ಪುಣೆಯಲ್ಲೂ ಸಿಎಸ್‌ಕೆ ಪಂದ್ಯಗಳು ಅನುಮಾನ

Posted By:
CSK matches doubtfull in Pune also

ತಮಿಳುನಾಡಿನಲ್ಲಿ ನಡೆಯುತ್ತಿರುವ ಕಾವೇರಿ ಪ್ರತಿಭಟನೆಗೆ ಹೆದರಿ ಚೆನ್ನೈನಲ್ಲಿ ಆಡಬೇಕಿದ್ದ 6 ಪಂದ್ಯಗಳನ್ನು ಪುಣೆಗೆ ಸ್ಥಳಾಂತರಿಸಲಾಗಿತ್ತು ಆದರೆ ಅಲ್ಲಿಯೂ ಪಂದ್ಯಗಳು ನಡೆಯುವುದು ಅನುಮಾನವಾಗಿದೆ.

ಸಿಎಸ್‌ಕೆ ಪಂದ್ಯಗಳ ಆಯೋಜನೆ ಕುರಿತಂತೆ ಬಾಂಬೆ ಹೈಕೋರ್ಟ್ ಎಂಸಿಎ (ಮುಂಬೈ ಕ್ರಿಕೆಟ್ ಅಕಾಡೆಮಿ)ಗೆ ನೊಟೀಸ್ ಜಾರಿ ಮಾಡಿದ್ದು, ಆರು ಪಂದ್ಯಗಳ ಆಯೋಜನೆಗೆ ಎಷ್ಟು ಹೆಚ್ಚುವರಿ ನೀರಿನ ಅವಶ್ಯಕತೆ ಇದೆ? ಎಂದು ಪ್ರಶ್ನೆ ಮಾಡಿದೆ.

ರಾಜ್ಯ ಬರಗಾಲದಿಂದ ತತ್ತರಿಸುತ್ತಿರುವಾಗ ಎಂಸಿಎ ಸ್ಟೇಡಿಯಂನಲ್ಲಿ ಪಂದ್ಯ ಆಯೋಜಿಸಿ ಹೆಚ್ಚಿನ ನೀರು ಖರ್ಚು ಮಾಡಲಾಗುತ್ತಿದೆ ಹಾಗಾಗಿ ಐಪಿಎಲ್ ಪಂದ್ಯಗಳನ್ನು ಆಯೋಜಿಸಬಾರದು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಲಾಗಿದ್ದು ಅದರ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್ ಎಂಸಿಎ ಯಿಂದ ಖರ್ಚಾಗುವ ನೀರಿನ ಮಾಹಿತಿ ಕೇಳಿದೆ.

ಒಂದು ಐಪಿಎಲ್​ ಮ್ಯಾಚ್​ ನಡೆಯಬೇಕಾದರೆ, ದಿನಕ್ಕೆ 3,30,000 ಲೀಟರ್​ ನೀರು ಖರ್ಚಾಗುತ್ತದೆ. ಮೈದಾನದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟ ನಿರ್ವಹಿಸಬೇಕಂದರೆ ಇಷ್ಟು ನೀರನ್ನು ಖರ್ಚು ಮಾಡುವುದು ಅನಿವಾರ್ಯ. ಹಾಗಾಗಿ, ಬಾಂಬೆ ಹೈಕೋರ್ಟ್​ ಮುನ್ನೆಚ್ಚರಿಕೆ ವಹಿಸಿದ್ದು, ಒಂದು ವೇಳೆ ಎಂಸಿಎ ನೋಟಿಸ್​ಗೆ ಸ್ಪಷ್ಟ ಉತ್ತರ ನೀಡದೇ ಹೋದಲ್ಲಿ, ಪುಣೆಯಲ್ಲಿ ಆಯೋಜಿತವಾಗಿರೋ ಸಿಎಸ್​ಕೆ ಪಂದ್ಯಗಳು ನಡೆಯಲಾರವೋ ಏನೊ?.

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Friday, April 13, 2018, 20:46 [IST]
Other articles published on Apr 13, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