ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಡೇಲ್ ಸ್ಟೇನ್ ಇನ್ನೊಂದಿಷ್ಟು ವರ್ಷ ಕ್ರಿಕೆಟ್ ನಲ್ಲಿರಲಿದ್ದಾರೆ: ಡೊಮಿಂಗೊ

Dale Steyn has another couple of years left in him: Russel Domingo

ಬೆಂಗಳೂರು, ಆಗಸ್ಟ್ 10: ದಕ್ಷಿಣ ಆಫ್ರಿಕಾದ ಮಾರಕ ಬೌಲರ್ ಡೇಲ್ ಸ್ಟೇನ್ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಮರಳಲಿದ್ದಾರೆ. ಅವರು ಇನ್ನೊಂದಿಷ್ಟು ವರ್ಷ ಕ್ರಿಕೆಟ್ ನಲ್ಲಿ ಇರಲಿದ್ದಾರೆ ಎಂದು ದಕ್ಷಿಣ ಆಫ್ರಿಕಾ ತಂಡದ ಮಾಜಿ ಕೋಚ್, ಈಗ ದಕ್ಷಿಣ ಆಫ್ರಿಕಾ ಎ ತಂಡದ ಕೋಚ್ ಆಗಿರುವ ರಸೆಲ್ ಡೊಮಿಂಗೊ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಘನತೆಗೆ ಧಕ್ಕೆ ತಾರದಿರಿ: ರಾಥೋಡ್ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಘನತೆಗೆ ಧಕ್ಕೆ ತಾರದಿರಿ: ರಾಥೋಡ್

ಸಂವಾದವೊಂದರಲ್ಲಿ ಮಾತಿಗೆ ಸಿಕ್ಕ ಡೊಮಿಂಗೊ ಅವರು ದಕ್ಷಿಣ ಆಫ್ರಿಕಾ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ತರಬೇತುದಾರರಾಗಿದ್ದಾಗಿನ ಅನುಭವ, ಈಗಿನ ಎ ತಂಡಕ್ಕೆ ತರಬೇತಿ ನೀಡುವಾಗಿನ ಸವಾಲು-ಸಂಭ್ರಮಗಳನ್ನು ಹಂಚಿಕೊಂಡರು. ಈ ವೇಳೆ ದೀರ್ಘಕಾಲ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಡೇಲ್ ಸ್ಟೇನ್ ಬಗ್ಗೆ ವಿಚಾರಗಳನ್ನು ಹಂಚಿಕೊಂಡರು.

ರಸೆಲ್ ಅವರು ಸೌತ್ ಆಫ್ರಿಕಾ ತಂಡದ ಮುಖ್ಯ ತರಬೇತುದಾರರಾಗಿದ್ದಾಗ ತಂಡಕ್ಕೆ ಸ್ಟೇನ್ ಮತ್ತು ಎಬಿ ಡಿ'ವಿಲಿಯರ್ಸ್ ಬೆಂಬಲ ಅಷ್ಟೇನೂ ದೊರೆತಿರಲಿಲ್ಲ. ಇದೊಂದು ರೀತಿಯಲ್ಲಿ ತಂಡದ ಹಿನ್ನಡೆಗೂ ಕಾರಣವಾಗಿತ್ತು. ಆದರೆ ಡೇಲ್, ಎಬಿಡಿ ಅನುಪಸ್ಥಿತಿಯನ್ನು ಡೊಮಿಂಗೊ ಸಕಾರಾತ್ಮಕವಾಗಿ ಪರಿಗಣಿಸಿದರು.

'ಹೆಚ್ಚಿನ ಸಾರಿ ಪ್ರತಿಭಾನ್ವಿತ ಆಟಗಾರರ ಬೆಂಬಲ ತಂಡಕ್ಕೆ ಬೇಕೆಂದು ಎಲ್ಲರೂ ಬಯಸುತ್ತಾರೆ. ಅದು ಹೌದುಕೂಡ. ಆದರೆ ನನಗನ್ನಿಸಿದಂತೆ ಸ್ಟೇನ್, ಎಬಿಡಿ ಅನುಪಸ್ಥಿತಿ ಹೊಸಬರಿಗೆ ದಾರಿಯಾಯಿತು. ಈಗ ಬೌಲಿಂಗ್ ವಿಭಾಗದಲ್ಲಿ ಅಗ್ರ ಸ್ಥಾನದಲದಲಿರುವ ಕಾಗಿಸೊ ರಬಾಡ ಅವಕಾಶ ಗಿಟ್ಟಿಸಿಕೊಂಡಿದ್ದೇ ಆಗ' ಎಂದು ಡೊಮಿಂಗೊ ಹೇಳಿದರು.

ಡೇಲ್ ಸ್ಟೇನ್ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಮರಳುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸುತ್ತ ಡೊಮಿಂಗೊ, 'ಡೇಲ್ ಸ್ಟೇನ್ ಗೆ ಮತ್ತೆ ಕ್ರಿಕೆಟ್ ಜಗತ್ತಿಗೆ ಮರಳುವ ಮಹದಾಸೆಯಿದೆ ಖಂಡಿತಾ ಇದೆ. ಅವರು ಫಿಟ್ನೆಸ್ ಗೆ ಮರಳುವ ವಿಶ್ವಾಸವೂ ನನಗಿದೆ. ಅವರು ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್ ಗಾಗಿ ತಂಡದೊಂದಿಗೆ ಸಜ್ಜಾಗುವುದರಲ್ಲಿ ನನಗೆ ಅನುಮಾನವೇ ಇಲ್ಲ' ಎಂದರು.

ಡೇಲ್ ಸ್ಟೇನ್ ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸುವ ಸುಳಿವು ನೀಡಿದ್ದರು. ತಾನು 2019ರ ವಿಶ್ವಕಪ್ ನಲ್ಲಿ ಕೊನೆಯಬಾರಿಗೆ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಲಿದ್ದೇನೆ ಎಂಬರ್ಥದಲ್ಲಿ ಸ್ಟೇನ್ ಹೇಳಿಕೆಯೊಂದನ್ನು ನೀಡಿದ್ದರು. ಆದರೆ ಸ್ಟೇನ್ ಗಾಯದಿಂದ ಬೇಸತ್ತು ಈ ಹೇಳಿಕೆ ನೀಡಿರುವ ಸಾಧ್ಯತೆಯಿದೆ. ಗಾಯದಿಂದ ಚೇತರಿಸಿಕೊಂಡರೆ ಸ್ಟೇನ್, ಡೊಮಿಂಗೊ ಹೇಳುವಂತೆ ಮತ್ತೆ ತಂಡದಲ್ಲಿ ಮುಂದುವರೆಯುವ ಸಾಧ್ಯತೆಯನ್ನು ಅಲ್ಲಗೆಳೆಯುವಂತಿಲ್ಲ.

Story first published: Friday, August 10, 2018, 22:04 [IST]
Other articles published on Aug 10, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X