ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕಾಮನ್‌ವೆಲ್ತ್‌ ಗೇಮ್ಸ್‌ 2022: ಭಾರತದ ವನಿತೆಯರಿಗೆ ಪಾಕಿಸ್ತಾನ ವನಿತೆಯರ ಸವಾಲು

India women vs pakistan women

ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್‌ ಗೇಮ್ಸ್ ಎರಡನೇ ಪಂದ್ಯದಲ್ಲಿ ಭಾರತ ವನಿತೆಯರು ಮತ್ತು ಪಾಕಿಸ್ತಾನ ವನಿತೆಯರು ಭಾನುವಾರ ಮುಖಾಮುಖಿಯಾಗುತ್ತಿದ್ದಾರೆ. ಆರಂಭಿಕ ಪಂದ್ಯದಲ್ಲಿ ಸೋತಿರುವ ಉಭಯ ತಂಡಗಳು ಇಂದು ಗೆಲ್ಲಲೇಬೇಕಾದ ಒತ್ತಡದಲ್ಲಿ ಕಣಕ್ಕಿಳಿಯಲಿವೆ.

ಹರ್ಮನ್‌ಪ್ರೀತ್ ನಾಯಕತ್ವದ ಟೀಂ ಇಂಡಿಯಾ ಆರಂಭಿಕ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವನಿತೆಯರ ವಿರುದ್ಧ ಗೆಲ್ಲಬಹುದಾದ ಪಂದ್ಯವನ್ನ ಕೈ ಚೆಲ್ಲಿತು ಆಸಿಸ್ ವನಿತೆಯರು 3 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿದರು. ಮತ್ತೊಂದೆಡೆ ಪಾಕಿಸ್ತಾನ ವನಿತೆಯರು ಒಂದೂ ಅಂತರಾಷ್ಟ್ರೀಯ ಪಂದ್ಯವನ್ನಾಡ ಬಾರ್ಬಡೋಸ್ ವಿರುದ್ಧ 15ರನ್‌ಗಳ ಸೋಲನ್ನ ಅನುಭವಿಸಿ ಭಾರೀ ಮುಖಭಂಗ ಎದುರಿಸಿದರು.

ಪಿಚ್‌ ರಿಪೋರ್ಟ್‌

ಪಿಚ್‌ ರಿಪೋರ್ಟ್‌

ಬರ್ಮಿಂಗ್‌ಹ್ಯಾಮ್‌ನ ಪಿಚ್‌ ಒಳ್ಳೆಯ ಹೋರಾಟಕ್ಕೆ ಸಾಕ್ಷಿಯಾಗಿದ್ದು, ಬ್ಯಾಟಿಂಗ್‌ಗೆ ಹೆಚ್ಚು ನೆರವಾಗುತ್ತದೆ. ಉಭಯ ತಂಡಗಳು ಬಲಿಷ್ಠ ಬೌಲಿಂಗ್‌ ಲೈನ್ ಅಪ್ ಹೊಂದಿರುವುದರಿಂದ ಉಭಯ ತಂಡಗಳ ಬ್ಯಾಟರ್‌ಗಳು ಕಠಿಣ ಪರೀಕ್ಷೆ ಎದುರಿಸಲಿದ್ದಾರೆ.

ಟಾಸ್‌ ಗೆದ್ದ ನಾಯಕರು ಬಹುತೇಕ ಬೌಲಿಂಗ್‌ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಯಿದ್ದು, ನಂತರ ಚೇಸಿಂಗ್‌ಗೆ ಮುಂದಾಗಬಹುದು. ಪ್ರಸ್ತುತ ಸ್ಥಳದಲ್ಲಿ ಮಳೆ ಬರುವ ಸಾಧ್ಯತೆ ಕಡಿಮೆ ಇದೆ. ಪಂದ್ಯ ಭಾರತೀಯ ಕಾಲಮಾನ ಮಧ್ಯಾಹ್ನ 3.30ಕ್ಕೆ ಪ್ರಾರಂಭಗೊಳ್ಳಲಿದ್ದು, ಸೋನಿ ಟೆನ್‌ ಸ್ಪೋರ್ಟ್ಸ್ ಮತ್ತು ಸೋನಿ ಲಿವ್ ಆ್ಯಪ್‌ನಲ್ಲಿ ನೇರಪ್ರಸಾರ ವೀಕ್ಷಿಸಬಹುದು.

