ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

BBL: ಬಿಗ್‌ ಬ್ಯಾಷ್‌ ಲೀಗ್‌ನಲ್ಲಿ ಸ್ಟೀವ್ ಸ್ಮಿತ್ ಮೊದಲ ಶತಕ : ಐಪಿಎಲ್‌ ಮತ್ತು ಬಿಬಿಎಲ್‌ನಲ್ಲಿ ಶತಕ ಸಿಡಿಸಿದ 4ನೇ ಆಟಗಾರ

BBL 2023: Steve Smith Smashes Maiden Century In Big Bash League

ಆಸ್ಟ್ರೇಲಿಯಾದ ಶ್ರೇಷ್ಠ ಬ್ಯಾಟರ್ ಸ್ಟೀವ್ ಸ್ಮಿತ್ ಬಿಗ್ ಬ್ಯಾಷ್‌ ಲೀಗ್‌ನಲ್ಲಿ ತಮ್ಮ ಮೊದಲ ಶತಕ ಸಿಡಿಸಿದ್ದಾರೆ. ವಿಶೇಷವಾಗಿ ಸ್ಟೀವ್ ಸ್ಮಿತ್ 2023ರ ಐಪಿಎಲ್‌ ಹರಾಜಿನಿಂದ ಹೊರಗುಳಿದಿದ್ದರು. ಟಿ20 ಮಾದರಿಯಲ್ಲಿ ಸ್ಮಿತ್ ಆಟ ಮುಗಿಯಿತು ಎನ್ನುವಾಗಲೇ ಈ ಭರ್ಜರಿ ಶತಕ ಬಂದಿದೆ.

ಮಂಗಳವಾರ ಕಾಫ್ಸ್ ಹಾರ್ಬರ್ ನಲ್ಲಿ ನಡೆದ ಬಿಗ್ ಬ್ಯಾಷ್ ಲೀಗ್ ಪಂದ್ಯದಲ್ಲಿ ಅಡಿಲೇಡ್ ಸ್ಟ್ರೈಕರ್ಸ್ ವಿರುದ್ಧ ಭರ್ಜರಿ ಶತಕ ಸಿಡಿಸಿದರು. ಸಿಡ್ನಿ ಸಿಕ್ಸರ್ಸ್ ತಂಡದ ಪರವಾಗಿ ಆಡುವ ಸ್ಟೀವ್ ಸ್ಮಿತ್ ಶತಕದ ಮೂಲಕ ಬೃಹತ್ ಮೊತ್ತ ಕಲೆಹಾಕಲು ಕಾರಣವಾದರು. 56 ಎಸೆತಗಳಲ್ಲಿ 5 ಬೌಂಡರಿ 7 ಭರ್ಜರಿ ಸಿಕ್ಸರ್ ಸಹಿತ 101 ರನ್ ಗಳಿಸಿದರು.

IND Vs NZ 1st ODI: ಮೊದಲನೇ ಪಂದ್ಯದಲ್ಲಿ ಇಶಾನ್ ಕಿಶನ್ ಆಡೋದು ಖಚಿತ ಎಂದ ರೋಹಿತ್ ಶರ್ಮಾIND Vs NZ 1st ODI: ಮೊದಲನೇ ಪಂದ್ಯದಲ್ಲಿ ಇಶಾನ್ ಕಿಶನ್ ಆಡೋದು ಖಚಿತ ಎಂದ ರೋಹಿತ್ ಶರ್ಮಾ

ಮೊದಲು ಬ್ಯಾಟಿಂಗ್ ಮಾಡಿದ ಸಿಡ್ನಿ ಸಿಕ್ಸರ್ಸ್ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 203 ರನ್ ಗಳಿಸಿತು. ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಅಡಿಲೇಡ್ ಸ್ಟ್ರೈಕರ್ಸ್ 19 ಓವರ್ ಗಳಲ್ಲಿ 144 ರನ್‌ ಗಳಿಸುವಷ್ಟರಲ್ಲಿ ಆಲೌಟ್ ಆಗುವ ಮೂಲಕ 59 ರನ್‌ಗಳ ಸೋಲನುಭವಿಸಿತು. ಅಡಿಲೇಡ್ ಸ್ಟ್ರೈಕರ್ಸ್ ಪರವಾಗಿ ಮ್ಯಾಥ್ಯೂ ಶಾರ್ಟ್ 40 ಮತ್ತು ಅಲೆಕ್ಸ್ ಕ್ಯಾರಿ 54 ರನ್, ಹೋರಾಟ ವ್ಯರ್ಥವಾಯಿತು.

ಸಿಡ್ನಿ ಸಿಕ್ಸರ್ಸ್ ಪರವಾಗಿ ಆಡಲು 2.5 ಲಕ್ಷ ಆಸ್ಟ್ರೇಲಿಯನ್ ಡಾಲರ್ ಪಡೆದಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡಿದ ಕಾರಣ ಅವರು ಆರಂಭದಿಂದ ಬಿಗ್‌ ಬ್ಯಾಷ್‌ ಲೀಗ್‌ನಲ್ಲಿ ಆಡಲು ಸಾಧ್ಯವಾಗಿರಲಿಲ್ಲ. ಟೆಸ್ಟ್ ಸರಣಿ ಮುಕ್ತಾಯವಾದ ಬಳಿಕ ಬಿಬಿಎಲ್‌ನಲ್ಲಿ ಆಡಿದ ಸ್ಮಿತ್, ದಾಖಲೆ ಬರೆದರು.

BBL 2023: Steve Smith Smashes Maiden Century In Big Bash League

ಐಪಿಎಲ್ ಮತ್ತು ಬಿಬಿಎಲ್‌ನಲ್ಲಿ ಶತಕ

ಇಂಡಿಯನ್ ಪ್ರೀಮಿಯರ್ ಲೀಗ್ ಮತ್ತು ಬಿಗ್‌ ಬ್ಯಾಷ್‌ ಲೀಗ್‌ ಎರಡರಲ್ಲೂ ಶತಕ ಸಿಡಿಸಿದ ನಾಲ್ಕನೇ ಆಟಗಾರ ಎನ್ನುವ ಕೀರ್ತಿಗೆ ಅವರು ಭಾಜನರಾಗಿದ್ದಾರೆ. ಡೇವಿಡ್ ವಾರ್ನರ್, ಕ್ರಿಸ್ ಗೇಲ್ ಮತ್ತು ಶೇನ್ ವ್ಯಾಟ್ಸನ್ ಈವರೆಗೆ ಐಪಿಎಲ್ ಮತ್ತು ಬಿಬಿಎಲ್‌ನಲ್ಲಿ ಶತಕ ಸಿಡಿಸಿದ ದಾಖಲೆ ಮಾಡಿದ್ದರು.

ರಾಜಸ್ಥಾನ ರಾಯಲ್ಸ್ ಹಾಗೂ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡದ ಮಾಜಿ ನಾಯಕ ಸ್ಟೀವ್ ಸ್ಮಿತ್, 2023ರ ಐಪಿಎಲ್‌ ಹರಾಜಿನಿಂದ ದೂರವುಳಿದಿದ್ದರು. ಬಿಬಿಎಲ್‌ನಲ್ಲಿ ಸ್ಮಿತ್ ಶತಕ ಗಳಿಸಿದ ನಂತರ ಅವರು ಐಪಿಎಲ್‌ನಲ್ಲಿ ಆಡಬೇಕಿತ್ತು ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ.

Story first published: Tuesday, January 17, 2023, 21:29 [IST]
Other articles published on Jan 17, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X