ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಿಂಕ್‌ ಬಾಲ್‌ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ವಿರುದ್ಧ ಬಾಂಗ್ಲಾದೇಶ ಗೆಲ್ಲುತ್ತಾ?!

Bangladesh coach Domingo: Pink ball could work in our favour

ನವದೆಹಲಿ, ಅಕ್ಟೋಬರ್ 31: ಕ್ರಿಕೆಟ್‌ ರಂಗದಲ್ಲಿ ಭಾರತ ತಂಡಕ್ಕೆ ಪಾಕಿಸ್ಥಾನ ತಂಡ ಬದ್ಧ ಎದುರಾಳಿ ಎನ್ನೋದಕ್ಕೆ ಇತ್ತಂಡಗಳ ಕದನದ ವೇಳೆ ಕ್ರಿಕೆಟ್‌ ಅಭಿಮಾನಿಗಳು ವ್ಯಕ್ತಪಡಿಸುವ ಕುತೂಹಲವೇ ಸಾಕ್ಷಿ ಹೇಳುತ್ತೆ. ಪಾಕಿಸ್ತಾನ ಬಿಟ್ಟರೆ ಭಾರತಕ್ಕೆ ಎರಡನೇ ಬದ್ಧ ಎದುರಾಳಿಯಾಗಿ ಬಾಂಗ್ಲಾ ಗುರುತಿಸಿಕೊಂಡಿದೆ.

ಭಾರತ vs ಬಾಂಗ್ಲಾದೇಶ ಡೇ-ನೈಟ್ ಟೆಸ್ಟ್‌ ಕ್ರಿಕೆಟ್‌ ಟಿಕೆಟ್ ಬೆಲೆ ತೀರಾ ಕಮ್ಮಿ!ಭಾರತ vs ಬಾಂಗ್ಲಾದೇಶ ಡೇ-ನೈಟ್ ಟೆಸ್ಟ್‌ ಕ್ರಿಕೆಟ್‌ ಟಿಕೆಟ್ ಬೆಲೆ ತೀರಾ ಕಮ್ಮಿ!

ಭಾರತ-ಪಾಕಿಸ್ತಾನ ಪಂದ್ಯದಷ್ಟೇ ಕುತೂಹಲ ಭಾರತ-ಬಾಂಗ್ಲಾ ಪಂದ್ಯದ ವೇಳೆ ಅಭಿಮಾನಿಗಳಲ್ಲಿರುತ್ತೆ. ಭಾರತಕ್ಕೆ ಪ್ರವಾಸ ಕೈಗೊಂಡಿರುವ ಬಾಂಗ್ಲಾದೇಶ ಇದೇ ಮೊದಲ ಬಾರಿಗೆ ವಿರಾಟ್ ಕೊಹ್ಲಿ ಪಡೆದ ವಿರುದ್ಧ ಪಿಂಕ್‌ಬಾಲ್‌ ಟೆಸ್ಟ್‌ನಲ್ಲಿ ಪಾಲ್ಗೊಳ್ಳುತ್ತಿದೆ. ಇತ್ತಂಡಗಳ ಈ ಚೊಚ್ಚಲ ಪಿಂಕ್‌ಬಾಲ್ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾ ಮೇಲುಗೈ ಸಾಧಿಸುತ್ತಾ?

ಭಾರತ vs ಬಾಂಗ್ಲಾ: ಪಂದ್ಯಗಳ ದಿನಾಂಕ, ಸಮಯ, ಸಂಪೂರ್ಣ ಮಾಹಿತಿಭಾರತ vs ಬಾಂಗ್ಲಾ: ಪಂದ್ಯಗಳ ದಿನಾಂಕ, ಸಮಯ, ಸಂಪೂರ್ಣ ಮಾಹಿತಿ

ಮೊದಲ ಪಿಂಕ್‌ ಬಾಲ್‌ ಟೆಸ್ಟ್(ಡೇ ನೈಟ್‌ ಟೆಸ್ಟ್)ನಲ್ಲಿ ಬಾಂಗ್ಲಾ ಗೆಲ್ಲಲಿದೆ ಎಂದು ಬಾಂಗ್ಲಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ರಸೆಲ್ ಡೊಮಿಂಗೊ ಹೇಳಿದ್ದಾರೆ.

ಬಾಂಗ್ಲಾ ಟೈಗರ್ಸ್ ಜಯಿಸಲಿದೆ

ಬಾಂಗ್ಲಾ ಟೈಗರ್ಸ್ ಜಯಿಸಲಿದೆ

ಭಾರತ-ಬಾಂಗ್ಲಾ ನಡುವಣ ಚೊಚ್ಚಲ ಪಿಂಕ್‌ ಬಾಲ್‌ ಟೆಸ್ಟ್ ನಲ್ಲಿ ಬಾಂಗ್ಲಾ ಟೈಗರ್ಸ್ ಜಯಿಸಲಿದೆ ಎಂದಿರುವ ಬಾಂಗ್ಲಾ ಕೋಚ್ ರಸೆಲ್ ಡೊಮಿಂಗೊ ಅವರದ್ದೇ ಕಾರಣಗಳನ್ನು ಹೇಳಿದ್ದಾರೆ. ಎರಡೂ ತಂಡಗಳಿಗೂ ಪಿಂಕ್‌ ಬಾಲ್‌ ಟೆಸ್ಟ್ ಆಡಿ ಅನುಭವ ಇಲ್ಲದ್ದರಿಂದ ಗೆಲುವು ನಮ್ಮ ಪರವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಲಭಿಸಿದ ಅಪೂರ್ವ ಅವಕಾಶ

