ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

U-19 ಚಾಂಪಿಯನ್ ಆದ ಬಾಂಗ್ಲಾ ವರ್ತನೆ ಜಂಟಲ್‌ಮೆನ್ ಗೇಮ್‌ಗೆ ಅವಮಾನ ! ವಿಡಿಯೋ

Bangladeshs Reaction Was Dirty After Win: Priyam Garg

ಕ್ರಿಕೆಟ್‌ಅನ್ನು ಜಂಟಲ್‌ಮೆನ್‌ ಗೇಮ್ ಎಂದು ಕರೆಯಲಾಗುತ್ತದೆ. ಅದಕ್ಕೆ ಕಾರಣ ಕ್ರಿಕೆಟ್‌ ಇದುವರೆಗೆ ಬಂದ ರೀತಿ. 1877 ರಿಂದ ಆರಂಭವಾದ ಅಂತಾರಾಷ್ಟ್ರೀಯ ಕ್ರಿಕೆಟ್‌ ಇಲ್ಲಿಯವರೆಗೂ ಈ ಹೆಸರಿಗೆ ತಕ್ಕದಾಗಿಯೇ ಬಂದಿದೆ. ಆದರೆ ಕೆಲ ಕೆಟ್ಟ್ ಘಟನೆಗಳು ಇದಕ್ಕೆ ಕಳಂಕ ತರುವಂತಿದೆ.

ಇದಕ್ಕೆ ಉದಾಹರಣೆ ಅಂಡರ್ 19 ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ತೋರಿದ ವರ್ತನೆ. ಗೆದ್ದ ಸಂಭ್ರಮದಲ್ಲಿ ಬಾಂಗ್ಲಾದೇಶದ ಅಂಡರ್ 19 ಕ್ರಿಕೆಟಿಗರು ನಡೆದುಕೊಂಡ ರೀತಿ ನಿಜಕ್ಕೂ ಅವಮಾನಕರ. ಇದಕ್ಕೆ ಭಾರತೀಯ ಅಂಡರ್‌19 ತಂಡದ ನಾಯಕ ಪ್ರಿಯಮ್ ಗಾರ್ಗ್ ಕೂಡ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

U-19 ವಿಶ್ವಕಪ್: ಭಾರತವನ್ನು ಮಣಿಸಿ ಚೊಚ್ಚಲ ಬಾರಿಗೆ ವಿಶ್ವಕಪ್ ಗೆದ್ದ ಬಾಂಗ್ಲಾದೇಶU-19 ವಿಶ್ವಕಪ್: ಭಾರತವನ್ನು ಮಣಿಸಿ ಚೊಚ್ಚಲ ಬಾರಿಗೆ ವಿಶ್ವಕಪ್ ಗೆದ್ದ ಬಾಂಗ್ಲಾದೇಶ

ಹಾಗಾದರೆ ಫೈನಲ್ ಪಂದ್ಯವನ್ನು ಗೆದ್ದ ಬಳಿಕ ಕ್ರೀಡಾಂಗಣದಲ್ಲಿ ನಡೆದಿದ್ದಾದರು ಏನು ಮುಂದೆ ನೋಡೋಣ:

ಫೈನಲ್ ಗೆದ್ದ ಬಳಿಕ...

ಭಾನುವಾರ ಫೈನಲ್ ಪಂದ್ಯವನ್ನು ಬಾಂಗ್ಲಾದೇಶ ಗೆದ್ದ ಬಳಿಕ ಸಂಭ್ರಮ ಎಲ್ಲೆ ಮೀರಿತ್ತು. ಗೆದ್ದ ಸಂಭ್ರಮದಲ್ಲಿ ಎದುರಾಳಿ ಟೀಮ್ ಇಂಡಿಯಾ ಆಟಗಾರರನ್ನು ವೈಯಕ್ತಿಕವಾಗಿ ಹೀಯಾಳಿಸುವ ಮಟ್ಟಕ್ಕೆ ಇಳಿದುಬಿಟ್ಟರು. ಕೆಲ ಕೆಟ್ಟರೀತಿಯಲ್ಲಿ ಕಮೆಂಟ್‌ಗಳನ್ನು ಮಾಡಿ ಟೀಮ್ ಇಂಡಿಯಾ ಕಿರಿಯರನ್ನು ಪ್ರಚೋದಿಸಲು ಆರಂಭಿಸಿದರು. ಕೊನೆಗೆ ಇದು ಮೈಕೈ ಮುಟ್ಟುವ ಹಂತಕ್ಕೂ ತಲುಪಿದ್ದು ದುರಾದೃಷ್ಟಕರ.

