂದಿಗೆ ಇರುತ್ತದೆ ಎಂಬುದು ನಮಗೆ ಗೊತ್ತಿರಲಿಲ್ಲ ಎಂದು ಕಾಂಡೈಸ್ ನೋವಿನಿಂದ ಹೇಳಿದ್ದಾರೆ.

ಮೂರನೇ ಕ್ರಿಕೆಟ್ ಟೆಸ್ಟ್ ಪಂದ್ಯದ ವೇಳೆ ಚೆಂಡು ವಿರೂಪ ಪ್ರಕರಣ ಹೊರಬಂದಿತ್ತು. ಇದರಲ್ಲಿ ಸಿಲುಕಿಕೊಂಡ ವಾರ್ನರ್, ಸ್ಟೀವ್ ಸ್ಮಿತ್, ಕ್ಯಾಮೆರಾನ್ ಬೆನ್‌ಕ್ರಾಫ್ಟ್ ಅವರು ತೀವ್ರ ಒತ್ತಡಕ್ಕೆ ಸಿಲುಕಿದ್ದರು.

ವಾರದ ಬಳಿಕ ವಾರ್ನರ್, ಸಿಡ್ನಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ವಾರ್ನರ್ ಕಣ್ಣೀರು ಹಾಕಿದ್ದರು. ಕಾಂಡೈಸ್ ಕೂಡ ಅಂದು ಬಿಕ್ಕಳಿಸಿ ಅತ್ತಿದ್ದರು. ಅದಾಗಿ ಕೆಲವೇ ದಿನಗಳಲ್ಲಿ ಗರ್ಭಿಣಿ ಕಾಂಡೈಸ್ ಗರ್ಭಪಾತಕ್ಕೆ ಒಳಗಾಗಿ ಮಗುವನ್ನು ಕಳೆದುಕೊಳ್ಳಬೇಕಾಯಿತು.

ಮೊದಲೇ ವಿವಾದದಿಂದ ತೀವ್ರ ನೋವು, ಆಘಾತಕ್ಕೆ ಒಳಗಾಗಿದ್ದ ವಾರ್ನರ್ ಕುಟುಂಬ ಇದರಿಂದ ಮತ್ತಷ್ಟು ತತ್ತರಿಸಿದೆ. ಅತೀವ ಒತ್ತಡ ಮತ್ತು ಹೋರಾಟದ ಜಂಜಾಟ ಮಗುವಿನ ಬೆಳವಣಿಗೆ ಮೇಲೆ ಪರಿಣಾಮ ಬೀರಿತು. ಇದರಿಂದ ರಕ್ತಸ್ರಾವ ಉಂಟಾಗಿ ಮಗುವನ್ನು ಕಳೆದುಕೊಳ್ಳಬೇಕಾಯಿತು ಎಂದು ಕಾಂಡೈಸ್ ದುಃಖದಿಂದ ಹೇಳಿಕೊಂಡಿದ್ದಾರೆ.

Story first published: Thursday, May 24, 2018, 19:16 [IST]
Other articles published on May 24, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X