ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPLಗೂ ಮುನ್ನ ಧೋನಿ ಸಮರಾಭ್ಯಾಸ: ಸೂರತ್‌ನಲ್ಲಿ ಸೂಪರ್ ಫಿಟ್ ಆಗುತ್ತಿರುವ 'ತಲ'

MS Dhoni

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 15ನೇ ಸೀಸನ್‌ಗೆ ವೇದಿಕೆ ಸಿದ್ಧಗೊಂಡಿದ್ದು, ಮಾರ್ಚ್‌ 26ರಿಂದ ಮನೋರಂಜನ್ ಕಾ ಬಾಪ್ ಚುಟುಕು ಟೂರ್ನಿಗಾಗಿ ಅಭಿಮಾನಿಗಳು ಕಾತುರದಿಂದ ಎದುರು ನೋಡುತ್ತಿದ್ದಾರೆ. ಉದ್ಘಾಟನಾ ಪಂದ್ಯದಲ್ಲಿ ನಾಲ್ಕು ಬಾರಿಯ ಐಪಿಎಲ್ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್‌ ಟ್ರೋಫಿ ಮತ್ತು ಎರಡು ಬಾರಿಯ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆರ್) ಮುಖಾಮುಖಿಯಾಗಲಿದೆ.

ಕಳೆದ ಬಾರಿಯ ಐಪಿಎಲ್ ಚಾಂಪಿಯನ್ ಧೋನಿ ಎಲ್ಲರಿಗಿಂತ ಮುಂಚಿತವಾಗಿ ಅಖಾಡಕ್ಕಿಳಿದು ನೆಟ್ಸ್‌ನಲ್ಲಿ ಬೆವರು ಸುರಿಸುತ್ತಿದ್ದಾರೆ. ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ ನಿವೃತ್ತಿ ಪಡೆದಿರುವ ಮಾಹಿ ಟೂರ್ನಿಗೂ ಮುನ್ನ ಉತ್ತಮ ಅಭ್ಯಾಸವನ್ನ ಮಾಡುತ್ತಿದ್ದಾರೆ.

ಸೂರತ್‌ನಲ್ಲಿ ಧೋನಿ ಸಮರಾಭ್ಯಾಸ

ಸಿಎಸ್‌ಕೆ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅಭ್ಯಾಸ ಆರಂಭಿಸಿರುವ ಕುರಿತಾದ ವೀಡಿಯೋವನ್ನ ಚೆನ್ನೈ ಸೂಪರ್ ಕಿಂಗ್ಸ್‌ನ ಅಧಿಕೃತ ಫೇಸ್‌ಬುಕ್, ಯೂಟ್ಯೂಬ್ ಪೋರ್ಟಲ್‌ಗಳಲ್ಲಿ ಪೋಸ್ಟ್ ಮಾಡಲಾಗಿದೆ.

ಬಹುತೇಕ ದೇಶೀಯ ಆಟಗಾರರು ಬ್ಯುಸಿ ಆಗಿದ್ದಾರೆ

ಬಹುತೇಕ ದೇಶೀಯ ಆಟಗಾರರು ಬ್ಯುಸಿ ಆಗಿದ್ದಾರೆ

ಸಿಎಸ್‌ಕೆ ತಂಡದ ಕೆಲವು ಆಟಗಾರರು ರಾಷ್ಟ್ರೀಯ ತಂಡದಲ್ಲಿ ನಿರತರಾಗಿದ್ದಾರೆ. ಇದರಲ್ಲಿ ರವೀಂದ್ರ ಜಡೇಜಾ ಕೂಡ ಒಬ್ಬರಾಗಿದ್ದು, ಅವರು ಪ್ರಸ್ತುತ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡುತ್ತಿದ್ದಾರೆ. ಇನ್ನು ಕೆಲವು ದೇಶೀಯ ಆಟಗಾರರು ರಣಜಿ ಟೂರ್ನಿಯಲ್ಲಿ ಭಾಗವಹಿಸಿದ್ದರು. ಇನ್ನುಳಿದ ಆಟಗಾರರು ಧೋನಿ ಮತ್ತು ಬೌಲಿಂಗ್ ಕೋಚ್ ಲಕ್ಷ್ಮೀಪತಿ ಬಾಲಾಜಿ ಅವರ ಮಾರ್ಗದರ್ಶನದಲ್ಲಿ ಅಭ್ಯಾಸ ನಡೆಸಿತು.

