ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಹಿತಾಸಕ್ತಿ ಸಂಘರ್ಷ ಆರೋಪ: BCCI ಅಧ್ಯಕ್ಷ ರೋಜರ್ ಬಿನ್ನಿಗೆ ಬಿಸಿಸಿಐನಿಂದಲೇ ನೋಟಿಸ್ ಜಾರಿ

Conflict Of Interest Notice Issued To BCCI President Roger Binny By BCCI Ethics Officer

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನೈತಿಕ ಅಧಿಕಾರಿ ವಿನೀತ್ ಸರನ್ ಅವರು ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಅವರಿಗೆ ಹಿತಾಸಕ್ತಿ ಸಂಘರ್ಷದ ನೋಟಿಸ್ ಜಾರಿ ಮಾಡಿದ್ದಾರೆ.

ತಮ್ಮ ವಿರುದ್ಧ ಕೇಳಿಬಂದಿರುವ ಹಿತಾಸಕ್ತಿ ಸಂಘರ್ಷದ ಆರೋಪಗಳ ವಿರುದ್ಧ ಡಿಸೆಂಬರ್ 20ರೊಳಗೆ ಲಿಖಿತ ಪ್ರತಿಕ್ರಿಯೆಯನ್ನು ಸಲ್ಲಿಸುವಂತೆ ರೋಜರ್ ಬಿನ್ನಿ ಅವರಿಗೆ ವಿನೀತ್ ಸರನ್ ನೋಟಿಸ್ ನೀಡಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಶೇ.49ರಷ್ಟು ಕ್ರಿಕೆಟಿಗರು ಟಿ20 ಲೀಗ್‌ಗಳಿಗಾಗಿ ರಾಷ್ಟ್ರೀಯ ಒಪ್ಪಂದ ತಿರಸ್ಕರಿಸಲು ಸಿದ್ಧರಾಗಿದ್ದಾರೆ; ಸಮೀಕ್ಷೆಶೇ.49ರಷ್ಟು ಕ್ರಿಕೆಟಿಗರು ಟಿ20 ಲೀಗ್‌ಗಳಿಗಾಗಿ ರಾಷ್ಟ್ರೀಯ ಒಪ್ಪಂದ ತಿರಸ್ಕರಿಸಲು ಸಿದ್ಧರಾಗಿದ್ದಾರೆ; ಸಮೀಕ್ಷೆ

ಭಾರತೀಯ ಕ್ರಿಕೆಟ್‌ಗೆ ತವರಿನ ಸರಣಿಯ ಮಾಧ್ಯಮ ಹಕ್ಕುಗಳನ್ನು ಹೊಂದಿರುವ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ತನ್ನ ಸೊಸೆ (ಮಯಾಂತಿ ಲ್ಯಾಂಗರ್) ನಿರೂಪಕಿಯಾಗಿ ಕೆಲಸ ಮಾಡುತ್ತಿರುವುದರಿಂದ ರೋಜರ್ ಬಿನ್ನಿ ಸ್ವಹಿತಾಸಕ್ತಿ ಸಂಘರ್ಷಕ್ಕೆ ಒಳಗಾಗಿದ್ದಾರೆ ಎಂದು ದೂರುದಾರ ಸಂಜೀವ್ ಗುಪ್ತಾ ಆರೋಪಿಸಿದ್ದಾರೆ.

Conflict Of Interest Notice Issued To BCCI President Roger Binny By BCCI Ethics Officer

