ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಶೇರ್ ಇ ಬಾಂಗ್ಲಾದಲ್ಲಿ ಅಭ್ಯಾಸ ನಡೆಸುವ ಮುಷ್ಫಿಕರ್ ಮನವಿಗೆ ಬಿಸಿಬಿ ನಕಾರ

BCB rejects Mushfiqur Rahims request to train at Sher-e-Bangla

ಧಾಕಾ, ಜೂನ್ 4: ಶೇರ್ ಇ ಬಾಂಗ್ಲಾ ಸ್ಟೇಡಿಯಂನಲ್ಲಿ ಅಭ್ಯಾಸ ನಡೆಸುವುದಾಗಿ ಬಾಂಗ್ಲಾದೇಶ ಕ್ರಿಕೆಟ್‌ ಮಾಜಿ ನಾಯಕ ಮುಷ್ಫಿಕರ್ ರಹೀಮ್‌ ಮಾಡಿದ ಮನವಿಯನ್ನು ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ ತಿರಸ್ಕರಿಸಿದೆ. ಕೋವಿಡ್-19 ಆತಂಕವಿರುವುದರಿಂದ ಮುಷ್ಫಿಕರ್ ಅಭ್ಯಾಸ ನಡೆಸಲು ಅವಕಾಶ ನೀಡುತ್ತಿಲ್ಲ ಎಂದು ಬಿಸಿಬಿ ಹೇಳಿದೆ.

'ಆತ್ಮಹತ್ಯೆಗೆ ಯೋಚಿಸಿದ್ದೆ': ತೀವ್ರ ಖಿನ್ನತೆಗೆ ಒಳಗಾಗಿದ್ದ ಸಂದರ್ಭ ನೆನೆದ ಉತ್ತಪ್ಪ'ಆತ್ಮಹತ್ಯೆಗೆ ಯೋಚಿಸಿದ್ದೆ': ತೀವ್ರ ಖಿನ್ನತೆಗೆ ಒಳಗಾಗಿದ್ದ ಸಂದರ್ಭ ನೆನೆದ ಉತ್ತಪ್ಪ

ಬಾಂಗ್ಲಾದ ಮೀರ್‌ಪುರ್‌ನಲ್ಲಿರುವ ಶೇರ್ ಇ ಬಾಂಗ್ಲಾ ಸ್ಟೇಡಿಯಂನಲ್ಲಿ ಸೋಂಕುನಿವಾರಕ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ. ಈ ಕಾರಣದಿಂದಾಗಿ ತಂಡದ ಪ್ರಮುಖ ಆಟಗಾರರಿಗೆ ಮೈದಾನದಲ್ಲಿ ಅಭ್ಯಾಸ ನಡೆಸಲು ಅನುಮತಿ ನೀಡಲಾಗುತ್ತಿಲ್ಲ ಎಂದು ಬಿಸಿಬಿ ತಿಳಿಸಿದೆ.

ಗರ್ಭಿಣಿ ಆನೆ ಸಾವಿಗೆ ಕೊಹ್ಲಿ, ಸೈನಾ, ಛೆಟ್ರಿ, ಯಾದವ್ ಭಾವನಾತ್ಮಕ ಪ್ರತಿಕ್ರಿಯೆಗರ್ಭಿಣಿ ಆನೆ ಸಾವಿಗೆ ಕೊಹ್ಲಿ, ಸೈನಾ, ಛೆಟ್ರಿ, ಯಾದವ್ ಭಾವನಾತ್ಮಕ ಪ್ರತಿಕ್ರಿಯೆ

'ಮುಷ್ಫಿಕರ್ ನಮ್ಮ ಜೊತೆ ಸಂವಹನ ನಡೆಸಿದ್ದಾರೆ. ಶೇರ್ ಇ ಬಾಂಗ್ಲಾ ಸ್ಟೇಡಿಯಂನಲ್ಲಿ ಅವರು ವೈಯಕ್ತಿಕ ಅಭ್ಯಾಸ ನಡೆಸಲು ಬಯಸಿದ್ದರು. ಆದರೆ ಅಭ್ಯಾಸ ನಡೆಸಲು ಇದು ಸುರಕ್ಷಿತ ಸಮಯವಲ್ಲ. ನೀವು ಮನೆಯಲ್ಲೇ ಅಭ್ಯಾಸ ನಡೆಸಿ. ಅಭ್ಯಾಸ ಮುಖ್ಯ ಹೌದು, ಆದರೆ ಆಟಗಾರರ ಸುರಕ್ಷೆ ಇನ್ನೂ ಮುಖ್ಯ ಎಂದು ನಾವು ಅವರಿಗೆ ಹೇಳಿದ್ದೇವೆ,' ಎಂದು ಬಿಸಿಬಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿಝಾಮುದ್ದೀನ್ ಚೌಧರಿ ಹೇಳಿದ್ದಾರೆ.

3 ಶ್ರೀಲಂಕಾ ಆಟಗಾರರ ವಿರುದ್ಧ ಐಸಿಸಿಯಿಂದ ಮ್ಯಾಚ್‌ ಫಿಕ್ಸಿಂಗ್ ತನಿಖೆ3 ಶ್ರೀಲಂಕಾ ಆಟಗಾರರ ವಿರುದ್ಧ ಐಸಿಸಿಯಿಂದ ಮ್ಯಾಚ್‌ ಫಿಕ್ಸಿಂಗ್ ತನಿಖೆ

'ವೈಯಕ್ತಿವಾಗಿ ಅಭ್ಯಾಸ ನಡೆಸಬಹುದೇ ಎಂದು ಇತರ ಆಟಗಾರರೂ ನಮ್ಮನ್ನು ಕೇಳಿಕೊಂಡಿದ್ದಾರೆ. ಆದರೆ ನಮ್ಮ ಉತ್ತರ ಎಲ್ಲರಿಗೂ ಒಂದೇ. ನಾವೆಲ್ಲರೂ ಮೈದಾನವನ್ನು ಸೋಂಕುನಿವಾರಕವಾಗಿಸುವತ್ತ ಕಾರ್ಯನಿರ್ವಹಿಸುತ್ತಿದ್ದೇವೆ. ಆದರೆ ಕೆಲಸ ಇನ್ನೂ ಪೂರ್ಣಗೊಂಡಿಲ್ಲ,' ಎಂದು ಚೌಧರಿ ವಿವರಿಸಿದ್ದಾರೆ.

Story first published: Thursday, June 4, 2020, 20:26 [IST]
Other articles published on Jun 4, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X