ಐಪಿಎಲ್‌ ಉದ್ಘಾಟನೆಗೆ ಬಾಲಿವುಡ್ ತಾರಾ ಮೆರುಗು

Posted By:
Bollywood stars will perform in IPL 11 inauguration function

ಕ್ರಿಕೆಟ್‌ಗೆ ಗ್ಲಾಮರ್‌ ಟಚ್ ನೀಡಿದ ಐಪಿಎಲ್‌ನ 11ನೇ ಋತು ಏಪ್ರಿಲ್ 7 ರಿಂದ ಆರಂಭವಾಗುತ್ತಿದೆ. ಭಾರತದಲ್ಲಿ ಕ್ರಿಕೆಟ್ ಮತ್ತು ಬಾಲಿವುಡ್ ಜೊತೆಯಾಗೇ ಸಾಗುತ್ತದೆ ಎನ್ನಲಾಗುತ್ತದೆ. ಹಾಗಾಗಿ ಈ ಬಾರಿಯೂ ಐಪಿಎಲ್‌ ಉದ್ಘಾಟನೆಗೆ ಬಾಲಿವುಡ್ ಮಂದಿ ಗ್ಲಾಮರ್‌ ತುಂಬಲಿದ್ದಾರೆ.

ಏಪ್ರಿಲ್ 7 ರಂದು ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಇ ಉದ್ಘಾಟನೆ ನಡೆಯಲಿದ್ದು, ಅಂದು ಬಾಲಿವುಡ್ ಸ್ಟಾರ್ಗಳಾದ ಪರಿಣಿತಿ ಚೋಪ್ರಾ, ವರುಣ್ ಧವನ್, ಜಾಕ್ವೆಲಿನ್ ಫರ್ನಾಂಡೀಸ್ ಅವರುಗಳು ಕುಣಿದು ಕುಪ್ಪಳಿಸಲಿದ್ದಾರೆ.

ಐಪಿಎಲ್ 2018 : ಟಿಕೆಟ್ ಎಲ್ಲಿ ಸಿಗುತ್ತೆ? ಬೆಲೆ ಎಷ್ಟು?

ಅಂದಿನ ರಾತ್ರಿಯ ಸ್ಟಾರ್ ಪರ್ಮಾರ್‌ ಆಗಿ ಆಯ್ಕೆಮಾಡಲಾಗಿದ್ದ ರಣವೀರ್ ಸಿಂಗ್ ಅವರು ಕಾರಣಾಂತರಗಳಿಂದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಆಗುತ್ತಿಲ್ಲವಾದ್ದರಿಂದ ಅವರ ಬದಲಿಗೆ ಸೂಪರ್ ಸ್ಟಾರ್ ಹೃತಿಕ್ ರೋಷನ್ ಅವರು ಸ್ಟೇಜು ಏರಲಿದ್ದಾರೆ.

ಐಪಿಎಲ್ ವಿಶೇಷ ಪುಟ | ಪೂರ್ಣವೇಳಾಪಟ್ಟಿ | ಆರ್ ಸಿಬಿ ವೇಳಾಪಟ್ಟಿ

ಮನೊರಂಜನಾ ಕಾರ್ಯಕ್ರಮವು 5.30ಕ್ಕೆ ಪ್ರಾರಂಭವಾಗಿ ಪಂದ್ಯ ಶುರುವಾಗುವ 15 ನಿಮಿಷ ಮುಂಚಿನವರೆಗೂ ಅಂದರೆ 7.15ರ ವರೆಗೂ ನಡೆಯಲಿದೆ. ಮೊದಲ ಪಂದ್ಯವು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್‌ ನಡುವೆ ನಡೆಯಲಿದೆ.

ಪ್ರತಿ ಬಾರಿ ಬಾರಿ ಉದ್ಘಾಟನಾ ಸಮಾರಂಭಕ್ಕೆ ಎಲ್ಲ ತಂಡಗಳ ನಾಯಕರುಗಳು ಹಾಜರಿರುತ್ತಿದ್ದರು ಆದರೆ ಈ ಬಾರಿ ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಚೆನ್ನೈ ತಂಡದ ನಾಯಕ ಎಂ.ಎಸ್.ಧೋನಿ ಮಾತ್ರವೇ ಹಾಜರಿರುತ್ತಾರೆ.

ಫ್ಯಾಂಟಸಿ ಲೀಗ್ ನಲ್ಲಿ ಆಡಲು ಇಲ್ಲಿ ಕ್ಲಿಕ್ ಮಾಡಿ

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Wednesday, April 4, 2018, 16:48 [IST]
Other articles published on Apr 4, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