ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

UC Cricket : ಮೊಬೈಲ್ ಆಪ್ ನಲ್ಲಿ ಕ್ರಿಕೆಟ್ ಲೋಕ ಅನಾವರಣ

By Prasad

ಏಕತೆಯಲ್ಲೇ ವೈವಿಧ್ಯತೆಯನ್ನು ಕಂಡುಕೊಂಡ ಏಕೈಕ ದೇಶವೆಂದರೆ ಅದು ಭಾರತ. ಇಲ್ಲಿ ಹಲವಾರು ಧರ್ಮ, ಪಂಗಡ, ಭಾಷೆಗಳಿವೆ. ಆದರೆ, ದೇಶವನ್ನು ಒಂದುಗೂಡಿಸುವ ಏಕೈಕ ಶಕ್ತಿಯೆಂದರೆ ಅದು ಕ್ರಿಕೆಟ್! ಹುಚ್ಚೋನ್ಮಾದ, ಹರ್ಷೋದ್ಘಾರ, ದೇಶಭಕ್ತಿಯ ಪರಾಕಾಷ್ಠೆ, ಸೋತರೆ ಕಣ್ಣೀರು, ಗೆದ್ದರೆ ಪನ್ನೀರು!

ಭಾರತೀಯರಿಗೆ ಕ್ರಿಕೆಟ್ ಕೇವಲ ಆಟವಾಗಿಲ್ಲ, ಅದು ಧರ್ಮ. ಟಾಸ್ ಚಿಮ್ಮಿದಾಗಿನಿಂದ ಹಿಡಿದು, ಮ್ಯಾಚ್ ಮುಗಿಯುವವರೆಗೆ ಟಿವಿಗೆ ಕಣ್ಣು ಕೀಲಿಸಿಕೊಂಡು ಪ್ರತಿಯೊಂದು ಕ್ಷಣವನ್ನು ಆನಂದಿಸುತ್ತಾರೆ, ಆಟವನ್ನು ಆರಾಧಿಸುತ್ತಾರೆ. ಎಷ್ಟೇ ಮ್ಯಾಚು ಸೋತರೂ, ಮತ್ತೊಂದು ಪಂದ್ಯ ಆರಂಭವಾದಾಗ ಅಪಾರ ನಿರೀಕ್ಷೆಗಳೊಂದಿಗೆ 11 ಜನರು ಆಡುವ ಆಟವನ್ನು ತನ್ಮಯವಾಗಿ ನೋಡುತ್ತಾರೆ.

ಹಾಕಿ ಭಾರತದ ರಾಷ್ಟ್ರೀಯ ಕ್ರೀಡೆಯಾಗಿದ್ದರೂ ಕ್ರಿಕೆಟ್ ಕ್ರೀಡೆ ಹಾಕಿ ಸೇರಿದಂತೆ ಇತರ ಎಲ್ಲ ಕ್ರೀಡೆಗಳನ್ನು ಮರೆಮಾಚುವಂತೆ ಮಾಡಿರುವುದು ಅದರ ಜನಪ್ರಿಯತೆಗೆ ಸಾಕ್ಷಿ. ಕ್ರಿಕೆಟ್ ಆಟಕ್ಕೆ ಮೈದಾನ ಸಿದ್ಧವಾದಾಗ ಮತ್ತದೇ ಜೈಜೈಕಾರಗಳು, ಮುಗಿಲು ಮುಟ್ಟುವ ಘೋಷಣೆಗಳು, ಕಿವಿಗಡಚಿಕ್ಕುವ ಚಪ್ಪಾಳೆಗಳು.