ಐಪಿಎಲ್ 2022: ಆರ್‌ಸಿಬಿಗೆ ಎಬಿಡಿ ವಾಪಸ್; ಮಾರ್ಚ್ 12ಕ್ಕೆ ಈತನ ಪಾಲಾಗಲಿದೆ ನಾಯಕತ್ವ

ಧೋನಿ ಸಲಹೆ ಪಡೆದ ರಾಜವರ್ಧನ್ ಹೆಂಗಾರ್ಕೆಕರ್

ಧೋನಿ ಸಲಹೆ ಪಡೆದ ರಾಜವರ್ಧನ್ ಹೆಂಗಾರ್ಕೆಕರ್

ಇತ್ತೀಚೆಗಷ್ಟೇ ಮುಕ್ತಾಯಗೊಂಡಿದ್ದ ಅಂಡರ್-19 ವಿಶ್ವಕಪ್‌ನಲ್ಲಿ ಭಾರತ ಜ್ಯೂನಿಯರ್ ತಂಡದ ಸದಸ್ಯ ರಾಜವರ್ಧನ್ ಹಂಗರ್ಗೇಕರ್ ನೆಟ್ಸ್‌ನಲ್ಲಿ ಸಾಕಷ್ಟು ಹೊತ್ತು ಬೆವರು ಸುರಿಸಿದ್ದಾನೆ. ಮಹೇಂದ್ರ ಸಿಂಗ್ ಧೋನಿ ಉಪಸ್ಥಿತಿಯಲ್ಲಿ ಸಾಕಷ್ಟು ಅಭ್ಯಾಸ ಪಡೆದ ಈತ ಕೆಲವು ಟಿಪ್ಸ್ ಕೂಡ ಪಡೆದಿದ್ದಾನೆ.

DC IPL 2022 Schedule : ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

ಹುಟ್ಟಿದ ದಿನಾಂಕ ತಿರುಚಿರುವ ಆರೋಪ ಹೊಂದಿರುವ ರಾಜವರ್ಧನ್

ಹುಟ್ಟಿದ ದಿನಾಂಕ ತಿರುಚಿರುವ ಆರೋಪ ಹೊಂದಿರುವ ರಾಜವರ್ಧನ್

ಅಂಡರ್-19 ವಿಶ್ವಕಪ್‌ನಲ್ಲಿ ಉತ್ತಮ ಬೌಲಿಂಗ್ ನಡೆಸಿದ ಬೌಲರ್ ರಾಜವರ್ಧನ್ ಹಂಗರ್ಗೇಕರ್ ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್‌ ಫ್ರಾಂಚೈಸಿ ಪಾಲಾಗಿದ್ದಾರೆ. ಹಂಗೇಕರ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ 1.5 ಕೋಟಿಗೆ ಖರೀದಿಸಿದೆ. ಮುಂಬೈ ಇಂಡಿಯನ್ಸ್ ಕೂಡ ಅವರನ್ನು ಖರೀದಿಸಲು ಬಿಡ್ ಮಾಡಿತು ಆದರೆ ಅಂತಿಮವಾಗಿ ಚೆನ್ನೈ ಗೆದ್ದಿತು.

ಭಾರತ ತಂಡದಲ್ಲಿ ಸ್ಥಾನ ಪಡೆಯಲು ಹಂಗರ್ಗೇಕರ್ ತನ್ನ ವಯಸ್ಸನ್ನ ಮುಚ್ಚಿಟ್ಟು ಭಾರತ ಪರ ಆಡಿದ್ದಾರೆ ಎಂದು ಮಹಾರಾಷ್ಟ್ರದ ಕ್ರೀಡಾ ಮತ್ತು ಯುವಜನ ಇಲಾಖೆ ಆಯುಕ್ತ ಓಂಪ್ರಕಾಶ್ ಬಕೋರಿಯಾ ಆರೋಪ ಮಾಡಿದ್ದಾರೆ. ಈ ಕುರಿತಾಗಿ ಬಿಸಿಸಿಐಗೆ ದೂರು ಸಹ ನೀಡಿದ್ದಾರೆ.

ಅಂಡರ್-19 ವಿಶ್ವಕಪ್‌ಗೆ (ಜನವರಿ 14-ಫೆಬ್ರವರಿ 5) ಭಾರತದ ತಂಡಕ್ಕೆ ಹಂಗರ್ಗೇಕರ್ ಅವರನ್ನು ಆಯ್ಕೆ ಮಾಡಿದಾಗ, ಅವರು ಈಗಾಗಲೇ 21 ವರ್ಷ ವಯಸ್ಸಿನವರಾಗಿದ್ದರು - ವಯಸ್ಸಿನ ವರ್ಗಕ್ಕೆ ಅರ್ಹರಾಗಿರಲಿಲ್ಲ. ಐಸಿಸಿ ಪ್ರಕಾರ, U19 ವಿಶ್ವಕಪ್‌ನಲ್ಲಿ ಭಾಗವಹಿಸುವ ಆಟಗಾರನು ಅರ್ಹತೆ ಪಡೆಯಲು 19 ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು (15 ಕ್ಕಿಂತ ಕಡಿಮೆ ಕೂಡ ಆಗಿರುವಂತಿಲ್ಲ).

Story first published: Wednesday, March 9, 2022, 9:38 [IST]
Other articles published on Mar 9, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X