ಆತ ನನ್ನ ಕಣ್ಣಲ್ಲಿ ನೀರು ತರಿಸಿದ: ಭಾರತೀಯನ ನೆನೆದ ಡೇಲ್ ಸ್ಟೇನ್

ಅಹ್ಮದಾಬಾದ್: ಸೋಮವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 21ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ 5 ವಿಕೆಟ್‌ ಸುಲಭ ಗೆಲುವನ್ನಾಚರಿಸಿತ್ತು. ಇದು ಕೆಕೆಆರ್‌ಗೆ ಟೂರ್ನಿಯಲ್ಲಿ ಲಭಿಸಿದ ಎರಡನೇ ಗೆಲುವು. ಕೋಲ್ಕತ್ತಾ ಗೆಲುವಿಗೆ ಯುವ ವೇಗಿ ಶಿವಂ ಮಾವಿ ಕೂಡ ಕೊಡುಗೆ ನೀಡಿದ್ದರು. ಒಟ್ಟು 4 ಓವರ್‌ ಎಸೆದಿದ್ದ ಶಿವಂ ಮಾವಿ ಕೇವಲ 13 ರನ್‌ ನೀಡಿ 1 ವಿಕೆಟ್‌ ಪಡೆದಿದ್ದರು.

ಕೋಡ್ ಮೂಲಕ ಪಂಜಾಬ್‌ಗೆ ಕೋಲ್ಕತ್ತಾದಿಂದ ಮೋಸ?: ಏನಿದು ವಿವಾದ?!ಕೋಡ್ ಮೂಲಕ ಪಂಜಾಬ್‌ಗೆ ಕೋಲ್ಕತ್ತಾದಿಂದ ಮೋಸ?: ಏನಿದು ವಿವಾದ?!

ಮಾವಿ ಎಸೆತಕ್ಕೆ ಸ್ಫೋಟಕ ಬ್ಯಾಟ್ಸ್‌ಮನ್‌ ಕ್ರಿಸ್ ಗೇಲ್ 0 ರನ್‌ಗೆ ವಿಕೆಟ್ ಒಪ್ಪಿಸಿ ನಿರ್ಗಮಿಸಿದ್ದರು. ವಿಶೇಷವೆಂದರೆ ಮಾವಿ ಎಸೆದ 4 ಓವರ್‌ಗಳಲ್ಲಿ 15 ಎಸೆತಗಳು ಡಾಟ್ ಅನ್ನಿಸಿದ್ದವು. ಇದೇ ಕಾರಣಕ್ಕೆ ಮಾವಿ ಪಂದ್ಯದ ವೇಳೆ ಗಮನ ಸೆಳೆದಿದ್ದರು.

ಸ್ಟೇನ್ ಆದರ್ಶನ ಎಂದಿದ್ದ ಮಾವಿ

ಸ್ಟೇನ್ ಆದರ್ಶನ ಎಂದಿದ್ದ ಮಾವಿ

ಪಂದ್ಯದ ಬಳಿಕ ಮಾತನಾಡಿದ್ದ ಮಾವಿ ಸುದ್ದಿಗಾರರ ಬಳಿ, ತನಗೆ ದಕ್ಷಿಣ ಆಫ್ರಿಕಾದ ಮಾರಕ ವೇಗಿ ಡೇಲ್ ಸ್ಟೇನ್ ಆದರ್ಶ ಬೌಲರ್. ಅವರಂತೆ ಬೌಲರ್ ಅನ್ನಿಸಿಕೊಳ್ಳಲು ಆಸೆ ಎಂದಿದ್ದರು. ಇದಕ್ಕೆ ಸ್ಟೇನ್ ಭಾವುಕರಾಗಿ ಪ್ರತಿಕ್ರಿಯಿಸಿದ್ದಾರೆ. ಮಾವಿ ಮಾತುಗಳು ನನ್ನ ಕಣ್ಣಲ್ಲಿ ನೀರು ತರಿಸಿತ್ತು ಎಂದು ಸ್ಟೇನ್ ಹೇಳಿದ್ದಾರೆ.

ನನ್ನ ಕಣ್ಣಲ್ಲಿ ನೀರಾಡಿತ್ತು

ನನ್ನ ಕಣ್ಣಲ್ಲಿ ನೀರಾಡಿತ್ತು

'ಪ್ರಮಾಣಿಕವಾಗಿ ಹೇಳೋದಾದ್ರೆ, ಆತನ ಮಾತುಗಳು ಕೇಳಿ ನನ್ನ ಕಣ್ಣಲ್ಲಿ ಬಹುತೇಕ ನೀರಾಡಿತ್ತು. ಪ್ರಪಂಚದಲ್ಲಿ ಎದುರಾಳಿ ದೇಶಗಳ ಜನರಲ್ಲಿ ಪರಿಣಾಮ ಬೀರುತ್ತೇನೆ ಎಂಬ ನಿರೀಕ್ಷೆಯಲ್ಲಿ ನಾನು ಯಾವತ್ತಿಗೂ ಈ ಆಟವನ್ನು ಆಡಿರಲಿಲ್ಲ,' ಎಂದು ಸ್ಟೇನ್ ನುಡಿದಿದ್ದಾರೆ. ಗಾಯಕ್ಕೀಡಾಗಿ ಸುದೀರ್ಘ ಕಾಲ ಸ್ಟೇನ್ ಮೈದಾನದಿಂದ ಹೊರಗಿದ್ದರಾದರೂ ಈಗಲೂ ಸ್ಟೇನ್ ಹೆಸರಿನಲ್ಲಿ ಅನೇಕ ದಾಖಲೆಗಳಿವೆ.

ಸ್ಟೇನ್ ಹೆಸರಲ್ಲಿ ಅದ್ಭುತ ದಾಖಲೆಗಳು

ಸ್ಟೇನ್ ಹೆಸರಲ್ಲಿ ಅದ್ಭುತ ದಾಖಲೆಗಳು

ಆಡಿದ ಕೆಲವೇ ಪಂದ್ಯಗಳಲ್ಲಿ ಸ್ಟೇನ್ ದಾಖಲೆ ಮಟ್ಟದಲ್ಲಿ ವಿಕೆಟ್‌ ಸಾಧನೆ ತೋರಿದ್ದಾರೆ. 93 ಟೆಸ್ಟ್‌ ಪಂದ್ಯಗಳಲ್ಲಿ 439 ವಿಕೆಟ್, 125 ಏಕದಿನ ಪಂದ್ಯಗಳಲ್ಲಿ 196 ವಿಕೆಟ್‌, 47 ಟಿ20ಐ ಪಂದ್ಯಗಳಲ್ಲಿ 64 ವಿಕೆಟ್, 95 ಐಪಿಎಲ್ ಪಂದ್ಯಗಳಲ್ಲಿ 97 ವಿಕೆಟ್ ಗಳಿಸಿದ್ದಾರೆ. ಕಳೆದ ಐಪಿಎಲ್‌ ಸೀಸನ್‌ನಲ್ಲಿ ಸ್ಟೇನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದರು. ಈ ಬಾರಿ ಐಪಿಎಲ್‌ನಿಂದ ದೂರ ಉಳಿಯಲು ಸ್ಟೇನ್ ನಿರ್ಧರಿಸಿದ್ದರು.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Tuesday, April 27, 2021, 17:52 [IST]
Other articles published on Apr 27, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X