Cricket as a way of life in India

ಭಾರತದಲ್ಲಿ ಕ್ರಿಕೆಟನ್ನು ಧರ್ಮ ಎಂದು ಜನರು ಪರಿಗಣಿಸಿರುವುದಕ್ಕೆ ಇಲ್ಲಿ ಕೆಲವು ಕಾರಣಗಳಿವೆ:

1. ಸಚಿನ್ ಕ್ರಿಕೆಟ್ ದೇವರು

ಯಾರು ಏನೇ ಹೇಳಲಿ, ಕ್ರಿಕೆಟನ್ನು ಹುಚ್ಚನಂತೆ ಆರಾಧಿಸುವ ಜನರಿಗೆ ಸಚಿನ್ ರಮೇಶ್ ತೆಂಡೂಲ್ಕರ್ ಅಂದರೆ ಕ್ರಿಕೆಟ್ ದೇವರು. ಕ್ರಿಕೆಟರ್ ಆಗಬೇಕೆಂಬ ಕನಸು ಕಂಡ ಪ್ರತಿಯೊಂದು ಮಗುವೂ ಬೆಳೆಬೆಳೆಯುತ್ತ ಕ್ರಿಕೆಟ್ ದೈವ ಸಚಿನ್ ತೆಂಡೂಲ್ಕರ್ ನಂತೆಯೇ ಆಗಬೇಕೆಂದು ಅಪೇಕ್ಷಿಸುತ್ತದೆ.

2. ಆಚರಣೆಯ ಸಮಯ

ಏನಾದರೊಂದು ಆಚರಣೆಗೆ ಭಾರತೀಯರು ಕಾರಣ ಹುಡುಕುತ್ತಿರುತ್ತಾರೆ. ಕ್ರಿಕೆಟ್ ಗಿಂತ ಮತ್ತೊಂದು ಕಾರಣ ಭಾರತೀಯರಿಗೇನಿದೆ? ಪ್ರತಿಬಾರಿ ವಿಶ್ವಕಪ್ ಕ್ರಿಕೆಟ್ ಗೆದ್ದಾಗ ಅಥವಾ ಪಾಕಿಸ್ತಾನವನ್ನು ಸದೆಬಡಿದಾಗ, ತ್ರಿವರ್ಣ ಧ್ವಜ ಆಕಾಶದಲ್ಲಿ ಫಟಫಟಿಸುತ್ತದೆ, ಘೋಷಣೆಗಳು ಮುಗಿಲು ಮುಟ್ಟುತ್ತವೆ.

3. ಎಲ್ಲ ಧರ್ಮೀಯರನ್ನೂ ಒಗ್ಗೂಡಿಸುತ್ತದೆ

ಕ್ರಿಕೆಟ್ ವಿಷಯಕ್ಕೆ ಬಂದಾಗ, ಕ್ರಿಕೆಟೇ ಧರ್ಮವಾಗುತ್ತದೆ, ಉಳಿದೆಲ್ಲ ಧರ್ಮಗಳು ಹಿಂದುಳಿಯುತ್ತವೆ. ಎಲ್ಲರೂ ಮಾತಾಡುವುದು ಒಂದೇ ಭಾಷೆ, ಆಚರಿಸುವುದು ಒಂದೇ ಧರ್ಮ, ಅದು ಕ್ರಿಕೆಟ್! ಕ್ರಿಕೆಟ್ ನಲ್ಲಿ ಎಲ್ಲರನ್ನೂ ಒಗ್ಗೂಡಿಸುವ ಆ ಮಾಂತ್ರಿಕ ಶಕ್ತಿಯಿದೆ.

4. ರಜಾ ಮಜಾ!

ಸಖತ್ ಇಂಟರೆಸ್ಟಿಂಗ್ ಪಂದ್ಯವಿದ್ದಾಗ ಕಚೇರಿಗೆ ಚಕ್ಕರ್ ಹಾಕಿ ಕ್ರಿಕೆಟ್ ಮಜಾ ಪಡೆಯುವಾಗ ಯಾರಲ್ಲೂ ತಪ್ಪಿತಸ್ಥ ಭಾವನೆ ಇರುವುದಿಲ್ಲ. ಕೆಲವೊಂದು ಕಚೇರಿಗಳು ಸಾರ್ವತ್ರಿಕ ರಜಾ ಘೋಷಿಸಿರುವ ಉದಾಹರಣೆಗಳೂ ಸಾಕಷ್ಟಿವೆ. ಕ್ರಿಕೆಟ್ ಬಗ್ಗೆ ಅಷ್ಟೊಂದು ಪ್ರೀತಿ ಭಾರತೀಯರಿಗೆ.

