ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಧೋನಿ ಹಿಂದಿಕ್ಕಿ ಗವಾಸ್ಕರ್ ಸಾಲಿಗೆ ಸೇರಿದ ವಿರಾಟ್ ಕೊಹ್ಲಿ

ಅಡಿಲೇಡ್, ಡಿ. 11 : ಟೆಸ್ಟ್ ಕ್ರಿಕೆಟ್ ನಲ್ಲಿ ತಮ್ಮ ಏಳನೇ ಶತಕ ಸಿಡಿಸಿದ ವಿರಾಟ್ ಕೊಹ್ಲಿ ಸುನೀಲ್ ಗವಾಸ್ಕರ್ ಮತ್ತು ವಿಜಯ್ ಹಜಾರೆ ಸಾಲಿಗೆ ಸೇರಿದ್ದಾರೆ. ನಾಯಕನಾಗಿ ಆಡಿದ ಪ್ರಥಮ ಪಂದ್ಯದಲ್ಲೇ ಶತಕ ಸಿಡಿಸಿದ ಶ್ರೇಯ ಪಡೆದುಕೊಂಡಿದ್ದಾರೆ.

ಕಾಯಂ ನಾಯಕ ಎಂಸ್ ಧೋನಿ ಗಾಯದ ಕಾರಣದಿಂದ ಹೊರಗುಳಿದಿದುದ್ದರಿಂದ ನಾಯಕನಾಗಿ ಆಡಲಿಳಿದ ಕೊಹ್ಲಿ ಜವಾಬ್ದಾರಿಯುತ ಶತಕ ಸಿಡಿಸಿ ಮಿಂಚಿದರು. ನಾಯಕನಾಗಿ ಮೊದಲ ಇನಿಂಗ್ಸ್ ನಲ್ಲೇ ಶತಕ ಸಿಡಿಸಿದ ಮೂರನೇ ಭಾರತೀಯ ಎಂಬ ದಾಖಲೆಯನ್ನು ಕೊಹ್ಲಿ ಗುರುವಾರ ತಮ್ಮ ಹೆಸರಿಗೆ ಬರೆಸಿಕೊಂಡರು. ನಾಯಕರಾಗಿ ದಿಲೀಪ್ ವೆಂಗ್ ಸರ್ಕಾರ್ ಪಂದ್ಯದ ದ್ವೀತಿಯ ಇನಿಂಗ್ಸ್ ನಲ್ಲಿ ಶತಕ ಸಾಧನೆ ಮಾಡಿದ್ದಾರೆ.

ಸ್ಕೋರ್ ಕಾರ್ಡ್ ನೋಡಿ

kohli

26 ವರ್ಷದ ಬಲಗೈ ಬ್ಯಾಟ್ಸ್ ಮನ್ ಕ್ರೀಸ್ ಗೆ ಬರುತ್ತಿದ್ದಂತೆ ಆಸ್ಟ್ರೇಲಿಯಾ ವೇಗಿ ಮಿಚೆಲ್ ಜಾನ್ಸನ್ ಅವರಿಂದ ಸಿಕ್ಕಿದ್ದು ಬೌನ್ಸರ್ ಸ್ವಾಗತ. ಕೊಹ್ಲಿ ಹೆಲ್ ಮೆಟ್ ಗೆ ತಾಗಿದ ಚಂಡು ಒಂದು ಕ್ಷಣ ಆಸೀಸ್ ಆಟಗಾರನ್ನು ತಬ್ಬಿಬ್ಬು ಮಾಡಿತ್ತು. ಫಿಲಿಫ್ ಹ್ಯೂಸ್ ದುರಂತ ಸಾವಿನ ನೆನಪು ಮತ್ತೆ ಆಟಗಾರರಿಗೆ ಕಾಡುವಂತಾಯಿತು.[ಹ್ಯೂಸ್ ಕುತ್ತಿಗೆಯನ್ನೇ ಸೀಳಿದ್ದ ಮಾರಕ ಚೆಂಡು]

