ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಹೀನಾಯ ಸೋಲಿನ ಬಳಿಕ ಪಾಕ್‌ ನಾಯಕ ಸರ್ಫರಾಝ್‌ ಹೇಳಿದ್ದಿದು

World Cup 2019 : ಪಾಪ ಪಾಕಿಸ್ತಾನ ಸೋತಿದ್ದು ಯಾಕೆ ಗೊತ್ತಾ..? | Oneindia Kannada
Batting department failed to click, says Sarfaraz Ahmed

ನಾಟಿಂಗ್‌ಹ್ಯಾಮ್‌, ಮೇ 31: ಬ್ಯಾಟಿಂಗ್‌ ವೈಫಲ್ಯವೇ ವೆಸ್ಟ್‌ ಇಂಡೀಸ್‌ ವಿರುದ್ಧದ ಹೀನಾಯ ಸೋಲಿಗೆ ಕಾರಣ ಎಂದು ಪಾಕಿಸ್ತಾನ ತಂಡದ ನಾಯಕ ಸರ್ಫರಾಝ್‌ ಅಹ್ಮದ್‌ ಹೇಳಿದ್ದಾರೆ. ಪಾಕ್‌ ತಂಡ ಈ ಸೋಲಿನೊಂದಿಗೆ ಏಕದಿನ ಕ್ರಿಕೆಟ್‌ನಲ್ಲಿ ಸತತ 11 ಪಂದ್ಯಗಳನ್ನು ಸೋತಂತಾಗಿದ್ದು, ಪಾಕಿಸ್ತಾನ ತಂಡ ಒಡಿಐ ಕ್ರಿಕೆಟ್‌ನಲ್ಲಿ ನೀಡಿರುವ ಈವರೆಗಿನ ಅತ್ಯಂತ ಕಳಪೆ ಪ್ರದರ್ಶನ ಇದಾಗಿದೆ.

ವಿಶ್ವಕಪ್‌ನಲ್ಲಿ ಪಾಕಿಸ್ತಾನ ದಾಖಲಿಸಿರುವ ಕಡಿಮೆ ಮೊತ್ತದ ದಾಖಲೆಗಳಿವು!ವಿಶ್ವಕಪ್‌ನಲ್ಲಿ ಪಾಕಿಸ್ತಾನ ದಾಖಲಿಸಿರುವ ಕಡಿಮೆ ಮೊತ್ತದ ದಾಖಲೆಗಳಿವು!

ಶುಕ್ರವಾರ ನಾಟಿಂಗ್‌ಹ್ಯಾಮ್‌ನಲ್ಲಿರುವ ಟ್ರೆಂಟ್‌ಬ್ರಿಡ್ಜ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ತಂಡ 2 ಬಾರಿ ವಿಶ್ವ ಚಾಂಪಿಯನ್ಸ್‌ ವೆಸ್ಟ್‌ ಇಂಡೀಸ್‌ ಎದುರು 7 ವಿಕೆಟ್‌ಗಳ ಹೀನಾಯ ಸೋಲುಂಡಿತ್ತು. ಇನ್ನು ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಪಾಕ್‌ ಪಡೆ, ಕೇವಲ 105 ರನ್‌ಗಳಿಗೆ ಆಲ್‌ಔಟ್‌ ಆಯಿತು, ಇದು ವಿಶ್ವಕಪ್‌ ಇತಿಹಾಸದಲ್ಲಿ ಪಾಕಿಸ್ತಾನ ದಾಖಲಿಸಿದ 2ನೇ ಅತ್ಯಂತ ಕಡಿಮೆ ಮೊತ್ತ ಕೂಡ.

ವಿಶ್ವಕಪ್‌: ಇಂಡೊ-ಪಾಕ್‌ ಪಂದ್ಯದ ಬಗ್ಗೆ ರೈನಾ ಹೇಳಿದ್ದೇನು ಗೊತ್ತಾ?ವಿಶ್ವಕಪ್‌: ಇಂಡೊ-ಪಾಕ್‌ ಪಂದ್ಯದ ಬಗ್ಗೆ ರೈನಾ ಹೇಳಿದ್ದೇನು ಗೊತ್ತಾ?