5. ಭಾರತ Vs ಪಾಕಿಸ್ತಾನ!

ಬದ್ಧದ್ವೇಷಿ ಪಾಕಿಸ್ತಾನವನ್ನು ಕ್ರಿಕೆಟ್ ಅಂಗಳದಲ್ಲಿ ಪ್ರತಿಬಾರಿ ಮಣ್ಣುಮುಕ್ಕಿಸಿದಾಗ ಭಾರತೀಯರಿಗೆ ಸಿಗುವಂಥ ಆನಂದ, ಉನ್ಮಾದ ಬೇರೆ ಯಾವ ಪಂದ್ಯದಲ್ಲಿಯೂ ಸಿಗುವುದಿಲ್ಲ. ಆ ಆಚರಣೆಗೊಂದು ವಿಶೇಷ ಕಳೆಯಿರುತ್ತದೆ. ಎರಡೂ ದೇಶಗಳು ಎದುರುಬದುರಾದಾಗ ನಿರೀಕ್ಷೆಯ ಕಡಲು ಉಕ್ಕಿಹರಿಯುತ್ತದೆ. ಆಗ ಅದು ಪಂದ್ಯವಾಗಿರುವುದಿಲ್ಲ, ಯುದ್ಧವಾಗಿರುತ್ತದೆ!

6. ನಿಯಮಗಳು ಎಲ್ಲರಿಗೂ ಕರತಲಾಮಲಕ

ಕ್ರಿಕೆಟಿನ ಯಾವುದೇ ನಿಮಯಗಳನ್ನು ಭಾರತೀಯ ಕ್ರಿಕೆಟ್ ಹುಚ್ಚರಿಗೆ ಕೇಳಿ ನೋಡಿ. ಯಾವುದು ಫೈನ್ ಲೆಗ್, ಯಾವುದು ಮಿಡ್ ವಿಕೆಟ್, ಯಾವುದು ಹಿಟ್ ವಿಕೆಟ್, ಯಾವುದು ಲೇಟ್ ಕಟ್... ಎಲ್ಲವೂ ನಾಲಿಗೆಯ ತುದಿಯ ಮೇಲೆ ನಲಿದಾಡುತ್ತಿರುತ್ತವೆ.

7. ಎಲ್ಲವನ್ನೂ ತಿಳಿಯಲು ಹಂಬಲಿಸುತ್ತಾರೆ

ಟೆಸ್ಟ್ ಪಂದ್ಯವೇ ಆಗಲಿ, ಏಕದಿನವಾಗಲಿ, ಟಿ20 ಆಟವೇ ಆಗಲಿ, ಭಾರತದಲ್ಲೇ ನಡೆಯುತ್ತಿರಲಿ, ಜಗತ್ತಿನ ಇನ್ನಾವುದೇ ದೇಶದಲ್ಲಿರಲಿ, ಸ್ಕೋರ್ ಎಷ್ಟಾಯಿತು, ಎಷ್ಟು ವಿಕೆಟ್ ಬಿದ್ದವು, ವಿಶೇಷ ಸುದ್ದಿಯೇನು, ಕ್ರಿಕೆಟ್ ಅಂಗಳದಲ್ಲಿ ಮತ್ತೇನು ನಡೆಯುತ್ತಿದೆ... ಎಲ್ಲವೂ ಕ್ರಿಕೆಟ್ ಪ್ರೇಮಿಗಳಿಗೆ ಗೊತ್ತಿರಲೇಬೇಕು.

