ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್ : ಭಾರತ-ಪಾಕಿಸ್ತಾನ ನಡುವೆ 6 ಕದನ ಫಿಕ್ಸ್

By Mahesh

ಕರಾಚಿ, ಜೂ.27 : ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿಯನ್ನು ಪಾಕಿಸ್ತಾನ ಕ್ರಿಕೆಟ್ ನಿಯಂತ್ರಣ ಮಂಡಳಿ(ಪಿಸಿಬಿ) ನೀಡಿದೆ. ಭಾರತ ಹಾಗೂ ಪಾಕಿಸ್ತಾನ ನಡುವೆ ಸುಮಾರು 6 ದ್ವಿಪಕ್ಷೀಯ ಕ್ರಿಕೆಟ್ ಕದನ ಫಿಕ್ಸ್ ಮಾಡಲಾಗಿದೆ, ಈ ಬಗ್ಗೆ ಬಿಸಿಸಿಐ ಜತೆ ಒಡಂಬಡಿಕೆಗೆ ಸಹಿ ಹಾಕಲಾಗಿದೆ ಎಂದು ಹೇಳಿದೆ.

2015ರ ವಿಶ್ವಕಪ್ ಹೊರತಾಗಿ 2015 ರಿಂದ 2023 ರೊಳಗೆ 6 ಬಾರಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಎದುರಾಗಲಿವೆ. ಮೆಲ್ಬೋರ್ನ್ ನಲ್ಲಿ ನಡೆದ ಐಸಿಸಿ ವಾರ್ಷಿಕ ಸಮ್ಮೇಳನದಲ್ಲಿ ಈ ಬಗ್ಗೆ ಉಭಯ ದೇಶಗಳ ಕ್ರಿಕೆಟ್ ಮಂಡಳಿಗಳೂ ಒಪ್ಪಂದಕ್ಕೆ ಸಹಿ ಹಾಕಿವೆ.

ಐಸಿಸಿ ಹೊಸ ಸ್ವರೂಪ ಪಡೆದುಕೊಂಡು ಹೊಸ ಹುದ್ದೆ ಸೃಷ್ಟಿಯಾಗಿದ್ದು, ಬಿಸಿಸಿಐನ ಪದಚ್ಯುತ ಅಧ್ಯಕ್ಷ ಎನ್ ಶ್ರೀನಿವಾಸನ್ ಅವರು ಈಗ ಐಸಿಐ ನೂತನ ಚೇರ್ಮನ್ ಆಗಿರುವ ಸುದ್ದಿ ನಿನ್ನೆಯಷ್ಟೇ ಓದಿರುತ್ತೀರಿ. [ವಿವರ ಇಲ್ಲಿದೆ]

Six India-Pakistan bilateral series confirmed from 2015 to 2023

ಶ್ರೀನಿವಾಸನ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಿಸಿಬಿಯ ಸದಸ್ಯರು ಭಾರತ ತಂಡದೊಡನೆ ಮತ್ತೆ ಕ್ರಿಕೆಟ್ ಟೂರ್ನಿಗಳನ್ನು ಆಡಲು ಉತ್ಸುಕರಾಗಿರುವ ವಿಷಯವನ್ನು ಪ್ರಸ್ತಾಪಿಸಿದರು. ಪಿಸಿಬಿ ಚೇರ್ಮನ್ ನಜಾಂ ಸೇಠ್ ಅವರು ಶ್ರೀನಿವಾಸನ್ ಅವರು ಐಸಿಸಿಯ ಉನ್ನತ ಹುದ್ದೇಗೇರಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

ಆದರೆ, ಉಭಯ ದೇಶಗಳ ನಡುವಿನ ಆರು ಟೂರ್ನಿಗಳಲ್ಲಿ ನಾಲ್ಕು ಟೂರ್ನಿಗಳನ್ನು ಪಿಸಿಬಿ ಆಯೋಜಿಸಲಿದೆ. ಯುಎಇ ಅಥವಾ ಪಾಕಿಸ್ತಾನದಲ್ಲಿ ಪಂದ್ಯಗಳು ನಡೆಯಲಿವೆ. ಕ್ರೀಡಾಂಗಣ, ವೇಳಾಪಟ್ಟಿ ವಿವರ ಇನ್ನೂ ನಿರ್ಧಾರವಾಗಿಲ್ಲ ಎಂದು ಪಿಸಿಬಿ ಹೇಳಿದೆ.

ಭಾರತ ಹಾಗೂ ಪಾಕಿಸ್ತಾನ ನಡುವಿನ ಸರಣಿ ಕೊನೆ ಬಾರಿ ನಡೆದಿದ್ದು, ಡಿಸೆಂಬರ್ 2012-ಜನವರಿ 2013 ರಲ್ಲಿ ಪಾಕಿಸ್ತಾನ ಭಾರತಕ್ಕೆ ಏಕದಿನ ಸರಣಿ ಆಡಲು ಬಂದಿತ್ತು.

Story first published: Wednesday, January 3, 2018, 10:12 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X