ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್: ಈ 2 ತಂಡಗಳಿಗೆ ನಾಯಕನಾಗುವ ಇಚ್ಛೆಯನ್ನು ವ್ಯಕ್ತಪಡಿಸಿದ ಡೇವಿಡ್ ವಾರ್ನರ್!

David Warner expressed his wish to lead one of the two new franchises in IPL 2022
David Warner ಅವರಿಗೆ ಕಾಡುತಿರುವ ಏಕೈಕ ಪ್ರಶ್ನೆ ಇದು | Oneindia Kannada

ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮುಕ್ತಾಯದ ಹಂತಕ್ಕೆ ಬಂದು ತಲುಪಿದ್ದು, ಇತ್ತೀಚೆಗಷ್ಟೇ ನಡೆದ ಕ್ವಾಲಿಫೈಯರ್ 1 ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಫೈನಲ್ ಹಂತಕ್ಕೆ ತಲುಪಿದೆ. ಇನ್ನು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋತ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕ್ವಾಲಿಫೈಯರ್ 2 ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ವಿರುದ್ಧ ಸೆಣಸಾಡಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡವು ಫೈನಲ್ ಸುತ್ತಿಗೆ ಅರ್ಹತೆಯನ್ನು ಪಡೆದುಕೊಳ್ಳಲಿದ್ದು ಸೋತ ತಂಡವು ಟೂರ್ನಿಯಿಂದ ಹೊರ ಬೀಳಲಿದೆ.

ಪಂಜಾಬ್ ಕಿಂಗ್ಸ್‌ ಬಿಟ್ಟು ಹೊರಬರುವ ಕೆಎಲ್ ರಾಹುಲ್‌ಗೆ ನಾಯಕ ಸ್ಥಾನ ನೀಡಲು ಸಿದ್ಧವಾಗಿವೆ ಈ 3 ತಂಡಗಳು!ಪಂಜಾಬ್ ಕಿಂಗ್ಸ್‌ ಬಿಟ್ಟು ಹೊರಬರುವ ಕೆಎಲ್ ರಾಹುಲ್‌ಗೆ ನಾಯಕ ಸ್ಥಾನ ನೀಡಲು ಸಿದ್ಧವಾಗಿವೆ ಈ 3 ತಂಡಗಳು!

ಇನ್ನು ಈ ಬಾರಿಯ ಐಪಿಎಲ್ ಟೂರ್ನಿಯ ಲೀಗ್ ಹಂತದ ಕೊನೆಯ ಪಂದ್ಯಗಳಲ್ಲಿ ಪ್ಲೇ ಆಫ್ ಸುತ್ತಿಗೆ ಅರ್ಹತೆ ಪಡೆದುಕೊಳ್ಳಲು ತಂಡಗಳು ಕೂಡ ಪ್ಲೇ ಆಫ್ ಸುತ್ತಿಗೆ ಅರ್ಹತೆಯನ್ನು ಗಿಟ್ಟಿಸಿಕೊಳ್ಳಲು ಸಾಕಷ್ಟು ಪೈಪೋಟಿಯನ್ನೇ ನಡೆಸಿದವು. ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್, ಕೆಎಲ್ ರಾಹುಲ್ ನಾಯಕತ್ವದ ಪಂಜಾಬ್ ಕಿಂಗ್ಸ್ ಹಾಗೂ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ಈ ಮೂರೂ ತಂಡಗಳು ಕೂಡ ಲೀಗ್ ಹಂತದ ಕೊನೆಯ ಪಂದ್ಯಗಳಲ್ಲಿ ಪ್ಲೇ ಆಫ್ ಸುತ್ತಿಗೆ ಅರ್ಹತೆ ಪಡೆದುಕೊಳ್ಳಲು ಸಾಕಷ್ಟು ದೊಡ್ಡ ಮಟ್ಟದ ಪೈಪೋಟಿಗಳನ್ನು ನಡೆಸಿದವು. ಆದರೆ ಸನ್ ರೈಸರ್ಸ್ ಹೈದರಾಬಾದ್ ತಂಡ ಮಾತ್ರ ಟೂರ್ನಿಯುದ್ದಕ್ಕೂ ಸಾಲುಸಾಲು ಪಂದ್ಯಗಳಲ್ಲಿ ಸೋಲುವುದರ ಮೂಲಕ ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಅತೀ ಕಳಪೆ ಪ್ರದರ್ಶನ ನೀಡಿದ ತಂಡ ಎನಿಸಿಕೊಂಡಿತು.