ನಂತರ ಎಂದಿನ ತಮ್ಮ ಲಯಕ್ಕೆ ಮರಳಿದ ಕೊಹ್ಲಿ 158 ಎಸೆತಗಳಲ್ಲಿ ಶತಕ ದಾಖಲಿಸಿದರು. ಆಕ್ರಮಣಕಾರಿ ಆಟಕ್ಕೆ, ವರ್ತನೆಗೆ ಹೆಸರಾಗಿರುವ ಕೊಹ್ಲಿ ಶತಕ ಸಂಭ್ರಮದ ವೇಳೆ ಅಂಥ ನಡವಳಿಕೆಯನ್ನೇನೂ ತೋರಲಿಲ್ಲ. ತನ್ನಷ್ಟಕ್ಕೇ ಕೆಲ ಶಬ್ದಗಳನ್ನು ಹೇಳಿಕೊಂಡ ದೆಹಯಲಿ ಬ್ಯಾಟ್ಸ್ ಮನ್ ಹೆಲ್ ಮೆಟ್ ಮೇಲಿದ್ದ ತ್ರಿವರ್ಣ ಧ್ವಜಕ್ಕೆ ಗೌರವ ಸೂಚಿಸಿದರು.

115 ರನ್ ಗಳಿಸಿದ್ದ ವೇಳೆ ಜಾನ್ಸ್ ನ್ ಅವರ ಬೌನ್ಸರ್ ಗೆ ಫುಲ್ ಮಾಡಲು ಹೋಗಿ ವಿಕೆಟ್ ಒಪ್ಪಿಸಿದರು. ಈ ಶತಕದ ನೆರವಿನಲ್ಲಿ ಕೊಹ್ಲಿ ಎಂಸ್ ಧೋನಿ ಅವರನ್ನು ಹಿಂದೆ ಹಾಕಿದ್ದಾರೆ. ಕೇವಲ 30 ಪಂದ್ಯಗಳಿಂದ ವಿರಾಟ್ 7 ಶತಕ ದಾಖಲು ಮಾಡಿದ್ದಾರೆ. ಧೊನಿ 88 ಪಂದ್ಯಗಳಿಂದ 6 ಶತಕ ದಾಖಲಿಸಿದ್ದಾರೆ. ಅಲ್ಲದೇ ಸದ್ಯ ಭಾರತ ಟೆಸ್ಟ್ ತಂಡದಲ್ಲಿ ಅತಿ ಹೆಚ್ಚು ಶತಕ ದಾಖಲಿಸಿದವರ ಹೆಸರಿನಲ್ಲಿಯೂ ವಿರಾಟ್ ಮೊದಲಿಗರಾಗುತ್ತಾರೆ.[ಟೆಸ್ಟ್: ಏಳನೇ ಆಕರ್ಷಕ ಶತಕ ಸಿಡಿಸಿದ ವಿರಾಟ್ ಕೊಹ್ಲಿ]

ನಾಯಕನಾದ ಮೊದಲ ಪಂದ್ಯದಲ್ಲಿ ಶತಕ ಸಾಧನೆ ಮಾಡಿದವರು
ಇಂಗ್ಲೆಂಡ್ ವಿರುದ್ಧ ವಿಜಯ್ ಹಜಾರೆ-164* (1951)
ನ್ಯೂಜಿಲೆಂಡ್ ವಿರುದ್ಧ ಸುನೀಲ್ ಗವಾಸ್ಕರ್- (1976)
ವೆಸ್ಟ್ ಇಂಡೀಸ್ ವಿರುದ್ಧ ದಿಲೀಪ್ ವೆಂಗ್ ಸರ್ಕಾರ್-102 (1987)
ಆಸ್ಟ್ರೇಲಿಯಾ ವಿರುದ್ಧ ವಿರಾಟ್ ಕೊಹ್ಲಿ-115 (2014)

Story first published: Wednesday, January 3, 2018, 10:12 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X