"ನಿಯಮ 38 (1) (i) ಮತ್ತು ನಿಯಮ 38 (2)ರ ಉಲ್ಲಂಘನೆಗಾಗಿ ಬಿಸಿಸಿಐನ ನೈತಿಕ ಅಧಿಕಾರಿ, ಬಿಸಿಸಿಐನಿಂದ ಬಿಸಿಸಿಐನ ನಿಯಮಗಳು ಮತ್ತು ನಿಬಂಧನೆಗಳ ನಿಯಮ 39 (2) (b) ಅಡಿಯಲ್ಲಿ ದೂರು ಸ್ವೀಕರಿಸಲಾಗಿದೆ ಎಂದು ನಿಮಗೆ ಈ ಮೂಲಕ ತಿಳಿಸಲಾಗಿದೆ. ಈ ಮೇಲೆ ಹೇಳಿದ ನಿಯಮಗಳ ಪ್ರಕಾರ, ನಿಮ್ಮ ಕಡೆಯಿಂದ 'ಸ್ವಹಿತಾಸಕ್ತಿ ಸಂಘರ್ಷ'ದ ನಿದರ್ಶನವನ್ನು ರೂಪಿಸುತ್ತದ," ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.

"20/12/2022ರಂದು ಅಥವಾ ಅದಕ್ಕೂ ಮೊದಲು ನಿಮ್ಮ ಲಿಖಿತ ಪ್ರತಿಕ್ರಿಯೆಯನ್ನು ಸಲ್ಲಿಸಲು ನಿಮಗೆ ನಿರ್ದೇಶಿಸಲಾಗಿದೆ. ನೀವು ತಿಳಿಸುವ ಪ್ರತಿಕ್ರಿಯೆಯನ್ನು ಸರಿಯಾದ ಅಫಿಡವಿಟ್‌ನಿಂದ ಬೆಂಬಲಿಸಬೇಕು," ಎಂದು ವಿನೀತ್ ಸರನ್ ನವೆಂಬರ್ 21ರ ನೋಟೀಸ್‌ನಲ್ಲಿ ಬರೆದಿದ್ದಾರೆ.

ಭಾರತದಲ್ಲಿ ನಡೆಯುವ ವಿಶ್ವಕಪ್ ಬಹಿಷ್ಕರಿಸುವ ಧಮ್ ಪಾಕಿಸ್ತಾನಕ್ಕಿಲ್ಲ: ಪಾಕ್ ಮಾಜಿ ಕ್ರಿಕೆಟಿಗಭಾರತದಲ್ಲಿ ನಡೆಯುವ ವಿಶ್ವಕಪ್ ಬಹಿಷ್ಕರಿಸುವ ಧಮ್ ಪಾಕಿಸ್ತಾನಕ್ಕಿಲ್ಲ: ಪಾಕ್ ಮಾಜಿ ಕ್ರಿಕೆಟಿಗ

1983ರ ಏಕದಿನ ವಿಶ್ವಕಪ್ ವಿಜೇತ ತಂಡದ ಸದಸ್ಯ ರೋಜರ್ ಬಿನ್ನಿ ಅಕ್ಟೋಬರ್‌ನಲ್ಲಿ ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಬದಲಿಗೆ 36ನೇ ಬಿಸಿಸಿಐ ಅಧ್ಯಕ್ಷರಾಗಿ ಆವಿರೋಧವಾಗಿ ಆಯ್ಕೆಯಾದರು.

Conflict Of Interest Notice Issued To BCCI President Roger Binny By BCCI Ethics Officer

ಸದ್ಯ 67 ವರ್ಷ ವಯಸ್ಸಿನ ರೋಜರ್ ಬಿನ್ನಿ ಭಾರತ ತಂಡದ ಪರವಾಗಿ 27 ಟೆಸ್ಟ್ ಮತ್ತು ಟಿ20 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅವರ ಪುತ್ರ ಸ್ಟುವರ್ಟ್ ಬಿನ್ನಿ ಕೂಡ ಭಾರತದ ರಾಷ್ಟ್ರೀಯ ತಂಡದಲ್ಲಿ ಆಡಿದ್ದಾರೆ. ಸ್ಟುವರ್ಟ್ ಬಿನ್ನಿ ಪತ್ನಿ ಮಯಾಂತಿ ಲ್ಯಾಂಗರ್ ಸ್ಟಾರ್ ಸ್ಪೋರ್ಟ್‌ನಲ್ಲಿ ನಿರೂಪಕಿಯಾಗಿದ್ದಾರೆ.

Story first published: Tuesday, November 29, 2022, 20:56 [IST]
Other articles published on Nov 29, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X