ಆತನಿಗೆ ನಾಯಕತ್ವ ನೀಡಲಾಗದಿದ್ದರೆ ಆತನನ್ನು ತಂಡದಿಂದ ಬಿಟ್ಟುಬಿಡಿ; ಆರ್‌ಸಿಬಿಗೆ ಮಾಜಿ ಕ್ರಿಕೆಟಿಗನ ಸಲಹೆಆತನಿಗೆ ನಾಯಕತ್ವ ನೀಡಲಾಗದಿದ್ದರೆ ಆತನನ್ನು ತಂಡದಿಂದ ಬಿಟ್ಟುಬಿಡಿ; ಆರ್‌ಸಿಬಿಗೆ ಮಾಜಿ ಕ್ರಿಕೆಟಿಗನ ಸಲಹೆ

ಲೀಗ್ ಹಂತದ 14 ಪಂದ್ಯದಲ್ಲಿ ಕಣಕ್ಕಿಳಿದ ಸನ್ ರೈಸರ್ಸ್ ಹೈದರಾಬಾದ್ ತಂಡ ಗೆದ್ದದ್ದು ಕೇವಲ 3 ಪಂದ್ಯಗಳಲ್ಲಿ ಮಾತ್ರ ಹಾಗೂ ಸೋತದ್ದು ಬರೋಬ್ಬರಿ 11 ಪಂದ್ಯಗಳಲ್ಲಿ. ಟೂರ್ನಿಯ ಆರಂಭದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಡೇವಿಡ್ ವಾರ್ನರ್ ಮುನ್ನೆಡೆಸುತ್ತಿದ್ದರು ಆದರೆ, ವಾರ್ನರ್ ನಾಯಕತ್ವದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಸಾಲುಸಾಲು ಪಂದ್ಯಗಳಲ್ಲಿ ಸೋತ ಕಾರಣ ನಾಯಕತ್ವವನ್ನು ಕೇನ್ ವಿಲಿಯಮ್ಸನ್ ಹೆಗಲಿಗೆ ಹಾಕಲಾಯಿತು. ನಾಯಕನ ಬದಲಾವಣೆಯನ್ನು ತಂದರೂ ಸಹ ತಂಡದ ಪ್ರದರ್ಶನದಲ್ಲಿ ಮಾತ್ರ ಯಾವುದೇ ಬದಲಾವಣೆಯನ್ನೂ ತರಲಾಗಲಿಲ್ಲ. ಹೀಗೆ ನಾಯಕತ್ವವನ್ನು ಕಳೆದುಕೊಂಡ ಡೇವಿಡ್ ವಾರ್ನರ್ ಕೆಲ ಪಂದ್ಯಗಳ ನಂತರ ತಂಡದಿಂದಲೂ ಹೊರಬಿದ್ದರು. ಡೇವಿಡ್ ವಾರ್ನರ್ ತಂಡದಿಂದ ಹೊರಗುಳಿದ ನಂತರ ಅವರಿಗೆ ತಂಡದ ಇತರ ಆಟಗಾರರ ಜೊತೆ ಪ್ರಯಾಣ ಮಾಡುವುದಕ್ಕೂ ಕೂಡ ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಅವಕಾಶವನ್ನು ನೀಡಿಲ್ಲ ಎಂಬ ಸುದ್ದಿಗಳು ಹರಿದಾಡಿದವು. ಹೀಗೆ ಸನ್ ರೈಸರ್ಸ್ ಹೈದರಾಬಾದ್ ತಂಡದಿಂದ ದೂರ ಆಗಿರುವ ಡೇವಿಡ್ ವಾರ್ನರ್‌ ಮುಂಬರುವ ಐಪಿಎಲ್ ಟೂರ್ನಿಯಲ್ಲಿ ನೂತನ ತಂಡ ಸೇರಲಿದ್ದು ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಈ ಕೆಳಕಂಡ ತಂಡಗಳ ಪರ ಆಡುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.