ಲಭಿಸಿದ ಅಪೂರ್ವ ಅವಕಾಶ

'ಒಬ್ಬ ಕೋಚ್ ಆಗಿ ಪಿಂಕ್‌ ಬಾಲ್‌ ಟೆಸ್ಟ್‌ನಲ್ಲಿ ಆಡುತ್ತಿರುವುದು ನಮಗೆ ಲಭಿಸಿದ ಅಪೂರ್ವ ಅವಕಾಶ ಎಂದು ಭಾವಿಸುತ್ತೇನೆ. ಭಾರತ ತಂಡ ಈ ಮೊದಲು ಪಿಂಕ್‌ ಬಾಲ್‌ ಟೆಸ್ಟ್‌ನಲ್ಲಿ ಆಡಿದೆ ಎಂದು ನಾನು ಭಾವಿಸಿಲ್ಲ. ನಾವೂ ಆಡಿಲ್ಲ. ಹೀಗಾಗಿ ಈಡನ್ ಗಾರ್ಡನ್ ಅಪೂರ್ವ ಪಂದ್ಯಕ್ಕೆ ಸಾಕ್ಷಿಯಾಗಲಿದೆ,' ಎಂದು ಡೊಮಿಂಗೊ ಹೇಳಿದರು.

ಗೆಲ್ಲಲು ಶ್ರಮಿಸುತ್ತೇವೆ

ಗೆಲ್ಲಲು ಶ್ರಮಿಸುತ್ತೇವೆ

ಮಾತು ಮುಂದುವರೆಸಿದ ರಸ್ಸೆಲ್, 'ಭಾರತ ಒಂದು ಅತ್ಯುತ್ತಮ ತಂಡವೆಂದು ನಮಗೆ ಗೊತ್ತಿದೆ. ಅದು ವಿಶ್ವ ನಂ.1 ತಂಡವಾಗಿರಬಹುದು. ಆದರೆ ಪಿಂಕ್‌ ಬಾಲ್ ಟೆಸ್ಟ್ ವಿಚಾರದಲ್ಲಿ ಎರಡೂ ತಂಡಗಳಲ್ಲಿ ಕೆಲವು ಅನಿಶ್ಚಿತತೆಯಿದೆ. ಪಂದ್ಯ ಏನಾಗಲಿದೆ ಎಂದು ಈಗಲೇ ಹೇಳುವಂತಿಲ್ಲ. ಈ ಅಂಶಗಳೇ ನಮಗೆ ಗೆಲ್ಲಲು ಅನುಕೂಲ ಮಾಡಿದೆ. ಗೆಲ್ಲುವ ನೆಲೆಯಲ್ಲಿ ನಾವು ಕೆಲಸ ಮಾಡುತ್ತೇವೆ,' ಎಂದರು. ಅಂದರೆ ಈ ಮೊದಲು ಭಾರತವೇನಾದರೂ ಪಿಂಕ್‌ ಬಾಲ್‌ ಟೆಸ್ಟ್‌ನಲ್ಲಿ ಆಡಿದ್ದರೆ ಬಾಂಗ್ಲಾ ಗೆಲ್ಲುವ ಸಾಧ್ಯತೆ ಕಡಿಮೆಯಿತ್ತು. ಆದರೆ ಎರಡೂ ತಂಡಗಳಿಗೂ ಈ ಟೆಸ್ಟ್ ಹೊಸತಾಗಿರುವುದರಿಂದ ನಮ್ಮಲ್ಲಿ ಗೆಲುವಿನ ಹುಮ್ಮಸ್ಸಿದೆ ಎಂಬರ್ಥದಲ್ಲಿ ರಸ್ಸೆಲ್ ಅಭಿಪ್ರಾಯಿಸಿದ್ದಾರೆ.

ಪಿಂಕ್‌ ಬಾಲ್ ಟೆಸ್ಟ್ ಪಂದ್ಯ

ಪಿಂಕ್‌ ಬಾಲ್ ಟೆಸ್ಟ್ ಪಂದ್ಯ

ಭಾರತ ಪ್ರವಾಸದಲ್ಲಿರುವ ಬಾಂಗ್ಲಾ, ನವೆಂಬರ್ 3ರಿಂದ 3 ಪಂದ್ಯಗಳ ಟಿ20 ಸರಣಿ ಆಡಲಿದೆ. ಆ ಬಳಿಕ ನವೆಂಬರ್ 14ರಿಂದ ಮೊದಲ ಟೆಸ್ಟ್, ನವೆಂಬರ್ 22ರಿಂದ ದ್ವಿತೀಯ ಟೆಸ್ಟ್ ಆಡಲಿದೆ. ಈ ಎರಡನೇ ಟೆಸ್ಟ್ ಪಂದ್ಯವೇ ಡೇ-ನೈಟ್‌ ಟೆಸ್ಟ್ ಅಥವಾ ಪಿಂಕ್‌ ಬಾಲ್‌ ಟೆಸ್ಟ್. ಪಂದ್ಯ 1.30 pmಗೆ ನಡೆಯುವುದನ್ನು ನಿರೀಕ್ಷಿಸಲಾಗಿದೆ.

Story first published: Thursday, October 31, 2019, 13:14 [IST]
Other articles published on Oct 31, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X