ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐದೇ ಸೆಕೆಂಡಿನಲ್ಲಿ ಮುಗಿದಿತ್ತು ಸಿಎಸ್‌ಕೆ ಕೊನೆಯ ಮೀಟಿಂಗ್!

csk team meeting was over just in five seconds before final

ಬೆಂಗಳೂರು, ಜೂನ್ 12: ಸಾಮಾನ್ಯವಾಗಿ ಪ್ರತಿ ಪಂದ್ಯಕ್ಕೂ ಮುನ್ನ ತಂಡವೊಂದರ ಕೋಚ್, ನಾಯಕ, ತಂಡದ ಮಾಲೀಕರು ಉಳಿದ ಆಟಗಾರರ ಜತೆ ಸೇರಿ ಸಭೆ ನಡೆಸುವುದು ಸಾಮಾನ್ಯ. ಅದರಲ್ಲೂ ಫೈನಲ್ ಪಂದ್ಯವೆಂದರೆ ತುಸು ಗಂಭೀರವಾದ ಚರ್ಚೆಗಳು ನಡೆಯಲೇಬೇಕು.

ಎದುರಾಳಿ ತಂಡದ ಶಕ್ತಿ, ದೌರ್ಬಲ್ಯ ಮತ್ತು ತಮ್ಮ ತಂಡದ ಶಕ್ತಿ, ದೌರ್ಬಲ್ಯಗಳ ಪಟ್ಟಿಯೊಂದಿಗೆ, ಪ್ರತಿ ಬ್ಯಾಟ್ಸ್‌ಮನ್‌ನನ್ನು ನಿಯಂತ್ರಿಸುವ ಬಗೆ ಹಾಗೂ ಬೌಲರ್‌ಅನ್ನು ಎದುರಿಸುವ ರೀತಿ ಕುರಿತು ದೀರ್ಘವಾದ ಸಮಾಲೋಚನೆ ನಡೆಯುತ್ತದೆ.

ವಿಶ್ವಕಪ್ ಕ್ರಿಕೆಟ್ ಗೆ 14 ತಂಡಗಳ ಆರಿಸುವಂತೆ ಕೋರಿದ ಸ್ಕಾಟ್ಲೆಂಡ್ವಿಶ್ವಕಪ್ ಕ್ರಿಕೆಟ್ ಗೆ 14 ತಂಡಗಳ ಆರಿಸುವಂತೆ ಕೋರಿದ ಸ್ಕಾಟ್ಲೆಂಡ್

ಆದರೆ, ಇತ್ತೀಚೆಗೆ ಮುಕ್ತಾಯಗೊಂಡ ಐಪಿಎಲ್ ಆವೃತ್ತಿಯಲ್ಲಿ ಟ್ರೋಫಿ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ತಂತ್ರಗಳ ಕುರಿತಾಗಿ ತಲೆಕೆಡಿಸಿಕೊಂಡಿರಲಿಲ್ಲ.

ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯಕ್ಕೂ ಮುನ್ನ ಸಿಎಸ್‌ಕೆ ತಂಡ ನಡೆಸಿದ ಸಭೆ ನಡೆದಿದ್ದು ಐದೇ ಐದು ಸೆಕೆಂಡ್ ಮಾತ್ರ!

csk team meeting was over just in five seconds before final

ಹೈದರಾಬಾದ್ ವಿರುದ್ಧದ ಪಂದ್ಯಕ್ಕೂ ಮುನ್ನ ಸಿಎಸ್‌ಕೆ ಯಾವುದೇ ತಂತ್ರಗಾರಿಕೆಯ ಬಗ್ಗೆ ತಲೆಕೆಡಿಸಿಕೊಳ್ಳಲು ಹೋಗಿರಲಿಲ್ಲ ಎಂದು ತಂಡದ ನಾಯಕ ಎಂ.ಎಸ್. ಧೋನಿ ಬಹಿರಂಗಪಡಿಸಿದ್ದಾರೆ.

'ಆ ವೇಳೆಗೆ ನಾವು ಟೂರ್ನಿಯುದ್ದಕ್ಕೂ ನಾವು ಆಡಿದ ರೀತಿಯ ಕುರಿತು ನಾವು ಹೆಚ್ಚು ಆರಾಮಾಗಿದ್ದೆವು. ಪ್ರತಿಯೊಬ್ಬ ಆಟಗಾರನ ಪಾತ್ರ ಮತ್ತು ಜವಾಬ್ದಾರಿ ಸ್ಪಷ್ಟವಾಗಿತ್ತು. ಯಾವುದಾದರೂ ಸಂಗತಿ ಕುರಿತು ಗಮನ ಹರಿಸುವ ಅಗತ್ಯವಿದ್ದರೆ ಮಾತ್ರ ಅದನ್ನು ಸರಿಪಡಿಸಲೇಬೇಕು.