Cricket as a way of life in India

ಆದರೆ, ಪ್ರತಿ ಬಾಲಿನ ವಿವರಗಳನ್ನು ಟಿವಿ ಚಾನಲ್ಲಿನಲ್ಲಿ ತಿಳಿಯಲು ಸಾಧ್ಯವಾಗದಿದ್ದಾಗ ಈ ಕ್ರಿಕೆಟ್ ಪ್ರೇಮಿಗಳು ಏನು ಮಾಡುತ್ತಾರೆ? ಅರ್ಜೆಂಟ್ ಮೀಟಿಂಗ್‌ಗೆ ಹೋಗಬೇಕಾದಾಗ, ತಕ್ಷಣ ಕಚೇರಿ ತಲುಪಬೇಕಾದಾಗ ಇವರೇನು ಮಾಡುತ್ತಾರೆ? ಚಿಂತಿಸಬೇಕಿಲ್ಲ, ಇದ್ದಲ್ಲಿಯೇ ಕ್ರಿಕೆಟ್ ವಿವರಗಳನ್ನು ತಿಳಿಸುವ ಹಲವಾರು ಆಪ್ ಗಳಿವೆ. ಅವೆಲ್ಲವುಗಳಿಗಿಂತ ವಿಶೇಷವಾಗಿದ್ದೆಂದರೆ, UC Cricket ಎಂಬ ಆಪ್ ಲೈವ್ ಅಪ್ಡೇಟ್ ಗಳನ್ನು ಮಾತ್ರವಲ್ಲ, ಕ್ರಿಕೆಟ್ ಪ್ರೇಮಿಗಳಿಗೆ ತಿಳಿದಿರದ ಇನ್ನೂ ಹಲವಾರು ಆಸಕ್ತಿದಾಯಕ ಸಂಗತಿಗಳನ್ನು ತಿಳಿಸುತ್ತದೆ.

UC Browserನಲ್ಲಿ ಅಡಕವಾಗಿರುವ UC Cricket ಆಪ್ ಕ್ರಿಕೆಟ್ ಲೋಕದ ಬೈಬಲ್ ಎಂದೇ ಹೆಸರು ಗಳಿಸಿದೆ. ಲೈವ್ ಸ್ಕೋರ್, ಮ್ಯಾಚ್ ಮುನ್ನೋಟ, ಸಂದರ್ಶನ, ಅಂಕಿಅಂಶ, ಫೋಟೋ ಗ್ಯಾಲರಿ, ವಿಡಿಯೋ ಸಂಪುಟ... ಏನಿದೆ ಏನಿಲ್ಲ? ಎಲ್ಲವೂ ಈ ಆಪ್ ನಲ್ಲಿ ಹದವಾಗಿ ಸೇರಿಕೊಂಡಿದೆ.

ಕ್ರಿಕೆಟ್ ಗೆ ಸಂಬಂಧಿಸಿದ ಮಾಹಿತಿಯನ್ನಷ್ಟೇ ಅಲ್ಲದೆ, ಉಪಯುಕ್ತ ಸುದ್ದಿಸಂಗ್ರಹ, ಸೇವೆಗಳಿರುವ ರಿಯಲ್ ಟೈಮ್ ನೋಟಿಫಿಕೇಷನ್, ಇತ್ತೀಚಿನ ಸ್ಕೋರ್ ಕುರಿತು ಮಾಹಿತಿಯನ್ನು ನೀಡುತ್ತಲೇ ಇರುತ್ತದೆ.

ಕ್ರಿಕೆಟ್ ಪ್ರೇಮಿಗಳು ಕಾಮೆಂಟ್ ವಿಭಾಗದಲ್ಲಿ ತಮಗಿಷ್ಟವಾದ ವಿಷಯದ ಬಗ್ಗೆ ಮುಕ್ತವಾಗಿ ಚರ್ಚಿಸಬಹುದು. UC Cricket ಆಪ್ ಸಾಕಷ್ಟು ಚರ್ಚೆಗೆ ಮತ್ತು ಜ್ಞಾನ ಹೆಚ್ಚಿಸಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ. ನೀವು ಎಲ್ಲೇ ಇರಲಿ, ಚಲಿಸುತ್ತಿರುವಾಗಲೇ ಲೈವ್ ಸ್ಕೋರ್ ತಿಳಿಯಲು, ತಕ್ಷಣ ಮಾಹಿತಿ ಪಡೆಯಲು ಮತ್ತು ಗೆಸ್ಸಿಂಗ್ ಗೇಮ್ ಆಡಲು ಕೂಡ ಉತ್ತೇಜಿಸುತ್ತದೆ.