ಭಾರತ ಮತ್ತು ಪಾಕಿಸ್ತಾನ ಪ್ಲೇಯಿಂಗ್ ಇಲೆವೆನ್‌

ಭಾರತ ಮತ್ತು ಪಾಕಿಸ್ತಾನ ಪ್ಲೇಯಿಂಗ್ ಇಲೆವೆನ್‌

ಭಾರತ ವನಿತೆಯರು: ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ಹರ್ಮನ್‌ಪ್ರೀತ್ ಕೌರ್ (ನಾಯಕಿ), ಜೆಮಿಮಾ ರಾಡ್ರಿಗಸ್, ಹರ್ಲೀನ್ ಡಿಯೋಲ್, ದೀಪ್ತಿ ಶರ್ಮಾ, ರಾಧಾ ಯಾದವ್, ರಾಜೇಶ್ವರಿ ಗಾಯಕ್ವಾಡ್, ಮೇಘನಾ ಸಿಂಗ್, ರೇಣುಕಾ ಸಿಂಗ್ ಠಾಕೂರ್

ಪಾಕಿಸ್ತಾನ ವನಿತೆಯರು: ಮುನೀಬಾ ಅಲಿ (ವಿಕೆಟ್ ಕೀಪರ್), ಇರಾಮ್ ಜಾವೇದ್, ಬಿಸ್ಮಾ ಮರೂಫ್ (ನಾಯಕಿ), ಒಮೈಮಾ ಸೊಹೈಲ್, ನಿದಾ ದಾರ್, ಅಲಿಯಾ ರಿಯಾಜ್, ಆಯೇಶಾ ನಸೀಮ್, ಫಾತಿಮಾ ಸನಾ, ತುಬಾ ಹಸನ್, ಡಯಾನಾ ಬೇಗ್, ಅನಮ್ ಅಮೀನ್

CWG 2022: ವೇಟ್‌ಲಿಫ್ಟಿಂಗ್‌ನಲ್ಲಿ ಚಿನ್ನ ಗೆದ್ದ ಮೀರಾಬಾಯಿ ಚಾನು; ಭಾರತಕ್ಕೆ 3ನೇ ಪದಕ

ಭಾರತದ ಇಬ್ಬರು ಸ್ಟಾರ್ ಪ್ಲೇಯರ್ಸ್

ಭಾರತದ ಇಬ್ಬರು ಸ್ಟಾರ್ ಪ್ಲೇಯರ್ಸ್

ಶಫಾಲಿ ವರ್ಮಾ:

ಪ್ರಸ್ತುತ ಟೀಂ ಇಂಡಿಯಾ ಪರ ಸ್ಟಾರ್ ಬ್ಯಾಟರ್ ಆಗಿ ಶಫಾಲಿ ವರ್ಮಾ ಗುರುತಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯದಲ್ಲಿ 33 ಎಸೆತಗಳಲ್ಲಿ 48ರನ್ ಸಿಡಿಸಿದ ಶಫಾಲಿ ಅಗ್ರೆಸ್ಸಿವ್ ಪ್ಲೇಯರ್ ಆಗಿದ್ದಾರೆ. ಕಾಂಗರೂ ವಿರುದ್ಧದ ಇನ್ನಿಂಗ್ಸ್‌ನಲ್ಲಿ 9 ಬೌಂಡರಿ ಕಲೆಹಾಕಿದ್ದ ಶಫಾಲಿ, ಪಾಕ್ ವಿರುದ್ಧವೂ ಅಂತಹದ್ದೇ ಪ್ರದರ್ಶನ ನೀಡುವ ನಿರೀಕ್ಷೆ ಹೊಂದಿದ್ದಾರೆ.