ಅಫ್ಘನ್ ವಿರುದ್ಧದ ಟೆಸ್ಟ್ : ಯೋ ಯೋ ಟೆಸ್ಟ್ ಫೇಲಾದ ಶಮಿ ಔಟ್, ಸೈನಿ ಇನ್ಅಫ್ಘನ್ ವಿರುದ್ಧದ ಟೆಸ್ಟ್ : ಯೋ ಯೋ ಟೆಸ್ಟ್ ಫೇಲಾದ ಶಮಿ ಔಟ್, ಸೈನಿ ಇನ್

ಸಭೆಯಲ್ಲಿ ತಂಡದ ನಾಯಕ ಮತ್ತು ಕೋಚ್ ಇದ್ದರೆ ನೀವು ಏನಾದರೂ ಹೇಳಲೇಬೇಕು ಎಂಬುದರಲ್ಲಿ ಯಾವುದೇ ಅರ್ಥವಿಲ್ಲ. ನಾವು ಅಂದು ನಡೆಸಿದ ಸಭೆ ಹೆಚ್ಚೆಂದರೆ ಐದು ಸೆಕೆಂಡ್‌ನಲ್ಲಿ ಮುಗಿದುಹೋಗಿತ್ತು. ಕೋಚ್ ಸ್ಟೀಫನ್ ಫ್ಲೆಮಿಂಗ್ 'ಹೋಗಿ ಗೆದ್ದು ಬನ್ನಿ' ಎಂದರು ಎಂಬುದಾಗಿ ಧೋನಿ ಹೇಳಿದ್ದಾರೆ.

ನಮ್ಮಲ್ಲಿ ಸಭೆಗಳ ಉದ್ದನೆಯ ಪಟ್ಟಿ ಇರಲಿಲ್ಲ. ತಂಡದಲ್ಲಿದ್ದ ನಾವೆಲ್ಲರೂ ಒಟ್ಟಿಗೆ ದೀರ್ಘಕಾಲದಿಂದ ಆಡಿದ್ದರಿಂದ ನಮಗೆ ಹೆಚ್ಚು ಸಭೆಗಳನ್ನು ಸೇರಿ ಚರ್ಚಿಸುವ ಅಗತ್ಯವಿರಲಿಲ್ಲ.

ಬೌಲರ್‌ಗಳು, ಬ್ಯಾಟ್ಸ್‌ಮನ್‌ಗಳ ಸಭೆ ನಡೆಸಿದ್ದೇವೆ. ಆದರೆ ನಾನು ಬ್ಯಾಟ್ಸ್‌ಮನ್‌ಗಳ ಸಭೆಯಲ್ಲಿ ಭಾಗಿಯಾಗಿರಲಿಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ಸಭೆಗಳಲ್ಲಿ ತಂಡದ ಆಟಗಾರರ ಸಾಧನೆಯ ಪರಾಮರ್ಶೆಗೆ ಅಂಕ ಹಾಕುವಂತಹ ಪದ್ಧತಿ ಇರುತ್ತದೆ.

ಆದರೆ ಸಿಎಸ್‌ಕೆಯಲ್ಲಿ ಅಂತಹದ್ದಕ್ಕೆ ಅವಕಾಶವಿರಲಿಲ್ಲ. ಬೌಲಿಂಗ್ ಕೋಚ್ ತಮ್ಮ ಮಾಲೀಕರನ್ನು ಸಮರ್ಥಿಸಿಕೊಳ್ಳುವ ಅಗತ್ಯವೇ ಇರಲಿಲ್ಲ.

ಇಡೀ ಟೂರ್ನಿಯಲ್ಲಿ ಪಂದ್ಯಕ್ಕೂ ಮುನ್ನ ಸಭೆ ನಡೆಸಿದ್ದ ಸಂದರ್ಭವೆಂದರೆ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯಕ್ಕೂ ಮುನ್ನ ಮಾತ್ರ ಎಂದು ಧೋನಿ ತಿಳಿಸಿದ್ದಾರೆ.

ಆದರೆ, ಆ ಪಂದ್ಯದಲ್ಲಿ ಕ್ರಿಸ್ ಗೇಲ್ ಸಿಎಸ್‌ಕೆ ವಿರುದ್ಧ ಭರ್ಜರಿ ಶತಕ ಬಾರಿಸಿದ್ದರು.

ಕೋಚ್ ಅಥವಾ ನಾಯಕ ಆಟಗಾರನೊಬ್ಬ ಯಾವ ಸಾಧನೆ ಮಾಡುವ ಸಾಮರ್ಥ್ಯ ಹೊಂದಿದ್ದಾನೋ ಅದಕ್ಕೆ ಅನುಗುಣವಾಗಿ ಸಲಹೆ ನೀಡಬೇಕು.

ಇದ್ದಕ್ಕಿದ್ದಂತೆ ನೀನು ಆಫ್‌ಸ್ಟಂಪ್‌ನಿಂದ ಹೊರಕ್ಕೆ ಯಾರ್ಕರ್ ಹಾಕು ಎಂದು, ಎಂದಿಗೂ ಆ ರೀತಿ ಬೌಲಿಂಗ್ ಮಾಡಿರದ ಬೌಲರ್‌ಗೆ ಹೇಳಲು ಸಾಧ್ಯವಿಲ್ಲ.

ಆತನ ಶಕ್ತಿಗೆ ಅನುಗುಣವಾಗಿ ಸಲಹೆ ನೀಡಬೇಕು ಮತ್ತು ದೌರ್ಬಲ್ಯಗಳನ್ನು ಸರಿಪಡಿಸಿಕೊಳ್ಳಲು ಹೇಳಬೇಕು. ಅದು ನಮಗೆ ಅದ್ಭುತವಾಗಿ ಕೆಲಸ ಮಾಡಿತು ಎಂದು ಧೋನಿ ಹೇಳಿದ್ದಾರೆ.

Story first published: Tuesday, June 12, 2018, 14:29 [IST]
Other articles published on Jun 12, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X