ಬಾಂಗ್ಲಾದ ವರ್ತನೆ

ಬಾಂಗ್ಲಾದ ವರ್ತನೆ " ಕೊಳಕು" ಎಂದ ನಾಯಕ

ಫೈನಲ್ ಗೆದ್ದ ಸಂಭ್ರಮದಲ್ಲಿ ಬಾಂಗ್ಲಾದೇಶದ ಆಟಗಾರರು ನಡೆದುಕೊಂಡ ವರ್ತನೆ ಕೊಳಕು ಎಂದು ತಂಡದ ನಾಯಕ ಪ್ರಿಯಮ್ ಗಾರ್ಗ್ ಹೇಳಿದ್ದಾರೆ. ಸೋಲು ಗೆಲುವು ಆಟದಲ್ಲಿ ಸಾಮಾನ್ಯ. ಆದರೆ ಈ ರೀತಿಯ ಘಟನೆಗಳು ನಡೆಯಬಾರದು ಎಂದು ಹೇಳಿದ್ದಾರೆ.

ಕ್ಷಮೆ ಕೇಳಿದ ಬಾಂಗ್ಲಾ ನಾಯಕ

ಕ್ಷಮೆ ಕೇಳಿದ ಬಾಂಗ್ಲಾ ನಾಯಕ

ಬಾಂಗ್ಲಾದೇಶದ ವರ್ತನೆಗೆ ತಕ್ಷಣವೇ ವ್ಯತಿರಿಕ್ತ ಪ್ರತಿಕ್ರಿಯೆಗಳು ಬರತೊಡಗಿದವು. ಅದಾದ ಬಳಿಕ ಬಾಂಗ್ಲಾದೇಶದ ನಾಯಕ ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು. ತಂಡದಿಂದಾದ ತಪ್ಪಿಗೆ ಬಾಂಗ್ಲಾದೇಶದ ನಾಯಕ ಅಕ್ಬರ್ ಅಲಿ ಕ್ಷಮೆಯನ್ನು ಕೇಳಿದ ಘಟನೆಯೂ ನಡೆಯಿದೆ. ತಂಡದ ವರ್ತನೆಗೆ ಕ್ಷಮೆಯಾಚಿಸುತ್ತೇನೆ. ಏನು ಆಯಿತೆಂದು ನನಗೂ ತಿಳಿಯುತ್ತಿಲ್ಲ. ಆದರೆ ಇದು ನಡೆಯಬಾರದಾಗಿತ್ತು ಎಂದು ನಡೆದಿರುವ ತಪ್ಪನ್ನು ಒಪ್ಪಿಕೊಂಡಿದ್ದಾರೆ.

ಆರಂಭದಿಂದಲೇ ಕೆಣಕಲು ಆರಂಭಿಸಿದ ಬಾಂಗ್ಲಾ

ಆರಂಭದಿಂದಲೇ ಕೆಣಕಲು ಆರಂಭಿಸಿದ ಬಾಂಗ್ಲಾ

ಬಾಂಗ್ಲಾದೇಶದ ಆಟಗಾರರು ಆರಂಭದಿಂದಲೇ ಕೆಟ್ಟದಾಗಿ ಭಾರತೀಯರನ್ನು ಆಡಲು ಆರಂಭಿಸಿದರು. ಎರಡನೇ ಓವರ್‌ನಲ್ಲಿ ಭಾರತದ ಆಟಗಾರ ದಿವ್ಯಾನ್ಶು ಸಕ್ಸೇನಾ ಬಾಂಗ್ಲಾ ಆಟಗಾರ ತನ್ಸಿಮ್ ಹಸನ್ ಶಕಿಬ್ ಎಸೆತವನ್ನು ಡಿಫೆಂಡ್ ಮಾಡಿದರು. ಇದನ್ನು ಹಿಡಿದುಕೊಂಡ ಬೌಲರ್ ಸಕಿಬ್ ವಿಕೆಟ್‌ಗೆ ಗುರಿಮಾಡಿ ಎಸೆಯುವ ಬದಲಾಗಿ ಬ್ಯಾಟ್ಸ್‌ಮನ್ ಗುರಿ ಮಾಡಿ ಚೆಂಡನ್ನು ಎಸೆದುಬಿಟ್ಟ. ಆದರೆ ಚೆಂಡು ಮೇಲೆ ಬೀಳುವುದನ್ನು ಸ್ವಲ್ಪದರಲ್ಲೇ ತಪ್ಪಿಸಿಕೊಂಡರು ಸಕ್ಸೇನಾ. ಇದಾದ ಬಳಿಕವೂ ಇದೇ ರಿತಿ ಅನವಶ್ಯಕ ವರ್ತನೆಗಳನ್ನು ಬಾಂಗ್ಲಾ ಆಟಗಾರರು ಪಂದ್ಯದುದ್ದಕ್ಕೂ ತೋರಿಸುತ್ತಲೇ ಇದ್ದರು.

Story first published: Monday, February 10, 2020, 14:06 [IST]
Other articles published on Feb 10, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X