ಕ್ರಿಕೆಟ್ ಲೋಕದಲ್ಲಿ ವಿಂಡೀಸ್ ತನ್ನ ವೈಭವದ ದಿನಗಳನ್ನು ಮತ್ತೆ ಕಾಣುವುದು ಅಸಾಧ್ಯ: ಕಾರ್ಟ್ಲಿ ಆಂಬ್ರೋಸ್

ವೆಸ್ಟ್ ಇಂಡೀಸ್‌ ಕ್ರಿಕೆಟ್‌ನ ಶ್ರೇಷ್ಠ ಬೌಲರ್ ಕಾರ್ಟ್ಲಿ ಆಂಬ್ರೋಸ್ ಬೇಸರದ ಮಾತುಗಳನ್ನು ಆಡಿದ್ದಾರೆ. ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ ತನ್ನ ಹಳೇಯ ವೈಭವದ ದಿನಗಳನ್ನು ಮತ್ತೆ ಕಾಣುವುದು ಬಹುಶಃ ಅಸಾಧ್ಯ ಎಂದು ಅವರು ಹೇಳಿಕೆಯನ್ನು ನೀಡಿದ್ದಾರೆ.

ಇದೇ ಸಂದರ್ಭದಲ್ಲಿ ಕಾರ್ಟ್ಲಿ ಆಂಬ್ರೋಸ್ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ ಬಹುಶಃ ಇತರ ತಂಡಗಳೊಂದಿಗೆ ಕಠಿಣ ಸ್ಪರ್ಧೆಯನ್ನು ನೀಡಲು ಸಮರ್ಥವಾಗಬಹುದು ಹಾಗೂ ಶ್ರೇಯಾಂಕ ಪಟ್ಟಿಯಲ್ಲಿಯೂ ಉತ್ತಮ ಸ್ಥಾನವನ್ನು ಸಂಪಾದಿಸಬಹುದು. ಆದರೆ ತಮ್ಮ ಕಾಲದಲ್ಲಿ ಹಾಗೂ ಅದಕ್ಕೂ ಮುನ್ನ ವಿಶ್ವ ಕ್ರಿಕೆಟ್‌ನಲ್ಲಿ ಪ್ರಾಬಲ್ಯವನ್ನು ಸಾಧಿಸಿದ ರೀತಿಯ ವೈಭವದ ದಿನಗಳನ್ನು ಕಾಣುವುದು ಅಸಾಧ್ಯ ಎಂದು ಕಾರ್ಟ್ಲಿ ಆಂಬ್ರೋಸ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಯುಎಇಯಲ್ಲಿ ಪಿಎಸ್‌ಎಲ್ ನಡೆಸುವ ಪಾಕಿಸ್ತಾನ್ ಯೋಜನೆಗೆ ತಣ್ಣೀರು!ಯುಎಇಯಲ್ಲಿ ಪಿಎಸ್‌ಎಲ್ ನಡೆಸುವ ಪಾಕಿಸ್ತಾನ್ ಯೋಜನೆಗೆ ತಣ್ಣೀರು!

ಇದೇ ಸಂದರ್ಭದಲ್ಲಿ ಆಂಬ್ರೋಸ್ ಒಂದು ಮಾತನನ್ನು ಸ್ಪಷ್ಟ ಪಡಿಸಿದರು. ಈಗಿನ ಯುವ ಪೀಳಿಗೆಯ ಬಗ್ಗೆ ತಾನು ಅಗೌರವದಿಂದ ಈ ಮಾತುಗಳನ್ನು ಹೇಳಿತ್ತಿಲ್ಲ. ಆದರೆ ದ್ವೀಪಗಳಲ್ಲಿರುವ ಹಾಗೂ ವಿದೇಶದಲ್ಲಿರುವ ಕೆರಿಬಿಯನ್ ಜನರ ಪಾಲಿಗೆ ಕ್ರಿಕೆಟ್ ಎಂಬುದು ಎಷ್ಟು ಮಹತ್ವದ್ದ ಸಂಗತಿ ಎಂದು ಹೆಚ್ಚಿನ ಕಿರಿಯ ಆಟಗಾರರಿಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.

"ಬಹುಶಃ ಈಗಿನ ಯುವಕರಿಗೆ ಕ್ರಿಕೆಟ್ ಎಂಬುದು ವೆಸ್ಟ್ ಇಂಡೀಸ್ ಪಾಲಿಗೆ ಎಷ್ಟು ಮಹತ್ವದ್ದು ಎಂಬುದು ಬಹುಶಃ ಅರ್ಥವಾಗಿಲ್ಲ. ಕೆರಿಬಿಯನ್ ಜನರನ್ನು ಒಂದುಗೂಡಿಸುವ ಏಕೈಕ ಕ್ರೀಡೆ ಅಂದರೆ ಅದು ಕ್ರಿಕೆಟ್" ಎಂದು ದಿಗ್ಗಜ ಕ್ರಿಕೆಟಿಗ ವಿವರಿಸಿದ್ದಾರೆ.

ಎಬಿಡಿಗಿಂತ ಕ್ರಿಸ್ ಗೇಲ್, ಕೊಹ್ಲಿ ಸಖತ್ ಡೇಂಜರಸ್ ಎನ್ನುತ್ತಿವೆ ಈ ಅಂಕಿಅಂಶಗಳು!ಎಬಿಡಿಗಿಂತ ಕ್ರಿಸ್ ಗೇಲ್, ಕೊಹ್ಲಿ ಸಖತ್ ಡೇಂಜರಸ್ ಎನ್ನುತ್ತಿವೆ ಈ ಅಂಕಿಅಂಶಗಳು!

98 ಟೆಸ್ಟ್ ಪಂದ್ಯಗಳನ್ನು ಆಡಿರುವ ಆಂಬ್ರೋಸ್ 405 ಟೆಸ್ಟ್ ವಿಕೆಟ್ ಸಂಪಾದಿಸಿದ್ದರೆ 176 ಏಕದಿನ ಪಂದ್ಯಗಳಲ್ಲಿ 225 ವಿಕೆಟ್‌ಗಳನ್ನು ಕಬಳಿಸಿದ್ದಾರೆ. 1988ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನ ಆರಂಭಿಸಿದ ಆಂಬ್ರೋಸ್ 2000ನೇ ಇಸವಿಯಲ್ಲಿ ನಿವೃತ್ತಿ ಘೋಷಿಸಿದರು

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Tuesday, May 11, 2021, 15:13 [IST]
Other articles published on May 11, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X