ಐಪಿಎಲ್ ಪ್ರಸಾರ ಹಕ್ಕು ಮತ್ತು ಪ್ರಾಯೋಜಕತ್ವಕ್ಕೆ ನೂಕು ನುಗ್ಗಲು

Posted By:
computation between corporate companies to sponsor IPL

ನವ ದೆಹಲಿ, ಮಾರ್ಚ್ 13: ಐಪಿಎಲ್ ಪ್ರಸಾರ ಹಕ್ಕು ಮತ್ತು ಪ್ರಾಯೋಜಕತ್ವಕ್ಕೆ ಕಂಪೆನಿಗಳು ತಾಮುಂದು ನಾ ಮುಂದು ಎಂದು ಮುಂದೆ ಬರುತ್ತಿವೆಯಂತೆ.

ಈಗಾಗಲೇ ಪ್ರಸಾರ ಹಕ್ಕಿಗಾಗಿ ಹರಾಜು ಪ್ರಕ್ರಿಯೆ ನಡೆದಿದ್ದು, ಸ್ಟಾರ್ ಸಮೂಹ ಐಪಿಎಲ್ ಪ್ರಸಾರದ ಹಕ್ಕನ್ನು ಬಾಚಿಕೊಂಡಿದೆ. ಇನ್ನು ಸಿಯೆಟ್, ಪೇಟಿಎಂ ನಂತಹ ನಿಯಮಿತ ಐಪಿಎಲ್ ಪ್ರಾಯೋಜಕರು ಈಗಾಗಲೇ ಪ್ರಾಯೋಕತ್ವಕ್ಕೆ ನೊಂದಣಿ ಮಾಡಿಕೊಂಡಿದ್ದು, ಇನ್ನುಳಿದಂತೆ ಅಮೆಜಾನ್, ವೊಡೋಫೋನ್, ಏರ್‌ಟೇಲ್‌ನಂತಹಾ ಕೆಲವು ನಿಯಮಿತ ಪ್ರಾಯೋಜಕ ಕಂಪೆನಿಗಳು ತಮ್ಮ ಪ್ರಾಯೋಜಕತ್ವವನ್ನು ಮುಂದುವರೆಸುತ್ತಿವೆ ಎಂದು ಬಿಸಿಸಿಐನ ಸಿಇಓ ರಾಹುಲ್ ಜೊಹ್ರಿ ತಿಳಿಸಿದ್ದಾರೆ.

ಐಪಿಎಲ್ 2018 : ಆಟಗಾರರ ಸಂಬಳ, ಧೋನಿ ಎಲ್ಲಿಗೆ? ಇತ್ಯಾದಿ

ಇನ್ನೂ ಸಾಕಷ್ಟು ಕಂಪೆನಿಗಳು ಸರತಿ ಸಾಲಿನಲ್ಲಿ ಸಾಕಷ್ಟು ಕಂಪೆನಿಗಳು ಇವೆ. ಈಗ ಐಪಿಎಲ್ ಸ್ವತಃ ಒಂದು ಅಂತರರಾಷ್ಟ್ರೀಯ ಬ್ರಾಂಡ್ ಆಗಿ ಹೊರಹೊಮ್ಮಿದ್ದು, ಈ ಬಾರಿಯ ಆವೃತ್ತಿಯಲ್ಲಿ 34 ವಿವಿಧ ಬ್ರಾಂಡ್‌ಗಳನ್ನು ಟೂರ್ನಿಯ ಅಧಿಕೃತ ಬ್ರಾಂಡ್‌ ಆಗಿ ಸೇರಿಸಿಕೊಳ್ಳಲಾಗಿದೆ.

ಐಪಿಎಲ್ ಅತ್ಯಂತ ಪ್ರಮುಖ ಬ್ರಾಂಡ್ ಆಗಿ ಹೊರಹೊಮ್ಮಿದ್ದು, ಈ ಬಾರಿ ಹಲವು ಕಂಪೆನಿಗಳು ತಮ್ಮ ಪಾಲುದಾರಿಕೆಯನ್ನು, ಹೂಡಿಕೆಯನ್ನು ಹೆಚ್ಚು ಮಾಡಿ ಐಪಿಎಲ್‌ನಲ್ಲಿ ತೊಡಗಿಸುವ ಮನಸ್ಸು ಮಾಡಿದ್ದಾರೆ ಹಾಗಾಗಿ ಮುಂದಿನ ದಿನಗಳಲ್ಲಿ ಐಪಿಎಲ್‌ನ ಬ್ರಾಂಡ್ ಮೌಲ್ಯ ಮತ್ತು ಲಾಭ ಏರುಗತಿಯಲ್ಲಿ ಸಾಗಲಿದೆ ಎಂದು ರಾಹುಲ್ ಜೊಹ್ರಿ ತಿಳಿಸಿದ್ದಾರೆ.

ಪೇಟಿಎಂ ಸಿಇಓ ಶೇಖರ್ ಶರ್ಮಾ ಮಾತನಾಡಿ 'ಭಾರತೀಯ ಕ್ರಿಕೆಟ್, ಕಂಪೆನಿಗಳ ಪ್ರಚಾರ ಮತ್ತು ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ, ಹಾಗಾಗಿ ನಾವು ಬಿಸಿಸಿಐ ಜೊತೆಗೆ ಉತ್ತಮ ವ್ಯಾಪಾರಿಕ ಸಂಬಂಧವನ್ನು ಹೊಂದಿದ್ದೇವೆ' ಎಂದಿದ್ದಾರೆ.

Story first published: Tuesday, March 13, 2018, 18:14 [IST]
Other articles published on Mar 13, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