ಕಾಮನ್‌ವೆಲ್ತ್ ಗೇಮ್ಸ್: ಪದಕ ಗೆದ್ದ ಗುರುರಾಜ್ ಪೂಜಾರಿ: ಕನ್ನಡಿಗನ ಪರಿಶ್ರಮಕ್ಕೆ ಪ್ರಧಾನಿ ಮೋದಿ ಪ್ರಶಂಸೆ

ರೇಣುಕಾ ಸಿಂಗ್:

ಪೇಸ್ ಬೌಲಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ರೇಣುಕಾ ಸಿಂಗ್ ಆಸ್ಟ್ರೇಲಿಯಾ ವನಿತೆಯರನ್ನ ಸೋಲಿನ ದವಡೆಗೆ ಸಿಲುಕಿಸಿದ್ದರು. ತನ್ನ ನಾಲ್ಕು ಓವರ್ ಖೋಟಾದಲ್ಲಿ ಕೇವಲ 18ರನ್ ನೀಡಿದ ರೇಣುಕಾ ನಾಲ್ಕು ಪ್ರಮುಖ ವಿಕೆಟ್‌ ಪಡೆದರು. ಪಾಕಿಸ್ತಾನ ವಿರುದ್ಧವೂ ಆರಂಭದಲ್ಲೇ ಪ್ರಮುಖ ವಿಕೆಟ್ ಉರುಳಿಸುವ ಗುರಿಯನ್ನಿಟ್ಟುಕೊಂಡಿದ್ದಾರೆ.

ಭಾರತ ಪಾಕಿಸ್ತಾನ ಪಂದ್ಯ ಒಂದು ಕಡೆಯಾದ್ರೆ, ಭಾನುವಾರ ಎರಡನೇ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ಮತ್ತು ಬಾರ್ಬಡೋಸ್ ಮುಖಾಮುಖಿಯಾಗುತ್ತಿವೆ. ಗ್ರೂಪ್ ಎನಲ್ಲಿ ಉಭಯ ತಂಡಗಳು ತಲಾ ಒಂದು ಗೆಲುವು ಸಾಧಿಸಿವೆ.

ಆಸ್ಟ್ರೇಲಿಯಾ ವರ್ಸಸ್ ಬಾರ್ಬಡೋಸ್ ಪ್ಲೇಯಿಂಗ್ ಇಲೆವೆನ್

ಆಸ್ಟ್ರೇಲಿಯಾ ವರ್ಸಸ್ ಬಾರ್ಬಡೋಸ್ ಪ್ಲೇಯಿಂಗ್ ಇಲೆವೆನ್

ಆಸ್ಟ್ರೇಲಿಯಾ ಮಹಿಳೆಯರು: ಅಲಿಸ್ಸಾ ಹೀಲಿ (ವಿಕೆಟ್‌), ಬೆತ್ ಮೂನಿ, ಮೆಗ್ ಲ್ಯಾನಿಂಗ್ (ನಾಯಕಿ), ತಹ್ಲಿಯಾ ಮೆಕ್‌ಗ್ರಾತ್, ರೇಚೆಲ್ ಹೇನ್ಸ್, ಆಶ್ಲೀ ಗಾರ್ಡ್ನರ್, ಗ್ರೇಸ್ ಹ್ಯಾರಿಸ್, ಜೆಸ್ ಜೊನಾಸೆನ್, ಅಲಾನಾ ಕಿಂಗ್, ಮೇಗನ್ ಶುಟ್, ಡಾರ್ಸಿ ಬ್ರೌನ್

ಬಾರ್ಬಡೋಸ್ ಮಹಿಳೆಯರು: ಹೇಲಿ ಮ್ಯಾಥ್ಯೂಸ್ (ನಾಯಕಿ), ಡಿಯಾಂಡ್ರಾ ಡಾಟಿನ್, ಕಿಸಿಯಾ ನೈಟ್, ಕಿಶೋನಾ ನೈಟ್, ಆಲಿಯಾ ಅಲೀನ್, ತ್ರಿಶನ್ ಹೋಲ್ಡರ್, ಅಲಿಸಾ ಸ್ಕ್ಯಾಂಟಲ್‌ಬರಿ, ಷಕೇರಾ ಸೆಲ್ಮನ್, ಶಾಮಿಲಿಯಾ ಕಾನ್ನೆಲ್, ಆಲಿಯಾ ವಿಲಿಯಮ್ಸ್, ಶಾನಿಕಾ ಬ್ರೂಸ್

Story first published: Sunday, July 31, 2022, 8:49 [IST]
Other articles published on Jul 31, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X