ನೂತನ ತಂಡಗಳಿಗೆ ನಾಯಕನಾಗುವತ್ತ ಡೇವಿಡ್ ವಾರ್ನರ್ ಒಲವು

ನೂತನ ತಂಡಗಳಿಗೆ ನಾಯಕನಾಗುವತ್ತ ಡೇವಿಡ್ ವಾರ್ನರ್ ಒಲವು

ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ಡೇವಿಡ್ ವಾರ್ನರ್ ಮುಂಬರಲಿರುವ ಐಪಿಎಲ್ ಟೂರ್ನಿಯಿಂದ ಹೊಸದಾಗಿ ಸೇರ್ಪಡೆಯಾಗಲಿರುವ ಎರಡು ತಂಡಗಳ ಪೈಕಿ ಯಾವುದಾದರೊಂದು ತಂಡಕ್ಕೆ ನಾಯಕನಾಗುವತ್ತ ಒಲವನ್ನು ತೋರಿಸಿದ್ದಾರೆ. ಈ ಸಂದರ್ಶನದಲ್ಲಿ ಈ ಕುರಿತಾಗಿ ಪ್ರಶ್ನೆ ಎದುರಾದಾಗ ಅಂತಹ ಅವಕಾಶ ಬಂದರೆ ಖಂಡಿತವಾಗಿಯೂ ಒಪ್ಪಿಕೊಳ್ಳುತ್ತೇನೆ ಎಂದಿದ್ದಾರೆ.

ನಾಯಕತ್ವದ ಜವಾಬ್ದಾರಿ ಉತ್ತಮ ಆಟವನ್ನು ಆಡಲು ಪ್ರೇರಣೆ

ನಾಯಕತ್ವದ ಜವಾಬ್ದಾರಿ ಉತ್ತಮ ಆಟವನ್ನು ಆಡಲು ಪ್ರೇರಣೆ


ಹೀಗೆ ನೂತನ ತಂಡಗಳ ನಾಯಕತ್ವವನ್ನು ವಹಿಸಿಕೊಳ್ಳುವ ಅವಕಾಶ ಸಿಕ್ಕರೆ ಸದುಪಯೋಗಪಡಿಸಿಕೊಳ್ಳುವುದಾಗಿ ಹೇಳಿರುವ ಡೇವಿಡ್ ವಾರ್ನರ್ ನಾಯಕತ್ವದ ಜವಾಬ್ದಾರಿ ಹೆಗಲ ಮೇಲಿದ್ದರೆ ಉತ್ತಮ ಪ್ರದರ್ಶನವನ್ನು ನೀಡಲು ಪ್ರೇರೇಪಿಸುತ್ತದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

2 ನೂತನ ಫ್ರಾಂಚೈಸಿಗಳ ಘೋಷಣೆ ಯಾವಾಗ?

2 ನೂತನ ಫ್ರಾಂಚೈಸಿಗಳ ಘೋಷಣೆ ಯಾವಾಗ?

ಮುಂಬರಲಿರುವ ಐಪಿಎಲ್ ಟೂರ್ನಿಯಿಂದ ಒಟ್ಟು ಹತ್ತು ತಂಡಗಳು ಸೆಣಸಾಟ ನಡೆಸಲಿದ್ದು, 2 ನೂತನ ಫ್ರಾಂಚೈಸಿಗಳನ್ನು ಬಿಸಿಸಿಐ ಇದೇ ಅಕ್ಟೋಬರ್ 25ರಂದು ಘೋಷಣೆ ಮಾಡಲು ನಿರ್ಧರಿಸಿದೆ.

Story first published: Wednesday, October 13, 2021, 20:34 [IST]
Other articles published on Oct 13, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X