ವಿಶಿಷ್ಟವಾಗಿರುವ 'ಗೆಸ್ಸಿಂಗ್ ಗೇಮ್' ಆಡುತ್ತಲೇ, ಬಳಕೆದಾರರು ಪ್ರತಿ ಆಟದಲ್ಲಿ ಗೆಲ್ಲುವವರನ್ನು ಊಹಿಸಿ, ಅಂಕ ಪಡೆದು ಆಕರ್ಷಕ ಬಹುಮಾನ ಗೆಲ್ಲಲು ಸಾಧ್ಯವಿದೆ. ಅಲ್ಲದೆ, ಇನ್ನೊಂದಿಷ್ಟು ಆಟವಾಡಿ ಮತ್ತಷ್ಟು ಇನಾಮುಗಳನ್ನು ಗೆಲ್ಲಲು ಹಲವಾರು ಸ್ಪರ್ಧೆಗಳಿವೆ.

UC Cricket ಆಪ್ ಬಳಸುತ್ತಿರುವ ಕ್ರಿಕೆಟ್ ಆಟಗಾರ ಯುವರಾಜ್ ಸಿಂಗ್ ಕೂಡ ಇದನ್ನು ಅನುಮೋದಿಸುತ್ತಾರೆ. "UC Browser ಸಾಕಷ್ಟು ವೇಗವಾಗಿ ಜನಪ್ರಿಯವಾಗುತ್ತಿದೆ. ಇದು ಉತ್ತಮ ಬ್ರೌಸರ್ ಆಗಿದ್ದು, ಭಾರತದ ಮಾರುಕಟ್ಟೆಯ ಬಗ್ಗೆ ಅದಕ್ಕೆ ಚೆನ್ನಾಗಿ ಅರಿವಿದೆ. UC Browser ಭಾಗವಾಗಿರುವುದಕ್ಕೆ ನನಗೆ ತುಂಬಾ ಸಂತೋಷವಾಗುತ್ತದೆ."

"ನನ್ನ ಕೆಲಸ ನನ್ನನ್ನು ಯಾವಾಗಲೂ ಬಿಜಿಯಾಗಿಟ್ಟಿರುತ್ತದೆ. ನಿಮ್ಮ ಕೈಯಲ್ಲಿ ಮೊಬೈಲ್ ಇದ್ದರೆ, ಸತತವಾಗಿ ಕ್ರಿಕೆಟ್ ಬಗ್ಗೆ ಮಾತಾಡಬಹುದು, ಸುದ್ದಿ ಪಡೆಯಬಹುದು. ಇಂದಿನ ಕಾಲದಲ್ಲಿ ಬ್ರೌಸರ್ ವೇಗ ತೀರ ಅಗತ್ಯ. ಆದ್ದರಿಂದ ನಾನು UC Browser ಹೆಚ್ಚಾಗಿ ಬಳಸುತ್ತಿದ್ದೇನೆ."

"UC Browser ಹೊಸದಾಗಿದೆ, ಯುವಕರಿಗೆ ಬೇಕಾದಂತಿದೆ ಮತ್ತು ಅದರಲ್ಲಿ ಸಾಕಷ್ಟು ಕ್ರಿಕೆಟ್ ಇದೆ. ಇನ್ನೇನು ಬೇಕು? ಕ್ರಿಕೆಟ್ ಅಂಕಣದಲ್ಲಿ ಏನೇನಾಗುತ್ತಿದೆ ಎಂದು ನಾನು ತಿಳಿದುಕೊಳ್ಳಬಯಸುತ್ತೇನೆ. ಅದಕ್ಕಾಗಿ ನಾನು ಯುಸಿ ಕ್ರಿಕೆಟ್ ಇಷ್ಟಪಡುತ್ತೇನೆ. ಲೈವ್ ಅಪ್ಡೇಟ್, ಫೋಟೋ, ಕಾಮೆಂಟರಿ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ಬಾಲ್-ಬೈ-ಬಾಲ್ ಅಪ್ಡೇಟ್ ನನಗಿಷ್ಟ" ಎನ್ನುತ್ತಾರವರು.

