ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮೊದಲ ಟಿ20: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 8 ವಿಕೆಟ್ ಭರ್ಜರಿ ಜಯ

Brilliant Kuldeep Yadav, KL Rahul give India winning start

ಲಂಡನ್, ಜು. 4: ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ಇಂಗ್ಲೆಂಡ್ ವಿರುದ್ಧ ಓಲ್ಡ್ ಟ್ರಾಫರ್ಡ್ ನಲ್ಲಿ ನಡೆದ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ 8 ವಿಕೆಟ್ ಭರ್ಜರಿ ಗೆಲುವು ಸಾಧಿಸಿದೆ. ಕೆಎಲ್ ರಾಹುಲ್ ಆಕರ್ಷಕ ಶತಕ (101) ಮತ್ತು ಕುಲ್ ದೀಪ್ ಯಾದವ್ ಭರ್ಜರಿ ಬೌಲಿಂಗ್ ನೆರವಿನಿಂದ ಭಾರತ, ಇಂಗ್ಲೆಂಡ್ ನೀಡಿದ್ದ 160 ರನ್ ಗುರಿಯನ್ನು 18.2 ಓವರ್ ಗಳಲ್ಲೇ (163ರನ್) ತಲುಪಿ ವಿಜಯದ ನಗು ಬೀರಿತು.

ಸ್ಕೋರ್ ಕಾರ್ಡ್

ಟಾಸ್ ಸೋಲು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಇಂಗ್ಲೆಂಡ್ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 159 ರನ್ ಪೇರಿಸಿ ಭಾರತಕ್ಕೆ 160ರ ಸಾಧಾರಣ ರನ್ ಗುರಿ ನೀಡಿತ್ತು. ಇಂಗ್ಲೆಂಡ್ ಪರ ಜೇಸನ್ ರಾಯ್ 30 (20), ಜೋಸ್ ಬಟ್ಲರ್ 69 (46), ಡೇವಿಡ್ ವಿಲ್ಲೆ ಅಜೇಯ 29 (15) ರನ್ ಬಾರಿಸಿ ತಂಡಕ್ಕೆ ತಕ್ಕಮಟ್ಟಿನ ರನ್ ಕೊಡುಗೆ ನೀಡಿದರು.

ಈ ಮೂವರನ್ನು ಬಿಟ್ಟರೆ ಇಂಗ್ಲೆಂಡ್ ನ ಮತ್ತೆಲ್ಲರೂ 10ರೊಳಗಿನ ರನ್ನಿಗೆ ಪೆವಿಲಿಯನ್ ದಾರಿ ಹಿಯುವ ಮೂಲಕ ಕಳಪೆ ಬ್ಯಾಟಿಂಗ್ ಗೆ ಸಾಕ್ಷಿಯಾದರು. ಅದರಲ್ಲೂ ಜಾನಿ ಬೈರ್ಸ್ಟೊ, ಕ್ರಿಸ್ ಜೊರ್ಡಾನ್ ಮತ್ತು ಜಾಯ್ ರೂಟ್ ಸೊನ್ನೆ ಸುತ್ತಿದರು.

ಚೇಸಿಂಗ್ ಗೆ ಇಳಿದ ಭಾರತ ಪರ ಶಿಖರ್ ಧವನ್ 4 (4), ರೋಹಿತ್ ಶರ್ಮಾ 32 (30) ರನ್ ಪೇರಿಸಿ ಬೇಗನೆ ಔಟಾದರು. ಆದರೆ ಅನಂತರ ಬ್ಯಾಟ್ ಎತ್ತಿಕೊಂಡ ರಾಹುಲ್ ಬ್ಯಾಟಿಂಗ್ ಅಬ್ಬರ ನಡೆಸಿದರು. 54 ಎಸೆತಗಳನ್ನು ಎದುರಿಸಿದ ರಾಹುಲ್ ಭರ್ಜರಿ 101ರನ್ ಕೊಡುಗೆಯಿತ್ತು ಅಜೇಯರಾಗಿ ಉಳಿದರು. ಕೊಹ್ಲಿಯೂ ಅಜೇಯ 20 (22) ರನ್ ಸೇರಿಸಿದರು.

ಇಂಗ್ಲೆಂಡ್ ಇನ್ನಿಂಗ್ಸ್ ವೇಳೆ ಬೌಲಿಂಗ್ ನಲ್ಲಿ ಕುಲ್ ದೀಪ್ ಯಾದವ್ ಮಿಂಚಿದರು. ಬರೀ 24 ರನ್ ನೀಡಿದ ಯಾದವ್ ಬರೋಬ್ಬರಿ 5 ವಿಕೆಟ್ ಕಬಳಿಸಿ ಎದುರಾಳಿಯನ್ನು ಕಾಡಿದರು. ಅದ್ಭುತ ಬೌಲಿಂಗ್ ಗಾಗಿ ಕುಲ್ ದೀಪ್ ಪಂದ್ಯಶ್ರೇಷ್ಠ ಪ್ರಶಸ್ತಿ ತನ್ನದಾಗಿಸಿಕೊಂಡರು.

Story first published: Wednesday, July 4, 2018, 10:11 [IST]
Other articles published on Jul 4, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X