ಪಂದ್ಯದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸರ್ಫರಾಜ್‌, "ಇಂತಹ ಪಿಚ್‌ಗಳಲ್ಲಿ ಮೊದಲಿಗೆ ಟಾಸ್‌ ಸೋತು ನಂತರ ಆರಂಭಿಕ ವಿಕೆಟ್‌ಗಳನ್ನು ಕಳೆದುಕೊಂಡರೆ ಪಂದ್ಯದಲ್ಲಿ ಮರಳಿ ಹಿಡಿತ ಕಂಡುಕೊಳ್ಳುವುದು ಬಹಳಾ ಕಷ್ಟ. ಇನ್ನೇನಿದ್ದರೂ ಧನಾತ್ಮಕ ಕ್ರಿಕೆಟ್‌ ಆಡಬೇಕಿದೆ. ಇಂದು ಬ್ಯಾಟಿಂಗ್‌ನಲ್ಲಿ ನಮ್ಮ ಪ್ರದರ್ಶನ ಚೆನ್ನಾಗಿರಲಿಲ್ಲ. ಎದುರಾಳಿ ತಂಡ ತನ್ನ ವೇಗದ ಬೌಲರ್‌ಗಳಿಂದಿಗೆ ಆಕ್ರಮಣಕಾರಿ ದಾಳಿ ನಡೆಸುತ್ತದೆ ಎಂಬುದನ್ನು ನಾವು ತಿಳಿದಿದ್ದೆವು. ಆದರೆ, ಶಾರ್ಟ್‌ಬಾಲ್‌ಗಳನ್ನು ಎದುರಿಸುವಲ್ಲಿ ನಮ್ಮ ಬ್ಯಾಟ್ಸ್‌ಮನ್‌ಗಳು ವಿಫಲರಾದರು,'' ಎಂದು ಹೇಳಿದ್ದಾರೆ.

ಪಾಕ್‌ ವಿರುದ್ಧ ಗೆದ್ದ ಬಳಿಕ ವಿಂಡೀಸ್‌ ನಾಯಕ ಹೋಲ್ಡರ್‌ ಹೇಳಿದ್ದಿದುಪಾಕ್‌ ವಿರುದ್ಧ ಗೆದ್ದ ಬಳಿಕ ವಿಂಡೀಸ್‌ ನಾಯಕ ಹೋಲ್ಡರ್‌ ಹೇಳಿದ್ದಿದು

ಆದರೂ ಪಂದ್ಯದಲ್ಲಿ ಪಾಕಿಸ್ತಾನ ತಂಡದ ವೇಗದ ಬೌಲರ್‌ ಮೊಹಮ್ಮದ್‌ ಆಮಿರ್‌ ಮೂರು ವಿಕೆಟ್‌ಗಳನ್ನು ಪಡೆದು ಗಮನ ಸೆಳೆದರು. "ನಮ್ಮ ಪಾಲಿಗೆ ಇಂದು ಕೆಟ್ಟ ದಿನ. ಆದರೆ, ನಮ್ಮ ತಂಡ ಪುಟಿದೇಳುತ್ತದೆ ಎಂಬ ವಿಶ್ವಾಸ ನನಗಿದೆ. ಆಮಿರ್‌ ಉತ್ತಮವಾಗಿ ಬೌಲಿಂಗ್‌ ನಡೆಸುತ್ತಿರುವುದು ಸಂತಸ ತಂದಿದೆ. ನಮ್ಮ ತಂಡಕ್ಕೆ ಇಂಗ್ಲೆಂಡ್‌ನಲ್ಲಿ ಸದಾ ಉತ್ತಮ ಬೆಂಬಲವೂ ಸಿಗುತ್ತದೆ,'' ಎಂದು ಅಹ್ಮದ್ ಆತ್ಮವಿಶ್ವಾಸ ಕಂಡುಕೊಳ್ಳುವ ಮಾತುಗಳನ್ನು ಆಡಿದ್ದಾರೆ.

ವಿಶ್ವಕಪ್‌: 'ದಿ ಯೂನಿವರ್ಸ್‌ ಬಾಸ್‌' ಮುಡಿಗೆ ಅಪರೂಪದ ವಿಶ್ವದಾಖಲೆವಿಶ್ವಕಪ್‌: 'ದಿ ಯೂನಿವರ್ಸ್‌ ಬಾಸ್‌' ಮುಡಿಗೆ ಅಪರೂಪದ ವಿಶ್ವದಾಖಲೆ

ವಿಶ್ವಕಪ್‌ಗೂ ಮುನ್ನ ಇಂಗ್ಲೆಂಡ್‌ ವಿರುದ್ಧದ ಏಕದಿನ ಸರಣಿಯಲ್ಲೂ ಪಾಕಿಸ್ತಾನ ತಂಡ 0-4 ಅಂತರದ ಹೀನಾಯ ಸೋಲನುಭವಿಸಿತ್ತು. ಅಷ್ಟೇ ಅಲ್ಲದೆ ಅಫಘಾನಿಸ್ತಾನ ವಿರುದ್ಧದ ಅಭ್ಯಾಸ ಪಂದ್ಯದಲ್ಲೂ ಆಘಾತ ಅನುಭವಿಸಿತ್ತು. ಪಾಕಿಸ್ತಾನ ತಂಡ ಜೂನ್‌ ೩ರಂದು ಆತಿಥೇಯ ಇಂಗ್ಲೆಂಡ್‌ ವಿರುದ್ಧ ಟ್ರೆಂಟ್‌ಬ್ರಿಡ್‌ನಲ್ಲೇ ತನ್ನ ಎರಡನೇ ಲೀಗ್‌ ಪಂದ್ಯವನ್ನಾಡಲಿದೆ.

Story first published: Friday, May 31, 2019, 23:47 [IST]
Other articles published on May 31, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X