ಈಗ ಭಾರತ ಮತ್ತು ದಕ್ಷಿಣ ಆಫ್ರಿಕಾ ಟಿ20, ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ ಪಂದ್ಯಗಳಲ್ಲಿ ಸೆಣಸಾಡುತ್ತಿರುವ ಹಂತದಲ್ಲಿ, UC Cricket ಆಪ್ ನಲ್ಲಿ ಸರಣಿಗೆ ಸಂಬಂಧಿಸಿದ ಎಲ್ಲ ಮಾಹಿತಿ ಕಣಜವನ್ನು ಕೆದಕಲು ಅತ್ಯಂತ ಸುಸಮಯ.

ನೀವು ಕ್ರಿಕೆಟನ್ನು ವಿಭಿನ್ನ ರೀತಿಯಲ್ಲಿ ನೋಡಬಯಸಿದ್ದರೆ, UC Cricket ಆಪ್ ಅಳವಡಿಸಿಕೊಳ್ಳಿ. ಇಲ್ಲಿ UC Cricket ಆಪ್ ಡೌನ್ ಲೋಡ್ ಮಾಡಿಕೊಳ್ಳಬಹುದು ಮತ್ತು ಇನ್ನೆಂದೂ ಇಲ್ಲದಂತೆ ಕ್ರಿಕೆಟನ್ನು ಆಸ್ವಾದಿಸಬಹುದು.

UCWeb ಬಗ್ಗೆ

UCWeb Inc. (ಯುಸಿವೆಬ್) ಮೊಬೈಲ್ ಇಂಟರ್ನೆಟ್ ಸಾಫ್ಟ್ ವೇರ್ ಮತ್ತು ಸೇವೆಯನ್ನು ನೀಡುವ ಅಗ್ರಗಣ್ಯ ಸಂಸ್ಥೆಯಾಗಿದೆ. 2004ರಲ್ಲಿ ಸ್ಥಾಪನೆಯಾದಂದಿನಿಂದ ವಿಶ್ವದಾದ್ಯಂತ ಇರುವ ಮೊಬೈಲ್ ಬಳಕೆದಾರರಿಗೆ ಅತ್ಯುತ್ಕೃಷ್ಟ ಸೇವೆಯನ್ನು ನೀಡುವ ಗುರಿಯನ್ನು ಯುಸಿವೆಬ್ ಬೆನ್ನತ್ತಿದೆ.

ಯುಸಿವೆಬ್‌ನ ಅಗ್ರ ಉತ್ಪನ್ನವಾಗಿರುವ ಯುಸಿ ಬ್ರೌಸರ್, 200ಕ್ಕೂ ಹೆಚ್ಚು ಉತ್ಪಾದಕರ 3 ಸಾವಿರಕ್ಕೂ ಹೆಚ್ಚು ಮೊಬೈಲ್ ಮಾಡೆಲ್ ಗಳಲ್ಲಿ ಲಭ್ಯವಿದ್ದು, ಎಲ್ಲ ಪ್ರಮುಖ ಆಪರೇಟಿಂಗ್ ಸಿಸ್ಟಮ್ ಗಳಲ್ಲಿ ಕಂಪ್ಯಾಟಿಬಲ್ ಆಗಿದೆ.

ವಿಶ್ವದಾದ್ಯಂತ 150ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ 500 ಮಿಲಿಯನ್ ಬಳಕೆದಾರರಿಗೆ ಸೇವೆ ಒದಗಿಸುತ್ತಿರುವ UC Browser, ಇಂಗ್ಲಿಷ್, ರಷ್ಯಾ, ಇಂಡೋನೇಷಿಯಾ, ವಿಯೆಟ್ನಾಂ ಭಾಷೆ ಸೇರಿದಂತೆ ಈಗ 10 ಭಾಷೆಗಳಲ್ಲಿ ಲಭ್ಯವಿದೆ. UCWeb ಮತ್ತು UC Browser ಕುರಿತು ಹೆಚ್ಚಿನ ಮಾಹಿತಿಗೆ www.ucweb.com ಜಾಲತಾಣವನ್ನು ಜಾಲಾಡಬಹುದು.

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X