ವೆಸ್ಟ್ ಇಂಡೀಸ್ ಕ್ರಿಕೆಟ್ ನಿರ್ದೇಶಕರ ಬೋರ್ಡ್ ಸದಸ್ಯರಾಗಿ ಡ್ಯಾರೆನ್ ಸಾಮಿ ಆಯ್ಕೆ

ಪೋರ್ಟ್‌ ಆಫ್‌ ಸ್ಪೇನ್: ಎರಡು ಬಾರಿ ಟಿ20 ವಿಶ್ವ ಟ್ರೋಫಿ ಗೆದ್ದಿರುವ ವೆಸ್ಟ್ ಇಂಡೀಸ್ ತಂಡದ ಮಾಜಿ ನಾಯಕ ಡ್ಯಾರೆನ್ ಸಾಮಿ ಅವರು ವೆಸ್ಟ್‌ ಇಂಡೀಸ್ ಕ್ರಿಕೆಟ್ ಬೋರ್ಡ್‌ನ ನಿರ್ದೇಶಕರಲ್ಲದ ಸ್ವತಂತ್ರ್ಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಜೂನ್ 17ರಲ್ಲಿ ನಡೆದಿದ್ದ ಸಭೆಯೊಂದರಲ್ಲಿ ವೆಸ್ಟ್‌ ಇಂಡೀಸ್ ಕ್ರಿಕೆಟ್ ಬೋರ್ಡ್ ಈ ನಿರ್ಧಾರ ಕೈಗೊಂಡಿತ್ತು.

WTC Final: ಜ್ಯಾಮಿಸನ್‌ಗೆ ಬಲಿಯಾದ ಕೊಹ್ಲಿ, ಪೂಜಾರ: ಟ್ವಿಟ್ಟರಾಟಿಗಳ ಪ್ರತಿಕ್ರಿಯೆ ಇಲ್ಲಿದೆWTC Final: ಜ್ಯಾಮಿಸನ್‌ಗೆ ಬಲಿಯಾದ ಕೊಹ್ಲಿ, ಪೂಜಾರ: ಟ್ವಿಟ್ಟರಾಟಿಗಳ ಪ್ರತಿಕ್ರಿಯೆ ಇಲ್ಲಿದೆ

2012 ಮತ್ತು 2016ರಲ್ಲಿ ಸತತ ಎರಡು ಟಿ20 ವಿಶ್ವಕಪ್‌ ಟ್ರೋಫಿಗಳನ್ನು ಗೆದ್ದಿದ್ದ ವೆಸ್ಟ್‌ ಇಂಡೀಸ್ ತಂಡಕ್ಕೆ ಡ್ಯಾರೆನ್ ಸಾಮಿ ನಾಯಕರಾಗಿದ್ದರು. ವಿಂಡೀಸ್‌ ಕ್ರಿಕೆಟ್ ಬೋರ್ಡ್‌ನ ಸಭೆಯಲ್ಲಿ ಆಯ್ಕೆಯಾಗಿರುವ ಮೂವರು ಸ್ವತಂತ್ರ ನಿರ್ದೇಶಕರಲ್ಲಿ ಸಾಮಿ ಕೂಡ ಒಬ್ಬರಾಗಿದ್ದಾರೆ. ಮುಂದಿನ 2 ವರ್ಷಗಳ ಕಾಲ ಸಾಮಿ ಸೇವೆ ಸಲ್ಲಿಸಲಿದ್ದಾರೆ.

ಟ್ರಿನಿಡಾಡಿಯನ್ ಅಟಾರ್ನಿ ಡೆಬ್ರಾ ಕೊರಿಯಾಟ್-ಪ್ಯಾಟನ್, ಜಮೈಕನ್ ಸರ್ಜನ್ ಮತ್ತು ಯುನಿವರ್ಸಿಟಿ ಅಡ್ಮಿನಿಸ್ಟ್ರೇಟರ್ ಡಾ. ಅಕ್ಷಯ್ ಮಾನ್‌ಸಿಂಗ್ ಅವರಿದ್ದ ತಂಡವನ್ನು ಸಾಮಿ ಕೂಡ ಸೇರಿಕೊಳ್ಳಲಿದ್ದಾರೆ. ಇವರಿಬ್ಬರೂ ಎರಡನೇ ಅವಧಿಗೆ ಆಯ್ಕೆಯಾಗಿದ್ದಾರೆ.

WTC Final: ದೊಡ್ಡ ಎಡವಟ್ಟು ಮಾಡಿ ಮೈದಾನದಿಂದ ಹೊರಗೋಡಿದ ಬೂಮ್ರಾWTC Final: ದೊಡ್ಡ ಎಡವಟ್ಟು ಮಾಡಿ ಮೈದಾನದಿಂದ ಹೊರಗೋಡಿದ ಬೂಮ್ರಾ

ಬ್ಯಾಟಿಂಗ್ ಆಲ್ ರೌಂಡರ್ ಆಗಿದ್ದ 37ರ ಹರೆಯದ ಡ್ಯಾರೆನ್ ಸಾಮಿ 38 ಟೆಸ್ಟ್‌ ಪಂದ್ಯಗಳಲ್ಲಿ 1323 ರನ್, 126 ಏಕದಿನ ಪಂದ್ಯಗಳಲ್ಲಿ 1871 ರನ್, 68 ಟಿ20ಐ ಪಂದ್ಯಗಳಲ್ಲಿ 587 ರನ್ ಮತ್ತು 22 ಐಪಿಎಲ್ ಪಂದ್ಯಗಳಲ್ಲಿ 295 ರನ್ ಬಾರಿಸಿದ್ದಾರೆ. ಐಪಿಎಲ್‌ನಲ್ಲಿ ಸಾಮಿ ಸನ್ ರೈಸರ್ಸ್ ಹೈದರಾಬಾದ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳ ಪರ ಆಡಿದ್ದರು.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Wednesday, June 23, 2021, 20:30 [IST]
Other articles published on Jun 23, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X